Parenting: ಹದಿಹರೆಯದ ಮಕ್ಕಳ ಭಾವನಾತ್ಮಕ ಸಮಸ್ಯೆ ಅರಿಯಲು ಪೋಷಕರು ಗಮನಿಸಬೇಕಾದ ಅಂಶಗಳಿವು
Dec 17, 2023 08:00 AM IST
ಸಾಂಕೇತಿಕ ಚಿತ್ರ
- ಹದಿಹರೆಯದ ಮಕ್ಕಳು ಭಾವನಾತ್ಮಕ, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರಾ, ತಿಳಿಬೇಕು ಅಂದ್ರೆ ಪೋಷಕರು ಈ ಸಂಕೇತಗಳನ್ನು ಗುರುತಿಸಲೇಬೇಕು
ಮಕ್ಕಳು ಹದಿ ವಯಸ್ಸಿಗೆ ಬಂದ ಮೇಲೆ ಸಾಕಷ್ಟು ಸಮಸ್ಯೆಗಳು, ಸವಾಲುಗಳನ್ನು ಎದುರಿಸುವುದು ಸಹಜ. ಅದರಲ್ಲೂ ಇಂದಿನ ಗಡಿಬಿಡಿ ಹಾಗೂ ದಿನೇ ದಿನೇ ಅಭಿವೃದ್ಧಿ ಕಾಣುತ್ತಿರುವ ಜಗತ್ತಿನಲ್ಲಿ ಅವರಿಗೆ ಎಲ್ಲವೂ ಸವಾಲಾಗಿ ಪರಿಣಮಿಸಬಹುದು. ಹದಿಹರೆಯದ ವಯಸ್ಸು ನಿಜಕ್ಕೂ ನಿರ್ಣಾಯಕ ಬೆಳವಣಿಗೆಯ ಹಂತವಾಗಿದೆ. ಈ ಹಂತದಲ್ಲಿ ದೈಹಿಕವಾಗಿ ಭಾವನಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ಬದಲಾವಣಿಗಳ ಕೋಲಾಹಲ ಏರ್ಪಡುವುದು ಸಾಮಾನ್ಯ. ಈ ವಯಸ್ಸಿನಲ್ಲಿ ಕೆಲವು ಮಕ್ಕಳು ನಮ್ಯತೆಯನ್ನು ಸಾಧಿಸಿದರೆ, ಇನ್ನೂ ಕೆಲವರು ಹೆಚ್ಚು ಭಾವನಾತ್ಮಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಮಕ್ಕಳಿಗೆ ಅರಿವಾಗುವುದಿಲ್ಲ. ಆದರೆ ಮಕ್ಕಳ ಮನದಾಳದ ತಳಮಳವನ್ನು ಗುರುತಿಸಬೇಕು. ಈ ಕೆಲವು ಸಂಕೇತಗಳು ಮಕ್ಕಳ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಸೂಚಿಸುವ ಲಕ್ಷಣಗಳಾಗಿವೆ. ಪೋಷಕರು ಅದನ್ನು ಗುರುತಿಸುವುದು ಮುಖ್ಯವಾಗಿದೆ.
ʼಹದಿಹರೆಯದ ಮಕ್ಕಳ ವರ್ತನೆ ಕೆಲವೊಮ್ಮೆ ಪೋಷಕರಿಗೆ ಅರ್ಥವಾಗುವುದಿಲ್ಲ. ಪೋಷಕರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಇರುವಂತಹ ಕೆಲವು ಬೆಳವಣಿಗೆಗಳು ಇದರಲ್ಲಿ ಸೇರಿದೆ. ಹದಿವಯಸ್ಸಿನ ಮಕ್ಕಳು ಕೆಲವೊಮ್ಮೆ ಸಿಲ್ಲಿ ತಪ್ಪುಗಳನ್ನು ಮಾಡಬಹುದು. ಅದನ್ನು ಪೋಷಕರು ಬೇಜವಾಬ್ದಾರಿ ಎನ್ನುವುದು ಸರಿಯಲ್ಲ. ಇದರಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಇದರಿಂದ ಮಕ್ಕಳು ಪ್ರಯತ್ನ ಮಾಡುವುದನ್ನೇ ನಿಲ್ಲಿಸಬಹುದು. ಈ ಕಾರಣಕ್ಕೆ ಮಕ್ಕಳ ಮಾನಸಿಕ ಸ್ಥಿತಿಯನ್ನು ಅರಿಯುವುದು ಮುಖ್ಯವಾಗುತ್ತದೆʼ ಎನ್ನುತ್ತಾರೆ ಗುರುಗ್ರಾಮದ ಸ್ಟೆಪ್ಸ್ ಸೆಂಟರ್ ಫಾರ್ ಮೆಂಟರ್ ಹೆಲ್ತ್‌ನ ಮಕ್ಕಳ ಮತ್ತು ಹದಿಹರೆಯದ ಮನೋವೈದ್ಯ ಮತ್ತು ವೈದ್ಯಕೀಯ ನಿರ್ದೇಶಕ ಡಾ. ಪ್ರಮಿತ್ ರಸ್ತೋಗಿ.
ಡಾ. ಪ್ರಮೀತ್ ಅವರು ಹದಿಹರೆಯದ ಮಕ್ಕಳು ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರಾ ಇಲ್ಲವೋ ಎಂಬುದನ್ನು ತಿಳಿಯಲು ಪೋಷಕರು ಗುರುತಿಸಬೇಕಾದ ಕೆಲವು ಅಂಶಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ.
ಹದಿಹರೆಯದ ಮಕ್ಕಳ ಮನಸ್ಸು ಅರಿಯಿರಿ
ಮೆದುಳಿನಲ್ಲಿರುವ ಪ್ರಿಫ್ರಂಟಲ್ ಕಾರ್ಟೆಕ್ಸ್ ಆಯ್ಕೆ ಹಾಗೂ ನಿರ್ಧಾರ ತೆಗೆದುಕೊಳ್ಳುವುದನ್ನು ನಿಯಂತ್ರಿಸುತ್ತದೆ. ಇದು ಯೋಜನೆ ರೂಪಿಸುವುದು, ಸಂಘಟಿಸುವುದು ಹಾಗೂ ಭಾವಾನಾತ್ಮಕ ನಿಯಂತ್ರಣಕ್ಕೆ ಕಾರಣವಾಗಿದೆ. 13 ಹಾಗೂ 18 ವರ್ಷ ವಯಸ್ಸಿನ ನಡುವೆ ಮೆದುಳಿನ ಈ ಭಾಗವು ಅಭಿವೃದ್ಧಿ ಹೊಂದುತ್ತಿರುತ್ತದೆ. ಪರಿಣಾಮವಾಗಿ ಹದಿಹರೆಯದ ಮಕ್ಕಳಲ್ಲಿ ಗೊಂದಲ ಸಾಮಾನ್ಯ.
* ನೀರಸ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಹಿಂಜರಿಯುವುದು
* ಸ್ಪರ್ಧಾತ್ಮಕ ಆದ್ಯತೆಗಳನ್ನು ಆಯ್ಕೆ ಮಾಡುವಲ್ಲಿ ಗೊಂದಲ. ಉದಾ. ಪರೀಕ್ಷೆಗೆ ಒಂದು ದಿನ ಮೊದಲು ಪಾರ್ಟಿಗೆ ಹಾಜರಾಗುವುದು.
* ಸುಳ್ಳು ಹೇಳುವುದು, ಅವರ ಕೆಲಸದ ಬಗ್ಗೆಯೂ ಜವಾಬ್ದಾರಿ ತೆಗೆದುಕೊಳ್ಳದೇ ಇರುವುದು.
* ಮಕ್ಕಳ ಆನ್‌ಲೈನ್ ಹಾಗೂ ಸಾಮಾಜಿಕ ಬದುಕಿನ ಬಗ್ಗೆ ಗಮನ ಹರಿಸಿ. ಆದರೆ ಸಂಕಷ್ಟದ ಸಮಯದಲ್ಲಿ ಅವರ ಜೊತೆಗಿರಿ.
* ಕೆಲವೊಮ್ಮೆ ಸಾಮಾಜದ ಖುಷಿಗಾಗಿ ತನಗೆ ಇಷ್ಟವಿಲ್ಲದ ರೀತಿ ಬದುಕುವುದು. ಈ ಎಲ್ಲವನ್ನೂ ಪೋಷಕರು ಗಮನಿಸಬಹುದು.
ಈ ಸಮಯದಲ್ಲಿ ಪೋಷಕರು ಮಕ್ಕಳಿಗೆ ಅಗತ್ಯ ನೆರವು ನೀಡಬೇಕು. ಪೋಷಕರು ಹಾಗೂ ಶಿಕ್ಷಕರು ಇಬ್ಬರೂ ಮಕ್ಕಳ ವಿಚಾರದಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು.
ಆರಂಭಿಕ ಲಕ್ಷಣಗಳಿವು
ಕೆಲವೊಮ್ಮೆ ಮನೆಯಲ್ಲಿ ಎದುರಾಗುವ ತೊಂದರೆಗಳು ಮಕ್ಕಳಲ್ಲಿ ಇಂತಹ ಸಮಸ್ಯೆಗಳು ಎದುರಾಗಲು ಕಾರಣವಾಗಬಹುದು. ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ನಕಾರಾತ್ಮಕ ಪರಿಣಾಮಗಳಿದ್ದರೆ ಕಥೆಯು ಬದಲಾಗಲು ಆರಂಭವಾಗುತ್ತದೆ. ಈ ಕೆಳಗಿನ ಕಾರಣಗಳನ್ನು ಗಮನಿಸಬಹುದು.
ಮನೆಯಲ್ಲಿ ಮಗುವನ್ನು ಅತಿಯಾಗಿ ರಕ್ಷಿಸುವುದು ಹಾಗೂ ನಿರೀಕ್ಷಿತ ಹೊಣೆಗಾರಿಕೆಯ ಕೊರತೆ.
* ಸ್ವಾಭಿಮಾನದ ಕೊರತೆಯು ಸಾಮಾಜಿಕ ಆಯ್ಕೆಗಳಲ್ಲಿನ ಕಳಪೆಗೆ ಕಾರಣವಾಗಬಹುದು. ಇದು ಮನೆಯಲ್ಲಿನ ನಿಯಮ ಹಾಗೂ ಕಾನೂನಿನೊಂದಿಗೆ ಸಂಘರ್ಷದಲ್ಲಿರಬಹುದು.
ಪೋಷಕರು ಈ ಕೆಳಗಿನ ಲಕ್ಷಣಗಳನ್ನು ಗುರುತಿಸಬಹುದು
* ಓದಿನ ಕುರಿತು ತಿರಸ್ಕಾರದ ಮನೋಭಾವ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವುದು.
* ಮಗುವಿನ ಅಕಾಡೆಮಿಕ್ ಹಾಗೂ ಶಿಸ್ತಿನ ಬಗ್ಗೆ ಶಾಲೆಯಿಂದ ದೂರು ಬರುವುದು.
* ಕಾಲೇಜು ಸೇರಲು ಹೆಚ್ಚು ತವಕ ವ್ಯಕ್ತಪಡಿಸುವುದು.
* ಪದೇ ಪದೇ ಸುಳ್ಳು ಹೇಳುವುದು. ಮನೆಯಲ್ಲಿ ನಂಬಿಕೆ ಕಳೆದುಕೊಳ್ಳುವುದು.
* ಸೀಮಿತ ಸ್ನೇಹಿತರನ್ನು ಹೊಂದಿರುವುದು.
ಈ ರೀತಿಯ ಲಕ್ಷಣಗಳು ಕಂಡರೆ ಪೋಷಕರು ಮಕ್ಕಳ ಮನದಲ್ಲಿ ಉಂಟಾಗುತ್ತಿರುವ ಕುತೂಹಲವನ್ನು ಹಾಗೂ ಹೋರಾಟವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಸುಮ್ಮನೆ ಮಗುವಿಗೆ ನೀನು ಮೋಸಗಾರ, ನಿಮ್ಮ ಮೇಲೆ ನಂಬಿಕೆ ಇರಿಸಲು ಸಾಧ್ಯವೇ ಇಲ್ಲ, ನಮ್ಮ ಕುಟುಂಬದಲ್ಲಿ ನಿನ್ನಂತೆ ಯಾರೂ ಇಲ್ಲʼ ಎಂದೆಲ್ಲಾ ಹಿಯಾಳಿಸಬಾರದು. ಇದರಿಂದ ಮಕ್ಕಳ ನಡತೆ ಅಥವಾ ವರ್ತನೆ ಇನ್ನಷ್ಟು ಹದಗೆಡಬಹುದು.
ಈ ಸಂಕೇತಗಳನ್ನು ಗುರುತಿಸಿ
* ಶೈಕ್ಷಣಿಕ ವಿಚಾರದಲ್ಲಿ ಸಾಕಷ್ಟು ಬದಲಾಗುವುದು.
* ಸ್ಕ್ರೀನ್ ಟೈಮ್‌ಗಾಗಿ ಹೆಚ್ಚಿನ ಶ್ರಮ ವಹಿಸುವುದು, ಮಗು ಪೋಷಕರ ನಡುವೆ ಸಂಬಂಧವಿಲ್ಲದೇ ಇರುವುದು. ನಿದ್ದೆಯ ಕೊರತೆ, ಮನೆಯ ನಿಯಮಗಳನ್ನು ಅನುಸರಿಸದೇ ಇರುವುದು.
* ಶಾಲೆಯಲ್ಲೂ ಸೆಸ್ಪೆಂಡ್ ಹಂತಕ್ಕೆ ಹೋಗುವುದು.
* ಕಾಲೇಜಿನಲ್ಲಿ ಸರಿಯಾಗಿ ನಡೆದುಕೊಳ್ಳದೇ ಇರುವುದು.
* ಯಾವುದೇ ಕೆಲಸ ಜವಾಬ್ದಾರಿಯನ್ನು ತೆಗೆದುಕೊಳ್ಳದೇ ಇರುವುದು. ಕೆಲವೊಮ್ಮೆ ಅಪಾಯದ ನಡವಳಿಕೆ ತೋರುವುದು.
ಕದಿಯುವುದು, ಹೊಡೆದಾಡಲು ಬರುವುದು ಹಾಗೂ ನಿಂದನೀಯ ಭಾಷೆಗಳನ್ನು ಬಳಸುವುದು ಈ ಎಲ್ಲಾ ಲಕ್ಷಣಗಳನ್ನು ಪೋಷಕರು ಗಮನಿಸಬೇಕು.
ವಿಭಾಗ