New Year Wishes; ನಿಮ್ಮ ಕುಚಿಕು ಗೆಳೆಯ, ಪ್ರೀತಿಯ ಗೆಳತಿಗೆ ಹೊಸ ವರ್ಷದ ಶುಭ ಕೋರಲು ಒಂದಿಷ್ಟು ಐಡಿಯಾಗಳು
Dec 10, 2023 07:00 AM IST
2024ಕ್ಕೆ ಸ್ನೇಹಿತರಿಗೆ ಶುಭ ಕೋರಲು ವಿಶಸ್ ಐಡಿಯಾಗಳು
New Year 2024: ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲೆಡೆ ಸಕಲ ತಯಾರಿ ನಡೆದಿದೆ. ಜೊತೆಗೆ ಸ್ನೇಹಿತರಿಗೆ ಶುಭ ಕೋರಲು ಕೆಲವರು ಕಾರ್ಡ್ ಶಾಪಿಂಗ್ ಮಾಡುತ್ತಿದ್ದಾರೆ. ಹಾಗಾದರೆ ಈ ಬಾರಿ ನಿಮ್ಮ ಆತ್ಮೀಯ ಸ್ನೇಹಿತರಿಗೆ ವಿಶ್ ಮಾಡಲು ಇಲ್ಲೊಂದಿಷ್ಟು ಐಡಿಯಾಗಳಿವೆ.
New Year 2024: ಅಬ್ಬಾ! ಎಷ್ಟು ಬೇಗ ಒಂದು ವರ್ಷ ಮುಗಿದೋಯ್ತು. 2023 ಅಂತ್ಯದಲ್ಲಿದ್ದೇವೆ. ಹೊಸ ವರ್ಷದ ಆಗಮನಕ್ಕೆ ಇನ್ನು 18 ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಕಲ ತಯಾರಿ ನಡೆದಿದೆ. ಜನರು ತಮ್ಮ ಕುಟುಂಬದೊಂದಿಗೆ ಟ್ರಿಪ್ ಹೋಗಿ ಹೊರಗಡೆ ಹೊಸ ವರ್ಷ ಆಚರಿಸಲು ಕಾಯುತ್ತಿದ್ದಾರೆ.
ಹಿಂದೂಗಳಿಗೆ ಯುಗಾದಿ ಹೊಸ ವರ್ಷವಾದರೂ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಅನೇಕ ವರ್ಷಗಳಿಂದ ಜನವರಿ 1 ರಂದೇ ಹೊಸ ವರ್ಷ ಆಚರಿಸಲಾಗುತ್ತಿದೆ. ಹೊಸ ವರ್ಷ ಎಂದರೆ ಮೋಜು, ಮಸ್ತಿ ಜೊತೆಗೆ ಆತ್ಮೀಯರಿಗೆ ಶುಭ ಕೋರುವುದು ಸಾಮಾನ್ಯ. ಈ ಬಾರಿ ನಿಮ್ಮ ಸ್ನೇಹಿತರಿಗೆ ಹೊಸ ವರ್ಷದ ಶುಭ ಕೋರಲು ಇಲ್ಲಿ ಕೆಲವೊಂದು ಐಡಿಯಾಗಳಿವೆ.
- ಹೊಸ ವರ್ಷ ಒಳಿತನ್ನು ಮಾಡಲಿ, ನಿಮ್ಮ ಕನಸುಗಳು ನನಸಾಗಲಿ ಖುಷಿ, ಶಾಂತಿ, ನೆಮ್ಮದಿ ಪ್ರೀತಿ, ಅದೃಷ್ಟ ಎಲ್ಲವೂ ನಿಮಗೆ ದೊರೆಯಲಿ ನನ್ನ ಪ್ರೀತಿಯ ಗೆಳೆಯನಿಗೆ ಹೊಸ ವರ್ಷದ ಶುಭಾಶಯಗಳು.
- 12 ತಿಂಗಳು ಸಂತೋಷದಿಂದ, 52 ವಾರ ಆರೋಗ್ಯದಿಂದ, 365 ದಿನಗಳು ಯಶಸ್ವಿಯಾಗಿ, 8760 ಗಂಟೆಗಳ ಕಾಲ ಸುಖದಿಂದ, 52600 ನಿಮಿಷ ಶಾಂತಿಯಿಂದ, 3153600 ಸೆಕೆಂಡುಗಳು ನಿಮ್ಮ ಜೀವನ ನೆಮ್ಮದಿಯಿಂದ ಕೂಡಿರಲಿ, 2024ರ ಶುಭಾಶಯ.
- ನಿಮ್ಮ ಕನಸೆಲ್ಲಾ 2024ರ ಹೊಸ ವರ್ಷದಂದು ನನಸಾಗಲಿ, ನಿಮ್ಮ ಮುಂದಿನ ಜೀವನ ಇನ್ನಷ್ಟು ಉಜ್ವಲವಾಗಿರಲಿ ನಲ್ಮೆಯ ಗೆಳತಿಗೆ ಹೊಸ ವರ್ಷದ ಶುಭಾಶಯಗಳು.
- ಹೊಸ ವರ್ಷದ ಹೊಸ ದಿನ ನಿನ್ನ ಆಸೆಗಳೆಲ್ಲಾ ಹೊಸೆದುಕೊಳ್ಳಲಿ, ಆ ಆಸೆಗಳಲ್ಲೇ ನನಸಾಗಲಿ, ಹೊಸ ವರ್ಷದ ಶುಭ ಹಾರೈಕೆಗಳು.
- 2024 ನಿಮಗೆ ಎಲ್ಲಾ ಸಂತೋಷ, ಯಶಸ್ಸು ತರಲಿ, ಯಶಸ್ಸು ನಿಮ್ಮ ಪಾಲಿಗಿರಲಿ, ಸಂತೋಷ ನಿಮ್ಮ ಜೀವನಕ್ಕೆ ಜೊತೆಯಾಗಲಿ ಹೊಸ ವರ್ಷ 2024ರ ಶುಭಾಶಯಗಳು.
- ಕಹಿ ನೆನಪುಗಳನ್ನು ಮರೆಯೋಣ, ಹೊಸ ಭರವಸೆ ಹೊಸ ಆಸೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ 2024ರಿಂದ ನಿಮ್ಮ ಜೀನನದಲ್ಲಿ ಸಿಹಿ ತುಂಬಲಿ ಎಂದು ಹಾರೈಸುವೆ.
- 2024ರಲ್ಲಿ ಹೊಸ ವರ್ಷದ 365 ದಿನಗಳ ಬದುಕಿನ ಪುಟ ತೆರೆದುಕೊಳ್ಳಲಿದೆ. ಈ ಪುಟಗಳಲ್ಲಿ ಒಳಿತನ್ನೆ ಬರೆಯುವ, ಒಳಿತನ್ನೇ ಬಯಸುವ ಸುಖ ಸಂತೋಷ ಹಂಚುತ್ತಾ ಬಾಳುವ, ಪ್ರೀತಿಯ ಗೆಳೆಯ/ಗೆಳತಿಯರಿಗೆ ಹೊಸ ವರ್ಷದ ಶುಭಾಶಯಗಳು.
- 2024 ನಿಮ್ಮ ಬದುಕಿನಲ್ಲಿ ಹೊಸ ಬದಲಾವಣೆ ತರಲಿ, ಹೊಸ ಚೈತನ್ಯ ತುಂಬಲಿ, ಹೊಸ ವರುಷ ನಿಮ್ಮ ಬಾಳಲ್ಲಿ ಹೊಸ ಹರುಷ ತರಲಿ, ನಿಮ್ಮೆಲ್ಲಾ ಕನಸುಗಳು ಹುಸಿಯಾಗದೆ ಹಸಿರಾಗಲಿ ಹೊಸ ವರ್ಷದ ಶುಭ ಹಾರೈಕೆಗಳು.
- ಎಷ್ಟೇ ವರ್ಷಗಳು ಕಳೆಯಲಿ, ಎಷ್ಟೇ ಯುಗಗಳು ಉರುಳಲಿ ನಮ್ಮ ಸ್ನೆಹ ಹೀಗೇ ಚಿರಕಾಲ ಉಳಿಯಲಿ. ನಿನ್ನೆಲ್ಲಾ ಆಸೆ ಆಕ್ಷಾಂಕ್ಷೆಗಳು ಈಡೇರಲಿ ಹೊಸ ವರ್ಷದ ಪ್ರೀತಿಯ ಶುಭಾಶಯಗಳು.