logo
ಕನ್ನಡ ಸುದ್ದಿ  /  ಜೀವನಶೈಲಿ  /  New Year Motivation: ಯಾವುದೂ ಅಸಾಧ್ಯವಲ್ಲ; ಏನು ಸಾಧಿಸಲು ಬಯಸುತ್ತಿರೋ ಅದರತ್ತ ಹೆಜ್ಜೆ ಹಾಕುವುದೇ ಮೊದಲ ಗೆಲುವು

New Year Motivation: ಯಾವುದೂ ಅಸಾಧ್ಯವಲ್ಲ; ಏನು ಸಾಧಿಸಲು ಬಯಸುತ್ತಿರೋ ಅದರತ್ತ ಹೆಜ್ಜೆ ಹಾಕುವುದೇ ಮೊದಲ ಗೆಲುವು

Raghavendra M Y HT Kannada

Jan 01, 2024 09:23 AM IST

google News

2024ರ ಹೊಸ ವರ್ಷಕ್ಕೆ ಈ ಸ್ಪೂರ್ತಿದಾಯಕ ವಿಚಾರಗಳನ್ನು ತಿಳಿಯರಿ

  • 2024ರ ಹೊಸ ವರ್ಷ ಬಂದಿದೆ. ಕೆಲವರು ಹೊಸ ವರ್ಷದಲ್ಲಿ ನಿರ್ಣಯಗಳನ್ನ ಮಾಡುತ್ತಾರೆ. ಅಂದುಕೊಂಡಿದ್ದು ಆಗುವುದಿಲ್ಲ ಎಂದು ಹೇಳಬಹುದು. ಆದರೆ ಕನಿಷ್ಠ ಪ್ರಯತ್ನದ ಭಾಗವಾಗಿ ಒಂದು ಹೆಜ್ಜೆ ಇಟ್ಟು ನೋಡಿ. 

2024ರ ಹೊಸ ವರ್ಷಕ್ಕೆ ಈ ಸ್ಪೂರ್ತಿದಾಯಕ ವಿಚಾರಗಳನ್ನು ತಿಳಿಯರಿ
2024ರ ಹೊಸ ವರ್ಷಕ್ಕೆ ಈ ಸ್ಪೂರ್ತಿದಾಯಕ ವಿಚಾರಗಳನ್ನು ತಿಳಿಯರಿ

ಬೆಂಗಳೂರು: 2023 ಮುಗೀತು. 2024 ರಿಂದ ನಾವು ಹೀಗೆ ಇರಬೇಕು, ಹೊಸ ಕೆಲಸ ಮಾಡಬೇಕು, ಬ್ಯುಸಿನೆಸ್ ಆರಂಭಿಸಬೇಕು, ಮನೆ ಕಟ್ಟಬೇಕು, ದಪ್ಪಗಾಗಬೇಕು, ಸಣ್ಣಗಾಗಬೇಕು, ಹೊಟ್ಟೆ ಕರಗಿಸಬೇಕು ಹೀಗೆ ಹಲವು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ. ಇಂತಹ ಹಲವು ನಿರ್ಣಯಗಳನ್ನು ಪ್ರತಿ ವರ್ಷ ಮಾಡಲಾಗುತ್ತದೆ. ಯೋಜನೆಯನ್ನ ಮಾಡುತ್ತೇವೆ ಆದರೆ ಅವುಗಳನ್ನು ಕಾರ್ಯ ರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ.

ನಿಮ್ಮ ಯೋಜನೆಗಳು ಅನುಷ್ಠಾನ ಆಗದಿರುವುದಕ್ಕೆ ತಪ್ಪು ನಮ್ಮದಲ್ಲ. ಇದಕ್ಕೆ ಸಮರ್ಪಕ ಸಂಪನ್ಮೂಲಗಳ ಕೊರತೆ ಸೇರಿದಂತೆ ಬೇರೆ ಬೇರೆ ಕಾರಣಗಳಿರುತ್ತವೆ. ಜಗತ್ತು ಆಯಾಸವಿಲ್ಲದೆ ಓಡುತ್ತಲೇ ಇರುತ್ತದೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಂದಿಲ್ಲೊಂದು ವಿಚಾರದಲ್ಲಿ ಓಡುತ್ತಲೇ ಇರುತ್ತಾರೆ. ಆದರೆ ಸೂಕ್ತ ಫಲಿತಾಂಶ ಪಡೆಯುವಲ್ಲಿ ವಿಫಲ ಆಗುತ್ತಾರೆ. ಏಕೆಂದರೆ ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಅಂತಿಮವಾಗಿ ಕೊನೆಗೆ ಬಂದು ನಿಲ್ಲುವುದೇ ಜೀವನ.

ನೀವು ಏನನ್ನು ಸಾಧಿಸಲು ಬಯಸುತ್ತೀರೋ, ಅದರತ್ತ ಹೆಜ್ಜೆ ಹಾಕಬೇಕು. ಓಡಲು ಅಥವಾ ನಡೆಯಲು ಸಾಧ್ಯವಾಗದಿದ್ದರೆ ತೆವಳುತ್ತಾ ಹೋಗಬೇಕೆಂದು ದೊಡ್ಡವರು ಹೇಳುತ್ತಾರೆ. ಏನನ್ನು ಮಾಡಲು ಬಯಸುತ್ತಿರೋ ಅದಕ್ಕೆ ಮೊದಲು ಪ್ರಯತ್ನವನ್ನು ಹಾಕಬೇಕು. ಒಂದು ವೇಳೆ ಬೇರೊಬ್ಬರು ನಿಮ್ಮೊಂದಿಗೆ ಇದ್ದಾರೆ ಎಂಬ ಕಾರಣಕ್ಕೆ ನಿಮ್ಮ ನಿರ್ಧಾರವನ್ನು ನಿರ್ಲಕ್ಷಿಸಬಾರದು. ಬಹುತೇಕ ಈ ಹಂತದಲ್ಲೇ ವಿಫಲರಾಗುತ್ತಾರೆ. ಅಂದುಕೊಂಡಂತೆ ನಡೆಯದಿದ್ದಾಗ ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಾರದು, ತಾಳ್ಮೆ ಕಳೆದುಕೊಳ್ಳಬಾರದು, ಸೋಲನ್ನು ಒಪ್ಪಿಕೊಳ್ಳಲೇಬೇಡಿ.

ಯಾರು ಏನೇ ಹೇಳಲಿ ಬಿಡಲಿ, ಇತಿಹಾಸದಲ್ಲಿ ಅನೇಕ ಕಥೆಗಳು ವಿಜಯದಿಂದ ಕೇವಲ ಒಂದು ಹೆಜ್ಜೆ ದೂರಲ್ಲಿ ನಿಂತಿವೆ. ಆದರೆ ಅಲ್ಲಿ ನಿಲ್ಲಬೇಡಿ. ನಿಮ್ಮ ಗೆಲುವು ಬಹಳ ಹತ್ತಿರದಲ್ಲಿದೆ. ಇಷ್ಟೆಲ್ಲಾ ಮಾಡಿದ್ದೀನಿ. ಆ ಒಂದು ಪ್ರಯತ್ನ ಯಾಕೆ ನಿಲ್ಲಿಸಲಿ. ಮಧ್ಯರಾತ್ರಿ ಗುಡುಗು, ಸಿಡಿಲು ದಂಗಾಗುವಂತೆ ಮಾಡುತ್ತದೆ. ಬೆಳಗ್ಗೆ ಸೂರ್ಯೋದಯವನ್ನು ಯಾರೂ ತಡೆಯಲಾರರು. ನಿಮ್ಮ ವಿಷಯದಲ್ಲೂ ಅಷ್ಟೇ ಸೋಲು, ದಾರಿ ಕಾಣದಿರುವುದು, ಅವಕಾಶಗಳ ಕೊರತೆ ಹೀಗೆ ಎಷ್ಟೇ ಇದ್ದರೂ ನಿಮಗೆ ಬೇಕಾದುದನ್ನು ಪಡೆಯುವವರಿಗೆ ಪ್ರಯತ್ನ ಮಾಡುತ್ತಲೇ ಇರಿ.

ನಿಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಗುರಿ ಸಾಧನೆಯ ಹಾದಿಯಲ್ಲಿ ಕಾರ್ಯವನ್ನು ಎಲ್ಲಿ ನಿಲ್ಲಿಸಿದ್ದೇವೆ ಎಂಬುದು ಮುಖ್ಯವಲ್ಲ, ಏಕೆ ನಿಲ್ಲಿಸಿದ್ದೇವೆ ಎಂದು ತಿಳಿದರೆ ಸಾಕು. ನಿಮ್ಮ ಮೇಲಿನ ನಂಬಿಕೆಯ ಬುನಾದಿ ಗಟ್ಟಿಯಾಗಿದ್ದರೆ, ಜೀವನ ಕಟ್ಟುವುದು ಶಾಶ್ವತವಾಗಿ ನಿಲ್ಲುತ್ತದೆ. ಯಾವತ್ತೂ ನಿನ್ನ ಹಣೆಬರಹದ ಬಗ್ಗೆ ಯೋಚಿಸಬೇಡ, ಕೋಟೆಗಳನ್ನು ಮುರಿಯುವಷ್ಟು ಗಟ್ಟಿಯಾಗಿ ಹೊಡೆಯುವೆ ಎಂಬಂತೆ ನಂಬಿಕೆಯನ್ನು ಹೆಚ್ಚಿಸಿಕೊಳ್ಳಿ. ಕೊನೆಯದಾಗಿ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಿ, ನಿಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ