logo
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಆನ್‌ಲೈನ್‌ನಿಂದ ಮಕ್ಕಳನ್ನು ದೂರವಿಡುವ ಬದಲು ಸುರಕ್ಷತೆಗೆ ಈ ಕ್ರಮ ಅನುಸರಿಸಿ, ಪೋಷಕರಿಗೆ ತಿಳಿದಿರಬೇಕಾದ ಮಾಹಿತಿ

Parenting Tips: ಆನ್‌ಲೈನ್‌ನಿಂದ ಮಕ್ಕಳನ್ನು ದೂರವಿಡುವ ಬದಲು ಸುರಕ್ಷತೆಗೆ ಈ ಕ್ರಮ ಅನುಸರಿಸಿ, ಪೋಷಕರಿಗೆ ತಿಳಿದಿರಬೇಕಾದ ಮಾಹಿತಿ

Reshma HT Kannada

Sep 16, 2024 11:58 AM IST

google News

ಆನ್‌ಲೈನ್ ಬಳಕೆಯಿಂದ ಮಕ್ಕಳನ್ನು ಸುರಕ್ಷಿತವಾಗಿರಿಸುವುದು ಹೇಗೆ?

    • ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಆನ್‌ಲೈನ್‌ ಮಾಧ್ಯಮಗಳಿಂದ ದೂರ ಇರಿಸುವುದು ಕಷ್ಟವಾಗಿದೆ. ಡಿಜಿಟಲ್ ಪರಿಕರಗಳಿಗೆ ಮಕ್ಕಳು ಅಡಿಕ್ಟ್ ಆಗಿದ್ದಾರೆ. ಆನ್‌ಲೈನ್ ಹಾನಿಯನ್ನ ತಪ್ಪಿಸಿ, ಡಿಜಿಟಲ್ ಪ್ರಪಂಚದಲ್ಲಿ ಮಕ್ಕಳು ಸುರಕ್ಷಿತವಾಗಿರಲು ಪೋಷಕರು ಈ ಕೆಲವು ಹಂತಗಳನ್ನು ಅನುಸರಿಸಬೇಕು. ಮಕ್ಕಳಿಗೆ ಮೊಬೈಲ್ ಕೊಡುವ ಪ್ರತಿ ಪೋಷಕರಿಗೂ ಈ ವಿಚಾರ ತಿಳಿದಿರಬೇಕು.
ಆನ್‌ಲೈನ್ ಬಳಕೆಯಿಂದ ಮಕ್ಕಳನ್ನು ಸುರಕ್ಷಿತವಾಗಿರಿಸುವುದು ಹೇಗೆ?
ಆನ್‌ಲೈನ್ ಬಳಕೆಯಿಂದ ಮಕ್ಕಳನ್ನು ಸುರಕ್ಷಿತವಾಗಿರಿಸುವುದು ಹೇಗೆ? (PC: Canva)

16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಬೇಕು ಎನ್ನುವ ಪ್ರಸ್ತಾಪವೊಂದು ಇತ್ತೀಚೆಗೆ ಕೇಳಿ ಬಂದಿದೆ. ಆಸ್ಟೇಲಿಯಾದಂತಹ ದೇಶಗಳಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಈ ರೀತಿ ಮಾಡಿರುವುದು ಅಲ್ಲಿನ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವಂತೆ ಮಾಡಿದೆ ಎಂದು ಅಧ್ಯಯನಗಳು ಹೇಳುತ್ತವೆ, ಮಾತ್ರವಲ್ಲ ಈ ರೀತಿ ಆನ್‌ಲೈನ್ ಬ್ಯಾನ್ ಮಾಡುವುದು ಮಕ್ಕಳಿಗೆ ಅದರ ಮೇಲೆ ಇನ್ನಷ್ಟು ಆಸಕ್ತಿ ಮೂಡುವಂತೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಸಾಮಾನ್ಯವಾಗಿ ಮಕ್ಕಳ ಆನ್‌ಲೈನ್ ಬಳಸುವುದು ಗೇಮ್‌ ಆಡಲು, ಯ್ಯೂಟ್ಯೂಬ್‌ ವಿಡಿಯೊಗಳನ್ನು ನೋಡಲು ಹಾಗೂ ತಮ್ಮ ಸ್ನೇಹಿತರನ್ನು ಸಂಪರ್ಕಿಸಲು. ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರನ್ನ ಸಂಪರ್ಕಿಸುವ ಮಕ್ಕಳು ಅವರೊಂದಿಗೆ ಮುಕ್ತ ಸಂವಹನ ನಡೆಸುತ್ತಾರೆ. ಇದು ಒಂದು ರೀತಿಯಲ್ಲಿ ಮಕ್ಕಳ ಯೋಗಕ್ಷೇಮಕ್ಕೆ ಪರೋಕ್ಷವಾಗಿ ಅವಶ್ಯ ಎಂದು ಹೇಳಲಾಗುತ್ತದೆ.

ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವುದರಿಂದ ಮಕ್ಕಳಲ್ಲಿ ಸಂವಹನ ಕಡಿಮೆಯಾಗಬಹುದು. ಹಾಗಾಗಿ ಮಕ್ಕಳಿಗೆ ಆನ್‌ಲೈನ್ ಅಥವಾ ಸಾಮಾಜಿಕ ಜಾಲತಾಣ ಬಳಸಲು ಬಿಡದೇ ಇರುವುದಕ್ಕಿಂತ ಸುರಕ್ಷಿತವಾಗಿ ಬಳಸುವಂತೆ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ಪೋಷಕರು ಮಕ್ಕಳ ಆನ್‌ಲೈನ್‌ ಚಟುವಟಿಕೆಯ ಮೇಲೆ ಗಮನ ಹರಿಸಬೇಕು. ಮಕ್ಕಳ ಬಳಸುವ ಆಪ್‌, ಸಾಮಾಜಿಕ ಜಾಲತಾಣಗಳು ಎಲ್ಲದರ ಬಗ್ಗೆ ಪೋಷಕರು ಪ್ರತಿನಿತ್ಯ ಒಂದು ಕಣ್ಣಿಡಬೇಕು. ನಿಮ್ಮ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಕಾಂಪ್ಲಿಯೆನ್ಸ್ ಮೋಡ್‌ ಆನ್‌ ಇರಿಸಿಕೊಳ್ಳಬೇಕು.

ಆನ್‌ಲೈನ್ ಬ್ಯಾನ್ ಬದಲು ಬೇರೇನು ಮಾಡಬಹುದು?

ಮಕ್ಕಳ ಆನ್‌ಲೈನ್ ಸುರಕ್ಷತೆಯು ಸಾಮೂಹಿಕ ಜವಾಬ್ದಾರಿಯಾಗಿದೆ. ಅದಕ್ಕಾಗಿ ನಾವು ಕೆಲವೊಂದು ರಚನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ಸರ್ಕಾರಗಳು, ಉದ್ಯಮ, ಸಮುದಾಯ ವಲಯ, ಪೋಷಕರು, ಶಿಕ್ಷಕರು, ಸಂಶೋಧಕರು ಮತ್ತು ಮಕ್ಕಳು ಮತ್ತು ಯುವಕರ ನಡುವೆ ಹೆಚ್ಚಿನ ಸಹಕಾರದ ಅಗತ್ಯವಿದೆ.

ಎಲ್ಲಾ ಮಕ್ಕಳು ಅಪಾಯಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ತಪ್ಪುಗಳನ್ನು ಮಾಡುವ ಮೂಲಕ ಕಲಿಯುತ್ತಾರೆ. ಆನ್‌ಲೈನ್ ಹಾನಿಯನ್ನು ತಪ್ಪಿಸಲು ಹಾಗೂ ಡಿಜಿಟಲ್ ಪ್ರಪಂಚದಲ್ಲಿ ಆತ್ಮವಿಶ್ವಾಸದಿಂದ ಇರಲು ಮಕ್ಕಳು ಹಾಗೂ ಪೋಷಕರನ್ನು ಸಜ್ಜು ಮಾಡುವುದು ಬಹಳ ಮುಖ್ಯವಾಗುತ್ತದೆ.

ಮಕ್ಕಳಿಗೆ ಇಂಟರ್ನೆಟ್‌ ಬಳಸದಂತೆ ಗಂಭೀರ ಎಚ್ಚರಿಕೆ ನೀಡಿ ಸಂಪೂರ್ಣವಾಗಿ ನಿಷೇಧ ಮಾಡಬಹುದು. ಆದರೆ ಇದು ಉತ್ತಮ ಮಾರ್ಗವಲ್ಲ, ಇಂದಿನ ಕಾಲದಲ್ಲಿ ಡಿಜಿಟಲ್ ವೇದಿಕೆಯು ಮಕ್ಕಳಿಗೆ ಅವಶ್ಯವಾಗಿದೆ. ಹಾಗಾಗಿ ನಿಷೇಧದ ಬದಲು ಸುರಕ್ಷಿತ ಬಳಕೆಯನ್ನು ಕಲಿಸಬೇಕು. ಮಕ್ಕಳ ರಕ್ಷಣೆಗೆ ಪೋಷಕರು ಕೆಲವೊಂದು ಕೆಲಸಗಳನ್ನು ಮಾಡಬೇಕು.

ಹಾಗಾದರೆ ಮಕ್ಕಳನ್ನು ಸುರಕ್ಷಿತವಾಗಿರಿಸುವುದು ಹೇಗೆ?

ಸುರಕ್ಷತಾ-ವಿನ್ಯಾಸ ತತ್ವಗಳನ್ನು ಕಾರ್ಯಗತಗೊಳಿಸುವುದು ಒಂದು ಮಾರ್ಗವಾಗಿದೆ. ಆನ್‌ಲೂನ್‌ ಸುರಕ್ಷತೆಯ ಬಗ್ಗೆ ಮಕ್ಕಳೇ ಮುಂದಾಳತ್ವ ವಹಿಸುವಂತೆ ಮಾಡಬೇಕು.

* ಮಕ್ಕಳಿಗೆ ತಾನು ಯಾವ ಉದ್ದೇಶದಿಂದ ಆನ್‌ಲೈನ್ ವೇದಿಕೆಯನ್ನು ಬಳಸುತ್ತಿದ್ದೇನೆ ಎಂಬುದರ ಅರಿವು ಇರಬೇಕು.

* ತಮ್ಮ ಫೀಡ್‌ಗಳಿಂದ ಲೈಂಗಿಕ, ಹಿಂಸಾತ್ಮಕ ಮತ್ತು ಇತರ ವಯಸ್ಸಿಗೆ ಸೂಕ್ತವಲ್ಲದ ವಿಷಯವನ್ನು ತೆಗೆದುಹಾಕುವ ವೈಶಿಷ್ಟ್ಯಗಳ ಬಗ್ಗೆ ಅವರಿಗೆ ಅರಿವು ಇರಬೇಕು.

* ಈ ಎಲ್ಲಾ ಹಂತಗಳು ಆನ್‌ಲೈನ್‌ನಲ್ಲಿ ತಮ್ಮನ್ನು ಮತ್ತು ಇತರರನ್ನು ನೋಡಿಕೊಳ್ಳಲು ಅವರು ಈಗಾಗಲೇ ಮಾಡುವ ಕೆಲಸಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅವರಿಗೆ ಪರಿಚಯವಿಲ್ಲದ ಜನರೊಂದಿಗೆ ಸಂವಹನ ನಡೆಸುವಾಗ ಎಚ್ಚರಿಕೆ ವಹಿಸುವುದು ಮತ್ತು ಆನ್‌ಲೈನ್‌ನಲ್ಲಿ ವೈಯಕ್ತಿಕ ಮಾಹಿತಿ ಅಥವಾ ಚಿತ್ರಗಳನ್ನು ಹಂಚಿಕೊಳ್ಳದಿರುವುದು ಬಹಳ ಮುಖ್ಯವಾಗುತ್ತದೆ.

ಪೋಷಕರು ಮಾಡಬೇಕಿರುವುದು

*ಮಕ್ಕಳಿಗೆ ಮೊಬೈಲ್ ಅಥವಾ ಲ್ಯಾಪ್‌ಟಾಪ್‌, ಕಂಪ್ಯೂಟರ್ ಕೊಡುವ ಮುನ್ನ ನೋಟಿಫಿಕೇಷನ್‌ಗಳನ್ನ ಆಫ್ ಮಾಡಿ. ಇದರಿಂದ ಮಕ್ಕಳು ಕುತೂಹಲದಿಂದ ಬೇರೆ ವಿಚಾರಗಳನ್ನು ನೋಡುವುದನ್ನು ತಪ್ಪಿಸಬಹುದು.

* ಆನ್‌ಲೈನ್‌ನಲ್ಲಿ ಕೆಲವೊಂದು ಸೆಕ್ಯೂರಿಟಿ ಫೀಚರ್‌ಗಳಿರುತ್ತವೆ ಆವುಗಳನ್ನು ಆಫ್ ಮಾಡಿ ಕೊಡಿ.

* ಮಕ್ಕಳ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದರೆ ಅವರು ಯಾವ ಸಮಯದಲ್ಲಿ ಆನ್‌ಲೈನ್ ಇರುತ್ತಾರೆ, ಆನ್‌ಲೈನ್ ಇದ್ದಾಗ ಏನು ಮಾಡುತ್ತಾರೆ, ಯಾರ ಜೊತೆ ಚಾಟ್ ಮಾಡುತ್ತಾರೆ ಈ ಎಲ್ಲಾ ಅಂಶಗಳ ಮೇಲೆ ಗಮನ ಹರಿಸಿ.

* ಇದಕ್ಕಿಂತ ಮುಖ್ಯವಾದುದು ಮಕ್ಕಳ ಆನ್‌ಲೈನ್ ಬಳಕೆಗೆ ಲಿಮಿಟ್ ಹಾಕಬೇಕು. ದಿನದಲ್ಲಿ ಇಂತಿಷ್ಟೇ ಸಮಯ ಮಾತ್ರ ಮೊಬೈಲ್ ಕೊಡುವುದು ಎಂದು ನಿರ್ಧಾರ ಮಾಡಿ. ಮಕ್ಕಳು ಮೊಬೈಲ್ ಅಥವಾ ಕಂಪ್ಯೂಟರ್ ಬಳಸುವ ಸಮಯದಲ್ಲಿ ನೀವು ಮಕ್ಕಳ ಜೊತೆಗೆ ಇರಿ. ಇಲ್ಲ ಎಂದಾದರೆ ಆಗಾಗ ಒಂದು ನೋಡುತ್ತಿರಿ.

* ರಾತ್ರಿ ಹೊತ್ತು ಆನ್‌ಲೈನ್ ಬರದಂತೆ ನೋಡಿಕೊಳ್ಳಿ. ಮಕ್ಕಳು ರಾತ್ರಿ ವೇಳೆ ಆನ್‌ಲೈನ್‌ನಲ್ಲಿ ಇರುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ.

* ಮಕ್ಕಳು ಬಳಸುವ ಆನ್‌ಲೈನ್ ವೇದಿಕೆಯ ಬಗ್ಗೆ ಪೋಷಕರು ಚೆನ್ನಾಗಿ ತಿಳಿದುಕೊಂಡಿರುವುದು ಕೂಡ ಮುಖ್ಯವಾಗುತ್ತದೆ.

* ಮಕ್ಕಳ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಯಾರೆಲ್ಲಾ ಸ್ನೇಹಿತರಿದ್ದಾರೆ. ಎಷ್ಟು ವರ್ಷ ವಯಸ್ಸಿನವರು ನಿಮ್ಮ ಮಗುವಿಗೆ ಸ್ನೇಹಿತರಾಗಿದ್ದಾರೆ, ನಿಮ್ಮ ಮಗ‌/ಮಗಳು ಅವರ ಜೊತೆ ಚಾಟ್ ಮಾಡಿದ್ದಾಳಾ/ದ್ದಾನ ಈ ಎಲ್ಲವನ್ನೂ ನೀವು ಗಮನಿಸಬೇಕು. 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ