logo
ಕನ್ನಡ ಸುದ್ದಿ  /  ಜೀವನಶೈಲಿ  /  Pitru Paksha 2022 Date: ನಾಳೆಯೇ ಪಿತೃಪಕ್ಷ ಶುರು, ಶ್ರಾದ್ಧಕಾರ್ಯದ ತಿಥಿಗಳ ವಿವರ ಇಲ್ಲಿವೆ

Pitru Paksha 2022 date: ನಾಳೆಯೇ ಪಿತೃಪಕ್ಷ ಶುರು, ಶ್ರಾದ್ಧಕಾರ್ಯದ ತಿಥಿಗಳ ವಿವರ ಇಲ್ಲಿವೆ

HT Kannada Desk HT Kannada

Sep 10, 2024 11:02 AM IST

google News

ಪಿತೃಪಕ್ಷ ಶುರು, ಶ್ರಾದ್ಧಕಾರ್ಯದ ತಿಥಿಗಳ ವಿವರ

    • Pitru Paksha 2022 date: ಪಿತೃಪಕ್ಷದಲ್ಲಿ ಮೊದಲ ಶ್ರಾದ್ಧವು ಹುಣ್ಣಿಮೆಯಂದು ಅಂದರೆ ಸೆಪ್ಟೆಂಬರ್‌ 10ರಂದೇ ಶುರುವಾಗುತ್ತದೆ. ಈ ದಿನವನ್ನು ಮೊದಲ ಶ್ರಾದ್ಧ ಎನ್ನುತ್ತಾರೆ. ಪೂರ್ವಜರು ಹುಣ್ಣಿಮೆಯಂದು ನಿಧನರಾದರೆ, ಅವರ ಶ್ರಾದ್ಧವನ್ನು ಹುಣ್ಣಿಮೆಯ ದಿನದಂದು ಮಾಡಲಾಗುತ್ತದೆ. ಈ 15 ದಿನಗಳಲ್ಲಿ, ಪಿತೃಗಳನ್ನು ಸ್ಮರಿಸುವ, ಪೂಜಿಸುವ ಕೆಲಸ ನಡೆಯುತ್ತದೆ. 
ಪಿತೃಪಕ್ಷ ಶುರು, ಶ್ರಾದ್ಧಕಾರ್ಯದ ತಿಥಿಗಳ ವಿವರ
ಪಿತೃಪಕ್ಷ ಶುರು, ಶ್ರಾದ್ಧಕಾರ್ಯದ ತಿಥಿಗಳ ವಿವರ (Live Hindustan )

ಅಶ್ವಿನಿ ಮಾಸದಲ್ಲಿ ಶ್ರಾದ್ಧಕ್ಕೆಂದೇ 15 ದಿನಗಳು ಮೀಸಲು. ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ಪಿತೃಗಳನ್ನು ಸ್ಮರಿಸುವ ಕಾರ್ಯ ನಡೆಯುತ್ತದೆ. ಮೊದಲ ಶ್ರಾದ್ಧ ಪೂರ್ಣಿಮಾದಿಂದ ಪ್ರಾರಂಭವಾಗುತ್ತದೆ. ಈ ದಿನವನ್ನು ಮೊದಲ ಶ್ರಾದ್ಧ ಎನ್ನಲಾಗುತ್ತದೆ. ಪಿತೃಗಳು ಹುಣ್ಣಿಮೆಯ ದಿನದಂದು ನಿಧನರಾಗಿದ್ದರೆ, ಅವರ ಶ್ರಾದ್ಧವನ್ನು ಹುಣ್ಣಿಮೆಯ ದಿನದಂದೇ ಮಾಡಲಾಗುತ್ತದೆ. ಅದೇ ರೀತಿ, ಉಳಿದ ದಿನಗಳಲ್ಲೂ ಹಾಗೆಯೇ ಇರುತ್ತದೆ.

ಈ 15 ದಿನಗಳಲ್ಲಿ ಎಲ್ಲರೂ ತಮ್ಮ ಪಿತೃಗಳಿಗೆ ಮತ್ತು ಅವರ ಪೂರ್ವಜರಿಗೆ ನಿಗದಿತ ದಿನಾಂಕದಂದು ತರ್ಪಣ, ಶ್ರಾದ್ಧ ಮಾಡುತ್ತಾರೆ. ಹೀಗೆ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗಿ ಆಶೀರ್ವಾದ ಮಾಡಿ ತೆರಳುತ್ತಾರೆ. ಅಮಾವಾಸ್ಯೆಯ ದಿನ ಎಲ್ಲ ಪಿತೃಗಳನ್ನು ಪಿಂಡ ಪ್ರಧಾನ ಮಾಡಿ ಬೀಳ್ಕೊಡಲಾಗುತ್ತದೆ. ಸೆಪ್ಟೆಂಬರ್ 11 ರಂದು, ಸೂರ್ಯೋದಯದೊಂದಿಗೆ, ಅಶ್ವಿನ್ ಕೃಷ್ಣ ಪಕ್ಷ ಪ್ರತಿಪದ ದಿನಾಂಕ ಶುರುವಾಗುತ್ತದೆ.

ಆದರೆ ಪೂರ್ಣಿಮೆಯ ಶ್ರಾದ್ಧ ಕರ್ಮವನ್ನು ಭಾದ್ರ ಪದದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ, ಅಂದರೆ ಸೆಪ್ಟೆಂಬರ್ 10 ರ ಶನಿವಾರದಂದು ಮಾಡಲಾಗುತ್ತದೆ. ಆದ್ದರಿಂದ ಸೆಪ್ಟೆಂಬರ್ 10ರ ಶನಿವಾರದಿಂದ ಮಹಾಲಯ ಆರಂಭವಾಗಲಿದೆ. ಪೂರ್ವಜರು ಮರಣ ಹೊಂದಿದ ದಿನದಂದು ಪಿತೃ ಪಕ್ಷದಲ್ಲಿನ ತಿಥಿಗಳ ಪ್ರಕಾರ ಶ್ರಾದ್ಧ ವಿಧಿಗಳನ್ನು ಮತ್ತು ತರ್ಪಣ ಕಾರ್ಯವನ್ನು ಮಾಡುವುದು ಶಾಸ್ತ್ರಬದ್ಧವಾಗಿದೆ.

ಮಕ್ಕಳ ದೀರ್ಘಾಯುಷ್ಯ ಮತ್ತು ಯೋಗಕ್ಷೇಮವನ್ನು ಬಯಸುವ ಪರಮ ಪವಿತ್ರ ಜ್ಯುತಿಯಾ (ಜ್ಯುತಪುತ್ರಿಕಾ) ಪೂಜೆಯನ್ನು ಅಷ್ಟಮಿ ಶ್ರಾದ್ಧದ ದಿನದಂದು ಮಾಡಲಾಗುತ್ತದೆ. ಆದ್ದರಿಂದ ಜೀತಿಯ ಉಪವಾಸ ವ್ರತಾಚರಣೆಯನ್ನು ಭಾನುವಾರ ಸೆಪ್ಟೆಂಬರ್‌ 18 ರಂದು ಆಚರಿಸಲಾಗುತ್ತದೆ ಮತ್ತು ಅದರ ಪಾರಣ ಸೋಮವಾರ ಸೆಪ್ಟೆಂಬರ್ 19 ರಂದು ಮಾಡಲಾಗುತ್ತದೆ. ಸೆಪ್ಟೆಂಬರ್ 19 ರಂದು ಸೋಮವಾರ ಬೆಳಗ್ಗೆ 6.10 ಕ್ಕೆ ತಾಯಂದಿರು ಸೂರ್ಯೋದಯದ ನಂತರ ಉಪವಾಸವನ್ನು ಕೊನೆಗೊಳಿಸಬಹುದು. ಆದ್ದರಿಂದ ಸೆಪ್ಟೆಂಬರ್ 11 ರಿಂದ ಪ್ರಾರಂಭವಾಗುವ ಪಿತೃ ಪಕ್ಷವು ಸೆಪ್ಟೆಂಬರ್ 25 ರಂದು ಕೊನೆಗೊಳ್ಳುತ್ತದೆ.

★ ಸೆಪ್ಟೆಂಬರ್ 10, ಶನಿವಾರ - ಹುಣ್ಣಿಮೆಯ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 11, ಭಾನುವಾರ - ಪ್ರತಿಪದದ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 12, ಸೋಮವಾರ - ಎರಡನೇ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 13, ಮಂಗಳವಾರ - ತೃತೀಯಾ ಶ್ರಾದ್ ಮತ್ತು ತರ್ಪಣ

★ ಸೆಪ್ಟೆಂಬರ್ 14, ಬುಧವಾರ - ಚತುರ್ಥಿ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 15, ಗುರುವಾರ - ಪಂಚಮಿಯ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 16, ಶುಕ್ರವಾರ - ಷಷ್ಠಿಯ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 17, ಶನಿವಾರ - ಸಪ್ತಮಿಯ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 18, ಭಾನುವಾರ - ಅಷ್ಟಮಿ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 19, ಸೋಮವಾರ - ನವಮಿಯ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 20, ಮಂಗಳವಾರ - ದಶಮಿಯ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 21, ಬುಧವಾರ - ಏಕಾದಶಿಯ ಶ್ರಾದ್ಧ ತರ್ಪಣ

★ ಸೆಪ್ಟೆಂಬರ್ 22, ಗುರುವಾರ -ದ್ವಾದಶಿಯ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 23 ಶುಕ್ರವಾರ - ತ್ರಯೋದಶಿಯ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 24, ಶನಿವಾರ - ಚತುರ್ದಶಿಯ ಶ್ರಾದ್ಧ ಮತ್ತು ತರ್ಪಣ

★ ಸೆಪ್ಟೆಂಬರ್ 25, ಭಾನುವಾರ- ಅಮವಾಸ್ಯೆ ಶ್ರಾದ್ಧ ಮತ್ತು ತರ್ಪಣ

Pitru Paksha 2022 Date in India: ಹಿಂದು ಧರ್ಮದಲ್ಲಿ, ಪಿತೃ ಪಕ್ಷದ ಸಮಯದಲ್ಲಿ ಮಂಗಳಕರ ಮತ್ತು ಶುಭ ಕಾರ್ಯಗಳು ನಿಷಿದ್ಧ. ಪಿತೃ ಪಕ್ಷದಲ್ಲಿ ದಾನ, ತರ್ಪಣ ಮತ್ತು ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಎಂಬುದು ನಂಬಿಕೆ. ಈ ವರ್ಷ ಪಿತೃಪಕ್ಷ ಶುರು ಯಾವಾಗ 9ಕ್ಕಾ ಅಥವಾ 10ಕ್ಕಾ? ಪೂರಕ ಮಾಹಿತಿ ಇಲ್ಲಿದೆ. Pitru Paksha 2022 Date : ಪಿತೃ ಪಕ್ಷ ಶುರು ಯಾವಾಗ 9ಕ್ಕಾ ಅಥವಾ 10ಕ್ಕಾ? ಇಲ್ಲಿದೆ ಮಾಹಿತಿ

Pitru Paksha 2022: ಕ್ಯಾಲೆಂಡರ್‌ ವರ್ಷದ ಪ್ರಕಾರ ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 25 ರವರೆಗೆ ಪಿತೃಪಕ್ಷ. ಅಂದರೆ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯಿಂದ ಅಶ್ವಿನ್ ಮಾಸದ ಅಮಾವಾಸ್ಯೆ ತನಕ ಇದೆ. ಈ 15 ದಿನ ನಮ್ಮ ಪೂರ್ವಜರಿಗೆ ಗೌರವ ಸಲ್ಲಿಸಲು, ಅವರನ್ನು ಸ್ಮರಿಸಲು ಸೂಕ್ತ ಸಮಯ. ಶ್ರಾದ್ಧ ಮತ್ತು ಪಿಂಡದಾನಕ್ಕೆ ಮೀಸಲಾದ ಅವಧಿ ಇದು. Pitru Paksha 2022: ಪಿತೃಪಕ್ಷದಲ್ಲಿ ಶ್ರಾದ್ಧ ಯಾಕೆ ಮಾಡಬೇಕು? ಏನು ವಿಶೇಷ? ಇಲ್ಲಿದೆ ಮಾಹಿತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ