logo
ಕನ್ನಡ ಸುದ್ದಿ  /  ಜೀವನಶೈಲಿ  /  New Year 2024: ಕಾಸ್ಟ್ಯೂಮ್‌ ಪಾರ್ಟಿ, ಔಟ್‌ಡೋರ್‌ ಆಕ್ಟಿವಿಟಿ; ಹೊಸ ವರ್ಷದ ಸಂಭ್ರಮ ಸದಾ ನೆನಪಿನಲ್ಲಿಡಲು ಇಲ್ಲಿವೆ ಒಂದಿಷ್ಟು ಐಡಿಯಾಗಳು

New Year 2024: ಕಾಸ್ಟ್ಯೂಮ್‌ ಪಾರ್ಟಿ, ಔಟ್‌ಡೋರ್‌ ಆಕ್ಟಿವಿಟಿ; ಹೊಸ ವರ್ಷದ ಸಂಭ್ರಮ ಸದಾ ನೆನಪಿನಲ್ಲಿಡಲು ಇಲ್ಲಿವೆ ಒಂದಿಷ್ಟು ಐಡಿಯಾಗಳು

HT Kannada Desk HT Kannada

Dec 29, 2023 07:00 AM IST

google News

2024 ಹೊಸ ವರ್ಷದ ಆಚರಣೆ ಐಡಿಯಾಗಳು

  • ಹೊಸ ವರ್ಷ ಎಂದೆಂದಿಗೂ ನೆನಪಿನಲ್ಲಿರುವಂತೆ ಆಚರಣೆ ಮಾಡಬೇಕು ಅನ್ನೋದು ಎಲ್ಲರ ಆಸೆ. ನೀವು ಈ ಬಾರಿ ಹೊಸ ವರ್ಷ ಆಚರಣೆ ಮಾಡಬೇಕೆಂದು ಕೊಂಡಿದ್ದೀರ? ಇಲ್ನೋಡಿ ನಿಮಗಾಗಿ ಕೆಲವೊಂದು ಐಡಿಯಾಗಳಿವೆ. 

2024 ಹೊಸ ವರ್ಷದ ಆಚರಣೆ ಐಡಿಯಾಗಳು
2024 ಹೊಸ ವರ್ಷದ ಆಚರಣೆ ಐಡಿಯಾಗಳು (PC: Unsplash)

ಹೊಸ ವರ್ಷಕ್ಕೆ ಇನ್ನು 3 ದಿನಗಳಷ್ಟೇ ಬಾಕಿ ಇದೆ. ಕ್ರಿಸ್‌ಮಸ್‌ ಕೂಡಾ ಮುಗಿದಿದೆ. ಜನರು ಇನ್ನು ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಹೊಸ ವರ್ಷವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸುತ್ತಾರೆ. ಈ ಬಾರಿಯ ಹೊಸ ವರ್ಷ ನಿಮ್ಮ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯಬೇಕು ಎಂದಾದರೆ ಈ ರೀತಿ ಆಚರಣೆ ಮಾಡಿ.

ಕಾಸ್ಟ್ಯೂಮ್‌ ಪಾರ್ಟಿ ಆಯೋಜಿಸಿ

ಪ್ರತಿ ಬಾರಿಯೂ ಒಂದೇ ರೀತಿ ಹೊಸ ವರ್ಷ ಆಚರಿಸುವ ಬದಲಿಗೆ ಏನಾದರೂ ವಿಭಿನ್ನವಾದದನ್ನು ಟ್ರೈ ಮಾಡಿ. ಯಾವುದಾದರೊಂದು ಥೀಮ್‌ ಆಯ್ಕೆ ಮಾಡಿಕೊಂಡು ಅದಕ್ಕೆ ತಕ್ಕಂತೆ ಕಾಸ್ಟ್ಯೂಮ್‌ ಪಾರ್ಟಿ ಆಯೋಜನೆ ಮಾಡಿ, ಆಗ ನೋಡಿ ಮಜಾ. ಸೂಪರ್‌ ಹಿರೋ, ರೆಟ್ರೋ, ಸಿನಿಮಾ ಕ್ಯಾರೆಕ್ಟರ್‌ ಸೇರಿದಂತೆ ಯಾವುದೇ ಕಾಸ್ಟ್ಯೂಮ್ಸ್‌ ಧರಿಸಬಹುದು. ನಿಮ್ಮ ಸ್ನೇಹಿತರು, ನೆರೆಹೊರೆಯವರು, ಇತರ ಪ್ರೀತಿಪಾತ್ರರನ್ನು ಈ ಪಾರ್ಟಿಗೆ ಆಹ್ವಾನಿಸಿ.

ಹೊರಾಂಗಣ ಚಟುವಟಿಕೆಗಳು

ನಿಮಗೆ ಮನೆ ಒಳಗೆ ಸಮಯ ಕಳೆಯಲು ಬೋರ್‌ ಎನಿಸಿದರೆ ಹೊರಾಂಗಣ ಸಾಹಸಮಯ ಚಟುವಟಿಕೆಗಳನ್ನು ಕೂಡಾ ಆಯೋಜನೆ ಮಾಡಬಹುದು. ಕಾಡಿನಲ್ಲಿ ಕ್ಯಾಂಪಿಂಗ್‌, ಪ್ರಕೃತಿ ನಡುವೆ ಪಾದಯಾತ್ರೆ, ಕಡಲತೀರದಲ್ಲಿ ದೀಪಗಳ ನಡುವೆ ಮೋಜು ಮಸ್ತಿ ಹೀಗೆ ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ನೀವು ದುಪ್ಪಟ್ಟು ಎಂಜಾಯ್‌ ಮಾಡಬಹುದು.

ಚಾರಿಟಿಗಳಲ್ಲಿ ಕೆಲಸ ಮಾಡಿ

ಅನೇಕ ಚಾರಿಟಿಗಳು ಕೂಡಾ ಹೊಸ ವರ್ಷವನ್ನು ಆಯೋಜಿಸುತ್ತವೆ. ಸ್ವಯಂಸೇವಕರಿಗಾಗಿ ಹೊಸ ವರ್ಷದ ಮುನ್ನಾದಿನದ ಈವೆಂಟ್‌ಗಳನ್ನು ಆಯೋಜಿಸುತ್ತವೆ. ಒಂದು ವೇಳೆ ನಿಮ್ಮ ಮನೆ ಸಮೀಪದಲ್ಲಿ ಇಂತಹ ಸ್ಥಳಗಳಿದ್ದರೆ ನೀವು ವಾಲೆಂಟಿಯರ್‌ ಆಗಿ ಭಾಗವಹಿಸಬಹುದು.

ಸ್ಪಾ ನೈಟ್‌ ಅರೇಂಜ್‌ ಮಾಡಿ

ಹೊಸ ವರ್ಷದ ಮುನ್ನಾದಿನ ನಿಮಗೆ ಹೊರ ಹೋಗಲು ಇಷ್ಟವಿಲ್ಲದಿದ್ದಲ್ಲಿ, ಮನೆಯಲ್ಲೇ ಸೆಲ್ಫ್‌ ಸ್ಪಾ ಅರೇಂಜ್ ಮಾಡಿ. ನಿಮ್ಮ ಫೇಸ್‌ ಮಾಸ್ಕ್‌, ಎಸೆನ್ಷಿಯಲ್‌ ಆಯಿಲ್‌ ಸೇರಿದಂತೆ ಸ್ಪಾಗೆ ಬೇಕಾದ ವಸ್ತುಗಳನ್ನು ಒಂದೆಡೆ ಅರೇಂಜ್‌ ಮಾಡಿ, ನಿಮಗಿಷ್ಟವಾದ ಮ್ಯೂಸಿಕ್‌ ಪ್ಲೇ ಮಾಡಿ. ನಂತರ ಸ್ನಾನ ಮಾಡಿ ಬೆಚ್ಚಗಿನ ಫೀಲ್‌ ಅನುಭವಿಸಿ.

ವರ್ಚ್ಯುವಲ್‌ ಸೆಲಬ್ರೇಷನ್‌

ನಿಮಗೆ ಹೊಸ ವರ್ಷದ ಪಾರ್ಟಿಯಲ್ಲಿ ನೇರವಾಗಿ ಪಾಲ್ಗೊಳ್ಳಲು ಆಗದಿದ್ದರೆ ವರ್ಚ್ಯುವಲ್‌ ಸೆಲಬ್ರೇಷನ್‌ನಲ್ಲಿ ಭಾಗಿ ಆಗಬಹುದು. ಈ ಮೂಲಕ ನಿಮ್ಮ ಪ್ರೀತಿಪಾತ್ರರೊಂದಿಗೆ ಗೇಮ್‌ ಆಡಬಹುದು, ನಿಮ್ಮ ರೆಸಲ್ಯೂಷನ್ಸ್‌ ಹಂಚಿಕೊಳ್ಳಬಹುದು. ನೀವು ದೂರ ಇದ್ದರೂ ಹತ್ತಿರವೇ ಇದ್ದ ಖುಷಿ ಅನುಭವಿಸಬಹುದು.

ಡಿನ್ನರ್‌ ಪಾರ್ಟಿ ಆಯೋಜಿಸಿ

ಹೊಸ ವರ್ಷದ ಮುನ್ನಾ ದಿನ ಅನೇಕರು ತಮಗಿಷ್ಟವಾದ ಅಡುಗೆಗಳನ್ನು ತಯಾರಿಸಿ ಡಿನ್ನರ್‌ ಪಾರ್ಟಿ ಆಯೋಜಿಸುತ್ತಾರೆ. ಈ ಪಾರ್ಟಿಗೆ ನಿಮ್ಮ ಆತ್ಮೀಯರನ್ನು ಆಹ್ವಾನಿಸಿ. ಯಾರಿಗೆ ಯಾವ ರೀತಿಯ ಫುಡ್‌ ಇಷ್ಟ ಅನ್ನೋದನ್ನು ಮೊದಲೇ ಪಟ್ಟಿ ಮಾಡಿಕೊಳ್ಳಿ. ಅಡುಗೆ, ಸರ್ವಿಂಗ್‌ ಸೇರಿದಂತೆ ಒಬ್ಬೊಬ್ಬರಿಗೆ ಒಂದೊಂದು ಕೆಲಸ ವಹಿಸಿ.

ಹಿಂದಿನ ವರ್ಷದ ನೆನಪುಗಳ ಮೆಲುಕು ಹಾಕಿ

ಕಳೆದ ವರ್ಷದ ನೆನಪುಗಳನ್ನು ಒಳಗೊಂಡ ಟೈಮ್ ಕ್ಯಾಪ್ಸುಲ್ ರಚಿಸಲು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಒಟ್ಟುಗೂಡಿಸಿ. ಮಹತ್ವದ ಕ್ಷಣಗಳ ಕೈಬರಹದ ಟಿಪ್ಪಣಿಗಳು, ಫೋಟೋಗಳು ಮತ್ತು ಸಣ್ಣ ಸ್ಮರಣಿಕೆಗಳನ್ನು ಸೇರಿಸಿ. ಮುಂದಿನ ವರ್ಷದ ರೆಸಲ್ಯೂಷನ್‌, ಪ್ಲ್ಯಾನ್‌ಗಳನ್ನು ಚರ್ಚೆ ಮಾಡಿ.

ಹೊಸ ವರ್ಷಕ್ಕೆ ಇನ್ನೂ ಸಮಯ ಇದೆ, ಇನ್ನೂ ನೀವು ಹೇಗೆ ಆಚರಿಸಬೇಕು ಎಂದು ಪ್ಲ್ಯಾನ್‌ ಮಾಡದಿದ್ದಲ್ಲಿ, ಆದಷ್ಟು ಬೇಗ ಫೈನಲ್‌ ಮಾಡಿ, ನಿಮ್ಮ ಹೊಸ ವರ್ಷ ಸದಾ ನೆನಪಾಗಿರಲಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ