Garlic Chutney Recipe: ನೋಡಿದ ಕೂಡ್ಲೇ ಬಾಯಲ್ಲಿ ನೀರೂರಿಸುವ ಬೆಳ್ಳುಳ್ಳಿ ಚಟ್ನಿ..ಒಮ್ಮೆ ಮಾಡಿದ್ರೆ ತಿಂಗಳುಗಟ್ಟಲೆ ಕೆಡೋದಿಲ್ಲ
Nov 01, 2022 01:54 PM IST
ಬೆಳ್ಳುಳ್ಳಿ ಚಟ್ನಿ ರೆಸಿಪಿ
- ಬೆಳ್ಳುಳ್ಳಿ ಚಟ್ನಿಯನ್ನು ನೀವು ದೋಸೆ, ಚಪಾತಿ, ಪೂರಿ, ರೊಟ್ಟಿಗೆ ಮಾತ್ರವಲ್ಲದೆ, ಅನ್ನಕ್ಕೆ ಕೂಡಾ ತಿನ್ನಬಹುದು. ಊಟದೊಂದಿಗೆ ಸೈಡ್ ಡಿಶ್ ಆಗಿ ಕೂಡಾ ಬಳಸಬಹುದು. ನೋಡಿದ ಕೂಡಲೇ ಬಾಯಲ್ಲಿ ನೀರೂರುವ ಈ ರುಚಿಯಾದ ಚಟ್ನಿಯನ್ನು ನೀವು ತಿಂಗಳುಗಟ್ಟಲೆ ಸ್ಟೋರ್ ಮಾಡಿ ಇಡಬಹುದು.
ಹೆಚ್ಚಿನ ಜನರು ಕಾಯಿ ಚಟ್ನಿ, ಕಡ್ಲೆಚಟ್ನಿ, ಶೇಂಗಾ ಚಟ್ನಿ ಹೊರತುಪಡಿಸಿ ಬೇರೆ ರೀತಿಯ ಚಟ್ನಿಗಳನ್ನು ಟೇಸ್ಟ್ ಮಾಡಿರುವುದಿಲ್ಲ. ಆದರೆ ಕೆಲವೊಂದು ರುಚಿಯಾದ ಚಟ್ನಿಗಳನ್ನು ನೀವು ಒಮ್ಮೆ ಟ್ರೈ ಮಾಡಲೇಬೇಕು. ಉದಾಹರಣೆಗೆ ಬೆಳ್ಳುಳ್ಳಿ ಚಟ್ನಿ.
ಬೆಳ್ಳುಳ್ಳಿ ಚಟ್ನಿಯನ್ನು ನೀವು ದೋಸೆ, ಚಪಾತಿ, ಪೂರಿ, ರೊಟ್ಟಿಗೆ ಮಾತ್ರವಲ್ಲದೆ, ಅನ್ನಕ್ಕೆ ಕೂಡಾ ತಿನ್ನಬಹುದು. ಊಟದೊಂದಿಗೆ ಸೈಡ್ ಡಿಶ್ ಆಗಿ ಕೂಡಾ ಬಳಸಬಹುದು. ನೋಡಿದ ಕೂಡಲೇ ಬಾಯಲ್ಲಿ ನೀರೂರುವ ಈ ರುಚಿಯಾದ ಚಟ್ನಿಯನ್ನು ನೀವು ತಿಂಗಳುಗಟ್ಟಲೆ ಸ್ಟೋರ್ ಮಾಡಿ ಇಡಬಹುದು. ಹಾಗಿದ್ರೆ ಬೆಳ್ಳುಳ್ಳಿ ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ನೋಡೋಣ.
ಬೆಳ್ಳುಳ್ಳಿ ಚಟ್ನಿಗೆ ಬೇಕಾಗುವ ಸಾಮಗ್ರಿಗಳು
ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿ ಎಸಳು - 1 ಕಪ್
ಒಣಮೆಣಸಿನಕಾಯಿ - 10
ಬ್ಯಾಡಗಿ ಮೆಣಸಿನಕಾಯಿ - 5
ಜೀರ್ಗೆ - 1 ಟೀ ಸ್ಪೂನ್
ಶುಂಠಿ - 1 ಇಂಚು
ಹುಣಿಸೆಹಣ್ಣು - ನಿಂಬೆ ಗಾತ್ರದ್ದು
ಬೆಲ್ಲ - ಚಿಕ್ಕ ತುಂಡು
ಉಪ್ಪು - ರುಚಿಗೆ ತಕ್ಕಷ್ಟು
ಬ್ರೇಕ್ಫಾಸ್ಟ್ ರೆಸಿಪಿ: ಬೆಳಗಿನ ಗಡಿಬಿಡಿ ಬಿಟ್ಟುಬಿಡಿ...ಇಪ್ಪತ್ತೇ ನಿಮಿಷದಲ್ಲಿ ರುಚಿಯಾದ ಮೈದಾ ದೋಸೆ, ಈರುಳ್ಳಿ ಸಾಗು ತಯಾರಿಸಿ
ಬೆಳ್ಳುಳ್ಳಿ ಚಟ್ನಿ ತಯಾರಿಸುವ ವಿಧಾನ
ಒಂದು ಬಾಣಲೆಗೆ ಎಣ್ಣೆ ಸೇರಿಸಿ ಕಡಿಮೆ ಉರಿ ಇರಿಸಿ ಒಣಮೆಣಸಿನಕಾಯಿ ಹುರಿಯಿರಿ
ಅದೇ ಎಣ್ಣೆಗೆ ಬೆಳ್ಳುಳ್ಳಿ ಸೇರಿಸಿ ಕೆಂಪಗೆ ಹುರಿಯಿರಿ, ಜೊತೆಗೆ ಹುಣಿಸೆಹಣ್ಣನ್ನು ಬಿಡಿಸಿ ಅದನ್ನೂ ಎಣ್ಣೆಗೆ ಸೇರಿಸಿ
ಇದರೊಂದಿಗೆ ಜೀರ್ಗೆ ಕೂಡಾ ಸೇರಿಸಿ 1 ನಿಮಿಷ ಹುರಿದು ಮಿಶ್ರಣ ತಣ್ಣಗಾಗಲು ಬಿಡಿ
ಒಂದು ಮಿಕ್ಸಿಗೆ ಮೊದಲೇ ಹುರಿದ ಮೆಣಸಿನಕಾಯಿ ಹಾಗೂ ಉಪ್ಪು ಸೇರಿಸಿ ಪುಡಿ ಮಾಡಿಕೊಳ್ಳಿ
ಇದರೊಂದಿಗೆ ಹುರಿದ ಬೆಳ್ಳುಳ್ಳಿ ಮಿಶ್ರಣ, ಸ್ವಲ್ಪ ಬೆಲ್ಲ ಸೇರಿಸಿ ಗ್ರೈಂಡ್ ಮಾಡಿದರೆ ಬೆಳ್ಳುಳ್ಳಿ ಚಟ್ನಿ ರೆಡಿ
ಗಮನಿಸಿ: ಚಟ್ನಿಯನ್ನು ಗ್ರೈಂಡ್ ಮಾಡುವಾಗ ಸ್ವಲ್ಪವೂ ನೀರು ಸೇರಿಸಬೇಡಿ. ಬೆಳ್ಳುಳ್ಳಿ ಹುರಿಯಲು ಬಳಸಿದ ಎಣ್ಣೆಯೇ ಸಾಕು. ನೀರು ಸೇರಿಸಿದರೆ ಚಟ್ನಿಯನ್ನು ಹೆಚ್ಚು ದಿನ ಇಡಲು ಸಾಧ್ಯವಿಲ್ಲ. ಆದ್ದರಿಂದ ಬೆಳ್ಳುಳ್ಳಿ ಹುರಿಯುವಾಗ ಎಣ್ಣೆಯನ್ನು ಹೆಚ್ಚಿಗೆ ಸೇರಿಸಿ.
ಚಟ್ನಿಯನ್ನು ಒಂದು ಗಾಜಿನ ಜಾಡಿಗೆ ಸೇರಿಸಿ ಶೇಖರಿಸಿಟ್ಟರೆ ತಿಂಗಳುಗಟ್ಟಲೆ ಕೆಡುವುದಿಲ್ಲ.
ವಿಭಾಗ