logo
ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಇಲ್ಲಿರುವ 66 ಕಿತ್ತಳೆ ಹಣ್ಣುಗಳಲ್ಲಿ 1 ಹಣ್ಣು ಮಾತ್ರ ಡಿಫರೆಂಟ್​; 5 ಸೆಕೆಂಡ್​​ನಲ್ಲಿ ಗುರುತಿಸಿ

Optical Illusion: ಇಲ್ಲಿರುವ 66 ಕಿತ್ತಳೆ ಹಣ್ಣುಗಳಲ್ಲಿ 1 ಹಣ್ಣು ಮಾತ್ರ ಡಿಫರೆಂಟ್​; 5 ಸೆಕೆಂಡ್​​ನಲ್ಲಿ ಗುರುತಿಸಿ

Meghana B HT Kannada

Jan 03, 2024 02:28 PM IST

google News

ಈ ಚಿತ್ರದಲ್ಲಿರುವ ವಿಭಿನ್ನ ಕಿತ್ತಳೆ ಗುರುತಿಸಿ (youtube)

    • Viral news: ಈ ಚಿತ್ರದಲ್ಲಿರುವ 66 ಕಿತ್ತಳೆ ಹಣ್ಣುಗಳ ಪೈಕಿ ಒಂದು ಹಣ್ಣು ಮಾತ್ರ ಸ್ವಲ್ಪ ವಿಭಿನ್ನವಾಗಿದೆ. ಆ ಹಣ್ಣು ಯಾವುದೆಂದು ನೀವು ಗುರುತಿಸಬೇಕು. ಇದಕ್ಕಾಗಿ ನೀವು ಕೆಲ ನಿಮಿಷಗಳ ಕಾಲ ಸಮಯ ತೆಗೆದುಕೊಳ್ಳುವಂತಿಲ್ಲ. ನಿಮಗಿರುವುದೇ ಕೇವಲ 5 ಸೆಕೆಂಡ್​ ಮಾತ್ರ.
ಈ ಚಿತ್ರದಲ್ಲಿರುವ ವಿಭಿನ್ನ ಕಿತ್ತಳೆ ಗುರುತಿಸಿ (youtube)
ಈ ಚಿತ್ರದಲ್ಲಿರುವ ವಿಭಿನ್ನ ಕಿತ್ತಳೆ ಗುರುತಿಸಿ (youtube)

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಕೇಲವ ನಿಮ್ಮ ಮೆದುಳಿಗೆ ಕೆಲಸ ನೀಡುವುದಿಲ್ಲ, ನಿಮ್ಮ ತಲೆ ಕೆರೆದುಕೊಳ್ಳುವಂತೆಯೂ ಮಾಡುತ್ತವೆ. ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಏನೂ ಇಲ್ಲದಂತೆ ಅಥವಾ ಏನೋ ಇದ್ದಂತೆ ತೋರಿಸುತ್ತದೆ. ಕೆಲವೊಮ್ಮೆ ಎಷ್ಟೇ ಬ್ರೇನ್​ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗೋದೇ ಇಲ್ಲ. ಉತ್ತರ ಬೇಕಂದ್ರೆ ನಿಮಗೆ ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಉತ್ತರವನ್ನ ಹುಡುಕುವುದೇ ಒಂದು ರೀತಿಯಲ್ಲಿ ಮಜಾ ಎನ್ನಿಸುತ್ತದೆ. ಈಗ ಅಂತಹದ್ದೇ ಒಂದು ಇಮೇಜ್​ ನಿಮ್ಮ ಮುಂದಿದೆ.

ಯೂಟ್ಯೂಬ್​​ನಲ್ಲಿ ಹಂಚಿಕೊಳ್ಳಲಾದ ಚಿತ್ರವೊಂದರಲ್ಲಿ 66 ಕಿತ್ತಳೆ ಹಣ್ಣುಗಳಿವೆ. 11 ಉದ್ದ ಸಾಲುಗಳು ಹಾಗೂ 6 ಅಡ್ಡ ಸಾಲುಗಳಲ್ಲಿ ಕಿತ್ತಳೆ ಹಣ್ಣುಗಳಿವೆ. ನೀವಿಲ್ಲಿ ಮಾಡಬೇಕಾದದ್ದು ಇಷ್ಟೆ. ಈ ಚಿತ್ರದಲ್ಲಿರುವ 66 ಕಿತ್ತಳೆ ಹಣ್ಣುಗಳ ಪೈಕಿ ಒಂದು ಹಣ್ಣು ಮಾತ್ರ ಸ್ವಲ್ಪ ವಿಭಿನ್ನವಾಗಿದೆ. ಆ ಹಣ್ಣು ಯಾವುದೆಂದು ನೀವು ಗುರುತಿಸಬೇಕು.

ಇದಕ್ಕಾಗಿ ನೀವು ಕೆಲ ನಿಮಿಷಗಳ ಕಾಲ ಸಮಯ ತೆಗೆದುಕೊಳ್ಳುವಂತಿಲ್ಲ. ನಿಮಗಿರುವುದೇ ಕೇವಲ 5 ಸೆಕೆಂಡ್​ ಮಾತ್ರ. ಇದು ಸುಲಭದ ಕೆಲಸ ಆದ್ರೂ ಸವಾಲಿನದ್ದಾಗಿದೆ. ನಿಮ್ಮ ಕಣ್ಣು ಶಾರ್ಪ್​ ಆಗಿದ್ರೆ ಪಟಾಪಟ್​ ಅಂತ ಆ ವಿಭಿನ್ನ ಕಿತ್ತಳೆ ಹಣ್ಣು ಗುರುತಿಸಿ. ನಿಮ್ಮ ಸಮಯ ಈಗ ಶುರು. ರೆಡಿ ಒಂದು, ಎರಡು, ಮೂರು, ನಾಲ್ಕು.. ಐದು.

ನಿಮ್ಮ ಟೈಂ ಮುಗಿತು. 7 ಸೆಕೆಂಡುಗಳಲ್ಲಿ ಡಿಫರೆಂಟ್​ ಆರೆಂಜ್​​ ಅನ್ನು ಗುರುತಿಸಿದ ತೀಕ್ಷ್ಣ ಕಣ್ಣಿನ ಓದುಗರಿಗೆ ಅಭಿನಂದನೆಗಳು. ಯಾರಿಗೆಲ್ಲಾ ಹುಡುಕಲು ಸಾಧ್ಯವಗಿಲ್ಲವೀ ಅವರಿಗೆ ನಾವೇ ಉತ್ತರ ಹೇಳುತ್ತಿದ್ದೇವೆ ಕೇಳಿ.

11ನೇ ಉದ್ದ ಸಾಲಿನಲ್ಲಿ 4ನೇ ಹಣ್ಣು ಅಥವಾ 4ನೇ ಅಡ್ಡಸಾಲಿನಲ್ಲಿ ಕೊನೆಯ ಹಣ್ಣು ಇತರ ಹಣ್ಣುಗಳಿಗಿಂತ ವಿಭಿನ್ನವಾದ ಹಣ್ಣಾಗಿದೆ. ನಿಮ್ಮ ಸ್ನೇಹಿತರು, ಆತ್ಮೀಯರೊಂದಿಗೆ ಈ ಚಿತ್ರವನ್ನು ಹಂಚಿಕೊಂಡು ಅವರ ಕಣ್ಣೆಷ್ಟು ಶಾರ್ಪ್​ ಇದೆ ನೋಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ