logo
ಕನ್ನಡ ಸುದ್ದಿ  /  ಜೀವನಶೈಲಿ  /  Children Success: ನಾಳೆಯ ಯಶಸ್ಸಿಗಾಗಿ ನಿಮ್ಮ ಮಕ್ಕಳನ್ನು ಸಿದ್ಧಪಡಿಸಲು 5 ಸಲಹೆಗಳು

Children Success: ನಾಳೆಯ ಯಶಸ್ಸಿಗಾಗಿ ನಿಮ್ಮ ಮಕ್ಕಳನ್ನು ಸಿದ್ಧಪಡಿಸಲು 5 ಸಲಹೆಗಳು

Meghana B HT Kannada

Aug 18, 2023 03:27 PM IST

google News

ನಾಳೆಯ ಯಶಸ್ಸಿಗಾಗಿ ಮಕ್ಕಳನ್ನು ಸಿದ್ಧಪಡಿಸಿ (ಪ್ರಾತಿನಿಧಿಕ ಚಿತ್ರ)

    • ಪೀಳಿಗೆಯಿಂದ ಪೀಳಿಗೆಗೆ ಮಕ್ಕಳ ಕಲಿಕೆಯಲ್ಲಿ ಸಾಕಷ್ಟು ಬದಲಾಗುತ್ತದೆ. ಅದಕ್ಕೆ ತಕ್ಕಂತೆ ನಾವೂ ಬದಲಾಗಬೇಕಿದೆ. ಅವರು ಪ್ರತಿಯೊಂದು ಅಗತ್ಯ ವಿಚಾರದಲ್ಲಿಯೂ ಅಪ್​ಡೇಟ್​ ಆಗಿರುವಂತೆ ನೋಡಿಕೊಳ್ಳಿ. ಅದಕ್ಕೆ ಬೇಕಾದ ಸಂಪನ್ಮೂಲ ಒದಗಿಸಿ.
ನಾಳೆಯ ಯಶಸ್ಸಿಗಾಗಿ ಮಕ್ಕಳನ್ನು ಸಿದ್ಧಪಡಿಸಿ (ಪ್ರಾತಿನಿಧಿಕ ಚಿತ್ರ)
ನಾಳೆಯ ಯಶಸ್ಸಿಗಾಗಿ ಮಕ್ಕಳನ್ನು ಸಿದ್ಧಪಡಿಸಿ (ಪ್ರಾತಿನಿಧಿಕ ಚಿತ್ರ)

ಪ್ರತಿ ದಿನವೂ ಹಿಂದಿನ ದಿನಕ್ಕಿಂತ ವಿಭಿನ್ನವಾಗಿರುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ನಾಳೆಯು ಇಂದಿಗಿಂತ ವಿಭಿನ್ನವಾಗಿರುತ್ತದೆ. ಹೀಗಿರುವಾಗ ಪೋಷಕರು ತಮ್ಮ ಮಕ್ಕಳನ್ನು ಭವಿಷ್ಯಕ್ಕಾಗಿ ಹೇಗೆ ಸಿದ್ಧಪಡಿಸುತ್ತಾರೆ ಎಂಬುದು ಮುಖ್ಯ. ಕೇವಲ ಶಿಕ್ಷಣ ನೀಡುವುದರಿಂದ ನಿಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ಯಶಸ್ಸು ಸಿಗುತ್ತದೆಯೇ? ಅವರನ್ನು ದೊಡ್ಡವರನ್ನಾಗಿ ಮಾಡಿ ಒಳ್ಳೆಯ ಕಾಲೇಜಿಗೆ ಸೇರಿಸುವುದು ಮಾತ್ರ ನಿಮ್ಮ ಗುರಿಯೇ? ಹಣದ ಮಹತ್ವ ತಿಳಿದರೆ ಸಾಕೇ? ಹಾಗಿದ್ದರೆ ಏನು ಮಾಡಬೇಕು ಎಂದು ಯೋಚಿಸುವ ಪೋಷಕರಿಗೆ ಇಲ್ಲಿವೆ ಸಲಹೆಗಳು..

ಕುತೂಹಲ ಮೂಡಿಸಿ

ನಿಮ್ಮ ಮಗು ಬುದ್ಧಿವಂತ ಅಥವಾ ಪ್ರತಿಭಾನ್ವಿತನಲ್ಲದಿರಬಹುದು. ಆದರೆ ನೀವು ನಿಮ್ಮ ಮಕ್ಕಳಿಗೆ ಪ್ರತಿಯೊಂದು ವಿಚಾರದಲ್ಲೂ ಕುತೂಹಲ ಮೂಡಿಸಿ. ಅವರು ಪ್ರಶ್ನೆಗಳನ್ನು ಕೇಳಿದಾಗ ಉತ್ತರಿಸಲು ಹಿಂಜರಿಯಬೇಡಿ, ನಿಮಗೆ ಗೊತ್ತಿದ್ದಿದ್ದನ್ನು ಹೇಳಿ, ಸಾಧ್ಯವಾದರೆ ಗೊತ್ತು ಮಾಡಿಕೊಂಡಾದರೂ ಹೇಳಿ. ಅವರಲ್ಲಿ ಮೂಡುವ ಕುತೂಹಲ ಮಕ್ಕಳು ಭವಿಷ್ಯದಲ್ಲಿ ಸಾಕಷ್ಟು ಕಲಿತುಕೊಳ್ಳುವಂತೆ, ತಿಳಿದುಕೊಳ್ಳುವಂತೆ ಮಾಡುತ್ತವೆ.

ಅಪ್​ಡೇಟ್​ ಆಗಿರಿಸಿ

ಪೀಳಿಗೆಯಿಂದ ಪೀಳಿಗೆಗೆ ಮಕ್ಕಳ ಕಲಿಕೆಯಲ್ಲಿ ಸಾಕಷ್ಟು ಬದಲಾಗುತ್ತದೆ. ಅದಕ್ಕೆ ತಕ್ಕಂತೆ ನಾವೂ ಬದಲಾಗಬೇಕಿದೆ. ಅವರು ಪ್ರತಿಯೊಂದು ಅಗತ್ಯ ವಿಚಾರದಲ್ಲಿಯೂ ಅಪ್​ಡೇಟ್​ ಆಗಿರುವಂತೆ ನೋಡಿಕೊಳ್ಳಿ. ಅದಕ್ಕೆ ಬೇಕಾದ ಸಂಪನ್ಮೂಲ ಒದಗಿಸಿ.

ಪ್ರಯತ್ನದ ಮಹತ್ವ ತಿಳಿಸಿ

ಜೀವನದಲ್ಲಿ ಯಶಸ್ಸು ಗಳಿಸಲು ಶ್ರಮ ಮಾತ್ರ ಮುಖ್ಯವಲ್ಲ, ಮೊದಲು ಪ್ರಯತ್ನ ಮುಖ್ಯ. ಯಾವುದೇ ಕೆಲಸವನ್ನಾಗಲಿ ತನ್ನಿಂದ ಮಾಡಲು ಸಾಧ್ಯವಿಲ್ಲ ಎಂಬ ಮಾತು ನಿಮ್ಮ ಮಕ್ಕಳ ಬಾಯಿಂದ ಬರಬಾರದು. ನನ್ನ ಕೈಲಾದಷ್ಟು ನಾನು ಪ್ರಯತ್ನಿಸುತ್ತೇನೆ ಎಂದು ಹೇಳುವಂತಿರಬೇಕು. ಅದರಂತೆ ಪ್ರಯತ್ನಿಸಬೇಕು.

ವಿಮರ್ಶಾತ್ಮಕ ಚಿಂತಕರನ್ನಾಗಿ ಮಾಡಿ

ಪ್ರತಿಯೊಂದು ವಿಚಾರದಲ್ಲಿಯೂ ನಿಮ್ಮ ಮಗುವೆ ಪ್ರಶ್ನೆ ಹುಟ್ಟಿಸುವಂತೆ ಮಾಡಿ. ಪ್ರತಿಯೊಂದು ಸನ್ನಿವೇಶಗಳು ಮತ್ತು ಘಟನೆಗಳನ್ನು ವಿಮರ್ಶೆ ಮಾಡಲು, ಮೌಲ್ಯಮಾಪನ ಮಾಡಲು ಮತ್ತು ವಿಶ್ಲೇಷಿಸಲು ಅವರನ್ನು ಪ್ರೋತ್ಸಾಹಿಸಿ. ಇದು ಅವರನ್ನು ವಿಮರ್ಶಾತ್ಮಕ ಚಿಂತಕರಾಗಲು ಪ್ರೋತ್ಸಾಹಿಸುತ್ತದೆ.

ಉತ್ತಮ ಕೇಳುಗರನ್ನಾಗಿ ಮಾಡಿ

ಒಬ್ಬ ವ್ಯಕ್ತಿ ಉತ್ತಮ ಮಾತುಗಾರನಾಗಿರುತ್ತಾನೆ, ಉತ್ತಮ ಬರಹಗಾರನಾಗಿರುತ್ತಾನೆ ಅಂದರೆ ಆತ ಉತ್ತಮ ಕೇಳುಗನಾಗಿರುತ್ತಾನೆ. ಮತ್ತೊಬ್ಬರ ಮಾತು, ಹಿತನುಡಿ, ಮಾರ್ಗದರ್ಶನ, ಕಷ್ಟ-ಸುಖ, ಕಥೆಗಳು, ಪಾಡ್‌ಕಾಸ್ಟ್‌ಗಳು, ಆಡಿಯೊ ಪುಸ್ತಕಗಳು ಹೀಗೆ ಎಲ್ಲವನ್ನೂ ಸಮಾಧಾನದಿಂದ ಕೇಳಿಸಿಕೊಳ್ಳಲು ಕಲಿಸಿ. ಇದರಿಂದ ಅವರ ಮನಸ್ಸು ಹಿಗ್ಗುತ್ತದೆ, ಹೊಸ ಆಲೋಚನೆಗಳಿಗೆ ಅವರು ಸಿದ್ಧರಾಗಿರುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ