logo
ಕನ್ನಡ ಸುದ್ದಿ  /  ಜೀವನಶೈಲಿ  /  New Year 2024: ಹೊಸ ವರ್ಷದಂದು ಬೆಂಗಳೂರಿಗರು ಭೇಟಿ ನೀಡಬಹುದಾದ 10 ದೇವಸ್ಥಾನಗಳಿವು

New Year 2024: ಹೊಸ ವರ್ಷದಂದು ಬೆಂಗಳೂರಿಗರು ಭೇಟಿ ನೀಡಬಹುದಾದ 10 ದೇವಸ್ಥಾನಗಳಿವು

HT Kannada Desk HT Kannada

Dec 30, 2023 07:00 AM IST

google News

ಹೊಸ ವರ್ಷಕ್ಕೆ ಭೇಟಿ ನೀಡಬಹುದಾದ ಬೆಂಗಳೂರಿನ ದೇವಾಲಯಗಳು

  • New year 2024: ನೀವು ಬೆಂಗಳೂರಿನವರಾಗಿದ್ದು ಜನವರಿ 1, ಹೊಸ ವರ್ಷಕ್ಕೆ ದೇವಸ್ಥಾನಕ್ಕೆ ಹೋಗುವ ಪ್ಲ್ಯಾನ್‌ ಮಾಡಿದ್ದಲ್ಲಿ ಸಿಲಿಕಾನ್‌ ಸಿಟಿಯ ಈ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಬಹುದು. 

ಹೊಸ ವರ್ಷಕ್ಕೆ ಭೇಟಿ ನೀಡಬಹುದಾದ ಬೆಂಗಳೂರಿನ ದೇವಾಲಯಗಳು
ಹೊಸ ವರ್ಷಕ್ಕೆ ಭೇಟಿ ನೀಡಬಹುದಾದ ಬೆಂಗಳೂರಿನ ದೇವಾಲಯಗಳು

New year 2024: ಹೊಸ ವರ್ಷವನ್ನು ಒಬ್ಬೊಬರು ಒಂದೊಂದು ರೀತಿ ಆಚರಿಸುತ್ತಾರೆ. ಕೆಲವರು ಪಾರ್ಟಿ, ಮೋಜು ಮಸ್ತಿಯಲ್ಲಿ ಕಳೆದರೆ ಇನ್ನೂ ಕೆಲವರು ದೇವಸ್ಥಾನಕ್ಕೆ ಭೇಟಿ ಮಾಡಲು ಬಯಸುತ್ತಾರೆ. ಒಂದು ವೇಳೆ ನೀವು ಬೆಂಗಳೂರಿನಲ್ಲಿ ನೆಲೆಸಿದ್ದರೆ, ಹೊಸ ವರ್ಷದಂದು ಈ ದೇವಸ್ಥಾನಗಳಿಗೆ ಭೇಟಿ ನೀಡಬಹುದು.

ದೊಡ್ಡಬಸವನಗುಡಿ ದೇವಸ್ಥಾನ

ಇದು ಬೆಂಗಳೂರಿನ ದಕ್ಷಿಣ ಭಾಗದಲ್ಲಿದೆ. ವಿಜಯನಗರ ಸಾಮ್ರಾಜ್ಯದ ಮಾಜಿ ದೊರೆ ನಿರ್ಮಿಸಿದ ಈ ದೇವಸ್ಥಾನದಲ್ಲಿರುವ ನಂದಿ 15 ಅಡಿಗಳಷ್ಟು ದೊಡ್ಡದಾಗಿದೆ. ಇದನ್ನು ಒಂದೇ ಗ್ರಾನೈಟ್‌ ಪ್ರತಿಮೆಯಲ್ಲಿ ಕೆತ್ತಲಾಗಿದೆ.

ಚೊಕ್ಕನಾಥಸ್ವಾಮಿ ದೇವಾಲಯ

ಬೆಂಗಳೂರು ವಿಮಾನ ನಿಲ್ದಾಣದ ಬಳಿ ಇರುವ ಚೊಕ್ಕನಾಥಸ್ವಾಮಿ ದೇವಸ್ಥಾನವು ಬೆಂಗಳೂರಿನ ಹಳೆಯ ಮತ್ತು ಅತ್ಯಂತ ಪ್ರಸಿದ್ಧ

ದೇವಾಲಯಗಳಲ್ಲಿ ಒಂದಾಗಿದೆ. 10 ನೇ ಶತಮಾನದಲ್ಲಿ ಚೋಳರಿಂದ ನಿರ್ಮಿಸಲ್ಪಟ್ಟಿರುವ ಈ ದೇವಸ್ಥಾನವು ಚೋಳ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ.

ಇಸ್ಕಾನ್ ದೇವಾಲಯ

ಬೆಂಗಳೂರಿನಲ್ಲಿರುವ ಇಸ್ಕಾನ್ ದೇವಾಲಯವು ವಿಶ್ವದ ವೈಷ್ಣವರ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ. 1997 ರಲ್ಲಿ ನಿರ್ಮಿಸಲಾದ ಈ ದೇವಾಲಯವು ಕಲ್ಲಿನ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿದೆ. ದೇವಾಲಯಕ್ಕೆ ಬರುವ ಭಕ್ತರನ್ನು ನೀರಿನ ಕಾರಂಜಿಗಳು ಮತ್ತು ಪ್ರವೇಶದ್ವಾರದಲ್ಲಿ ಬೃಹತ್ ಕಮಾನುಗಳು ಸ್ವಾಗತಿಸುತ್ತವೆ. ದೇವಾಲಯದ ಒಳಗೆ 5 ಪ್ರಾರ್ಥನಾ ಮಂದಿರಗಳಿವೆ.

ದೊಡ್ಡ ಗಣೇಶ ದೇವಸ್ಥಾನ

ಇದು ದೊಡ್ಡ ಬಸವನ ಗುಡಿ ದೇವಾಲಯದ ಸಂಕೀರ್ಣದಲ್ಲಿದೆ. ಶಕ್ತಿ ಗಣಪತಿ ಅಥವಾ ಸತ್ಯ ಗಣಪತಿ ದೇವಸ್ಥಾನ ಎಂದು ಕರೆಯಲ್ಪಡುವ ಇದು ಬೆಂಗಳೂರಿನ ಅತಿದೊಡ್ಡ ಏಕಶಿಲೆಯ ಗಣೇಶನ ಪ್ರತಿಮೆಗಳಲ್ಲಿ ಒಂದು. ಇದು 18 ಅಡಿ ಎತ್ತರ, 16 ಅಡಿ ಅಗಲ ಹೊಂದಿದೆ.

ಕೋಟೆ ವೆಂಕಟೇಶ್ವರ ದೇವಸ್ಥಾನ

ಬಸವನಗುಡಿಯ ಕೃಷ್ಣರಾಜೇಂದ್ರ ರಸ್ತೆಯಲ್ಲಿ ಕೋಟೆ ವೆಂಕಟೇಶ್ವರ ದೇವಸ್ಥಾನವಿದೆ. ಇದನ್ನು 1689 ರಲ್ಲಿ ನಿರ್ಮಿಸಲಾಗಿದೆ, ಇದು ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಈ ದೇವಾಲಯವು ವಿಶಿಷ್ಟವಾದ ದ್ರಾವಿಡ ಮತ್ತು

ವಿಜಯನಗರದ ವಾಸ್ತುಶಿಲ್ಪ ಶೈಲಿಗಳಿಗೆ ಒಂದು ಪ್ರಮುಖ ಉದಾಹರಣೆಯಾಗಿದೆ. ದೇವಾಲಯದ ಗೋಡೆಗಳಲ್ಲಿ ಭಗವಾನ್ ಬ್ರಹ್ಮ, ಶಿವ ಮತ್ತು ವಿಷ್ಣುವಿನ ಕೆತ್ತನೆಗಳಿವೆ.

ಶಿವ ದೇವಾಲಯ

ಇದು ಬೆಂಗಳೂರಿನ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ. ಶಿವನ ಪ್ರತಿಮೆ 65 ಅಡಿ ಎತ್ತರವಿದೆ. ಮಾನವ ನಿರ್ಮಿತ ನೀರಿನ ಕೊಳದೊಳಗೆ ಪ್ರತಿಷ್ಟಾಪಿಸಲಾಗಿದೆ. ಇಲ್ಲಿನ ಶಿವಲಿಂಗವನ್ನು ಹಾಲು ಮತ್ತು ಹೂವುಗಳಿಂದ ತೊಳೆಯುತ್ತಾರೆ. ಮಹಾ ಶಿವರಾತ್ರಿ ಮತ್ತು ಗಣೇಶ ಚತುರ್ಥಿಯ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯ. ಹೊಸ ವರ್ಷದಂದು ಕೂಡಾ ಅನೇಕರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಗವಿ ಗಂಗಾಧರೇಶ್ವರ ದೇವಸ್ಥಾನ

ಗವಿ ಗಂಗಾಧರೇಶ್ವರ ದೇವಾಲಯವನ್ನು 9 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ದೇವಾಲಯವು ವಾಸ್ತವವಾಗಿ ಒಂದೇ ಬಂಡೆಯಿಂದ ಮಾಡಲ್ಪಟ್ಟಿದೆ. ದೇವಸ್ಥಾನದ ಮುಂಭಾಗದಲ್ಲಿರುವ ಕಲ್ಲಿನ ತಟ್ಟೆಗಳು ಇಲ್ಲಿನ ಪ್ರಮುಖ ಆಕರ್ಷಣೆ.

ಹಲಸೂರು ಸೋಮೇಶ್ವರ ದೇವಾಲಯ

ಸೋಮೇಶ್ವರ ದೇವಾಲಯದ ಸಂಕೀರ್ಣವು ವಿವಿಧ ಹಿಂದೂ ದೇವತೆಗಳ ವಿಗ್ರಹಗಳನ್ನು ಒಳಗೊಂಡಿದೆ. ಇಲ್ಲಿ 12 ಋಷಿಗಳ ಪ್ರತಿಮೆಗಳನ್ನು ಹೊಂದಿರುವ ನವಗ್ರಹ ದೇವಾಲಯ ಕೂಡಾ ಇದೆ. ಈ ದೇವಾಲಯವನ್ನು ಶ್ರೀ ಸೋಮೇಶ್ವರ ಸ್ವಾಮಿಯ ಗೌರವಾರ್ಥವಾಗಿ ನಿರ್ಮಿಸಲಾಗಿದೆ.

ಬನಶಂಕರಿ ದೇವಸ್ಥಾನ

ಬೆಂಗಳೂರಿನ ಖ್ಯಾತ ದೇವಾಲಯಗಳಲ್ಲಿ ಬನಶಂಕರಿ ದೇವಸ್ಥಾನ ಕೂಡಾ ಒಂದು. ದೇಗುಲದಲ್ಲಿ ಬನಶಂಕರಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದನ್ನು 1915ರಲ್ಲಿ ಕಟ್ಟಲಾಗಿದೆ. ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಇಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ