logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳನ್ನು ಬೆಳೆಸುವಾಗ ಕಠಿಣವಾಗಿರಿ, ಕಟುಕರಾಗಬೇಡಿ; ಮನೆಯಲ್ಲಿ ಹರೆಯದ ಮಕ್ಕಳಿದ್ದರೆ ಪೋಷಕರಿಗೆ ಈ 5 ಅಂಶಗಳು ತಿಳಿದಿರಬೇಕು

ಮಕ್ಕಳನ್ನು ಬೆಳೆಸುವಾಗ ಕಠಿಣವಾಗಿರಿ, ಕಟುಕರಾಗಬೇಡಿ; ಮನೆಯಲ್ಲಿ ಹರೆಯದ ಮಕ್ಕಳಿದ್ದರೆ ಪೋಷಕರಿಗೆ ಈ 5 ಅಂಶಗಳು ತಿಳಿದಿರಬೇಕು

Raghavendra M Y HT Kannada

Jan 11, 2024 11:10 AM IST

google News

ಹದಿಹರೆಯದ ಮಕ್ಕಳೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳಲು ಈ ಟಿಫ್ಸ್ ಫಾಲೋ ಮಾಡಿ.

  • ಮನೆಯಲ್ಲಿ ಹದಿಹರೆಯದ ಮಕ್ಕಳಿದ್ದರೆ ಅವರಲ್ಲಿನ ಕೆಲವು ಬದಲಾವಣೆಗಳು ಪೋಷಕರ ಚಿಂತನೆಗೆ ಕಾರಣವಾಗಿರುತ್ತದೆ. ಇಂಥ ಮಕ್ಕಳೊಂದಿಗೆ ಪೋಷಕರು ಹೇಗಿರಬೇಕು ಅನ್ನೋದನ್ನ ತಿಳಿಯೋಣ.

ಹದಿಹರೆಯದ ಮಕ್ಕಳೊಂದಿಗೆ ಉತ್ತಮ ಸಂಬಂಧ  ಇರಿಸಿಕೊಳ್ಳಲು ಈ ಟಿಫ್ಸ್ ಫಾಲೋ ಮಾಡಿ.
ಹದಿಹರೆಯದ ಮಕ್ಕಳೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳಲು ಈ ಟಿಫ್ಸ್ ಫಾಲೋ ಮಾಡಿ.

ಬೆಂಗಳೂರು: ಯಾಕೋ ಗೊತ್ತಿಲ್ಲ ಇತ್ತೀಚೆಗೆ ನನ್ನ ಮಗ ಅಥವಾ ಮಗಳು ಹೇಳಿದ ಮಾತೇ ಕೇಳುತ್ತಿಲ್ಲ. ಮನೆಯವರೊಂದಿಗೆ ಸೇರಿಯಾಗಿ ಸೇರುತ್ತಿಲ್ಲ. ಒಂಟಿಯಾಗಿರಲು ಇಷ್ಟಪಡ್ತಾರೆ, ಟಿವಿ, ಮೊಬೈಲ್‌ನಲ್ಲೇ ಮುಳುಗಿರುತ್ತಾರೆ. ಏನಾದರೂ ಹೇಳಿದರೆ ಕೋಪ ಮಾಡಿಕೊಳ್ಳುತ್ತಾರೆ, ಪ್ರತಿಯೊಂದು ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತಾರೆ, ರೇಗಾಡುತ್ತಾರೆ. ಮೊದಲು ಹೇಳಿದ ಮಾತು ಕೇಳುತ್ತಿದ್ದರು. ಆದರೆ ಅವನಲ್ಲಿ ಅಥವಾ ಅವಳಲ್ಲಿ ತುಂಬಾ ಬದಲಾಣೆಗಳನ್ನು ಕಾಣುತ್ತಿದ್ದೇವೆ ಎಂದು ಪೋಷಕರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿರುವುದನ್ನ ನೋಡಿದ್ದೇವೆ.

ನಿಮ್ಮ ಮಕ್ಕಳಿನಲ್ಲಿ ಈ ಬದಲಾವಣೆಗಳಿಗೆ ನೀವು ಚಿಂತಸಬೇಕಾದ ಅಗತ್ಯವಿಲ್ಲ. ಬದಲಾಗಿ ನೀವು ಸ್ವಲ್ಪ ತಾಳ್ಮೆಯಿಂದ ಇದ್ದರೆ ಎಲ್ಲವೂ ಸರಿ ಹೋಗುತ್ತದೆ. ಮಕ್ಕಳು ಹದಿಹರೆಯದ ವಯಸ್ಸಿಗೆ ಬರುತ್ತಿದ್ದಂತೆ ಇಂಥ ಬದಲಾವಣೆಗಳು ಸರ್ವೇ ಸಾಮಾನ್ಯ. ಆದರೆ ಇದರಿಂದ ನೀವು ಹತಾಶೆಗೊಂಡು ಮಕ್ಕಳೊಂದಿಗೆ ರೇಗಾಡುವುದು, ಕೂಡಾಗುವುದು ಮಾಡಿದರೆ ಜಗಳ ಮುಂದುವರೆಯುತ್ತದೆಯೇ ಹೊರತು ಪರಿಹಾರವಾಗುವುದಿಲ್ಲ. ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಅವರಲ್ಲಿನ ಇಷ್ಟಗಳು, ಬಯಕೆಗಳ, ಇಷ್ಟಪಡದಿರುವಿಕೆಗಳು ಬಲಗೊಳ್ಳುತ್ತವೆ. ಹೀಗಾಗಿ ಹದಿಹರೆಯದ ಮಕ್ಕಳು ನಿಮ್ಮ ಮನೆಯಲ್ಲಿದ್ದರೆ ಈ ಟಿಪ್ಸ್‌ಗಳನ್ನು ಅನುಸರಿಸಿದರೆ ಮಕ್ಕಳಲ್ಲಿ ವಿಶಿಷ್ಟ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಬಹುದು.

1. ಮಕ್ಕಳ ವಿಶ್ವಾಸ ಗಳಿಸಿ

ಮನೆಯಲ್ಲಿ ಹದಿಹರೆಯದ ಮಕ್ಕಳಿದ್ದರೆ ಪೋಷಕರು ಮೊದಲು ಅವರ ವಿಶ್ವಾಸ ಗಳಿಸುವುದು ತುಂಬಾ ಮುಖ್ಯವಾಗುತ್ತದೆ. ಮಕ್ಕಳೊಂದಿಗೆ ಸ್ನೇಹಿತರಂತೆ ಇರಬೇಕು. ಹದಿಹರೆಯದ ಅವರು ಏನು ಮಾತನಾಡಲು, ಕೇಳಲು ಬಯಸುತ್ತಾರೆ ಎಂಬುದನ್ನು ಅರಿತುಕೊಂಡು ಅವರ ಭಾವನೆಗಳನ್ನು ಮೌಲ್ಯೀಕರಣ ಮಾಡಿ. ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ತುಂಬಾ ಇಷ್ಟವಾದ ಸ್ಥಳವನ್ನು ನೀಡಿ. ಅವರು ಮಾತನಾಡುವಾಗ ಅಡ್ಡಿಪಡಿಸಬೇಡಿ. ನನ್ನ ತಂದೆ, ತಾಯಿ ಅಥವಾ ಇತರೆ ಪೋಷಕರೊಂದಿಗೆ ಮಾತನಾಡುವ ವಿಷಯಗಳನ್ನು ಬೇರೆಯವರೊಂದಿಗೆ ಹೇಳುವುದಿಲ್ಲ. ಗೌಪ್ಯತೆಯನ್ನು ಕಾಪಾಡುತ್ತಾರೆ ಎಂಬ ವಿಶ್ವಾಸವನ್ನು ಗಳಿಸಿಕೊಳ್ಳಿ.

2. ಶಾಲೆ ಮುಗಿಸಿ ಬಂದ ಮಕ್ಕಳೊಂದಿಗೆ ಸಮಯ ಕಳೆಯಿರಿ

ಮಕ್ಕಳು ಬೆಳೆದಂತೆ ಸ್ವಲ್ಪ ಒಂಟಿಯಾಗಿ ಇರಲು ಯೋಜಿಸುತ್ತಾರೆ. ಆದ್ದರಿಂದ ಅವರೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸಿ. ನೀವು ಮನೆಯಲ್ಲೇ ಇರುವ ಪೋಷಕರಾಗಿದ್ದರೆ, ಇಲ್ಲವೇ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದರೆ ಮಗ ಅಥವಾ ಮಗಳಿಗೆ ಶಾಲೆ ಮುಗಿದ ನಂತರ ಅವರಿಗಾಗಿ 1 ಅಥವಾ 2 ಗಂಟೆ ಮುಡುಪಾಗಿ ಇಡಿ. ಅವರೊಂದಿಗೆ ಮಾತನಾಡಿ. ಇದು ಮಕ್ಕಳಿಗೆ ಬೆದರಿಕೆ, ಯಾರಾದರೂ ತೊಂದರೆ ಕೊಡುತ್ತಿದ್ದಾರಾ, ಏನಾದರೂ ಆತಂಕಕಾರಿಯಾಗಿದೆಯೇ ಎಂಬುದನ್ನು ಗುರುತಿಸಲು ನಿಮಗೆ ಸಹಾಯ ಮಾಡುತ್ತದೆ. ಮಕ್ಕಳೊಂದಿಗಿನ ಮುಕ್ತ ಸಂಭಾಷಣೆಗಳು ಅವರ ವಿಶ್ವಾಸ ಹೊಂದುವ ಸಾಧ್ಯತೆಗಳಿರುತ್ತವೆ. ಮಕ್ಕಳೊಂದಿಗೆ ಆಟ ಆಡುವುದು, ಒಟ್ಟಾಗಿ ಸಿನಿಮಾ ನೋಡುವುದು ಸೇರಿದಂತೆ ಮೋಜಿನ ಚಟುವಟಿಕೆಗಳಿಗೆ ಸಂಜೆ ಅಥವಾ ರಾತ್ರಿ ಸಮಯವನ್ನು ಅವರಿಗಾಗಿ ನಿಗದಿ ಮಾಡಿಕೊಳ್ಳಿ.

3. ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗಿ

ಮಕ್ಕಳೊಂದಿಗೆ ಪ್ರಯಾಣವು ಸಂಬಂಧಗಳನ್ನು ಬಲಪಡಿಸುತ್ತದೆ. ಮಕ್ಕಳು ನಿಮ್ಮನ್ನು ಪೋಷಕರಂತೆ ನೋಡುವುದಕ್ಕಿಂತ ಸ್ನೇಹಿತ, ಆಪ್ತಮಿತ್ರನಂತೆ ನೋಡಲು ಸಹಾಯ ಮಾಡುತ್ತದೆ. ಮಕ್ಕಳು ನಿಮ್ಮನ್ನು ಸ್ನೇಹಿತರಂತೆ ಭಾವಿಸಿದರೆ ಎಲ್ಲ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಸಾಧ್ಯವಾದಗಲೆಲ್ಲಾ ಒಟ್ಟಿಗೆ ಪ್ರವಾಸ ಹೋಗಲು ಪ್ಲಾನ್ ಮಾಡಿ. ಐತಿಹಾಸಿಕ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು, ಟ್ರೆಕ್ಕಿಂಗ್ ಹೀಗೆ ಪ್ಲಾನ್ ಮಾಡಿಕೊಳ್ಳಿ. ಇಂತಹ ಸನ್ನಿವೇಶಗಳು ಹರಿಹರೆಯದ ಮಕ್ಕಳು ನಿಮ್ಮೊಂದಿಗೆ ಹೊಂದಿಕೊಳ್ಳುವುದನ್ನು ಕಲಿಯುವ ಅವಕಾಶ ಇರುತ್ತದೆ.

4. ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಿ

ಮಕ್ಕಳ ಕೇಶವಿನ್ಯಾಸ, ಡ್ರೆಸ್‌ನಂತಹ ಆಯ್ಕೆಗಳ ವಿಷಯಗಳಲ್ಲಿ ಪೋಷಕರಾದವರಿಗೆ ಕಿರಿಕಿರಿಯಾಗುವುದು ಸಹಜ. ಆದರೆ ಹದಿಹರೆಯದ ಮಕ್ಕಳನ್ನು ವಿಷಯದಲ್ಲಿ ಹೇರ್‌ಸ್ಟೈಲ್, ಉಡುಪು ಧರಿಸುವ ವಿಷಯದಲ್ಲೂ ಮುಕ್ತವಾಗಿರಿ. ಇದು ಅವರ ವ್ಯಕ್ತಿತ್ವ ಮತ್ತು ಕೌಶಲ್ಯಗಳಿಗೆ ಹೆಚ್ಚು ಮಹತ್ವದ್ದಾಗಿರುತ್ತದೆ. ಕೆಲವು ಡ್ರೆಸ್ ಕೋಡ್‌ಗಳನ್ನು ಮನಸ್ಸಿನಲ್ಲಿಕೊಂಡು ತಾವು ಎಂತ ಬಟ್ಟೆ ಧರಿಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಿ.

5. ಕಠಿಣವಾಗಿರಿ, ಕಠೋರಿಗಳಾಬೇಡಿ

ಮಕ್ಕಳು ಚಿಕ್ಕವರಿದ್ದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಅವರಿಗೆ ಹೇಳುದು ಸುಲಭ. ಆದರೆ ಹದಿಹರೆಯದವರಾಗಿ ಬೆಳೆದಂತೆ ಹೆಚ್ಚು ಕೋಪಿಸಿಕೊಳ್ಳುತ್ತಾರೆ. ಆದ್ದರಿಂದ ಅವರಿಗೆ ಏನು ಬೇಕೋ ಅದೆಲ್ಲವನ್ನೂ ತಂದುಕೊಡಿ. ಆದರೆ ಸ್ವಲ್ಪ ಕಠಿಣವಾಗಿರಬೇಕು. ಹದಿಹರೆಯದ ಮಕ್ಕಳಿಗೆ ಯಾವಾಗ ಅವಕಾಶವನ್ನು ನೀಡಬೇಕು ಎಂಬುದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು. ಕೆಲವು ಆಯ್ಕೆಗಳ ವಿಷಯದಲ್ಲಿ ಆರಂಭದಿದಂದಲೂ ಕೆಲ ನಿಯಮಗಳನ್ನು ರೂಪಿಸಿ ಕಠಿಣವಾಗಿರಿ. ಆದರೆ ಕಠೋರವಾಗಿ ನಡೆದುಕೊಳ್ಳಬಾರದು. ಮದ್ಯಪಾನಕ್ಕೆ ಪ್ರಯತ್ನಿಸುವಂತ ವಿಷಯಗಳು ಕಂಡುಬಂದಾಗ ಕಠಿಣವಾಗಿ ಎಚ್ಚರಿಕೆ ನೀಡಬೇಕಾಗುತ್ತದೆ. ಗದರಿಸುವ ಬದಲು ತಾಕೀತು ಮಾಡಿ. ಆಗ ನಿಮ್ಮ ಮೇಲಿನ ವಿಶ್ವಾಸಕ್ಕೆ ಧಕ್ಕೆಯಾಗುವುದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ