logo
ಕನ್ನಡ ಸುದ್ದಿ  /  ಜೀವನಶೈಲಿ  /  ನವರಾತ್ರಿ ಸಮಯದಲ್ಲೇ ಪುಟ್ಟ ಕಂದಮ್ಮ ಮನೆಗೆ ಬಂದಿದ್ಯಾ, ನಿಮ್ಮ ಮಗುವಿಗೆ ಮುದ್ದಾದ ಹೆಸರಿಡಲು ಇಲ್ಲಿದೆ ಐಡಿಯಾಗಳು

ನವರಾತ್ರಿ ಸಮಯದಲ್ಲೇ ಪುಟ್ಟ ಕಂದಮ್ಮ ಮನೆಗೆ ಬಂದಿದ್ಯಾ, ನಿಮ್ಮ ಮಗುವಿಗೆ ಮುದ್ದಾದ ಹೆಸರಿಡಲು ಇಲ್ಲಿದೆ ಐಡಿಯಾಗಳು

Reshma HT Kannada

Oct 08, 2024 07:30 AM IST

google News

ಮಗುವಿಗೆ ಹೆಸರಿಡಲು ಐಡಿಯಾಗಳು

    • ಭಾರತದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ದುರ್ಗಾದೇವಿಯನ್ನು ಆರಾಧಿಸುವ ಈ ಹಬ್ಬದ ಸಂದರ್ಭದಲ್ಲಿ ನಿಮ್ಮ ಮನೆಗೆ ಪುಟ್ಟ ಕಂದಮ್ಮ ಬಂದಿದ್ಯಾ? ನಿಮ್ಮ ಮುದ್ದಾದ ಮಗುವಿಗೆ ಹೆಸರು ಇಡಬೇಕು ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಒಂದಿಷ್ಟು ಐಡಿಯಾಗಳು, ಇದು ನಿಮಗೆ ಇಷ್ಟವಾಗಬಹುದು ನೋಡಿ.
ಮಗುವಿಗೆ ಹೆಸರಿಡಲು ಐಡಿಯಾಗಳು
ಮಗುವಿಗೆ ಹೆಸರಿಡಲು ಐಡಿಯಾಗಳು (PC: Canva )

ಪುಟ್ಟ ಕಂದಮ್ಮ ಭೂಮಿಗೆ ಬರುವಾಗ ತಂದೆ–ತಾಯಿಗಳಿಗೆ ಅದೇನೋ ಹೇಳಲಾರದ ಸಂಭ್ರಮ. ಈ ಸಂಭ್ರಮಕ್ಕೆ ಎಣೆಯಿಲ್ಲ. ಅದರಲ್ಲೂ ಮಗು ಹುಟ್ಟಿ ಮಗುವಿಗೆ ಮುದ್ದಾದ ಹೆಸರು ಇಡಲು ತಂದೆ–ತಾಯಿ ಕಾತರರಾಗಿರುತ್ತಾರೆ. ಈಗಂತೂ ನವರಾತ್ರಿ, ದೇವಿಯ ದಿನಗಳು. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಮನೆಗೆ ಮುದ್ದಾದ ಮಗುವಿನ ಆಗಮನವಾಗಿದ್ದು, ಒಂದೊಳ್ಳೆ ಹೆಸರಿಡಬೇಕು ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಒಂದಿಷ್ಟು ಆಯ್ಕೆಗಳು.

ಹೆಣ್ಣು ಮಗು ಹಾಗೂ ಗಂಡು ಮಗು ಇಬ್ಬರಿಗೂ ಇಡಬಹುದಾದ ಅರ್ಥಪೂರ್ಣ ಹೆಸರುಗಳಿವು. ದೇವರ ಹೆಸರನ್ನೂ ಸೂಚಿಸುವ, ಟ್ರೆಂಡಿ ಆಗಿಯೂ ಇರುವ ಒಂದಿಷ್ಟು ಹೆಸರುಗಳು ಇಲ್ಲಿವೆ ನೋಡಿ.

ಗಂಡು ಮಗುವಿನ ಹೆಸರುಗಳು

* ಔದ್ವಿಕ್ - ಎಂದಿಗೂ ಮಂದವಾಗದ ಶಿವನ ಬೆಳಕು

* ಕೆಯಾನ್ - ಉದಯಿಸುವ ಸೂರ್ಯ

* ನೆರಳು -

* ತಲಂಕಾ - ಭಗವಾನ್ ಶಿವನ ಇನ್ನೊಂದು ಹೆಸರು, ಮಂಗಳಕರ ಎಂಬ ಅರ್ಥವೂ ಇದೆ

* ಫಲ್ಗು - ಸುಂದರ

* ಮಾದೇಶ್ - ಭಗವಾನ್ ಶಿವ

* ಇಶಾವ್ - ವಿಶೇಷ, ಪ್ರತಿಭಾವಂತ

* ರೇಯಾನ್ಶ್ - ರೆಯಾನ್ಶ್ ಎಂದರೆ ವಿಷ್ಣುವಿನ ಭಾಗ

* ಅಯಾನ್ - ಅಯಾನ್ ಎಂದರೆ 'ದೇವರ ಕೊಡುಗೆ' ಅಥವಾ 'ಅದೃಷ್ಟ'.

* ಅಥರ್ವ - ಇದರ ಅರ್ಥ 'ಮೊದಲ ವೇದ' ಮತ್ತು ಇದು ಗಣೇಶನ ಇನ್ನೊಂದು ಹೆಸರು.

* ಆಕರ್ಷ್ - ಇದರ ಅರ್ಥ 'ಆಕರ್ಷಣೆಯ ಕೇಂದ್ರ'.

* ಆರುಷ್ - ಎಂದರೆ 'ಪ್ರಕಾಶಮಾನ, ಹೊಳೆಯುವ ಅಥವಾ ಸೂರ್ಯ'

ಹೆಣ್ಣು ಮಗುವಿನ ಹೆಸರುಗಳು

* ಇಶಿತಾ-ಇಶಿತಾ ಎಂಬ ಹೆಸರಿನ ಅರ್ಥ ಶ್ರೇಷ್ಠತೆ ಮತ್ತು ಉತ್ತಮ ಎಂದು

* ಕಿಮಯಾ- ಕಿಮಯಾ ಎಂಬ ಹೆಸರಿನ ಅರ್ಥ ದೈವಿಕ ಅಥವಾ ದೈವಿಕ ಶಕ್ತಿಗಳಿಂದ ಕೂಡಿದ, ದೈವಾಂಶ ಸಂಭೂತ ಎಂದು

* ಲಾವಣ್ಯ - ಲಾವಣ್ಯ ಎಂಬ ಹೆಸರಿನ ಅರ್ಥ ಸೌಂದರ್ಯ ಮತ್ತು ಸಭ್ಯತೆ.

* ಮಹಿಕಾ-ಇಬ್ಬನಿ ಹನಿ ಮತ್ತು ತಂಪಾದ ವಾತಾವರಣ ಮಹಿಕಾ ಎಂದು ಕರೆಯಲಾಗುತ್ತದೆ.

* ಸಮೈರಾ-ಸಮೈರಾ ಎಂದರೆ ಆಕರ್ಷಕ.

* ಜೋಯಾ- ಜೋಯಾ ಎಂದರೆ ಬೆಳಕು ಮತ್ತು ಹೊಳಪು.

* ವನ್ಯಾ- ದೇವರ ಸುಂದರವಾದ ಉಡುಗೊರೆಯನ್ನು ವನ್ಯಾ ಎಂದು ಕರೆಯಲಾಗುತ್ತದೆ.

ಈ ಸುಂದರ ಹೆಸರುಗಳನ್ನು ನಿಮ್ಮ ಮಗುವಿಗೆ ಇಡಬಹುದು ಅಥವಾ ನಿಮ್ಮ ಆತ್ಮೀಯರು ಸ್ನೇಹಿತರು ಸುಂದರವಾದ ದೇವರ ಅರ್ಥ ಬರುವ ಹೆಸರುಗಳನ್ನು ಹುಡುಕುತ್ತಿದ್ದರೆ ನೀವು ಅವರಿಗಾಗಿ ಈ ಹೆಸರನ್ನು ಸೂಚಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ