logo
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಮೊದಲ ಬಾರಿ ಅಪ್ಪ–ಅಮ್ಮ ಆಗ್ತಿದ್ದೀರಾ; ಹಾಗಾದ್ರೆ ಈ 5 ತಪ್ಪುಗಳನ್ನು ಮಾಡಬೇಡಿ

Parenting Tips: ಮೊದಲ ಬಾರಿ ಅಪ್ಪ–ಅಮ್ಮ ಆಗ್ತಿದ್ದೀರಾ; ಹಾಗಾದ್ರೆ ಈ 5 ತಪ್ಪುಗಳನ್ನು ಮಾಡಬೇಡಿ

HT Kannada Desk HT Kannada

Feb 17, 2024 10:00 AM IST

google News

ಮೊದಲ ಬಾರಿ ಅಪ್ಪ–ಅಮ್ಮ ಆಗ್ತಿದ್ದೀರಾ; ಹಾಗಾದ್ರೆ ಈ 5 ತಪ್ಪುಗಳನ್ನು ಮಾಡಬೇಡಿ

  • Parenting: ಹೊಸದಾಗಿ ಅಪ್ಪ–ಅಮ್ಮ ಎಂದು ಕರೆಯಿಸಿಕೊಳ್ಳುವ ಖುಷಿಯಲ್ಲಿರುವ ಬಹುತೇಕ ಪಾಲಕರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ನೀವು ಮೊದಲ ಸಲ ಅಪ್ಪ–ಅಮ್ಮ ಆಗುತ್ತಿದ್ದರೆ ಈ ತಪ್ಪುಗಳನ್ನು ಮಾಡಬೇಡಿ.

ಮೊದಲ ಬಾರಿ ಅಪ್ಪ–ಅಮ್ಮ ಆಗ್ತಿದ್ದೀರಾ; ಹಾಗಾದ್ರೆ ಈ 5 ತಪ್ಪುಗಳನ್ನು ಮಾಡಬೇಡಿ
ಮೊದಲ ಬಾರಿ ಅಪ್ಪ–ಅಮ್ಮ ಆಗ್ತಿದ್ದೀರಾ; ಹಾಗಾದ್ರೆ ಈ 5 ತಪ್ಪುಗಳನ್ನು ಮಾಡಬೇಡಿ (PC: Unsplash)

Parenting Tips: ಪೋಷಕರಾಗುವುದು ಎಂದರೆ ಉತ್ಸಾಹ ತುಂಬಿದ ಭಾವನಾತ್ಮಕ ಪ್ರಯಾಣ ಎನ್ನಬಹುದು. ಅಲ್ಲಿ ಸಂಬಂಧಗಳು ಹೊಸ ಅರ್ಥ ಪಡೆದುಕೊಳ್ಳುತ್ತಾ ಹೋಗುತ್ತದೆ. ಮಗುವಿನ ಬೆಳವಣಿಗೆಯ ಜೊತೆ ಪಾಲಕರು ಮತ್ತು ಮಗುವಿನ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ. ಮಗುವಿನ ಪ್ರತಿ ಬೆಳವಣಿಗೆಯೂ ಅವರಲ್ಲಿ ಸಂತೋಷ ತರುತ್ತದೆ. ಆದರೆ ಪೋಷಕರಾಗುವುದೆಂದರೆ ಅದು ಸುಲಭವಲ್ಲ. ಅಲ್ಲಿ ಬಹಳಷ್ಟು ಜವಾಬ್ದಾರಿ, ಒತ್ತಡಗಳಿರುತ್ತವೆ. ಅದರಲ್ಲೂ ನಿಮಗೆ ಯಾರಿಂದಲೂ ಸರಿಯಾದ ಮಾರ್ಗದರ್ಶನ ಅಥವಾ ಬೆಂಬಲ ಸಿಗುತ್ತಿಲ್ಲವೆಂದಾದಾಗ ಅದು ಇನ್ನಷ್ಟು ಕಷ್ಟಕರವಾಗಿರುತ್ತದೆ. ನೀವು ಮೊದಲ ಬಾರಿ ಪೋಷಕರಾಗುತ್ತಿದ್ದರೆ ಅದನ್ನು ಆನಂದದಿಂದ ಅನುಭವಿಸುವುದು ಬಹಳ ಮುಖ್ಯ. ಆದರೆ ಅಪ್ಪ–ಅಮ್ಮ ಆದ ಖುಷಿಯಲ್ಲಿ ಮಗುವಿನ ಲಾಲನೆ–ಪಾಲನೆಯಲ್ಲಿ ಕೆಲವು ತಪ್ಪುಗಳು ಆಗಿಬಿಡುತ್ತವೆ. ಅದಕ್ಕಾಗಿ ನಿಮಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಪೋಷಕರು ಮಾಡುವ ಸಾಮಾನ್ಯ ತಪ್ಪುಗಳು

ಮೊದಲ ಸಲ ಅಪ್ಪ–ಅಮ್ಮ ಆಗುವ ಖುಷಿಯಲ್ಲಿರುವ ನೀವು ಈ ತಪ್ಪುಗಳನ್ನು ಖಂಡಿತ ಮಾಡಬೇಡಿ. ನಿಮ್ಮಲ್ಲಿ ಏನೇ ಗೊಂದಲಗಳಿದ್ದರೂ ಅದನ್ನು ವಿಭಿನ್ನ ವಿಧಾನದ ಮೂಲಕ ಸರಿ ಪಡಿಸಿಕೊಳ್ಳಬಹುದು.

ಅತಿಯಾದ ಒತ್ತಡ

ಹೊಸ ಪಾಲಕರು ಚಿಕ್ಕ, ಪುಟ್ಟ ವಿಷಯಗಳಿಗೂ ಅತಿಯಾಗಿ ಯೋಚಿಸುತ್ತಾರೆ. ತಮ್ಮ ಮಗು ಸಾಕಷ್ಟು ತಿನ್ನುವುದಿಲ್ಲ. ಬಹಳ ನಿದ್ದೆ ಮಾಡುತ್ತದೆ ಅಥವಾ ಮಗುವಿನ ನಿದ್ದೆ ಬಹಳ ಕಡಿಮೆ, ಮಗುವಿನ ಅಳು ಹೀಗೆ ಸಾಮಾನ್ಯ ಸಮಸ್ಯೆಗಳಿಗೆ ಆತಂಕವನ್ನು ತೋರಿಸುವುದು. ಮಗುವಿನ ಆರೋಗ್ಯದ ಬಗ್ಗೆ ಚಿಂತಿಸುವುದು. ಮಗುವಿಗೆ ಅತಿಯಾದ ರಕ್ಷಣೆ, ಕಾಳಜಿ ತೋರಿಸುವುದು. ಇದು ಪೋಷಕರ ಜೊತೆಗೆ ಅವರ ಸುತ್ತಮುತ್ತಲಿನವರಿಗೂ ಒತ್ತಡವನ್ನುಂಟು ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ನಿಮ್ಮ ನವಜಾತ ಶಿಶುವನ್ನು ಎಲ್ಲರೊಟ್ಟಿಗೆ ಬೆಳೆಯಲು ಅವಕಾಶ ನೀಡುವುದು. ಊಟ, ನಿದ್ದೆ, ಅಳುವಿನಲ್ಲಿ ವ್ಯತ್ಯಾಸ ಕಂಡುಬಂದಾಗ ವೈದ್ಯರನ್ನು ಸಂಪರ್ಕಿಸಿ. ಮಗುವಿನ ದಿನಚರಿ ಒಂದೇ ರೀತಿಯಾಗಿದ್ದರೆ ಅದರ ಬಗ್ಗೆ ಯೋಚಿಸ ಬೇಡಿ.

ನಿಮ್ಮ ಮಗುವನ್ನು ಇನ್ನೊಬ್ಬರ ಮಗುವಿನ ಜೊತೆಗೆ ಹೋಲಿಸುವುದು

ಈ ತಪ್ಪನ್ನು ಖಂಡಿತ ಮಾಡಲೇಬೇಡಿ. ನಮ್ಮ ಮಗುವನ್ನು ನೆರೆಹೊರೆಯವರ ಮಕ್ಕಳ ಜೊತೆಗೆ ಹೋಲಿಸಬೇಡಿ. ನೆರೆಯವರ ಮಗು ವೇಗವಾಗಿ ನಡೆಯಲು ಮತ್ತು ಮಾತನಾಡಲು ಹೇಗೆ ಕಲಿಯಿತು. ನಮ್ಮ ಮಗು ಮಾತ್ರ ಅದೇನನ್ನು ಮಾಡುತ್ತಿಲ್ಲ, ಇಂತಹುದೇ ಮೊದಲಾದ ವಿಷಯಗಳಿಗೆ ನಿಮ್ಮ ಮಗುವನ್ನು ಇತರರ ಮಕ್ಕಳ ಜೊತೆ ಹೋಲಿಸಬೇಡಿ. ಈ ಅನಗತ್ಯ ಚಿಂತೆ ಮತ್ತು ಉದ್ವೇಗಕ್ಕೆ ಜಾಗ ಕೊಡಬೇಡಿ. ಪ್ರತಿ ಮಗುವು ತನ್ನದೇ ಆದ ಶೈಲಿಯಲ್ಲಿ ಬೆಳೆಯುತ್ತದೆ. ಮಗು ಹೀಗೆ ಬೆಳವಣಿಗೆ ಹೊಂದಬೇಕು ಎಂಬುದಕ್ಕೆ ಯಾವುದೇ ಮಾರ್ಗಸೂಚಿಗಳಿಲ್ಲ ಇದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಬೆಳವಣಿಗೆಯ ಚಾರ್ಟ್‌ನಲ್ಲಿ ಸೂಚಿಸಿದ ಅವಧಿಯಲ್ಲಿ ಮಗು ಬೆಳವಣಿಗೆ ಹೊಂದುತ್ತಿದೆಯೇ ಎಂಬುದನ್ನು ಗಮನಿಸಿ. ಪ್ರತಿ ಮಗುವೂ ಬೆಳವಣಿಗೆಯಾಗಲು ಒಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ. ಮಗುವಿನ ಬೆಳವಣಿಗೆಯನ್ನು ಆನಂದಿಸಿ ಅದನ್ನು ಬಿಟ್ಟು ಹೋಲಿಕೆ ಮಾಡಬೇಡಿ.

ನಿಮ್ಮ ಅಗತ್ಯಗಳನ್ನು ಕಡೆಗಣಿಸಿದಿರಿ

ಮೊದಲ ಬಾರಿಗೆ ಪೋಷಕರಾಗುವುದು ಸ್ವಾಭಾವಿಕವಾಗಿಯೇ ಮಗುವಿನ ಬಗ್ಗೆ ಸ್ವಲ್ಪ ಹೆಚ್ಚೇ ಜಾಗರೂಕರಾಗಿರುವಂತೆ ಮಾಡುತ್ತದೆ. ಆದರೆ ಅದರ ಬಗ್ಗೆ ಯಾವಾಗಲೂ ಚಿಂತಿಸುವುದರಿಂದ ನಿಮಗೆ ಒತ್ತಡ ಮತ್ತು ಆಯಾಸ ಉಂಟಾಗುತ್ತದೆ. ಇದು ಮಗುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಪೋಷಕರು ತಮ್ಮ ಆರೋಗ್ಯಕ್ಕೂ ಆದ್ಯತೆ ನೀಡುವುದು ಬಹಳ ಮುಖ್ಯವಾಗಿದೆ. ಪಾಲಕರು ತಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಗತ್ಯವಿದ್ದಾಗ ತಜ್ಞರನ್ನು ಸಹ ಸಂಪರ್ಕಿಸಿ. ನೀವೇ ಸ್ವತಃ ಮಗುವನ್ನು ಆರೈಕೆ ಮಾಡುತ್ತಿದ್ದರೆ ಬಿಡುವಿನ ವೇಳೆಯಲ್ಲಿ ನಿಮ್ಮಿಷ್ಟದ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಇದು ನಿಮಗೆ ಸಂತೋಷ ಮತ್ತು ಚೈತನ್ಯವನ್ನು ನೀಡುತ್ತದೆ.

ಕುಟುಂಬ ಮತ್ತು ಸಂಗಾತಿಯಿಂದ ಸಹಾಯ ಪಡೆಯಿರಿ

ಸಾಮಾನ್ಯವಾಗಿ ಹೊಸ ಪೋಷಕರು ನಮ್ಮ ಮಗುವಿಗೆ ಏನು ಬೇಕು ಎಂಬುದು ತಮಗೆ ಚೆನ್ನಾಗಿ ತಿಳಿದಿದೆ ಎಂದು ಭಾವಿಸುತ್ತಾರೆ. ಮತ್ತು ತಾವೇ ಸ್ವತಂತ್ರವಾಗಿ ಎಲ್ಲವನ್ನೂ ನಿಭಾಯಿಸಲು ಮುಂದಾಗುತ್ತಾರೆ. ಇದು ಒತ್ತಡವನ್ನು ತರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಾಯಂದಿರು ತಮ್ಮ ಮಗುವನ್ನು ನೋಡಿಕೊಳ್ಳುವಾಗ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಇದಕ್ಕೆ ನಿಮ್ಮ ತಂದೆ–ತಾಯಿಗಳ, ಸಂಬಂಧಿಕರ ಹಾಗೂ ಸ್ನೇಹಿತರ ಸಹಕಾರ ಪಡೆದುಕೊಳ್ಳಿ. ಸಂಗಾತಿಯ ಸಹಾಯ ಪಡೆದುಕೊಳ್ಳಿ. ಮುಕ್ತವಾಗಿ ಅವರೊಂದಿಗೆ ಚರ್ಚಿಸಿ. ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಹಿರಿಯರಿಂದ ಅಗತ್ಯ ಮಾರ್ಗದರ್ಶವನ್ನು ಕೇಳಿ ಪಡೆಯಿರಿ.

ಎಲ್ಲರ ಮಾತಿಗೂ ಕಿವಿಗೊಡಬೇಡಿ

ಹೊಸ ಪೋಷಕರೆಂದರೆ ಸಾಕು, ಎಲ್ಲರೂ ಸಲಹೆಗಳನ್ನು ನೀಡುವವರೆ. ಹಾಗಂತ ನೀವು ಎಲ್ಲಾ ಮಾಹಿತಿಯನ್ನು ತೆಗೆದುಕೊಂಡರೆ ಆಗ ಅದು ಓವರ್‌ಲೋಡ್‌ ಆಗುತ್ತದೆ. ನಿಮ್ಮ ಮಗುವಿಗೆ ಸರಿ ಹೊಂದುವ ಅಥವಾ ಸರಿ ಹೊಂದದಿರುವ ಎಲ್ಲವನ್ನು ಪ್ರಯತ್ನಿಸಲು ಮುಂದಾಗುತ್ತೀರಿ. ಅದು ಇನ್ನಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಯಾವಾಗಲೂ ನಂಬಿಕೆ ಅರ್ಹವಾಗಿರುವ ಮೂಲಗಳ ಮಾಹಿತಿಗೆ ಆದ್ಯತೆ ನೀಡಿ. ಗುಣಮಟ್ಟದ ಪುಸ್ತಕಗಳನ್ನು ಓದಿ. ವೈದ್ಯರ ಸಲಹೆಯನ್ನು ಪಾಲಿಸಿ. ಸಂದರ್ಭಕ್ಕೆ ಸರಿಹೊಂದುವ ಮಾಹಿತಿಗಳನ್ನು ಅಳವಡಿಸಿಕೊಳ್ಳಿ. ಪೋಷಕರಾಗುವುದು ಬಹಳ ಸಂತೋಷದ ಸಮಯವಾಗಿದೆ. ನಿಮ್ಮ ಮಗುವಿನ ಬೆಳವಣಿಗೆಯನ್ನು ಸಂಪೂರ್ಣವಾಗಿ ಆನಂದಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ