logo
ಕನ್ನಡ ಸುದ್ದಿ  /  ಜೀವನಶೈಲಿ  /  ಗರ್ಭಕಂಠ ಕ್ಯಾನ್ಸರ್ ಕಾರಣ ಮೃತಪಟ್ಟ ನಟಿ ಪೂನಂ ಪಾಂಡೆ; ಕೇಂದ್ರ ಬಜೆಟ್‌ನಲ್ಲಿ 9 ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ಘೋಷಣೆ

ಗರ್ಭಕಂಠ ಕ್ಯಾನ್ಸರ್ ಕಾರಣ ಮೃತಪಟ್ಟ ನಟಿ ಪೂನಂ ಪಾಂಡೆ; ಕೇಂದ್ರ ಬಜೆಟ್‌ನಲ್ಲಿ 9 ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ಘೋಷಣೆ

Umesh Kumar S HT Kannada

Feb 02, 2024 05:16 PM IST

google News

ಗರ್ಭಕಂಠ ಕ್ಯಾನ್ಸರ್ ಕಾರಣ ನಟಿ ಪೂನಂ ಪಾಂಡೆ ಮೃತಪಟ್ಟರು. ಕೇಂದ್ರ ಬಜೆಟ್‌ನಲ್ಲಿ 9 ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ಘೋಷಣೆ ಮಾಡಿದ್ದು, ಶೀಘ್ರವೇ ಅನುಷ್ಠಾನಗೊಳ್ಳಲಿದೆ.

  • ಗರ್ಭಕಂಠ ಕ್ಯಾನ್ಸರ್ ಕಾರಣ ನಟಿ ಪೂನಂ ಪಾಂಡೆ ಮೃತಪಟ್ಟರು. ಇನ್ನೊಂದೆಡೆ ಈ ಕ್ಯಾನ್ಸರ್ ಅನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಬಜೆಟ್‌ನಲ್ಲಿ 9 ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ಘೋಷಣೆ ಮಾಡಿದೆ. ಸ್ವದೇಶಿ ಲಸಿಕೆ ಸೆರ್ವಾವಾಕ್ ಅಭಿವೃದ್ಧಿಯಾಗಿದ್ದು, ಪ್ರಾಯೋಗಿಕ ಹಂತದಲ್ಲಿದೆ.

ಗರ್ಭಕಂಠ ಕ್ಯಾನ್ಸರ್ ಕಾರಣ ನಟಿ ಪೂನಂ ಪಾಂಡೆ  ಮೃತಪಟ್ಟರು. ಕೇಂದ್ರ ಬಜೆಟ್‌ನಲ್ಲಿ 9 ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ಘೋಷಣೆ ಮಾಡಿದ್ದು, ಶೀಘ್ರವೇ ಅನುಷ್ಠಾನಗೊಳ್ಳಲಿದೆ.
ಗರ್ಭಕಂಠ ಕ್ಯಾನ್ಸರ್ ಕಾರಣ ನಟಿ ಪೂನಂ ಪಾಂಡೆ ಮೃತಪಟ್ಟರು. ಕೇಂದ್ರ ಬಜೆಟ್‌ನಲ್ಲಿ 9 ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ಘೋಷಣೆ ಮಾಡಿದ್ದು, ಶೀಘ್ರವೇ ಅನುಷ್ಠಾನಗೊಳ್ಳಲಿದೆ.

ನಟಿ, ಮಾಡೆಲ್‌ ಪೂನಂ ಪಾಂಡೆ 32ನೇ ವರ್ಷದಲ್ಲಿ ಗರ್ಭಕಂಠ ಕ್ಯಾನ್ಸರ್ ಕಾರಣ ಮೃತಪಟ್ಟರು. ಅವರ ನಿಧನದೊಂದಿಗೆ ಗರ್ಭಕಂಠ ಕ್ಯಾನ್ಸರ್ ಕುರಿತಾದ ಚರ್ಚೆ ಹೆಚ್ಚಾಗಿದೆ. ನಿನ್ನೆ (ಫೆ.1) ಲೋಕಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲೂ ಗರ್ಭಕಂಠ ಕ್ಯಾನ್ಸರ್ ವಿಚಾರ ಪ್ರಸ್ತಾಪವಾಗಿತ್ತು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಂಡಿಸಿದ ಆರೋಗ್ಯ ಬಜೆಟ್‌ ವೈದ್ಯಕೀಯ ಕಾಲೇಜು, ಗರ್ಭಕಂಠದ ಕ್ಯಾನ್ಸರ್ ಲಸಿಕೆ, ತಾಯಿ ಮತ್ತು ಮಕ್ಕಳ ಆರೋಗ್ಯ, ರೋಗನಿರೋಧಕ ಮತ್ತು ಆಯುಷ್ಮಾನ್ ಭಾರತ್ ಯೋಜನೆ ಎಂಬ ಐದು ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿತ್ತು.

ಯೂನಿಯನ್ ಬಜೆಟ್ ಮಾನಸಿಕ ಆರೋಗ್ಯ, ವೈದ್ಯಕೀಯ ಸಂಶೋಧನೆ, ತಡೆಗಟ್ಟುವ ಆರೋಗ್ಯ, ವ್ಯಾಕ್ಸಿನೇಷನ್ ಕಾರ್ಯಕ್ರಮಗಳು, ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ವೃತ್ತಿಪರರಿಗೆ ಸುಧಾರಿತ ತರಬೇತಿಯಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟರು.

9 ರಿಂದ 14 ವರ್ಷದ ಬಾಲಕಿಯರಿಗೆ ಗರ್ಭಕಂಠ ಕ್ಯಾನ್ಸರ್‌ಗೆ ಲಸಿಕೆ

9 ರಿಂದ 14 ವರ್ಷದ ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಹಾಕಿಸಲು ಕೇಂದ್ರ ಸರ್ಕಾರ ಉತ್ತೇಜನ ನೀಡಲಿದೆ ಎಂಬುದು ಈ ಬಾರಿಯ ಬಜೆಟ್‌ನ ಪ್ರಮುಖ ಅಂಶವಾಗಿತ್ತು. ಹೆಚ್‌ಪಿವಿ (ಹ್ಯೂಮನ್‌ ಪ್ಯಾಪಿಲೋಮವೈರಸ್) ಮತ್ತು ಕ್ಯಾನ್ಸರ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಕೇಂದ್ರ ಪ್ರಕಟಿಸಿರುವ 2023 ರ ಫ್ಯಾಕ್ಟ್ ಶೀಟ್ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 1,23,907 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ಗೆ ಸಿಲುಕಿ ಬಳಲುತ್ತಿದ್ದಾರೆ. ವಾರ್ಷಿಕವಾಗಿ 77,348 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಸಾಯುತ್ತಾರೆ. ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಎರಡನೇ ಮಾದರಿಯ ಕ್ಯಾನ್ಸರ್ ಆಗಿದೆ.

ಜಾಗತಿಕವಾಗಿ ಲಭ್ಯವಿರುವ ಗರ್ಭಕಂಠ ಕ್ಯಾನ್ಸರ್‌ಗೆ ಲಸಿಕೆ

ಗರ್ಭಕಂಠದ ಕ್ಯಾನ್ಸರ್ ಲಸಿಕೆ ಅಥವಾ ಹೆಚ್‌ಪಿವಿ ವ್ಯಾಕ್ಸಿನ್‌ನಲ್ಲಿ ಮೂರು ವಿಧದ ಲಸಿಕೆಗಳು ಜಾಗತಿಕವಾಗಿ ಲಭ್ಯ ಇದೆ.

ಸೆರ್ವರಿಕ್ಸ್ (ಬೈವಲೆಂಟ್‌): ಈ ಲಸಿಕೆ ಎರಡು ಹೈ-ರಿಸ್ಕ್ ಹೆಚ್‌ಪಿವಿ ವಿಧಗಳ (16 ಮತ್ತು 18) ವಿರುದ್ಧ ರಕ್ಷಣೆ ಒದಗಿಸುತ್ತದೆ. ಇವೆರಡೂ ಶೇಕಡ 70 ಗರ್ಭಕಂಠ ಕ್ಯಾನ್ಸರ್‌ಗೆ ಕಾರಣ. ಈ ಲಸಿಕೆಯನ್ನು ವಿಶೇಷವಾಗಿ 9 ವರ್ಷದಿಂದ 14 ವರ್ಷದ ಬಾಲಕಿಯರಿಗೆ ಎರಡು ಡೋಸ್‌ನಲ್ಲಿ ಕೊಡುವುದಕ್ಕೆ ಶಿಫಾರಸು ಮಾಡಲಾಗುತ್ತದೆ.

ಗಾರ್ಡಸಿಲ್ (ಕ್ವಾಡ್ರೈವಲೆಂಟ್): ಈ ಲಸಿಕೆಯು 4 ಹೆಚ್‌ಪಿವಿ ವಿಧ (16,18,6 ಮತ್ತು 11) ಗಳಿಂದ ರಕ್ಷಣೆ ಒದಗಿಸುತ್ತದೆ. ಜನನಾಂಗವನ್ನು ಕಾಡುವ ವೈರಸ್‌ಗಳಿಂದ ಹೆಚ್ಚುವರಿ ರಕ್ಷಣೆಗೆ ಇದನ್ನು ಬಳಸಲಾಗುತ್ತದೆ. ಗಾರ್ಡಸಿಲ್ ಅನ್ನು 9 ವರ್ಷದಿಂದ 26 ವರ್ಷ ವಯಸ್ಸಿನ ಮಹಿಳೆಯರಿಗೆ ಶಿಫಾರಸು ಮಾಡಲಾಗಿದೆ. ವಯಸ್ಸಿಗೆ ಅನುಗುಣವಾಗಿ ಎರಡು-ಡೋಸ್ ಅಥವಾ ಮೂರು-ಡೋಸ್‌ಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ. ಗಾರ್ಡಸಿಲ್-4 ಪ್ರತಿ ಡೋಸ್ ಸುಮಾರು 3,957 ರೂಪಾಯಿ ಇದೆ.

ಸೆರ್ವಾವಾಕ್ ಎಂಬುದು ಭಾರತ ನಿರ್ಮಿತ ಲಸಿಕೆ

ಸೆರ್ವಾವಾಕ್ (ಕ್ವಾಡ್ರೈವಲೆಂಟ್): ಇದು ಭಾರತದ ಮೊದಲ ಸ್ವದೇಶಿ ಹೆಚ್‌ಪಿವಿ ಲಸಿಕೆ. ಇದನ್ನು 2023ರ ಜನವರಿಯಲ್ಲಿ ಪರಿಚಯಿಸಲಾಯಿತು. ಇದನ್ನು ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಅಭಿವೃದ್ಧಿಪಡಿಸಿ, ತಯಾರಿಸಿದೆ. ಇದು ಗಾರ್ಡಸಿಲ್‌ನಂತೆಯೇ ಅದೇ ನಾಲ್ಕು ಹೆಚ್‌ಪಿವಿ ಪ್ರಕಾರಗಳಿಂದ ಮಹಿಳೆಯರಿಗೆ ರಕ್ಷಣೆ ಒದಗಿಸುತ್ತದೆ. ಸರ್ವಾವಾಕ್ ಪ್ರಸ್ತುತ ರಾಷ್ಟ್ರೀಯ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಸೇರ್ಪಡೆಗೊಳ್ಳಲು ಮೌಲ್ಯಮಾಪನಕ್ಕೆ ಒಳಗಾಗುತ್ತಿದೆ. ಅಂತರರಾಷ್ಟ್ರೀಯ ಲಸಿಕೆಗಳಿಗಿಂತ ಕಡಿಮೆ ಬೆಲೆಯಲ್ಲಿ ಅಂದರೆ 200 ರೂಪಾಯಿಯಿಂದ 400 ರೂಪಾಯಿ ಬೆಲೆಯಲ್ಲಿ ಸಿಗುವ ಸಾಧ್ಯತೆ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ