logo
ಕನ್ನಡ ಸುದ್ದಿ  /  ಜೀವನಶೈಲಿ  /  Ragi Recipe: ಬೇಸಿಗೆಯಲ್ಲಿ ದೇಹ ತಂಪು ಮಾಡುವ ರಾಗಿ ರೆಸಿಪಿಗಳು; ರುಚಿಗೂ ಆರೋಗ್ಯಕ್ಕೂ ಇವು ಉತ್ತಮ

Ragi Recipe: ಬೇಸಿಗೆಯಲ್ಲಿ ದೇಹ ತಂಪು ಮಾಡುವ ರಾಗಿ ರೆಸಿಪಿಗಳು; ರುಚಿಗೂ ಆರೋಗ್ಯಕ್ಕೂ ಇವು ಉತ್ತಮ

Reshma HT Kannada

May 22, 2023 05:36 PM IST

google News

ರಾಗಿ ರೆಸಿಪಿಗಳು

    • ಬೇಸಿಗೆಸ್ನೇಹಿ ರಾಗಿಯು ಬಿಸಿಲಿನಲ್ಲಿ ದೇಹತಾಪ ತಣಿಸುವ ಜೊತೆಗೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಜೊತೆಗೆ ಕೊಲೆಸ್ಟ್ರಾಲ್‌ಗೂ ಉತ್ತಮ. ಬೇಸಿಗೆಯಲ್ಲಿ ರಾಗಿಯಿಂದ ತಯಾರಿಸಬಹುದಾದ ಕೆಲವು ಸುಲಭ ರೆಸಿಪಿಗಳು ಹೀಗಿವೆ ನೋಡಿ.
ರಾಗಿ ರೆಸಿಪಿಗಳು
ರಾಗಿ ರೆಸಿಪಿಗಳು

ರಾಗಿ ಸಮಗ್ರ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಅದ್ಭುತ ಧಾನ್ಯವಾಗಿದೆ. ಕೊಲೆಸ್ಟ್ರಾಲ್‌ ಹಾಗೂ ಸೋಡಿಯಂ ರಹಿತ ರಾಗಿಯಲ್ಲಿ ನಾರಿನಾಂಶ, ಕ್ಯಾಲ್ಸಿಯಂ, ಕಬ್ಬಿಣಾಂಶ ಹಾಗೂ ಇತರ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿವೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಬಹುದು, ತೂಕ ನಷ್ಟಕ್ಕೂ ಇದು ಸಹಕಾರಿ. ರಾಗಿಯು ಬೇಸಿಗೆ ಸ್ನೇಹಿ ಧಾನ್ಯವಾಗಿದೆ ಏಕೆಂದರೆ ಇದು ಬಿಸಿ ವಾತಾವರಣದಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ. ಆಯುರ್ವೇದದ ಪ್ರಕಾರ, ರಾಗಿಯು ಅಮ (ಟಾಕ್ಸಿನ್) ಅನ್ನು ಕಡಿಮೆ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ರಾಗಿಯು ಪ್ರೋಟೀನ್ ಮತ್ತು ಖನಿಜಗಳ ಉಗ್ರಾಣವಾಗಿದೆ ಮತ್ತು ಸಸ್ಯಾಹಾರಿಗಳಿಗೆ ಪ್ರೋಟೀನ್‌ನ ಉತ್ತಮ ಮೂಲವಾಗಿದೆ.

ರಾಗಿಯ ಪ್ರಯೋಜನಗಳು ಹಾಗೂ ಪಾಕವಿಧಾನಗಳ ಬಗ್ಗೆ ಪೌಷ್ಟಿಕ ತಜ್ಞೆ ಸಾಕ್ಷಿ ಲಾಲ್ವಾನಿ ಎಚ್‌ಟಿ ಡಿಜಿಟಲ್‌ಗೆ ನೀಡಿದ ಸಂದರ್ಶಶದಲ್ಲಿ ತಿಳಿಸಿದ್ದಾರೆ.

ರಾಗಿಯ ಪ್ರಯೋಜನಗಳು

ಕ್ಯಾಲ್ಸಿಯಂ, ಕಬ್ಬಿಣಾಂಶ ಹಾಗೂ ನಾರಿನಾಂಶ ಸಮೃದ್ಧ: ರಾಗಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದು ಮೂಳೆಗಳ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಅದ್ಭುತವಾದ ರಾಗಿ ಕಬ್ಬಿಣ ಮತ್ತು ನಾರಿನ ಉಗ್ರಾಣವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಗ್ಲುಟೆನ್‌ ರಹಿತ ಹಾಗೂ ಸುಲಭವಾಗಿ ಜೀರ್ಣವಾಗುತ್ತದೆ: ರಾಗಿಯು ಗೋಧಿಗಿಂತ ಭಿನ್ನವಾಗಿದ್ದು, ಗ್ಲುಟನ್ ಮುಕ್ತವಾಗಿದೆ. ಇದು ಜೀರ್ಣಕ್ರಿಯೆ ಸುಧಾರಣೆಗೂ ಉತ್ತಮ.

ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿಯಂತ್ರಣಕ್ಕೂ ಸಹಕಾರಿ: ರಾಗಿಯಲ್ಲಿ ನಾರಿನಾಂಶ ಅಧಿಕವಾಗಿದೆ. ಇದರ ಸೇವನೆಯಿಂದ ಬಹಳಷ್ಟು ಹೊತ್ತು ಹಸಿವಾಗುವುದಿಲ್ಲ. ಮಧುಮೇಹಿಗಳಿಗೆ ರಾಗಿ ಸೇವನೆ ಉತ್ತಮ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹೃದ್ರೋಗ ಅಪಾಯವನ್ನು ಕಡಿಮೆ ಮಾಡುತ್ತದೆ: ರಾಗಿಯಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ಎಚ್‌ಡಿಎಲ್‌ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ತೂಕ ಇಳಿಕೆಗೂ ಸಹಕಾರಿ: ರಾಗಿಯಲ್ಲಿ ಗ್ಲೈಸೆಮಿಕ್‌ ಸೂಚ್ಯಂಕ ಕಡಿಮೆ ಇದ್ದು, ಇದು ತೂಕ ಇಳಿಕೆಗೂ ಸಹಕಾರಿ. ರಾಗಿಯು ಹಸಿವನ್ನು ನಿಯಂತ್ರಿಸುವ ಗುಣವನ್ನೂ ಹೊಂದಿದೆ.

ಬೇಸಿಗೆಯಲ್ಲಿ ತಯಾರಿಸಬಹುದಾದ ರಾಗಿಯ ರೆಸಿಪಿಗಳು

ರಾಗಿ ಮಿಲ್ಕ್‌ಶೇಕ್‌: ಹುರಿದುಕೊಂಡ ರಾಗಿಗೆ ಬಾಳೆಹಣ್ಣು ಹಾಗೂ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸಿ ರುಬ್ಬಿ ಮಿಲ್ಕ್‌ಶೇಕ್‌ ತಯಾರಿಸಿ ಕುಡಿಯಬಹುದು. ಇದು ಪೌಷ್ಟಿಕಾಂಶ ಸಮೃದ್ಧ ಬೇಸಿಗೆಯ ಪಾನೀಯವಾಗಿದೆ.

ರಾಗಿ ದೋಸೆ: ದಕ್ಷಿಣ ಭಾರತದ ಈ ಸಾಂಪ್ರದಾಯಿಕ ತಿನಿಸು ಗ್ಲುಟೇನ್‌ ಅಂಶ ರಹಿತವಾಗಿದೆ. ಇದರಲ್ಲಿ ಪ್ರೊಟೀನ್‌ ಅಂಶವೂ ಸಮೃದ್ಧವಾಗಿದೆ. ರಾಗಿಯೊಂದಿಗೆ ಈರುಳ್ಳಿ, ಕೊತ್ತಂಬರಿ, ಸಾಸಿವೆಯಂತಹ ಮಸಾಲೆಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಬೇಕು. ಸ್ವಲ್ಪ ಹೊತ್ತು ಬಿಟ್ಟು ದೋಸೆ ಹುಯ್ಯಬೇಕು. ಇದು ರುಚಿಗೂ ಚೆನ್ನಾಗಿರುತ್ತದೆ.

ರಾಗಿ ಜ್ಯೂಸ್‌: ರಾಗಿಯನ್ನು ಹುರಿದುಕೊಂಡು ಬೆಲ್ಲ, ಏಲಕ್ಕಿ, ಚಿಟಕಿ ಉಪ್ಪು ಸೇರಿಸಿ ನುಣ್ಣಗೆ ರುಬ್ಬಬೇಕು. ನಂತರ ಅದನ್ನು ಸೋಸಿ ಕುಡಿಯಬೇಕು. ಇದು ಉತ್ತಮ ಪೋಷಕಾಂಶಯುಳ್ಳ ಪಾನೀಯವಾಗಿದ್ದು, ಬಿಸಿಲಿನ ದಾಹ ತಣಿಸಲು ಇದು ಬೆಸ್ಟ್‌.

ರಾಗಿ ಪಾನ್‌ಕೇಕ್‌: ರಾಗಿಹಿಟ್ಟಿಗೆ ಮೊಟ್ಟೆ, ಮಜ್ಜಿಗೆ ಹಾಗೂ ಸ್ವಲ್ಪ ತುಪ್ಪ ಸೇರಿಸಿ ಮಿಶ್ರಣ ಮಾಡಿ. ಅದರಿಂದ ಪಾನ್‌ಕೇಕ್‌ ತಯಾರಿಸಿ, ಸಿಹಿ ಬೇಕು ಅನ್ನಿಸಿದವರು ತಾಜಾ ಹಣ್ಣುಗಳು ಹಾಗೂ ಸೀರಪ್‌ ಜೊತೆ ಸೇವಿಸಬಹುದು. 

ರಾಗಿ ಐಸ್‌ಕ್ಯಾಂಡಿ: ರಾಗಿಹಿಟ್ಟಿಗೆ ತೆಂಗಿನಹಾಲು, ಸಕ್ಕರೆ ಹಾಗೂ ಒಂದು ಚಮಚ ವೆನಿಲ್ಲಾ ಎಕ್ಸ್‌ಟ್ರ್ಯಾಕ್‌ ಸೇರಿಸಿ ಮಿಶ್ರಣ ಮಾಡಿ ಐಸ್‌ಕ್ಯಾಂಡಿ ಬೌಲ್‌ಗೆ ಸುರಿಯಿರಿ. ಫ್ರಿಜ್‌ನಲ್ಲಿಟ್ಟು ಐಸ್‌ಕ್ಯಾಂಡಿ ಮಾಡಿ ತಿನ್ನಿ. 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ