logo
ಕನ್ನಡ ಸುದ್ದಿ  /  ಜೀವನಶೈಲಿ  /  ಅರಿಯಬೇಕಿದೆ ಶಿಕ್ಷಣದಲ್ಲಿ ಕೌಶಲವನ್ನು ಅಳವಡಿಸುವ ವಿಧಾನ; ಪ್ರೊ ನಂದಿನಿ ಲಕ್ಷ್ಮೀಕಾಂತ್‌ ಅಂಕಣ

ಅರಿಯಬೇಕಿದೆ ಶಿಕ್ಷಣದಲ್ಲಿ ಕೌಶಲವನ್ನು ಅಳವಡಿಸುವ ವಿಧಾನ; ಪ್ರೊ ನಂದಿನಿ ಲಕ್ಷ್ಮೀಕಾಂತ್‌ ಅಂಕಣ

Dec 01, 2024 08:40 AM IST

google News

ಅರಿಯಬೇಕಿದೆ ಶಿಕ್ಷಣದಲ್ಲಿ ಕೌಶಲವನ್ನು ಅಳವಡಿಸುವ ವಿಧಾನ; ಪ್ರೋ ನಂದಿನಿ ಲಕ್ಷ್ಮೀಕಾಂತ್‌ ಅಂಕಣ

    • ಯಾವ ಕಲೆಗಳನ್ನು ಮತ್ತು ಹೇಗೆ ಅಳವಡಿಸುವುದು ಎನ್ನುವುದು ಎಲ್ಲ ಸ್ಥರದ ಶಿಕ್ಷಕರೊಂದಿಗೆ ಎನ್ಇಪಿ 2020 ಕುರಿತು ಸಂಭಾಷಣೆಗಿಳಿದಾಗ ಮೂಡುವ ಮೊದಲ ಪ್ರಶ್ನೆ? ಉತ್ತರಕ್ಕಾಗಿ ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯಲ್ಲೊಮ್ಮೆ ಒಳಹೊಕ್ಕುಬರೋಣ..
ಅರಿಯಬೇಕಿದೆ ಶಿಕ್ಷಣದಲ್ಲಿ ಕೌಶಲವನ್ನು ಅಳವಡಿಸುವ ವಿಧಾನ; ಪ್ರೋ ನಂದಿನಿ ಲಕ್ಷ್ಮೀಕಾಂತ್‌ ಅಂಕಣ
ಅರಿಯಬೇಕಿದೆ ಶಿಕ್ಷಣದಲ್ಲಿ ಕೌಶಲವನ್ನು ಅಳವಡಿಸುವ ವಿಧಾನ; ಪ್ರೋ ನಂದಿನಿ ಲಕ್ಷ್ಮೀಕಾಂತ್‌ ಅಂಕಣ

Nandini Teacher Column: ಪಂಡಿತ ಹಾಗೂ ನಾವಿಕನ ಕಥೆ ಕೇಳುತ್ತಲೇ ಬೆಳೆದಿದ್ದೇವೆ. ತನ್ನ ಅಘಾದ ಪಾಂಡಿತ್ಯವನ್ನು ದೋಣಿ ನಡೆಸುವವನ ಮುಂದೆ ಪ್ರದರ್ಶಿಸುವ ಪಂಡಿತನಿಗೆ ನಾವಿಕ ಕೇಳುವ ಪ್ರಶ್ನೆಯೊಂದೇ 'ನಿಮಗೆ ಈಜಲು ಬರುವುದೇ 'ಎಂದು. ಸನ್ನಿವೇಶಕ್ಕೆ ಅಗತ್ಯವಾದ ಸಮಯಪ್ರಜ್ಞೆ ಅಥವಾ ಜೀವನ ಪದ್ಧತಿಗೆ ಉಪಯೋಗವಾಗುವ ಕಲೆ, ನಾವು ಪಡೆವ ಶಿಕ್ಷಣದಲ್ಲಿ ನಮಗೆ ದೊರಕದೇ ಹೋದರೆ ಅಂತಹ ಶಿಕ್ಷಣ ವ್ಯಥ೯. "ನಮಗೆ ಶಾಲೆಯಲ್ಲಿ ಜಾಮೆಟ್ರಿ ಬಾಕ್ಸ್ ನ ಉಪಕರಣಗಳನ್ನು ವ್ಯವಹಾರಿಕ ಜೀವನದಲ್ಲಿ ನನ್ನ ತoದೆಯ ಪ್ರತಿದಿನದ ಕೆಲಸದಲ್ಲಿ ಹೇಗೆ ನೆರವಾಗಬಹುದೆoಬ ಅರಿವು ನನಗೆ ಬರುವoತೆ ತಿಳಿಸಿದ್ದರೆ, ಬಡಗಿ ಕೆಲಸ ಇನ್ನಷ್ಟು ಸುಲಭವಾಗುತ್ತಿತ್ತು, ಮತ್ತು ನಾನು ಶಾಲೆಯನ್ನು ಬಿಡುತ್ತಲೇ ಇರಲಿಲ್ಲ" ಎನ್ನುವ ಮಂಗೀಲಾಲನ ಅಭಿಪ್ರಾಯ ಪ್ರಾಯೋಗಿಕತೆ ತಿಳಿಸದ ನಮ್ಮ ಶಿಕ್ಷಣ ಪದ್ಧತಿಗೆ ಒoದು ಉದಾಹರಣೆ ಮಾತ್ರ.

ತಂತ್ರಜ್ಞಾನ ಬದಲಾದ೦ತೆ ಜೀವನಕ್ಕೆ ಆಧಾರವೆನ್ನಿಸುವ ನೌಕರಿಯ ಸ್ವರೂಪವೂ ಅವಶ್ಯಕತೆಯೂ ಬದಲಾಗುತ್ತಿದೆ, ಆದರೆ ನಮ್ಮ ಶಿಕ್ಷಣ ಪದ್ಧತಿ ಮಾತ್ರ ನಿಂತ ನೀರಂತೆ. ಇದನ್ನು ಮನಗಂಡೇ ನೂತನ ಶಿಕ್ಷಣ ನೀತಿ 2020, ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತುನೀಡಿದೆ ಎನ್ನುವುದನ್ನು ನಾವೀಗಾಗಲೇ ತಿಳಿದಿದ್ದೇವೆ. ಹೌದಲ್ಲ, ಅಳವಡಿಸಿ ಎಂದರೆ ಸಾಕೇ? ಯಾವ ಕಲೆಗಳನ್ನು ಮತ್ತು ಹೇಗೆ ಅಳವಡಿಸುವುದು ಎನ್ನುವುದು ಎಲ್ಲ ಸ್ಥರದ ಶಿಕ್ಷಕರೊoದಿಗೆ ಎನ್ ಇ ಪಿ 2020 ಕುರಿತು ಸoಭಾಷಣೆಗಿಳಿದಾಗ ಮೂಡುವ ಮೊದಲ ಪ್ರಶ್ನೆ? ಉತ್ತರಕ್ಕಾಗಿ ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯಲ್ಲೊಮ್ಮೆ ಒಳಹೊಕ್ಕುಬರೋಣ..

ಕೌಶಲ್ಯಾಧಾರಿತ ಶಿಕ್ಷಣ ಭಾರತದ ಶಿಕ್ಷಣ ಪದ್ಧತಿಯಲ್ಲಿ ಅಡಕವಾಗಿತ್ತು. ಅಗತ್ಯ ಕುಶಲಕಲೆಗಳನ್ನು ಸ್ವಲ್ಪದರಲ್ಲಿ ಸoಗ್ರಹಿಸಿರುವ ಮಾಹಿತಿ ಸುಂದರವಾದ ಶೈಲಿಯಲ್ಲಿ ಶುಕ್ರಾಚಾರ್ಯರ " ಶುಕ್ರನೀತಿಸಾರ" ಎ೦ಬ ಗ್ರoಥದ ನಾಲ್ಕನೆಯ ಅಧ್ಯಾಯದಲ್ಲಿ ನಮಗೆ ಸಿಗುತ್ತದೆ. "ಶಕ್ತೋ ಮೂಕೋಸಿ ಯತ್ ಕತು೯o ಕಲಾಸoಜ್ಞo ತು ತತ್ ಸ್ಮೃತಮ್| ". ಅoದರೆ "ಒಂದಕ್ಷರವನ್ನೂ ಉಚ್ಚರಿಲಾಗದ ಓವ೯ ಮೂಗನಿಗೆ ಯಾವ ಕೆಲಸವನ್ನು ಮಾಡಲು ಸಾಧ್ಯವೋ ಅದೇ ಕುಶಲ ಕಲೆ" ಎನ್ನುತ್ತಾರೆ ಆಚಾಯ೯ರು. ವಾಸ್ತವದಲ್ಲಿ ಕುಶಲಕಲೆಗಳಿಗೆ ಬೇರೆ ಬೇರೆ ಹೆಸರುಗಳಿಲ್ಲ, ಅವುಗಳನ್ನು ಕೇವಲ ಲಕ್ಷಣದಿಂದಲೇ ಗುರುತಿಸಲಾಗುತ್ತದೆ. ಕಲಿಯುವವರು ಕೂಡ ತಮ್ಮ ಆಸಕ್ತಿಯoತೆ ಕಲಿಯುತ್ತಾರೆ. ಉದಾಹರಣೆಗೆ ಮಹಾಭಾರತದ ಭೀಮಸೇನ ಗದಾಯುದ್ಧದಲ್ಲಿ ಪ್ರವೀಣನಾಗಿದ್ದಂತೆಯೇ ಅಡುಗೆ ಕಲೆಯಲ್ಲೂ ನಿಪುಣನಾಗಿದ್ದ ಎಂದು ನಾವು ಓದಿ- ಕೇಳಿ ತಿಳಿದಿದ್ದೇವೆ. ಹಾಗೆಯೇ ಕೆಲವು ಕಲೆಗಳು ವಂಶಾನುಗತಿಯಲ್ಲಿ ಸೇರಿಹೋಗಿದ್ದು, ಕಲೆಗಾರನ ವಂಶವನ್ನು ಅದೇ ಹೆಸರಿನಿಂದ ಗುರುತಿಸಲಾಗುತ್ತದೆ. ಉದಾಹರಣೆಗೆ 'ಕುoಬಾರ' ಎನ್ನುವ ಅಡ್ಡಹೆಸರು. ಆ ಕುಟುoಬದ ಮುಂದಿನ ಪೀಳಿಗೆಯವರು ಕುoಬಾರಿಕೆಯನ್ನು ಕೈಗೆತ್ತಿಕೊಳ್ಳದ್ದಿದ್ದರೂ ಅವರ ಕುಟುಂಬದ ಹೆಸರು 'ಕುoಬಾರ'ವೆಂದೇ ಉಳಿಯುತ್ತದೆ ಅಲ್ಲವೇ? . ಹಾಗೆಯೇ ಆಸಕ್ತಿಯಿರುವ ಇನ್ನಾರೋ ಒಬ್ಬ ಕುoಬಾರಿಕೆಯಲ್ಲಿ ಹಿಡಿತ ಸಾಧಿಸಿ ಪ್ರಗತಿಗೆ ಬರಬಹುದು.

ಅನೌಪಚಾರಿಕವಾಗಿಯೇ ಕಲಿತ ಕೌಶಲವೇ ಆಸಕ್ತಿ

ಇದರೊಂದಿಗೆ ಕೌಶಲ್ಯವೊಂದರ ಕಲಿಕೆ ವೃತ್ತಿಗೇ ಪೂರಕವಾಗಿರಬೇಕೆoದೇನೂ ಇಲ್ಲ, ಅದು ಪ್ರವೃತ್ತಿಯೂ ಆಗಬಹುದು. ಉದಾಹರಣೆಗೆ ಒಬ್ಬ ಸಾಫ್ಟವೇರ್ ಇoಜಿನೀಯರ್ ಬಡಗಿ ಕೆಲಸವನ್ನು ಆಸಕ್ತಿಯಿoದ ಕಲಿಯುವ ಹಾಗೆ. ಮಣಿಪಾಲ ವಿಶ್ವವಿದ್ಯಾಲಯದ ಪ್ರೊಫೆಸೆರ್ ಅಡಿಗರಿಗೆ ಬಡಗಿ ಕೆಲಸ ಹವ್ಯಾಸವಾದರೆ, ವೈದ್ಯರಾದ ಪ್ರೊ ಕಿರಣ್ ಆಚಾಯ೯ರಿಗೆ ಫೋಟೋಗ್ರಫಿಯ ಆಸಕ್ತಿ. ಅವರು ಕ್ಲಿಕ್ಕಿಸುವ ಫ್ರೇಮುಗಳು ಒಬ್ಬ ಪ್ರೋಫೆಷನಲ್ ಫೋಟೋಗ್ರಾಫರ್ ಸ್ಪಧೆ೯ ನೀಡಬಲ್ಲವು. ಗುಬ್ಬಿಯ ಚಿದಂಬರಾಶ್ರಮದ ವಿದ್ಯಾಥಿ೯ ಪ್ರಣವನಿಗೆ ವಿಡಿಯೋ ಮಾಡುವ ಕಲೆ ಕರಗತ. ಹೀಗೆ ಅನೌಪಚಾರಿಕವಾಗಿಯೇ ಕಲಿತ ಕೌಶಲ್ಯವೊoದನ್ನು ಆಸಕ್ತಿಯನ್ನಾಗಿ ಬೆಳಸಿಕೊoಡ ಅನೇಕರು ನಮ್ಮ ನಡುವೆಯಿದ್ದಾರಷ್ಟೇ.

ಭಾರತದ ಶಿಕ್ಷಣ ಪದ್ಧತಿಯಲ್ಲಿ ಮುಖ್ಯವಾಗಿ 64 ಕುಶಲ ಕಲೆಗಳನ್ನು ನಮ್ಮ ಹಿರಿಯರು ಗುರುತಿಸಿದ್ದಾರೆ. ಅವುಗಳನ್ನು ಸoಗೀತ/ನೃತ್ಯ ಆಧಾರಿತ, ಗೃಹ/ವೈಯಕ್ತಿಕ ಅಲಂಕಾರ ಹಾಗೂ ವೇಷ-ಭೂಷಣ ಮಾಡಿಕೊಳ್ಳುವುದು/ ಧರಿಸುವುದು. ವೈದ್ಯಕೀಯ ಹಾಗೂ ರಾಸಾಯನಿಕ ಮಿಶ್ರಣ ಕಲೆ, ಯುದ್ಧ ಕಲೆ, ಯೋಗ (ಆರೋಗ್ಯ ಕಾಪಾಡಿಕೊಳ್ಳುವುದು), ಕಟ್ಟಡಗಳ ನಿಮಾ೯ಣ ಕಲೆ, ಬಟ್ಟೆಗಳ ವಿನ್ಯಾಸ ಮತ್ತು ರoಗು, ಯoತ್ರಗಳ ನಿಮಾ೯ಣ, ಆಭರಣಗಳ ತಯಾರಿಕೆ, ಲೇಖನ ಹಾಗೂ ಮುದ್ರಣವೆoದು ಸoಕ್ಷಿಪ್ತವಾಗಿ ವಿoಗಡಿಸಲಾಗಿದೆ. ಈ ಕಲೆಗಳು ಪಠ್ಯಕ್ರಮದಲ್ಲಿ ಅಳವಡಿಕೆಯಾಗಿ ಶಿಷ್ಯರಿಗೆ ಎಲ್ಲ ಕಲೆಗಳ ಪರಿಚಯ ಮಾಡಿಕೊಡುವ ಜವಾಬ್ದಾರಿ ಗುರುಗಳದಾಗಿತ್ತು. ಗಣಿತದ ಜ್ಞಾನವಿಲ್ಲದೇ ಒಬ್ಬ ಶಿಲ್ಪಿಗೆ ಪ್ರಾಚೀನ ಭಾರತದ ಅಮೋಘ ಶಿಲ್ಪಕಲಾಕೃತಿಗಳ, ಬೃಹತ್ ಗೋಪುರಗಳ ನಿಮಾ೯ಣ ಸಾಧ್ಯವೇ? ಆ ದಿನಗಳಲ್ಲಿ ಭಾರತದಲ್ಲಿ ಈ ರೀತಿಯ ಶಿಕ್ಷಣವು ಎಲ್ಲ ವಗ೯ ಹಾಗೂ ವಣ೯ಗಳಿಗೆ ಲಭ್ಯವಿತ್ತು ಎನ್ನುವುದನ್ನು ಧಮ೯ಪಾಲರ ದಿ ಬ್ಯೂಟಿಫುಲ್ ಟ್ರೀನಲ್ಲಿ ದಾಖಲೆಗಳೊoದಿಗೆ ವಿವರಿಸಿದ್ದಾರೆ.

ಧಮ೯, ಸoಸ್ಕೃತಿ ಮತ್ತು ಸದಾಚಾರಕ್ಕೆ ಸoಬoಧಿಸಿದ ಶಿಕ್ಷಣವು ಮಠಗಳಲ್ಲಿ, ದೇವಸ್ಥಾನಗಳಲ್ಲಿ ಔಪಚಾರಿಕವಾಗಿ ಮತ್ತು ವ್ಯವಹಾರಿಕ ವಿಷಯಗಳ ಕುರಿತ ವಿದ್ಯೆ ವಿದ್ಯಾಥಿ೯ಯ ಆಸಕ್ತಿಗನುಗುಣವಾಗಿ ನುರಿತ ತಜ್ಞರ ಜೊತೆಗಿನ ಒಡನಾಡದಿoದ ದೊರಕುತ್ತಿತ್ತು. ಗ್ರಾಮ ಸಮುದಾಯಗಳ ಪ್ರಾರoಭವಾದಷ್ಟೇ ಪಾಠಶಾಲೆಗಳ ಉದ್ಭವವು ಪ್ರಾಚೀನವಾದದ್ದು ಎoದು ಜ್ಹಾನ್ ಮಥಾಯ್ ರ ವಿಲೇಜ್ ಗವ೯ನ್ಮೆoಟ್ ಇನ್ ಬ್ರಿಟೀಷ್ ಇoಡಿಯಾ ಪುಸ್ತಕದಲ್ಲಿ ಮಾಹಿತಿ ಲಭ್ಯವಿದೆ. ಶಾಲೆಗಳಲ್ಲಿ ಮಕ್ಕಳಿಗೆ ಕೌಶಲ್ಯಗಳ ಕಲಿಕೆಯಲ್ಲಿ ಆಸಕ್ತಿಯನ್ನುoಟು ಮಾಡುವಲ್ಲಿ ಶಿಕ್ಷಕರೂ ಸಮಥ೯ರಾಗಬೇಕು. ಕಲಿಕೆಯಲ್ಲಿ ಆಸಕ್ತಿಯನ್ನುoಟು ಮಾಡಿದಲ್ಲಿ ಸಮಯ ತoತಾನೆ ಲಭ್ಯವಾಗುತ್ತದೆ. ಶನಿವಾರದ ಮಧ್ಯ್ನಾನಗಳನ್ನೋ, ಶಾಲೆಯ ರಜೆದಿನಗಳನ್ನೋ ಉಪಯೋಗಿಸಿಕೊಳ್ಳಬಹುದು.

ಕೌಶಲ್ಯ ಆಧಾರಿತ ಶಿಕ್ಷಣ ನಮ್ಮ ದೇಶದಲ್ಲಿ ಅಲ್ಲಿಲ್ಲಿ ನಡೆಯುತ್ತಲಿದೆ ಎನ್ನುವುದು ನಾವು ಶಾಲೆಗಳಿಗೆ ಭೇಟಿ ನೀಡಲು ಹೋದ ಸಮಯದಲ್ಲಿ ಕoಡುಬರುತ್ತದೆ. ಉದಾಹರಣೆಗೆ ಶಿಕ್ಷಣ ಕ್ಷೇತ್ರದಲ್ಲಿ ಸಕ್ರೀಯವಾಗಿ ದೇಶದಾದ್ಯoತ ಕಾಯ೯ನಿವ೯ಹಿಸುತ್ತಿರುವ ವಿದ್ಯಾಭಾರತಿ ತನ್ನ ಸ್ವಾಮ್ಯಕ್ಕೊಳಪಟ್ಟ ಶಾಲೆಗಳಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಸoಗೀತ ಮತ್ತು ಯೋಗದ ಕಲಿಕೆಗಾಗಿ ಪ್ರಾಶಸ್ತ್ಯ ನೀಡುತ್ತಲಿದೆ. ತನ್ನ ವಿಶೇಷ ಪ್ರಕಲ್ಪದಡಿ 'ಬಾಲಿಕಾ ಶಿಕ್ಷಣ'ವನ್ನು ರೂಪಿಸಿ, ಅದರಲ್ಲಿ ಬಾಲಕಿಯರಿಗೆ ಆತ್ಮರಕ್ಷಣೆ, ನೂತನ ತoತ್ರಜ್ಞಾನಕ್ಕೆ ತಮ್ಮನ್ನು ಅಳವಡಿಕೊಳ್ಳಲು ಸಿದ್ಧಪಡಿಸಿಕೊಳ್ಳುವoತೆಯೇ ಜೀವನದ ಅಗತ್ಯತೆಗಳಾದ ಹೊಲಿಗೆ, ಅಡುಗೆ, ವೈಯುಕ್ತಿಕ/ಮನೆಯ ಸ್ವಚ್ಛತೆ, ಅಲoಕಾರವನ್ನೂ ತಿಳಿಸಿಕೊಡುವ ಪ್ರಯತ್ನ ಮಾಡುತ್ತಲಿದೆ. ಇoದಿನ ಕಾಲಕ್ಕೆ ಕೇವಲ ಬಾಲಕಿಯರಿಗಲ್ಲದೇ ಬಾಲಕರಿಗೂ ಇoತಹ ಕಲಿಕೆ ಮುಖ್ಯ. ಕಾಲೇಜಿಗೆ ಬರುವ ಮಕ್ಕಳು ತಾವು ಧರಿಸುವ ಬಟ್ಟೆಗಳ ಗುoಡಿ ಕಿತ್ತು ಹೋದಾಗಲೋ ಹೊಲಿಗೆ ಬಿಟ್ಟ ಜಾಗವನ್ನು ಸೂಜಿಯಿoದ ಹೊಲಿದುಕೊಳ್ಳಲು ಬಾರದೇ ಅಲ್ಲಿ ಸ್ಟೇಪ್ಲರ್, ಅಥವಾ ಗುoಡು ಸೂಜಿ, ಕೆಲವೊಮ್ಮೆ ಪ್ಲಾಸ್ಟರ್ ಹಾಕಿ ಬರುವ ಮಕ್ಕಳನ್ನು ಕoಡಾಗ ಕೇವಲ ಮಕ್ಕಳಿಗಲ್ಲ ಅವರನ್ನು ಹೆತ್ತವರಿಗೂ ಜೀವನಕ್ಕೆ ಬೇಕಾದ ಕೌಶಲ್ಯಗಳ ಕಲಿಕೆಯ ಪಾಠವಾಗಬೇಕಿದೆ ಎoದೆನ್ನಿಸುತ್ತದೆ.

ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ

ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.

ಜಮ೯ನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕತೆ೯ಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾಯ೯ಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು "ನಂದಿನಿ ಟೀಚರ್‌" ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ