Rakhi Gifts: ರಕ್ಷಾಬಂಧನದಂದು ಸಹೋದರಿಗೆ ಕೊಡಲು ಬಜೆಟ್ ಫ್ರೆಂಡ್ಲಿ ಗಿಫ್ಟ್‌ಗಳನ್ನ ನೋಡ್ತಾ ಇದೀರಾ, ಇಲ್ಲಿದೆ ಒಂದಿಷ್ಟು ಆಯ್ಕೆಗಳು
Aug 12, 2024 12:18 PM IST
ರಕ್ಷಾಬಂಧನದಂದು ತಂಗಿಗೆ ಕೊಡಲು ಬಜೆಟ್ ಫ್ರೆಂಡ್ಲಿ ಗಿಫ್ಟ್ ಕೊಡಲು ಇಲ್ಲಿದೆ ಐಡಿಯಾಗಳು
- ರಕ್ಷಾಬಂಧನ ಹತ್ತಿರದಲ್ಲಿದೆ. ರಾಖಿ ಕಟ್ಟಿ ಆಶೀರ್ವಾದ ಪಡೆಯುವ ತಂಗಿಗೆ ವಿಶೇಷವಾದ ಉಡುಗೊರೆ ಕೊಡಬೇಕು ಅಂತ ಅಣ್ಣಂದಿರು ಬಯಸುವುದು ಸಹಜ. ಈ ಬಾರಿ ರಾಖಿ ಹಬ್ಬಕ್ಕೆ ನಿಮ್ಮ ಬಳಿ ಹಣ ಕಡಿಮೆ ಇದ್ದರೆ ಈ ಬಜೆಟ್ ಫ್ರೆಂಡ್ಲಿ ಉಡುಗೊರೆಗಳನ್ನು ಕೊಡಬಹುದು ನೋಡಿ.
ರಕ್ಷಾಬಂಧನದಂದು ಸಹೋದರರು ಸಹೋದರಿಯರಿಗೆ ಉಡುಗೊರೆ ನೀಡುವ ಅಭ್ಯಾಸ ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡ ಬಂದ ಸಂಪ್ರದಾಯವಾಗಿದೆ. ಈ ವರ್ಷ ರಾಖಿ ಹಬ್ಬಕ್ಕೆ ದುಬಾರಿ ಉಡುಗೊರೆ ಕೊಡಲು ನಿಮ್ಮಲ್ಲಿ ಹಣ ಇಲ್ಲ ಎಂದಾದರೆ ಬಜೆಟ್ ಫ್ರೆಂಡ್ಲಿಯಾಗಿ ಕಡಿಮೆ ದರದಲ್ಲಿ ಆಕರ್ಷಕ ಗಿಫ್ಟ್‌ಗಳನ್ನು ನೀಡಬಹುದು. ಸಾವಿರ ರೂಪಾಯಿ ಒಳಗೆ ಖರೀದಿಸಬಹುದಾದ ಗಿಫ್ಟ್ ಐಡಿಯಾಗಳು ಇಲ್ಲಿವೆ ನೋಡಿ.
ಕಸ್ಟ್‌ಮೈಸ್ಡ್ ಜ್ಯುವೆಲರಿ
ಈಗಿನ ಕಾಲದಲ್ಲಿ ಚಿನ್ನ, ಬೆಳ್ಳಿ ಖರೀದಿಸುವುದು ಸುಲಭದ ಮಾತಲ್ಲ, ಅದರ ಬದಲಿಗೆ ಕಸ್ಟ್‌ಮೈಸ್ಡ್ ಆಭರಣಗಳನ್ನು ಖರೀದಿ ಮಾಡಬಹುದು. ನಿಮ್ಮ ಸಹೋದರಿ ಇಷ್ಟ, ಆಯ್ಕೆಗಳನ್ನು ಗಮನಿಸಿ ಅವರ ಅಭಿರುಚಿಗೆ ತಕ್ಕುದಾದ ಕಸ್ಟ್‌ಮೈಸ್ಡ್ ಆಭರಣಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದು. ನಿಮ್ಮ ಸಹೋದರಿಯ ಹೆಸರಿನ ಮೊದಲ ಅಕ್ಷರ ಬರೆದ ಪೆಂಡೆಂಟ್ ಅನ್ನು ಉಡುಗೊರೆಯಾಗಿ ನೀಡಬಹುದು. ರಾಶಿ ಹೊಂದುವ ಹರಳಿನ ಬೆಳ್ಳಿ ಉಂಗುರವನ್ನು ಉಡುಗೊರೆ ರೂಪದಲ್ಲಿ ಕೊಡಬಹುದು. ಇದರೊಂದಿಗೆ ಜರ್ಮನ್ ಸ್ವಿಲರ್ ಕೋಟ್ ಇರುವ ಆಭರಣಗಳನ್ನೂ ನೀಡಬಹುದು.
ಫಿಟ್‌ನೆಸ್ ಬಾಂಡ್
ಸಾವಿರ ರೂಪಾಯಿ ಒಳಗೆ ಹಲವು ಬ್ರಾಂಡ್‌ನ ಫಿಟ್‌ನೆಸ್ ಬಾಂಡ್‌ಗಳು ಈಗ ಲಭ್ಯವಿವೆ. ನಿಮ್ಮ ಸಹೋದರಿ ಫಿಟ್‌ನೆಸ್ ಫ್ರಿಕ್ ಆದ್ರೆ ಈ ಉಡುಗೊರೆ ಖಂಡಿತ ಅವರಿಗೆ ಇಷ್ಟವಾಗುತ್ತದೆ.
ಅಲಂಕಾರಿಕ ವಸ್ತುಗಳು
ನಿಮ್ಮ ತಂಗಿ ಅಥವಾ ಅಕ್ಕ ಮನೆ ಅಲಂಕಾರಕ್ಕೆ ಹೆಚ್ಚು ಗಮನ ನೀಡುವವರಾದರೆ ಅವರಿಗೆ ಈ ಉಡುಗೊರೆ ಬೆಸ್ಟ್. ಅಲಂಕಾರಿಕ ದೀಪಗಳು, ಬಾಗಿಲಿಗೆ ತೂಗು ಹಾಕುವ ಮಾಲೆಗಳು, ಗೋಡೆ ಅಲಂಕಾರಕ್ಕೆ ಹೊಂದುವ ವಸ್ತುಗಳನ್ನ ಆಯ್ಕೆ ಮಾಡಬಹುದು.
ಸ್ಕಿನ್ ಕೇರ್ ಪ್ರಾಡಕ್ಟ್‌ಗಳು
ಸ್ಕಿನ್ ಕೇರ್ ಪ್ರಾಡಕ್ಟ್‌ಗಳು ಯಾವ ಹೆಣ್ಣುಮಕ್ಕಳಿಗೆ ಇಷ್ಟವಾಗುವುದಿಲ್ಲ ಹೇಳಿ. ಸೌಂದರ್ಯ ಪ್ರಿಯರಾದ ಹೆಣ್ಣುಮಕ್ಕಳು ಇದನ್ನು ಖಂಡಿತ ಇಷ್ಟಪಡುತ್ತಾರೆ. ಆದರೆ ಸ್ಕಿನ್ ಕೇರ್ ಪ್ರಾಡಕ್ಟ್ ಆಯ್ಕೆ ಮಾಡಿಕೊಳ್ಳುವ ಮುನ್ನ ಗಮನ ಹರಿಸುವುದು ಅವರ ಚರ್ಮಕ್ಕೆ ಹೊಂದುತ್ತದೋ ಇಲ್ಲವೋ ಎಂಬುದನ್ನು ಕಂಡುಕೊಳ್ಳಿ.
ಹ್ಯಾಂಡ್ ಬ್ಯಾಗ್
ಹ್ಯಾಂಡ್ ಬ್ಯಾಗ್ ಕೂಡ ಹೆಣ್ಣುಮಕ್ಕಳಿಗೆ ಫೇವರಿಟ್, ಎಲ್ಲಿಗೂ ಹೋಗಬೇಕೆಂದರೂ ಹ್ಯಾಂಡ್‌ಬ್ಯಾಗ್ ಹಿಡದೇ ಹೋಗುತ್ತಾರೆ. ಈಗಂತೂ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಬಗೆ ಬಗೆಯ ಹ್ಯಾಂಡ್‌ಬ್ಯಾಗ್‌ಗಳು ಲಭ್ಯವಿದ್ದು ನಿಮ್ಮ ಸಹೋದರಿಗೆ ಇದನ್ನು ಗಿಫ್ಟ್ ರೂಪದಲ್ಲಿ ನೀಡಬಹುದು.
ಗಿಫ್ಟ್ ಕಾರ್ಡ್
ಇವೆಲ್ಲಾ ಏನೂ ಬೇಡ, ನನಗೆ ಇಷ್ಟವಾಗುವ ಗಿಫ್ಟ್ ನಾನೇ ತಗೋತಿನಿ ಎನ್ನುವ ಮನೋಭಾವ ನಿಮ್ಮದಾದರೆ ನೀವು ಗಿಫ್ಟ್ ಕಾರ್ಡ್ ಅನ್ನು ಉಡುಗೊರೆ ರೂಪದಲ್ಲಿ ನೀಡಬಹುದು. ಈ ಗಿಫ್ಟ್ ಕಾರ್ಡ್‌ಗೆ ಒಂದಿಷ್ಟು ದಿನ ವ್ಯಾಲಿಡಿಟಿ ಇದ್ದು ಅದರಿಂದ ಗಿಫ್ಟ್ ಖರೀದಿ ಮಾಡಬಹುದು.
ಸಾವಿರ ರೂಪಾಯಿ ಒಳಗೆ ಗಿಫ್ಟ್ ಖರೀದಿಸುವ ಯೋಚನೆ ಇದ್ದರೆ ಈ ಗಿಫ್ಟ್ ಆಯ್ಕೆಗಳು ನಿಮಗೆ ಇಷ್ಟವಾಗಬಹುದು.
ವಿಭಾಗ