Parenting: ಮಕ್ಕಳು ಓದಿನ ಸಮಸ್ಯೆ ಎದುರಿಸಲು ಕಾರಣವಾಗುವ 7 ಪ್ರಮುಖ ಅಂಶಗಳಿವು
Nov 14, 2023 09:00 AM IST
ಮಕ್ಕಳು ಓದನ್ನು ನಿರಾಕರಿಸಲು 7 ಪ್ರಮುಖ ಕಾರಣಗಳಿವು
- ಮಕ್ಕಳು ಓದುವುದಿಲ್ಲ ಎಂಬುದು ಹಲವು ಪೋಷಕರ ಅಳಲು. ಆದರೆ ತಮ್ಮ ಮಗು ಯಾವ ಕಾರಣಕ್ಕೆ ಓದುತ್ತಿಲ್ಲ ಎಂಬುದನ್ನು ಅರಿಯಲು ಪೋಷಕರು ಮನಸ್ಸು ಮಾಡುವುದಿಲ್ಲ. ಅದನ್ನು ಅರಿತು ಅದಕ್ಕೆ ತಕ್ಕಂತೆ ಪರಿಹಾರ ನೀಡದರೆ ಮಕ್ಕಳಲ್ಲಿ ಓದಿನ ಸಮಸ್ಯೆ ಕಾಡಲು ಸಾಧ್ಯವೇ ಇಲ್ಲ. ಮಕ್ಕಳು ಓದನ್ನು ನಿರಾಕರಿಸುವ 7 ಪ್ರಮುಖ ಕಾರಣಗಳ ವಿವರ ಹೀಗಿದೆ.
ʼಎಷ್ಟೇ ಹೇಳಿದರೂ ನಮ್ಮ ಮಗು ಓದುವುದಿಲ್ಲ. ಬೇರೆಲ್ಲ ವಿಷಯದಲ್ಲೂ ಚುರುಕಾಗಿರುವ ಅವನು/ಅವನು ಓದಿನ ವಿಷಯ ಬಂದಾಗ ಅದೊಂದು ದೊಡ್ಡ ಸಮಸ್ಯೆ ಎಂಬಂತೆ ನೋಡುತ್ತಾರೆ, ಮಕ್ಕಳು ಓದಿನ ವಿಷಯದಲ್ಲಿ ಹೀಗ್ಯಾಕೆ ಮಾಡುತ್ತಾರೆ ಎಂಬುದೇ ಅರಿವಾಗುವುದಿಲ್ಲʼ ಇದು ಹಲವು ಪೋಷಕರ ಅಳಲು.
ಹೌದು, ಹಲವು ಮಕ್ಕಳಿಗೆ ಓದುವುದು ಬಲು ಕಷ್ಟದ ಕೆಲಸ. ಒತ್ತಡದಲ್ಲಿ ಅವರಿಗೆ ಓದಲು ಆಗುವುದೇ ಇಲ್ಲ. ಓದುವ ವಿಚಾರದಲ್ಲಿ ಮಕ್ಕಳು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಕ್ಕಳು ಓದದೇ ಇರಲು ವಿವಿಧ ಅಂಶಗಳು ಕಾರಣವಾಗಬಹುದು. ವೈವಿಧ್ಯಮಯ ಪುಸ್ತಕಗಳ ಆಯ್ಕೆ, ಓದಿಗೆ ಬೆಂಬಲ ಸೂಚಿಸುವ ಪರಿಸರ, ಒತ್ತಡ ಕಡಿಮೆ ಮಾಡುವ ಅಂಶಗಳ ಮೇಲೆ ಗಮನ ಹರಿಸುವುದರ ಮೂಲಕ ಮಗುವಿನಲ್ಲಿ ಓದಿನ ಹಿಂಜರಿಕೆ ಕಡಿಮೆ ಮಾಡಿ ಓದಿನ ಮೇಲೆ ಆಸಕ್ತಿ ಹುಟ್ಟುವಂತೆ ಮಾಡಬಹುದು.
ಮಕ್ಕಳು ಓದಿನ ವಿಷಯದಲ್ಲಿ ಹಿಂಜರಿಕೆ ತೋರುವುದಕ್ಕೆ ಕಾರಣಗಳು ಹಲವರಿಸಬಹುದು. ಆದರೆ ಆ ಕಾರಣಗಳನ್ನು ಅರ್ಥ ಮಾಡಿಕೊಂಡು ಅವರಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಪೋಷಕರು ಸಹಾಯ ಮಾಡಬೇಕು.
ನಿಮ್ಮ ಮಗುವಿಗೆ ಓದಲು ಕಷ್ಟವಾಗಬಹುದು
ಕೆಲವು ಮಕ್ಕಳ ಓದುವುದನ್ನು ವಿರೋಧಿಸಬಹುದು. ಅದಕ್ಕೆ ಪ್ರಮುಖ ಕಾರಣ ಓದು ಅವರಿಗೆ ಸವಾಲಾಗಿರುತ್ತದೆ. ಡಿಸ್ಲೆಕ್ಸಿಯಾದಂತಹ ಮಾನಸಿಕ ಸಮಸ್ಯೆಯೂ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳಲು ಕಾರಣವಾಗಬಹುದು. ಪದಗಳನ್ನು ಡಿಕೋಡ್ ಮಾಡುವುದು, ಕಾಂಪ್ರೆಹೆನ್ಷನ್ ಅಥವಾ ಸ್ಪಷ್ಟತೆಯ ಕೊರತೆಯು ಮಕ್ಕಳು ಓದಲು ಹಿಂದೇಟು ಹಾಕುವಂತೆ ಮಾಡಬಹುದು. ಆಗ ಅವರು ಓದುವುದನ್ನು ತಪ್ಪಿಸುತ್ತಾರೆ, ಹತಾಶೆ, ಅಸಮರ್ಪಕ ಭಾವನೆಗಳು ಓದನ್ನು ತಪ್ಪಿಸಲು ಕಾರಣವಾಗುತ್ತದೆ. ಮೌಲ್ಯಮಾಪನದ ಮೂಲಕ ಯಾವುದೇ ಸಂಭಾವ್ಯ ಕಲಿಕೆಯ ತೊಂದರೆಗಳನ್ನು ಗುರುತಿಸಿ ಮತ್ತು ಸೂಕ್ತವಾದ ಶೈಕ್ಷಣಿಕ ಬೆಂಬಲವನ್ನು ಪಡೆದುಕೊಳ್ಳಿ. ಪೋಷಕರು ಮಗುವಿನ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಸೂಕ್ತ ವಿಶೇಷ ಬೋಧನಾ ವಿಧಾನಗಳನ್ನು ರೂಢಿಸಿಕೊಳ್ಳಲು ನೆರವಾಗಬೇಕು.
ನೀವು ನೀಡುವ ಪುಸ್ತಕಗಳ ಬಗ್ಗೆ ಆಸಕ್ತಿ ಇಲ್ಲದೇ ಇರಬಹುದು
ಮಗುವಿನ ಕಲ್ಪನೆಯನ್ನು ಸೆರೆ ಹಿಡಿಯುವ ಅಥವಾ ಅವರ ಆಸಕ್ತಿಗೆ ಹೊಂದಿಕೆಯಾಗುವ ಪುಸ್ತಕಗಳನ್ನು ನೀಡದೇ ಇದ್ದರೆ ಅವರು ಓದುವುದನ್ನು ವಿರೋಧಿಸಬಹುದು. ಬೇಸರವೂ ಓದಲು ಹಿಂದೇಟು ಹಾಕುವಂತೆ ಮಾಡಬಹುದು. ಇದನ್ನು ನಿವಾರಿಸಲು ವೈವಿಧ್ಯಮಯ ಪ್ರಕಾರಗಳು, ವಿಷಯಗಳು ಅಥವಾ ಸ್ವರೂಪಗಳನ್ನು ಒಳಗೊಂಡಿರುವ ವಿವಿಧ ಪುಸ್ತಕಗಳನ್ನು ಪರಿಚಯಿಸಿ. ಗ್ರಂಥಾಲಯಗಳಿಗೆ ಭೇಟಿ ನೀಡಿ, ಅವರ ಆದ್ಯತೆಗಳನ್ನು ಚರ್ಚಿಸಿ ಮತ್ತು ಪುಸ್ತಕ ಆಯ್ಕೆಯಲ್ಲಿ ಅವರನ್ನು ತೊಡಗಿಸಿಕೊಳ್ಳಿ.
ಅತಿಯಾದ ಒತ್ತಡ
ಕೆಲವೊಮ್ಮೆ ಶಿಕ್ಷಕರು, ಪೋಷಕರು ಅಥವಾ ಸಹಪಾಠಿಗಳಿಂದ ಓದಿನ ವಿಷಯದಲ್ಲಿ ಅತಿಯಾ ಒತ್ತಡ ಅನುಭವಿಸುವುದು ಕೂಡ ಓದಿನ ವಿಚಾರದಲ್ಲಿ ಮಕ್ಕಳು ಹಿಂದೇಟು ಹಾಕಲು ಕಾರಣವಾಗಬಹುದು. ಸೋಲು ಅಥವಾ ಓದಿನ ವಿಷಯದಲ್ಲಿ ಮಗುವನ್ನು ತೀರ್ಮಾನಿಸುವುದು ಮಕ್ಕಳು ಓದನ್ನು ಸಂಪೂರ್ಣವಾಗಿ ತಪ್ಪಿಸಲು ಕಾರಣವಾಗಬಹುದು. ಸಕಾರಾತ್ಮಕ ಓದಿನ ವಾತಾವರಣವನ್ನು ಸೃಷ್ಟಿಸುವುದು, ಓದನ್ನು ಮೋಜಿ ವಿಷಯವಾಗಿ ಬದಲಿಸುವುದು, ಅನಗತ್ಯ ಒತ್ತಡವನ್ನು ತಪ್ಪಿಸುವುದು, ಬೆಂಬಲ ನೀಡುವುದು ಈ ಮೂಲಕ ಮಕ್ಕಳಲ್ಲಿ ಓದಿನ ಮೇಲೆ ಆಸಕ್ತಿ ಮೂಡುವಂತೆ ಮಾಡಬಹುದು.
ಅತಿಯಾದ ಸ್ಕ್ರೀನ್ ಟೈಮ್
ಈಗಿನ ಮಕ್ಕಳ ಮೊಬೈಲ್, ಕಂಪ್ಯೂಟರ್‌ನಲ್ಲೇ ಕಳೆದು ಹೋಗುತ್ತಾರೆ. ಸ್ಕ್ರೀನ್ ಟೈಮ್ ಎನ್ನುವುದಕ್ಕೆ ಮಿತಿಯಿಲ್ಲ. ಮಕ್ಕಳು ಪುಸ್ತಕಗಳಿಗಿಂತ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಅದರಲ್ಲಿ ಸಿಗುವ ಮನರಂಜನೆಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಅತಿಯದ ಸ್ಕ್ರೀನ್ ಟೈಮ್ ಮಕ್ಕಳಲ್ಲಿ ಗಮನ ಶಕ್ತಿ ಕಡಿಮೆಯಾಗುವಂತೆ ಮಾಡುವುದು ಮಾತ್ರವಲ್ಲ, ಓದಿನ ಮೇಲೆ ಆಸಕ್ತಿ ಇಲ್ಲದಂತೆ ಮಾಡುವುದು ಸಹಜ. ಅದಕ್ಕೆ ಪರ್ಯಾಯವಾಗಿ ಟೆಕ್ ಅಥವಾ ಗ್ಯಾಜೆಟ್ ಮುಕ್ತ ಓದಿನ ಸ್ಥಳವನ್ನು ರಚಿಸಿ, ನೀವೂ ಕೂಡ ಓದಿನಲ್ಲಿ ತೊಡಗಿಕೊಳ್ಳುವ ಮೂಲಕ ಮಕ್ಕಳನ್ನು ಓದಲು ಪ್ರೋತ್ಸಾಹಿಸಿ.
ಮಗು ದೈಹಿಕ ಅಥವಾ ಸಂವೇದನಾ ಸಮಸ್ಯೆಗಳನ್ನು ಹೊಂದಿರಬಹುದು
ರೋಗನಿರ್ಣಯ ಮಾಡಲು ಸಾಧ್ಯವಾಗದಂತಹ ದೃಷ್ಟಿ ಸಮಸ್ಯೆಗಳು, ಸಂವೇದನಾ ಸೂಕ್ಷ್ಮತೆಗಳು, ಓದುವಾಗ ತಲೆನೋವು, ಕಣ್ಣಿಗೆ ಆಯಾಸವಾಗುವುದು ಇಂತಹ ಸಮಸ್ಯೆಯು ಇರಬಹುದು. ಇದರಿಂದ ಮಗು ಓದಿನ ಮೇಲೆ ಆಸಕ್ತಿ ಕಳೆದುಕೊಳ್ಳಬಹುದು. ಹಾಗಾಗಿ ನಿಯಮಿತ ಕಣ್ಣಿನ ತಪಾಸಣೆ ಮಾಡಿಸಿ. ನಿಮ್ಮ ಮಗು ಓದುವ ಜಾಗದಲ್ಲಿ ಸರಿಯಾದ ಬೆಳಕು ಮತ್ತು ಆರಾಮದಾಯಕ ಓದುವ ಸ್ಥಳಗಳನ್ನು ನಿರ್ಮಿಸಿ. ಸಂವೇದನಾ ಸಮಸ್ಯೆಗಳನ್ನು ಮಕ್ಕಳಲ್ಲಿ ಕಾಣಿಸಿದರೆ ತಜ್ಞರ ಸಲಹೆ ಪಡೆಯಲು ಮರೆಯದಿರಿ.
ಸರಿಯಾದ ರೋಲ್ ಮಾಡೆಲ್ ಸಿಕ್ಕಿಲ್ಲದೇ ಇರಬಹುದು
ಮಕ್ಕಳನ್ನು ಇತರರನ್ನು ಗಮನಿಸುವ ಮೂಲಕ, ಅವರ ನಡವಳಿಕೆಯ ಮೇಲೆ ಹೆಚ್ಚು ಪ್ರಭಾವಿತರಾಗುತ್ತಾರೆ. ತಮಗಿಂತ ದೊಡ್ಡವರು ಅಥವಾ ಗೆಳೆಯರು ಓದುವುದರಲ್ಲಿ ತೊಡಗಿರುವುದನ್ನು ನೋಡಿದರೆ ಅವರಂತೆ ತಾನು ಓದಲು ಶುರು ಮಾಡುತ್ತಾರೆ. ಹಾಗಾಗಿ ಕುಟುಂಬದಲ್ಲಿ ಮಕ್ಕಳು ಓದುವ ಸಮಯವನ್ನು ಪ್ರೋತ್ಸಾಹಿಸಿ. ನಿಮ್ಮ ಓದಿನ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ. ಸಂಭಾಷಣೆಗಳ ಮೂಲಕ ಓದಿನ ಸಂತೋಷವನ್ನು ಪ್ರದರ್ಶಿಸಿ. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಓದಿನ ಆಸಕ್ತಿ ಬೆಳೆಯಬಹುದು.
ನಿಮ್ಮ ಮಗುವಿಗೆ ಓದಿನ ಬಗ್ಗೆ ವಿಶ್ವಾಸವಿಲ್ಲದಿರಬಹುದು
ಓದಿನಲ್ಲಿ ಜಾಣರಾಗಿರುವ ಮಕ್ಕಳೊಂದಿಗೆ ತಮ್ಮನ್ನು ಹೋಲಿಸಿಕೊಂಡು ಕೆಲವು ಮಕ್ಕಳು ನಿರುತ್ಸಾಹಗೊಳ್ಳಬಹುದು. ಇದು ಅವರಲ್ಲಿ ಆತ್ಮವಿಶ್ವಾಸದ ಕೊರತೆ ಮತ್ತು ಓದುವ ಚಟುವಟಿಕೆಗಳಿಂ ದೂರ ಇರುವಂತೆ ಮಾಡುತ್ತದೆ. ಅವರ ವೇಗ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚುವರಿ ಬೆಂಬಲ ಮತ್ತು ಪ್ರೋತ್ಸಾಹ ನೀಡಿ. ವೈಯಕ್ತಿಕ ಪ್ರಗತಿ ಮತ್ತು ಸಾಧನೆಗಳನ್ನು ಎತ್ತಿ ತೋರಿಸಿ. ತಮ್ಮ ಮೇಲೆ ತಾವು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಹೇಗೆ ಎಂಬುದನ್ನು ತೋರಿಸಿ.