Optical Illusion: ಕಾಡು, ಬೆಟ್ಟ-ಗುಡ್ಡ, ಆಕಾಶ ಮಾತ್ರ ಕಾಣಿಸ್ತಿದ್ಯಾ? 30 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಫೋಟೋಗ್ರಾಫರ್ ಹುಡುಕಿ
Jan 07, 2024 01:03 PM IST
ಈ ಚಿತ್ರದಲ್ಲಿರುವ ಫೋಟೋಗ್ರಾಫರ್ ಹುಡುಕಿ (Pc: Bright Side)
- Viral Optical Illusion: ಈ ಇಮೇಜ್ನಲ್ಲಿ ಇರುವ ಫೋಟೋಗ್ರಾಫರ್ ಅನ್ನು ನೀವು ಗುರುತಿಸಬೇಕು. ಇದಕ್ಕಾಗಿ ನಿಮಗೆ ಇರುವುದು ಕೇವಲ 30 ಸೆಕೆಂಡ್ ಕಾಲಾವಕಾಶ ಮಾತ್ರ. ಇಷ್ಟು ಸೆಕೆಂಡ್ಗಳಲ್ಲಿ ನೀವೇನಾದ್ರೂ ಆತನನ್ನ ಹುಡುಕಿದ್ರೆ ನೀವು ಜಾಣರು, ಸೂಕ್ಷ್ಮವಾಗಿ ಚಿತ್ರವನ್ನ ಗಮನಿಸಿದ್ದೀರಿ ಎಂದರ್ಥ.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಕೇವಲ ನಿಮ್ಮ ಮೆದುಳಿಗೆ ಕೆಲಸ ನೀಡುವುದಿಲ್ಲ, ನಿಮ್ಮ ತಲೆ ಕೆರೆದುಕೊಳ್ಳುವಂತೆಯೂ ಮಾಡುತ್ತವೆ. ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಏನೂ ಇಲ್ಲದಂತೆ ಅಥವಾ ಏನೋ ಇದ್ದಂತೆ ತೋರಿಸುತ್ತದೆ. ಕೆಲವೊಮ್ಮೆ ಎಷ್ಟೇ ಬ್ರೇನ್ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗೋದೇ ಇಲ್ಲ. ಉತ್ತರ ಬೇಕಂದ್ರೆ ನಿಮಗೆ ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಉತ್ತರವನ್ನ ಹುಡುಕುವುದೇ ಒಂದು ರೀತಿಯಲ್ಲಿ ಮಜಾ ಎನ್ನಿಸುತ್ತದೆ. ಈಗ ಅಂತಹದ್ದೇ ಒಂದು ಇಮೇಜ್ ನಿಮ್ಮ ಮುಂದಿದೆ.
ಮನೋವಿಜ್ಞಾನ ಮತ್ತು ನರವಿಜ್ಞಾನದ ವಿಜ್ಞಾನಿಗಳು ನಾವು ವಿಷಯಗಳನ್ನು ಹೇಗೆ ನೋಡುತ್ತೇವೆ, ಹೇಗೆ ಗಮನ ಕೊಡುತ್ತೇವೆ, ಹೇಗೆ ನೆನಪಿಟ್ಟುಕೊಳ್ಳುತ್ತೇವೆ ಮತ್ತು ನಿರ್ಧಾರಗಳನ್ನು ಹೇಗೆ ಮಾಡುತ್ತೇವೆ ಎಂಬಂತಹ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ಬಳಸುತ್ತಾರೆ.
ಬ್ರೈಟ್ ಸೈಡ್ (Bright Side) ವೆಬ್ಸೈಟ್ನಲ್ಲಿ ಹಂಚಿಕೊಳ್ಳಲಾದ ಈ ಚಿತ್ರದಲ್ಲಿ ದಟ್ಟವಾರ ಅರಣ್ಯ, ಗುಡ್ಡ-ಬೆಟ್ಟ, ನದಿ, ಆಕಾಶ, ಮೋಡ, ಪಕ್ಷಿಗಳು ಕಾಣುಸುತ್ತದೆ. ಫೋಟೋ ನೋಡಿದಾಕ್ಷಣ ಇವೆಲ್ಲವೂ ನಮ್ಮ ಕಣ್ಣಿಗೆ ಪಟ್ ಅಂತ ಕಾಣುಸುತ್ತಿದೆ ಅಲ್ಲವೇ? ಆದರೆ ಇದೇ ಚಿತ್ರದಲ್ಲಿ ಒಬ್ಬ ಫೋಟೋಗ್ರಾಫರ್ ಕೂಡ ಇದ್ದಾನೆ. ಆತ ಸುಂದರ ಚಿತ್ರಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಾನೆ.
ಇಲ್ಲಿ ನಿಮ್ಮ ಕೆಲಸ ಇಷ್ಟೇ. ಈ ಇಮೇಜ್ನಲ್ಲಿ ಇರುವ ಫೋಟೋಗ್ರಾಫರ್ ಅನ್ನು ನೀವು ಗುರುತಿಸಬೇಕು. ಇದಕ್ಕಾಗಿ ನಿಮಗೆ ಇರುವುದು ಕೇವಲ 30 ಸೆಕೆಂಡ್ ಕಾಲಾವಕಾಶ ಮಾತ್ರ. ಇಷ್ಟು ಸೆಕೆಂಡ್ಗಳಲ್ಲಿ ನೀವೇನಾದ್ರೂ ಆತನನ್ನ ಹುಡುಕಿದ್ರೆ ನೀವು ಜಾಣರು, ಸೂಕ್ಷ್ಮವಾಗಿ ಚಿತ್ರವನ್ನ ಗಮನಿಸಿದ್ದೀರಿ ಎಂದರ್ಥ.
ನಿಮ್ಮ ಸಮಯ ಈಗ ಶುರು. ರೆಡಿ ಒಂದು, ಎರಡು, ಮೂರು........ಮೂವತ್ತು. ನಿಮ್ಮ ಸಮಯ ಮುಗಿತು. ಫೋಟೋಗ್ರಾಫರ್ ಕಾಣಿಸಿದ್ನಾ? ಹುಡುಕಲು ಆಗದವರು ಈ ಕೆಳಗೆ ನಾವೇ ಉತ್ತರ ಕೊಟ್ಟಿದ್ದೇವೆ ನೋಡಿ. ನಿಮಗೆ ಇದು ಇಷ್ಟವಾಗಿದ್ರೂ ನಿಮ್ಮ ಸ್ನೇಹಿತರೊಂದಿಗೂ ಈ ಚಿತ್ರವನ್ನು ಹಂಚಿಕೊಂಡು ಉತ್ತರ ಹುಡುಕಲು ಹೇಳಿ, ನೋಡೋಣ ಅವರೆಷ್ಟು ಜಾಣರು ಅಂತ.
ವಿಭಾಗ