logo
ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ನಿಮ್ಮ ದೃಷ್ಟಿ ಎಷ್ಟು ಚುರುಕು ನೋಡೇ ಬಿಡೋಣ : ಈ ಚಿತ್ರದಲ್ಲಿ ಒಟ್ಟು ಎಷ್ಟು ಮುಖಗಳಿಗೆ 15 ಸೆಕೆಂಡ್​​ನಲ್ಲಿ ಹೇಳಿ

Optical Illusion: ನಿಮ್ಮ ದೃಷ್ಟಿ ಎಷ್ಟು ಚುರುಕು ನೋಡೇ ಬಿಡೋಣ : ಈ ಚಿತ್ರದಲ್ಲಿ ಒಟ್ಟು ಎಷ್ಟು ಮುಖಗಳಿಗೆ 15 ಸೆಕೆಂಡ್​​ನಲ್ಲಿ ಹೇಳಿ

Meghana B HT Kannada

Jan 14, 2024 03:36 PM IST

google News

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ (PC: turkiyenewspaper.com)

    • Viral Optical Illusion: ನಿಮ್ಮ ಕಣ್ಣು ಎಷ್ಟು ಚುರುಕು ಎಂದು ತಿಳಿದುಕೊಳ್ಳಲು ಇಲ್ಲೊಂದು ಸವಾಲನ್ನು ನಾವು ನಿಮಗೆ ನೀಡುತ್ತಿದ್ದೇವೆ. ಈ ಸವಾಲನ್ನು ಎದುರಿಸುವಲ್ಲಿ ನೀವು ಶಕ್ತರಾದರೆ ನಿಮ್ಮ ಕಣ್ಣಿಗೆ ಫುಲ್​ ಮಾರ್ಕ್ಸ್​..!
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ (PC: turkiyenewspaper.com)
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ (PC: turkiyenewspaper.com)

ನಿಮ್ಮ ಕಣ್ಣು ಭಾರೀ ಸೂಕ್ಷ್ಮ ಎಂಬ ಆತ್ಮವಿಶ್ವಾಸ ಏನಾದರೂ ನಿಮಗಿದೆಯೇ..? ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ನಂಬಿಕೆ ಇರುವುದು ನಿಜಕ್ಕೂ ಒಳ್ಳೆಯ ವಿಚಾರವೇ. ಆದರೆ ಅದನ್ನು ಸಾಬೀತು ಮಾಡಬೇಕಾಗಿ ಬಂದರೆ ಅದಕ್ಕೂ ತಯಾರಿರಬೇಕು. ಈಗ ನಿಮ್ಮ ಕಣ್ಣಿನ ಸೂಕ್ಷ್ಮತೆ ಎಷ್ಟಿದೆ ಎಂಬುದನ್ನು ಪರೀಕ್ಷೆ ಮಾಡೋಣ. ಇಲ್ಲೊಂದು ದೃಷ್ಟಿ ಭ್ರಮಣೆಯ ಚಿತ್ರವನ್ನು ನಿಮಗೆ ನೀಡಲಾಗಿದ್ದು ಇದರಲ್ಲಿರುವ ಟ್ವಿಸ್ಟ್​ನ್ನು ನೀವು ಕಂಡು ಹಿಡಿಯಬೇಕಿದೆ.

ಇಲ್ಲಿ ತೋರಿಸಲಾದ ಚಿತ್ರದಲ್ಲಿ ಕಾರಂಜಿಯ ಎದುರು ಯುವತಿಯೊಬ್ಬಳು ನಿಂತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಆದರೆ ಅಸಲಿ ವಿಚಾರ ಅದಲ್ಲ. ನೀವು ನಿಮ್ಮ ಕಣ್ಣಿನ ಸೂಕ್ಷ್ಮತೆಯನ್ನು ಬಳಸಿಕೊಂಡು ಈ ಚಿತ್ರದಲ್ಲಿ ಅಡಗಿರುವ ಇನ್ನೂ ಮೂರು ಮುಖಗಳನ್ನು ಪತ್ತೆ ಮಾಡಬೇಕಿದೆ. ಈ ಚಿತ್ರದಲ್ಲಿ ಅಡಗಿರುವ ಮೂರು ಮುಖಗಳನ್ನು ಪತ್ತೆ ಮಾಡಲು ನಾವು ನಿಮಗೆ ನೀಡುತ್ತಿರುವ ಸಮಯ ಕೇವಲ 15 ಸೆಕೆಂಡುಗಳು. ನಿಮ್ಮ ಸಮಯ ಈಗ ಶುರು. ಟಿಕ್​ ಟಿಕ್​ 1,,, ಟಿಕ್​ ಟಿಕ್​ 2....

ನಿಮಗೆ ನಂಬಲಾಗದಿದ್ದರೂ ಸಹ ಈ ಚಿತ್ರದಲ್ಲಿ ಯುವತಿಯ ಮುಖವನ್ನು ಹೊರತುಪಡಿಸಿ ಇನ್ನೂ ಮೂರು ಮುಖಗಳಿರುವುದು ಸತ್ಯ. ಈ ಚಿತ್ರವನ್ನು ಸೀದಾ ನೋಡಿದಾಗ ಒಂದು ಮುಖ, ತಲೆ ಕೆಳಗು ಮಾಡಿದಾಗ ಇನ್ನೊಂದು ಮುಖ ಹಾಗೂ ಮೇಲಿನಿಂದ ಬಲಕ್ಕೆ ನೋಡಿದಾಗ ನಿಮಗೆ ಇನ್ನೊಂದು ಮುಖ ಕಾಣುತ್ತದೆ. ನೀವು ಚಿತ್ರದಲ್ಲಿನ ಯಾವುದೇ ಬಣ್ಣ ಹಾಗೂ ಆಕೃತಿಯ ಕಡೆಗೆ ಗಮನ ನೀಡದೇ ಕೇವಲ ಸಂಪೂರ್ಣ ಚಿತ್ರದತ್ತ ನಿಮ್ಮ ದೃಷ್ಟಿಯನ್ನು ನೆಟ್ಟಿದ್ದರೆ ಖಂಡಿತ ನಿಮಗೆ ಈ ಮೂರು ಮುಖಗಳು ಕಾಣಿಸಲಿವೆ.

ದೃಷ್ಟಿಭ್ರಮೆಯ ಇಂತಹ ಚಿತ್ರಗಳು ಯಾವಾಗಲೂ ಮೊಬೈಲ್​ನಲ್ಲಿಯೇ ಕಾಲ ಕಳೆಯುವವರಿಗೆ ಟೈಮ್​ ಪಾಸ್​ ಮಾಡಲು ಸಹಾಯ ಮಾಡುವುದರ ಜೊತೆಯಲ್ಲಿ ಅವರ ವ್ಯಕ್ತಿತ್ವ ಎಂಥಾದ್ದು ಎಂಬುದನ್ನೂ ತಿಳಿಸುತ್ತವೆ. ನಿಮ್ಮ ಐಕ್ಯೂ ಯಾವ ಮಟ್ಟದಲ್ಲಿದೆ..? ನಿಮ್ಮ ಕಣ್ಣಿನ ಸೂಕ್ಷ್ಮತೆ ಎಷ್ಟಿದೆ..? ನಿಮ್ಮ ಏಕಾಗ್ರತೆ ಎಂಥಾದ್ದು..? ಕೊಟ್ಟ ಸಮಯವನ್ನು ನೀವು ಹೇಗೆ ಬಳಸಿಕೊಳ್ಳುತ್ತೀರಿ...? ಹೀಗೆ ತುಂಬಾ ಪ್ರಶ್ನೆಗಳಿಗೆ ಇಂಥಹ ಚಟುವಟಿಕೆಗಳು ಉತ್ತರ ನೀಡುತ್ತವೆ. ಅಂದಹಾಗೆ ಇಂಥಹ ದೃಷ್ಟಿಭ್ರಮೆಯಂತಹ ಚಟುವಟಿಕೆಗಳನ್ನು ಪರಿಹರಿಸಲು ಸಾಮಾನ್ಯವಾಗಿ ನಿಮಗೆ 10 - 15 ಸೆಕೆಂಡುಗಳ ಕಾಲಾವಕಾಶ ಮಾತ್ರ ಇರುವುದರಿಂದ ನೀವು ಎಷ್ಟು ಚುರುಕು ಎಂಬುದೂ ಸಹ ಇದರಲ್ಲಿ ಗೊತ್ತಾಗುತ್ತದೆ.

ದೃಷ್ಟಿ ಭ್ರಮೆ ಚಿತ್ರಗಳು ಮೆದುಳಿಗೆ ಹೇಗೆ ಕೆಲಸ ಕೊಡುತ್ತವೆ..?

ನಮ್ಮ ಮೆದುಳು ವಿಶ್ರಾಂತಿಯನ್ನು ಬಯಸುತ್ತದೆ. ಆಗ ನಮಗೆ ಸಾಮಾನ್ಯ ಚಿತ್ರ ಮಾತ್ರ ಕಾಣುತ್ತದೆ. ಆ ಚಿತ್ರದಲ್ಲಿ ಎದ್ದು ಕಾಣುವಂತೆ ಬಳಿಯಲಾದ ಬಣ್ಣಗಳ ಕಡೆಗೆ ಮಾತ್ರ ನಾವು ಗಮನ ನೀಡುತ್ತಿರುತ್ತೇವೆ. ಆದರೆ ನಾವು ಯಾವಾಗ ನಮ್ಮ ಮೆದುಳಿಗೆ ಕೆಲಸ ಕೊಡಲು ಆರಂಭಿಸುತ್ತೇವೋ ಆಗ ಮಾತ್ರ ಆ ಚಿತ್ರದ ಒಳಗೆ ಅಡಗಿರುವ ರಹಸ್ಯಗಳು ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಎಷ್ಟೋ ಬಾರಿ ಅಲ್ಲಿ ಇಲ್ಲದ ಚಿತ್ರಗಳನ್ನೆಲ್ಲ ನಮ್ಮ ಮೆದುಳೇ ಚಿತ್ರಿಸಿಕೊಂಡು ಬಿಡುತ್ತದೆ..!

ಇನ್ನು ದೃಷ್ಟಿ ಭ್ರಮೆಯಂತಹ ಚಿತ್ರಗಳಲ್ಲಿ ಸಾಕಷ್ಟು ಬಣ್ಣಗಳನ್ನು ಬಳಸಿರುತ್ತಾರೆ. ಇದು ಅವಶ್ಯಕತೆ ಇದೆಯೇ ಎಂದು ನಮಗೆ ಎನಿಸಬಹುದು. ಅಸಲಿಗೆ ಇವುಗಳು ನಮ್ಮ ದೃಷ್ಟಿ ಸೂಕ್ಷ್ಮತೆಗೆ ಭಂಗ ತರಲೆಂದೇ ಬಳಿಯುವ ಬಣ್ಣಗಳು. ನಿಮ್ಮ ಏಕಾಗ್ರತೆಯು ಆ ಬಣ್ಣಗಳಿಂದ ವಿಚಲಿತವಾಗಬಾರದು. ನೀವು ಏನನ್ನು ಕಂಡು ಹಿಡಿಯಬೇಕು ಎಂಬುದರ ಬಗ್ಗೆ ಮಾತ್ರ ಗಮನ ನೀಡಿದಾಗ ನಿಮಗೆ ಈ ಬಣ್ಣಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಪ್ರಮೇಯ ಬರುವುದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ