logo
ಕನ್ನಡ ಸುದ್ದಿ  /  ಜೀವನಶೈಲಿ  /  New Life: ಹೊಸ ವರ್ಷದಿಂದ ನಿಮ್ಮ ಜೀವನವನ್ನು ಮರುಪ್ರಾರಂಭಿಸಲು ಇಲ್ಲಿವೆ 15 ಸಲಹೆಗಳು: ನಿಮ್ಮನ್ನು ನೀವು ರಿಲಾಂಚ್ ಮಾಡಿ

New Life: ಹೊಸ ವರ್ಷದಿಂದ ನಿಮ್ಮ ಜೀವನವನ್ನು ಮರುಪ್ರಾರಂಭಿಸಲು ಇಲ್ಲಿವೆ 15 ಸಲಹೆಗಳು: ನಿಮ್ಮನ್ನು ನೀವು ರಿಲಾಂಚ್ ಮಾಡಿ

HT Kannada Desk HT Kannada

Dec 12, 2023 06:00 AM IST

google News

ಹೊಸ ವರ್ಷದಿಂದ ಹೊಸ ಜೀವನ ಪ್ರಾರಂಭಿಸಿ (istockphoto)

    • Relaunch Yourself: ನಿಮ್ಮ ಜೀವನದಲ್ಲಿ ಹಿಂದೆ ಏನೇ ಕಹಿ ಘಟನೆ ನಡೆದಿದ್ದರೂ, ನೀವು ಅಂದುಕೊಂಡದ್ದು ಆಗದಿದ್ದರೂ, ಒಟ್ಟಾರೆ ನಿಮ್ಮ ವಿರುದ್ಧ ಏನೇ ಆಗಿದ್ದರೂ ಕೂಡ ಹೊಸ ವರ್ಷದಿಂದ ನಿಮ್ಮ ಜೀವನವನ್ನು ಮರುಪ್ರಾರಂಭಿಸಲು ನಿಮಗೆ ಅವಕಾಶವಿದೆ. ಅದಕ್ಕಾಗಿ ಇಲ್ಲಿವೆ ಟಿಪ್ಸ್
ಹೊಸ ವರ್ಷದಿಂದ ಹೊಸ ಜೀವನ ಪ್ರಾರಂಭಿಸಿ (istockphoto)
ಹೊಸ ವರ್ಷದಿಂದ ಹೊಸ ಜೀವನ ಪ್ರಾರಂಭಿಸಿ (istockphoto)

ನೀವು ಯಾರೆಂದು ನಿಮ್ಮ ಬಳಿ ಎಂದಾದರೂ ಪ್ರಶ್ನಿಸಿಕೊಂಡಿದ್ದೀರಾ? ನೀವು ಇಂದು ಇರುವ ಹಂತಕ್ಕೆ ಹೇಗೆ ಬಂದಿದ್ದೀರಿ ಎಂದು ಯೋಚನೆ ಮಾಡಿದ್ದೀರಾ? ನಿಮ್ಮ ಗುರಿ ತಲುಪಲು ಯಾಕೆ ಸಾಧ್ಯವಾಗಿಲ್ಲ ಎಂದು ಕೇಳಿಕೊಂಡಿದ್ದೀರಾ? ನಿಮ್ಮ ಇಂದಿನ ಪರಿಸ್ಥಿತಿಗೆ ಏನು ಕಾರಣ ಎಂದು ಯೋಚಿಸಿದ್ದೀರಾ? ಆತ್ಮಾವಲೋಕನ ಮಾಡಿಕೊಂಡಿದ್ದೀರಾ? ಹೊಸ ವರ್ಷ ಬರುತ್ತಿದೆ. ನಿಮ್ಮ ಜೀವನದಲ್ಲಿ ಹಿಂದೆ ಏನೇ ಕಹಿ ಘಟನೆ ನಡೆದಿದ್ದರೂ, ನೀವು ಅಂದುಕೊಂಡದ್ದು ಆಗದಿದ್ದರೂ, ಒಟ್ಟಾರೆ ನಿಮ್ಮ ವಿರುದ್ಧ ಏನೇ ಆಗಿದ್ದರೂ ಕೂಡ ಹೊಸ ವರ್ಷದಿಂದ ನಿಮ್ಮ ಜೀವನವನ್ನು ಮರುಪ್ರಾರಂಭಿಸಲು ನಿಮಗೆ ಅವಕಾಶವಿದೆ. ನಿಮ್ಮನ್ನು ನೀವು ಮರುಶೋಧಿಸಬೇಕಿದೆ.

ನಿಮ್ಮ ಜೀವನವನ್ನು ಮರುಪ್ರಾರಂಭಿಸಲು ಸಲಹೆಗಳು

1) ಮೊದಲು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ, ನಿಮ್ಮನ್ನು ನೀವು ಒಪ್ಪಿಕೊಳ್ಳಿ. ನಿಮ್ಮನ್ನು ನೀವು ಗೌರವಿಸಿ.

2) ನಿಮ್ಮ ಜೀವನದಲ್ಲಿ ಅಮೂಲ್ಯವಾದದ್ದು ಏನು ಅಂದು ಅರಿಯಿರಿ. ಅದಕ್ಕಾಗಿ ಶ್ರಮ ಹಾಕಿ.

3) ಮತ್ತೊಬ್ಬರ ಜೀವನಕ್ಕೂ ನಿಮಗೂ ಹೋಲಿಸಿಕೊಳ್ಳಬೇಡಿ. ನಿಮ್ಮ ಜೀವನದಲ್ಲಿ ನಿಮಗೆ ತಕ್ಕಂತೆ ಹೇಗೆಲ್ಲಾ ಚೆನ್ನಾಗಿ ಇರಬಹುದೋ ಹಾಗೆ ಇರಿ.

4) ಹಿಂದಿನ ಕಹಿ ಘಟನೆ ಬಗ್ಗೆ ಯೋಚಿಸಲೇ ಬೇಡಿ. ಅದರಿಂದ ಏನು ಪಾಠ ಕಲಿತಿರಿ ಎಂಬುದನ್ನು ಅರಿತು ಭವಿಷ್ಯದಲ್ಲಿ ಅದು ಮರುಕಳಿಸದಂತೆ ನೋಡಿಕೊಳ್ಳಿ.

5) ಈ ಕ್ಷಣವನ್ನು ಆನಂದಿಸಿ. ಈ ಪ್ರಸ್ತುತ ಕ್ಷಣದಲ್ಲಿ ಖುಷಿಯಾಗಿರಲು ಏನು ಬೇಕೋ ಅದನ್ನು ಮಾಡಿ. ಆದರೆ ಅತಿಯಾಸೆ ಅಥವಾ ದುರಾಸೆ ಬೇಡ.

6) ನಿಮ್ಮ ದೌರ್ಬಲ್ಯಗಳನ್ನೇ ನಿಮ್ಮ ಸಾಮರ್ಥ್ಯಗಳಾಗಿ ಪರಿವರ್ತಿಸಿ.

7) ಮುಂದಿನ ಐದು ವರ್ಷಗಳಲ್ಲಿ ನೀವು ಏನನ್ನು ಸಾಧಿಸಲು ಬಯಸುತ್ತೀರಿ ಮತ್ತು ಭವಿಷ್ಯದಲ್ಲಿ ನೀವು ಎಲ್ಲಿರಲು ಬಯಸುತ್ತೀರಿ ಎಂಬುದರ ಕುರಿತು ಯೋಚಿಸಿ. ಅದಕ್ಕೆ ತಕ್ಕಂತೆ ಪ್ಲಾನ್ ಮಾಡಿಕೊಳ್ಳಿ.

8) ಇದಕ್ಕಾಗಿ ನೀವು ನಿಮ್ಮ ಗುರಿಯತ್ತ ಸಾಗಬೇಕು. ಮಧ್ಯದಲ್ಲಿ ಬರುವ ಕಷ್ಟ-ತೊಂದರೆ-ಅಡತಡೆಗಳನ್ನು ಧೈರ್ಯವಾಗಿ ಎದುರಿಸಿ ಮುನ್ನುಗ್ಗಿ.

9) ನೀವು ಪ್ರೀತಿಸುವವರು, ನಿಮ್ಮನ್ನು ಪ್ರೀತಿಸುವವರ ಸಂಬಂಧ ಉಳಿಸಿಕೊಳ್ಳಿ. ನಿಮ್ಮ ಬ್ಯುಸಿ ಶೆಡ್ಯೂಲ್​ನಲ್ಲಿ ಅವರಿಗೂ ಸಮಯ ನೀಡಿ.

10) ಉತ್ತಮ ಆಹಾರ, ಯೋಗ-ವ್ಯಾಯಾಮದಂತಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ.

11) ಸದಾ ನಗುತ್ತಿರಿ. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಸಹಾನುಭೂತಿ ಬೆಳೆಸಿಕೊಳ್ಳಿ.

12) ನೆಗಟಿವ್​ ಆಲೋಚನೆಗಳಿಂದ ಹೊರ ಬನ್ನಿ. ಅತಿಯಾಗಿ ಯಾವುದರ ಬಗ್ಗೆಯೂ ಯೋಚಿಸಬೇಡಿ. ಒತ್ತಡ ಮುಕ್ತರಾಗಿ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಿ.

13) ಯಾವಾಗಲೂ ಹೊಸತನ್ನು ಪ್ರಯತ್ನಿಸಿ. ಹೊಸತನ್ನು ಕಲಿಯಿರಿ.

14) ನಿಸರ್ಗ ಸೌಂದರ್ಯವನ್ನು ಆನಂದಿಸಿ. ಪ್ರಕೃತಿ ಮಡಿಲಲ್ಲಿ ಒಂದಿಷ್ಟು ಸಮಯ ಕಳೆಯಿರಿ.

15) ಮೊದಲು ನಿಮ್ಮೊಂದಿಗೆ ನೀವು ಪ್ರಾಮಾಣಿಕವಾಗಿರಿ. ನಿಮ್ಮ ಪ್ರೀತಿಪಾತ್ರರೊಂದಿಗೂ ಪ್ರಾಮಾಣಿಕರಾಗಿರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ