logo
ಕನ್ನಡ ಸುದ್ದಿ  /  ಜೀವನಶೈಲಿ  /  Railway Ticket Faq: ಒಬ್ಬ ವ್ಯಕ್ತಿ ತಿಂಗಳಿಗೆ ಎಷ್ಟು ರೈಲ್ವೆ ಟಿಕೆಟ್‌ ಬುಕ್‌ ಮಾಡಬಹುದು? ಈ ಕುರಿತ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Railway Ticket FAQ: ಒಬ್ಬ ವ್ಯಕ್ತಿ ತಿಂಗಳಿಗೆ ಎಷ್ಟು ರೈಲ್ವೆ ಟಿಕೆಟ್‌ ಬುಕ್‌ ಮಾಡಬಹುದು? ಈ ಕುರಿತ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Raghavendra M Y HT Kannada

Jun 28, 2024 08:00 AM IST

google News

ಒಬ್ಬ ವ್ಯಕ್ತಿ ತಿಂಗಳಿಗೆ ಎಷ್ಟು ರೈಲ್ವೆ ಟಿಕೆಟ್‌ ಬುಕ್‌ ಮಾಡಬಹುದು? ಈ ಕುರಿತ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    • ರೈಲು ಟಿಕೆಟ್ ಬುಕಿಂಗ್ ಬಗ್ಗೆ ಕೆಲವೊಂದು ಪ್ರಮುಖ ವಿಚಾರಗಳು ಪ್ರಯಾಣಿಕರಿಗೆ ಗೊತ್ತಿರಬೇಕು. ಒಬ್ಬ ವ್ಯಕ್ತಿ ಎಷ್ಟು ಟಿಕೆಟ್ ಬುಕ್ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.
ಒಬ್ಬ ವ್ಯಕ್ತಿ ತಿಂಗಳಿಗೆ ಎಷ್ಟು ರೈಲ್ವೆ ಟಿಕೆಟ್‌ ಬುಕ್‌ ಮಾಡಬಹುದು? ಈ ಕುರಿತ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಒಬ್ಬ ವ್ಯಕ್ತಿ ತಿಂಗಳಿಗೆ ಎಷ್ಟು ರೈಲ್ವೆ ಟಿಕೆಟ್‌ ಬುಕ್‌ ಮಾಡಬಹುದು? ಈ ಕುರಿತ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ರೈಲು ಟಿಕೆಟ್ ಬುಕಿಂಗ್ ಸಂಬಂಧ ನಿಮಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ. ಪ್ರಶ್ನೆಗಳೊಂದಿಗೆ ಉತ್ತರಗಳನ್ನೂ ನೀಡಲಾಗಿದೆ.

1. ಒಂದು ಟಿಕೆಟ್‌ನಲ್ಲಿ ಗರಿಷ್ಠ ಎಷ್ಟು ಮಂದಿ ಪ್ರಯಾಣಿಸಬಹುದು?

ಒಂದು ಸಾಮಾನ್ಯ ಟಿಕೆಟ್‌ನಲ್ಲಿ ಗರಿಷ್ಠ 6 ಮಂದಿ ಪ್ರಯಾಣಿಸಬಹುದು. ತಾತ್ಕಲ್ ಟಿಕೆಟ್‌ನಲ್ಲಿ 4 ಮಂದಿ ಪ್ರಯಾಣಿಸಬಹುದು

2. ವೇಯ್ಟ್ ಲಿಸ್ಟ್‌ನಲ್ಲಿರುವ ಟಿಕೆಟ್‌ಗಳನ್ನು ಬುಕ್ ಮಾಡಬಹುದೇ?

ಹೌದು ಬುಕ್ ಮಾಡಿಕೊಳ್ಳಬಹುದು

3. ಆರ್‌ಎಸಿ ಟಿಕೆಟ್‌ಗಳನ್ನು ಬುಕ್ ಮಾಡಿಬಹುದೇ?

ಹೌದು ಆರ್‌ಎಸಿ ಟಿಕೆಟ್‌ಗನ್ನು ಬುಕ್ ಮಾಡಿಕೊಳ್ಳಬಹುದು

4. ಕನ್ಫರ್ಮ್ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದೇ?

ಹೌದು, ಕನ್ಫರ್ಮ್ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು

5. ಗರಿಷ್ಠ ಸಮಯದ ಮಿತಿಯನ್ನು ಯಾವ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು?

ಚಾರ್ಟ್ ತಯಾರಿಯಾಗುವವರೆಗೆ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು

6. ಹೆಸರು ಬದಲಾವಣೆ ಅನುಮತಿ ಇದೆಯೇ?

ಇಲ್ಲ, ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಪ್ರಯಾಣಿಕರ ಹೆಸರನ್ನು ಬದಲಾಯಿಸುವ ಸೌಲಭ್ಯ ಇಲ್ಲ. ಆದರೆ ಅಸ್ತಿತ್ತವದಲ್ಲಿರುವ ರೈಲ್ವೆ ನಿಯಮಗಳ ಪ್ರಕಾರ, ರೈಲ್ವೆ ಕೌಂಟರ್‌ಗಳಲ್ಲಿ ಹೆಸರನ್ನು ಬದಲಾಯಿಸಿಕೊಳ್ಳಬಹುದು.

7. ಪ್ರಯಾಣದ ಸ್ಥಳವನ್ನು ಬದಲಾಯಿಸಿಕೊಳ್ಳಬಹುದೇ

ಇಲ್ಲ,

8. ಬೋರ್ಡಿಂಗ್ ಪಾಯಿಂಟ್ ಅನ್ನು ಬದಲಾಯಿಸಿಕೊಳ್ಳಬಹುದೇ

ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಬೋರ್ಡಿಂಗ್ ಪಾಯಿಂಟ್ ಬದಲಾಯಿಸಿಕೊಳ್ಳಲು ಅವಕಾಶವಿದೆ

9. ಯಾವುದೇ ಕೌಂಟರ್‌ನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿಕೊಳ್ಳಬಹುದೇ?

ಇಲ್ಲ, ಯಾವುದೇ ಕೌಂಟರ್‌ನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿಕೊಳ್ಳಲು ಅವಕಾಶ ಇಲ್ಲ

10. ರೈಲು ಟಿಕೆಟ್ ಬುಕ್ ಮಾಡಿಕೊಳ್ಳಲು ಕ್ರಿಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಬಹುದೇ?

ಹೌದು, ಎಲ್ಲಾ ರೀತಿಯ ಪಾವತಿಗಳಿಗೆ ಅವಕಾಶ ಇದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ವಾಲೆಟ್ಸ್ ಹಾಗೂ ಬಹು ಪಾವತಿಯ ಸೇವೆಗಳು ಲಭ್ಯ ಇವೆ.

11. ಚಾರ್ಟ್ ಸಿದ್ಧವಾಗುವುದಕ್ಕೂ ಮುನ್ನ ಭಾಗಶಃ ಟಿಕೆಟ್‌ಗಳನ್ನು ರದ್ದು ಮಾಡಿಕೊಳ್ಳಬಹುದೇ?

ಹೌದು, ಚಾರ್ಟ್ ಸಿದ್ದವಾಗುವುದುಕ್ಕೂ ಮೊದಲು ಭಾಗಶಃ ಟಿಕೆಟ್‌ಗಳನ್ನು ರದ್ದು ಮಾಡಿಕೊಳ್ಳಬಹುದು

12. ಟಿಕೆಟ್ ಬುಕಿಂಗ್‌ಗೆ ಐಟಿ ಪುರಾವೆಯ ಅಗತ್ಯವಿದೆಯೇ?

ಬುಕಿಂಗ್ ಸಮಯದಲ್ಲಿ ಅಗತ್ಯ ಇರುವುದಿಲ್ಲ, ಆದರೆ ರೈಲು ಪ್ರಯಾಣದ ಸಮಯದಲ್ಲಿ ಅಗತ್ಯವಿರುತ್ತದೆ

13. ಪ್ರಯಾಣದ ಅಧಿಕಾರ?

ಎಲೆಕ್ಟ್ರಾನಿಕ್ ರಿಸರ್ವೇಷನ್ ಸ್ಲಿಪ್-ಪಿಎನ್‌ಆರ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಒಬ್ಬರ ಮೂಲ ಐಡಿ ಜೊತೆಗೆ ಐಆರ್‌ಸಿಟಿಸಿ ಕಳುಹಿಸಿರುವ ಪ್ರಮಾಣಿತ ಸ್ಟೇಷನರಿ, ವಿಆರ್‌ಎಂ, ಎಸ್‌ಎಂಎಸ್‌ ಮುದ್ರಿಸಲಾಗಿರುತ್ತದೆ

14. ಟಿಕೆಟ್ ಬುಕಿಂಗ್ ಯಾವುದು?

ಮಧ್ಯಾಹ್ನ 12.20 ರಿಂದ ರಾತ್ರಿ 11.45ರ ವರೆಗೆ

15. ತಿಂಗಳಿಗೆ ಬುಕಿಂಗ್ ಮಾಡುವ ಗರಿಷ್ಠ ಸಂಖ್ಯೆ ಎಷ್ಟು?

ಐಆರ್‌ಸಿಟಿಸಿ ಬಳಕೆದಾರರ ಐಡಿ ಮತ್ತು ಪ್ರಯಾಣಿಸುವ ಪ್ರಯಾಣಿಕರಲ್ಲಿ ಒಬ್ಬರನ್ನು ಅವರ ಅನುಗುಣವಾದ ಆಧಾರ್‌ನೊಂದಿಗೆ ಪರಿಶೀಸುವ ಮೂಲಕ ತಿಂಗಳಿಗೆ 12 ಬುಕಿಂಗ್ ಮಾಡಬಹುದು

16. ರಿಯಾಯಿತಿ ಟಿಕೆಟ್‌ಗಳನ್ನು ಬುಕ್ ಮಾಡಬಹುದೇ?

ಹೌದು, ಅಸ್ತಿತ್ವದಲ್ಲಿರುವ ರೈಲ್ವೆ ನಿಮಯಗಳ ಪ್ರಕಾರ, ಐಆರ್‌ಸಿಟಿಸಿ ನಲ್ಲಿ ಟಿಕೆಟ್‌ಗಳನ್ನು ಬುಕಿಂಗ್ ಮಾಡಲು ಹಿರಿಯ ನಾಗರಿಕರ ರಿಯಾಯಿತಿ, ದಿವ್ಯಾಂಗ ರಿಯಾಯಿತಿ, ಪತ್ರಕರ್ತರ ರಿಯಾಯಿತಿಗಳಿಗೆ ಅನುಮತಿ ನೀಡಲಾಗಿದೆ

17. ತತ್ಕಾಲ್ ಬುಕ್ ಮಾಡಬಹುದೇ?

ಹೌದು, ತತ್ಕಾಲ್ ಬುಕ್ ಮಾಡಿಕೊಳ್ಳಬಹುದು

18. ಬುಕ್ ಮಾಡಬಹುದಾದ ಕೋಟಾಗಳು ಯಾವುವು?

ಜನರಲ್, ಮಹಿಳೆಯರು, ಸೀನಿಯರ್, ನಾಗರಿಕ, ದಿವ್ಯಾಂಗ, ತತ್ಕಾಲ್, ಪ್ರೀಮಿಯಂ ತತ್ಕಾಲ್ ಕೋಟಾಗಳಲ್ಲಿ ಟಿಕೆಟ್ ಬುಕ್ ಮಾಡಬಹುದು

19. ಟಿಕೆಟ್‌ಗಳನ್ನು ಕನ್ಫರ್ಮ್ ಮಾಡಿಕೊಳ್ಳುವುದು ಹೇಗೆ?

ಮೈ ಅಕೌಂಟ್‌ಗೆ ಹೋಗಿ - ಮೈ ಟ್ರಾನ್ಸಾಕ್ಷನ್ - ಬುಕ್ಡ್ ಟಿಕೆಟ್ ಹಿಸ್ಟರಿಗೆ ಹೋದರೆ ಟಿಕೆಟ್‌ಗಳನ್ನು ನೋಡಬಹುದು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ