logo
ಕನ್ನಡ ಸುದ್ದಿ  /  ಜೀವನಶೈಲಿ  /  Oral Health: ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಾವು ಎಡವುತ್ತಿರಲು ಈ ತಪ್ಪು ಕಲ್ಪನೆಗಳೇ ಕಾರಣ

Oral Health: ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಾವು ಎಡವುತ್ತಿರಲು ಈ ತಪ್ಪು ಕಲ್ಪನೆಗಳೇ ಕಾರಣ

Meghana B HT Kannada

Jan 12, 2024 07:30 AM IST

google News

ಹಲ್ಲುಗಳ ಆರೋಗ್ಯ (ಪ್ರಾತಿನಿಧಿಕ ಚಿತ್ರ-pixabay)

    • Dental Health: ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವ ಭರದಲ್ಲಿ ನೀವು ಅನೇಕ ತಪ್ಪುಗಳನ್ನು ಮಾಡುತ್ತಿದ್ದೀರಿ. ಇವುಗಳು ನಿಮ್ಮ ಹಲ್ಲುಗಳ ಆರೋಗ್ಯವನ್ನು ಹೆಚ್ಚಿಸುವುದು ಹಾಗಿರಲಿ ನಿಮ್ಮ ವಸಡಿನ ಆರೋಗ್ಯವನ್ನೂ ಹಾಳು ಮಾಡಲಿದೆ. ಅಂತಹ ಯಾವ ತಪ್ಪುಗಳನ್ನು ನೀವು ಮಾಡುತ್ತಿದ್ದೀರಿ ಎಂಬುದಕ್ಕೆ ಇಲ್ಲಿದೆ ಮಾಹಿತಿ..
ಹಲ್ಲುಗಳ ಆರೋಗ್ಯ (ಪ್ರಾತಿನಿಧಿಕ ಚಿತ್ರ-pixabay)
ಹಲ್ಲುಗಳ ಆರೋಗ್ಯ (ಪ್ರಾತಿನಿಧಿಕ ಚಿತ್ರ-pixabay)

ಆರೋಗ್ಯಕರ ಹಲ್ಲು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಆದರೆ ಹಲ್ಲಿನ ಆರೋಗ್ಯದ ವಿಚಾರದಲ್ಲಿ ನಾವು ಅನೇಕ ತಪ್ಪು ಕಲ್ಪನೆಗಳನ್ನು ಹೊಂದಿದೆ. ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಮಾಡುವ ಈ ತಪ್ಪುಗಳು ನಮ್ಮ ಹಲ್ಲುಗಳನ್ನು ಇನ್ನಷ್ಟು ಅನಾರೋಗ್ಯಕ್ಕೀಡು ಮಾಡಬಹುದು. ಹಾಗಾದರೆ ಸಾಮಾನ್ಯವಾಗಿ ಹಲ್ಲಿನ ಆರೋಗ್ಯದ ವಿಚಾರದಲ್ಲಿ ಜನರು ಮಾಡುತ್ತಿರುವ ಸಾಮಾನ್ಯ ತಪ್ಪುಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ :

1. ಹಲ್ಲು ನೋವು ಬಂದಾಗ ಮಾತ್ರ ದಂತವೈದ್ಯರನ್ನು ಭೇಟಿ ಮಾಡುತ್ತೀರಿ ಅಲ್ಲವೇ?

ನಿಮಗೆ ಹಲ್ಲು ನೋವು ಇರಲಿ ಅಥವಾ ಇಲ್ಲದೇ ಇರಲಿ. ನೀವು ಕಾಲ ಕಾಲಕ್ಕೆ ದಂತ ವೈದ್ಯರನ್ನು ಭೇಟಿ ಮಾಡಲೇಬೇಕು. ಹಲ್ಲುಗಳಲ್ಲಿ ಉಂಟಾಗಿರುವ ಕುಳಿಗಳು, ಒಸಡಿನ ಸೋಂಕು ಅಥವಾ ಬಾಯಿಯ ಕ್ಯಾನ್ಸರ್​​ನ ಸಮಸ್ಯೆಗಳನ್ನು ಪತ್ತೆ ಮಾಡುವಲ್ಲಿ ದಂತ ವೈದ್ಯರು ನೆರವಾಗುತ್ತಾರೆ. ಈ ಕಾಯಿಲೆಗಳನ್ನು ಆರಂಭದಲ್ಲಿಯೇ ಪತ್ತೆ ಮಾಡಿಕೊಂಡಲ್ಲಿ ದೊಡ್ಡ ಅಪಾಯದಿಂದ ಪಾರಾಗಬಹುದಾಗಿದೆ. ಹಲ್ಲು ನೋವು ಬಂದಾಕ್ಷಣ ಮಾತ್ರೆ ತಿಂದು ಸುಮ್ಮನಾಗುವುದು ತಪ್ಪು.

2. ಗಟ್ಟಿಯಾಗಿ ಹಲ್ಲುಜ್ಜಿದರೆ ಮಾತ್ರ ಹಲ್ಲು ಸ್ವಚ್ಛವಾಗುತ್ತದೆ ಎಂಬುದು ತಪ್ಪು ಗ್ರಹಿಕೆ

ನೀವು ಹಲ್ಲುಗಳ ಮೇಲೆ ಅತಿಯಾದ ಬಲವನ್ನು ಹೇರಿ ಉಜ್ಜಿದಾಗ ಮಾತ್ರ ಹಲ್ಲು ಶುಚಿಗೊಳ್ಳುತ್ತದೆ ಎಂದು ಭಾವಿಸುವುದು ತಪ್ಪು ಕಲ್ಪನೆಯಾಗಿದೆ. ಇದು ನಿಮ್ಮ ವಸಡುಗಳಿಗೆ ಬಲವಾದ ಹಾನಿಯನ್ನುಂಟು ಮಾಡಬಹುದು. ದಂತಗಳಿಗೆ ಹಾಗೂ ವಸಡುಗಳಿಗೆ ಹಾನಿಯುಂಟಾಗದಂತೆ ಮೃದುವಾದ ಹಲ್ಲುಜ್ಜುವ ಬ್ರಶ್​ಗಳಿಂದ ವೃತ್ತಾಕಾರವಾಗಿ ಬ್ರಶ್​ನ್ನು ಚಲಾಯಿಸುತ್ತಾ ಹಲ್ಲುಜ್ಜಬೇಕು,

3. ಸಕ್ಕರೆ ಮಾತ್ರ ಹಲ್ಲುಗಳಲ್ಲಿ ಕುಳಿ ಉಂಟು ಮಾಡುತ್ತದೆ ಅಂದುಕೊಂಡಿದ್ದೀರಾ?

ಸಕ್ಕರೆ ಸೇವನೆಯಿಂದ ಹಲ್ಲುಗಳ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ, ಹಲ್ಲುಗಳಲ್ಲಿ ಕುಳಿ ಬೀಳುತ್ತದೆ ಎಂಬುದು ನಿಜ, ಆದರೆ ಇದು ಮಾತ್ರವಲ್ಲ. ನೀವು ಬಾಯಿಯ ಸ್ವಚ್ಛತೆಯ ಕಡೆಗೆ ಗಮನ ನೀಡದೇ ಇರುವುದು . ಆಮ್ಲೀಯ ಅಂಶ ಹೆಚ್ಚಿರುವ ಆಹಾರಗಳ ಸೇವನೆ, ತಂಪು ಪಾನೀಯಗಳು ಕೂಡ ಹಲ್ಲುಗಳಲ್ಲಿ ಕುಳಿ ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ ಹಲ್ಲಿನ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ಅಗತ್ಯವಿದೆ.

4. ವಸಡುಗಳಲ್ಲಿ ರಕ್ತಸ್ರಾವವಿದ್ದಾಗ ಏನು ಮಾಡ್ತೀರ?

ವಸಡುಗಳಲ್ಲಿ ರಕ್ತಸ್ರಾವ ಉಂಟಾಗುವುದು ವಸಡುಗಳಲ್ಲಿ ಸೋಂಕು ಉಂಟಾಗುತ್ತಿದೆ ಎಂಬುದರ ಲಕ್ಷಣವಾಗಿದೆ. ಹೀಗಾಗಿ ಕೇವಲ ಹಲ್ಲುಜ್ಜುವುದನ್ನು ನಿಲ್ಲಿಸಿದರೆ ವಸಡಿನ ಕಾಯಿಲೆಯಿಂದ ಬಚಾವಾಗಲು ಸಾಧ್ಯವಿಲ್ಲ. ಈ ರೀತಿಯ ಸಮಸ್ಯೆ ಕಂಡು ಬಂದಾಗ ಕೂಡಲೇ ದಂತ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

5. ಮಕ್ಕಳಿಗೆ ಮೊದಲು ಬರುವ ಹಲ್ಲಿನ ಆರೋಗ್ಯ ಮುಖ್ಯವಲ್ಲ, ಎಷ್ಟೆಂದರೂ ಅವು ಉದುರಿ ಹೋಗುವ ಹಲ್ಲುಗಳು ಅಂತ ಅಂದುಕೊಳ್ಳೋದೂ ತಪ್ಪು

ಮಕ್ಕಳಿಗೆ ಮೊದಲು ಬರುವ ಹಾಲು ಹಲ್ಲುಗಳ ಮೇಲೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅನೇಕ ಮಕ್ಕಳ ಹಲ್ಲುಗಳಲ್ಲಿ ಕುಳಿ ಬಿದ್ದಿದ್ದರೂ ಸಹ ಮತ್ತೊಂದು ಹಲ್ಲು ಬರುತ್ತದೆ ಅಂತಾ ಪೋಷಕರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದರೆ ಇದು ಮಕ್ಕಳಲ್ಲಿ ಶಾಶ್ವತ ಹಲ್ಲು ನಷ್ಟಕ್ಕೆ ಕಾರಣವಾಗಬಹುದು. ಚಿಕ್ಕ ವಯಸ್ಸಿನಿಂದಲೇ ನೀವು ಮಕ್ಕಳಿಗೆ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿ ಹೇಳಬೇಕು. ಇದರಿಂದ ಹಲ್ಲಿನ ಆರೋಗ್ಯ ಚೆನ್ನಾಗಿರಲು ಸಾಧ್ಯ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ