logo
ಕನ್ನಡ ಸುದ್ದಿ  /  ಜೀವನಶೈಲಿ  /  New Year 2024: ಹೊಸ ವರ್ಷವನ್ನು ಸ್ವಾಗತಿಸಲು ಇಲ್ಲಿವೆ 10 ವಿಭಿನ್ನ ಐಡಿಯಾಗಳು

New Year 2024: ಹೊಸ ವರ್ಷವನ್ನು ಸ್ವಾಗತಿಸಲು ಇಲ್ಲಿವೆ 10 ವಿಭಿನ್ನ ಐಡಿಯಾಗಳು

HT Kannada Desk HT Kannada

Dec 08, 2023 05:00 PM IST

google News

ಹೊಸ ವರ್ಷ 2024 (istockphoto)

    • New Year Welcome Ideas: ಈ ವರ್ಷದ ಕಹಿನೆನಪುಗಳನ್ನು ಮರೆತು ಹೊಸ ವಿಶ್ವಾಸ-ನಂಬಿಕೆ-ಭರವಸೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಪ್ಲಾನ್​ ಮಾಡುತ್ತಿದ್ಧಾರೆ ಜನರು. 2024 ಅನ್ನು ಸ್ವಲ್ಪ ಡಿಫೆರೆಂಟ್​ ಆಗಿ ವೆಲ್​ಕಮ್​ ಮಾಡಿ. ಹೊಸ ವರ್ಷವನ್ನು ಸ್ವಾಗತಿಸಲು ಇಲ್ಲಿವೆ 10 ವಿಭಿನ್ನ ಐಡಿಯಾಗಳು
ಹೊಸ ವರ್ಷ 2024 (istockphoto)
ಹೊಸ ವರ್ಷ 2024 (istockphoto)

ಹೊಸ ವರ್ಷವನ್ನು ವೆಲ್​ಕಮ್​ ಮಾಡಲು ಇಡೀ ಜಗತ್ತೇ ಸಜ್ಜಾಗಿದೆ. ಈ ವರ್ಷದ ಕಹಿನೆನಪುಗಳನ್ನು ಮರೆತು ಹೊಸ ವಿಶ್ವಾಸ-ನಂಬಿಕೆ-ಭರವಸೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಪ್ಲಾನ್​ ಮಾಡುತ್ತಿದ್ಧಾರೆ ಜನರು. 2024 ಅನ್ನು ಸ್ವಲ್ಪ ಡಿಫೆರೆಂಟ್​ ಆಗಿ ವೆಲ್​ಕಮ್​ ಮಾಡಿ. ಹೊಸ ವರ್ಷವನ್ನು ಸ್ವಾಗತಿಸಲು ಇಲ್ಲಿವೆ 10 ವಿಭಿನ್ನ ಐಡಿಯಾಗಳು

ಬಲೂನ್​: ಹಲವು ಬಲೂನ್​​ಗಳನ್ನು ಊದಿ ನೇತುಹಾಕಿ. ಡಿ.31ರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಅವುಗಳನ್ನು ಎಲ್ಲರೂ ಸೇರಿ ಒಟ್ಟಿಗೆ ಒಡೆದು ಹ್ಯಾಪಿ ನ್ಯೂ ಇಯರ್​ ಎಂದು ಜೋರಾಗಿ ಕೂಗಿ.

ಆಕಾಶಬುಟ್ಟಿ: ನಿಮ್ಮ ಪ್ರೀತಿ ಪಾತ್ರರ ಜೊತೆ ಆಕಾಶದೀಪ ಅಥವಾ ಆಕಾಶದೀಪವನ್ನು ಹಾರಿಸಿ. ಇದು ನಿಮ್ಮ ಮುಖದಲ್ಲಿ ನಗು ತರಿಸುತ್ತಾ ಹೊಸ ವರ್ಷವನ್ನು ವೆಲ್​ಕಮ್​ ಮಾಡಲು ಉತ್ತಮ ಐಡಿಯಾ ಆಗಿದೆ. ಸಮುದ್ರ ತೀರದಲ್ಲಿ ಆಕಾಶಬುಟ್ಟಿ ಹಾರಿಸಿದರೆ ಅದರ ವೈಬ್​ ಮತ್ತಷ್ಟು ಹೆಚ್ಚುತ್ತದೆ.

ಪ್ರೇಮನಿವೇದನೆ: ಇಷ್ಟು ದಿನ ನೀವು ಮನಸ್ಸಿನಲ್ಲಿಯೇ ಪ್ರೀತಿಸುತ್ತಿದ್ದ ವ್ಯಕ್ತಿಗೆ ಡಿ.31ರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಪ್ರಪೋಸ್​ ಮಾಡಿ. ಅವರಿಂದ ಏನೇ ಉತ್ತರ ಬಂದರೂ ಸ್ವಾಗತಿಸಿ. ಒಪ್ಪುತ್ತಾರೆ ಎಂಬುದು ಖಚಿತವಾಗಿದ್ದರೆ ಲೈವ್​ ಆಗಿಯೇ ಒಂದು ರೋಸ್ ಅಥವಾ ನಿಮ್ಮ ಬಜೆಟ್​ನ ಏನಾದ್ರೂ ಗಿಫ್ಟ್​​ ನೀಡಿ ಪ್ರಪೋಸ್​ ಮಾಡಿ.

ಪಟಾಕಿ: ಡಿ.31ರ ಮಧ್ಯರಾತ್ರಿ 12 ಗಂಟೆಗೆ ಪರಿಸರ-ಸ್ನೇಹಿ ಪಟಾಕಿಗಳನ್ನು ಹೊಡೆದು ಹೊಸ ವರ್ಷವನ್ನು ಬರಮಾಡಿಕೊಳ್ಳಬಹುದು. ಚೀನಾದವರ ಪ್ರಕಾರ ಪಟಾಕಿ ಹೊಡಯುವುದು ದುಷ್ಟಶಕ್ತಿಗಳನ್ನು ಓಡಿಸುತ್ತದೆ.

ಡಿನ್ನರ್​: ರಾತ್ರಿ ಸ್ಪೆಷಲ್​ ಡಿನ್ನರ್​ ಆಯೋಜನೆ ಮಾಡಿ ಬಗೆ ಬಗೆಯ ಆಹಾರಗಳನ್ನು ಸವಿಯುತ್ತಾ ಕೂಲ್​ ಡ್ರಿಂಕ್ಸ್ ಕುಡಿಯುತ್ತಾ ಎಂಜಾಯ್​ ಮಾಡಿ.

ಮ್ಯೂಸಿಕ್​-ಡ್ಯಾನ್ಸ್: ಹೊಸ ವರ್ಷದ ಪಾರ್ಟಿಯಲ್ಲಿ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸುತ್ತಾ ಹೊಸ ವರ್ಷವನ್ನು ಬರಮಾಡಿಕೊಳ್ಳಿ.

ಬಣ್ಣ: ನೀವು ಪಾರ್ಟಿ ಆಯೋಜನೆ ಮಾಡಿದ್ದರೆ ಎಲ್ಲ ಅತಿಥಿಗಳಿಗೆ ಒಂದೇ ಬಣ್ಣದ ಉಡುಪು ಧರಿಸಿ ಬರಲು ಹೇಳಿ. ಕೇಕ್​, ಬಲೂನ್​ ಹೀಗೆ ಎಲ್ಲವೂ ಅದೇ ಬಣ್ಣದಾಗಿರಲಿ. ಇದು ಒಳ್ಳೆ ವೈಬ್​ ನೀಡುತ್ತದೆ. ಹೆಚ್ಚಾಗಿ ಜನರು ಹೊಸ ವರ್ಷದ ಎಂಜಾಯ್​ಮೆಂಟ್​ಗೆ ಕಪ್ಪು ಬಣ್ಣದ ಬಟ್ಟೆ ಆಯ್ಕೆ ಮಾಡುತ್ತಾರೆ.

12 ದ್ರಾಕ್ಷಿ: ಸ್ಪೇನ್ ಮತ್ತು ಸ್ಪ್ಯಾನಿಷ್ ಪ್ರಭಾವ ಹೊಂದಿರುವ ಇತರ ದೇಶಗಳಲ್ಲಿ ಡಿ.31ರ ಮಧ್ಯರಾತ್ರಿ 12 ಗಂಟೆಗೆ 12 ದ್ರಾಕ್ಷಿ ಹಣ್ಣನ್ನು ತಿನ್ನುವ ಸಂಪ್ರದಾಯವಿದೆ. 12 ದ್ರಾಕ್ಷಿಗಳು ಮುಂಬರುವ 12 ಸಮೃದ್ಧ ತಿಂಗಳುಗಳನ್ನು ಸಂಕೇತಿಸುತ್ತವೆ.

ಐಸ್​ಕ್ರೀಮ್​: ಸ್ವಿಟ್ಜರ್ಲೆಂಡ್‌ನಲ್ಲಿ, ಜನರು ಕೇವಲ ರುಚಿಗಾಗಿ ಮಾತ್ರವಲ್ಲ ಸಮೃದ್ಧಿ ಮತ್ತು ಅದೃಷ್ಟದ ವರ್ಷವನ್ನು ತರಲು ಐಸ್ ಕ್ರೀಮ್ ಅನ್ನು ತಿಂದು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ.

ಟೋಪಿ: ಹೊಸ ವರ್ಷದ ಪಾರ್ಟಿ ವೇಳೆ ಮಕ್ಕಳಿದ್ದರೆ ಅವರಿಗೆ ಬಗೆಬಗೆಯ ಹ್ಯಾಟ್​ ಧರಿಸಲು ಹೇಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ