logo
ಕನ್ನಡ ಸುದ್ದಿ  /  ಜೀವನಶೈಲಿ  /  ಎಂದಾದ್ರೂ ರಸಗುಲ್ಲಾದಿಂದ ಚಾಟ್​​​, ಇಡ್ಲಿಯಿಂದ ಪಿಜಾ ತಯಾರಿಸಿದ್ದೀರ..? ಇಲ್ಲಿದೆ ನೋಡಿ ರೆಸಿಪಿ

ಎಂದಾದ್ರೂ ರಸಗುಲ್ಲಾದಿಂದ ಚಾಟ್​​​, ಇಡ್ಲಿಯಿಂದ ಪಿಜಾ ತಯಾರಿಸಿದ್ದೀರ..? ಇಲ್ಲಿದೆ ನೋಡಿ ರೆಸಿಪಿ

Rakshitha Sowmya HT Kannada

May 29, 2022 04:38 PM IST

google News

ರಸಗುಲ್ಲಾ ಚಾಟ್ ಹಾಗೂ ಇಡ್ಲಿ ಪಿಜಾ ರೆಸಿಪಿಗಳು

    • ಭೋಜನಪ್ರಿಯರು, ಅಡುಗೆ ಪ್ರಿಯರು ಸದಾ ಹೊಸ ಹೊಸ ತಿಂಡಿಗಳನ್ನು ತಿನ್ನಲು, ರೆಸಿಪಿಗಳನ್ನು ತಯಾರಿಸುವ ಪ್ರಯತ್ನದಲ್ಲಿರುತ್ತಾರೆ.  ನೀವು ಎಂದಿಗಾದರೂ ಉಳಿದ ಇಡ್ಲಿಯಿಂದ ಪಿಜ್ಜಾ ಹಾಗೂ ರಸಗುಲ್ಲಾದಿಂದ ಚಾಟ್ ತಯಾರಿಸಿದ್ದೀರಾ..? ಇದೋ ಇಲ್ಲಿವೆ ಎರಡು ವಿಭಿನ್ನ ರೆಸಿಪಿಗಳು.
ರಸಗುಲ್ಲಾ ಚಾಟ್ ಹಾಗೂ ಇಡ್ಲಿ ಪಿಜಾ ರೆಸಿಪಿಗಳು
ರಸಗುಲ್ಲಾ ಚಾಟ್ ಹಾಗೂ ಇಡ್ಲಿ ಪಿಜಾ ರೆಸಿಪಿಗಳು

ರಸಗುಲ್ಲಾ ಚಾಟ್

ರಸಗುಲ್ಲಾ ಎಂದರೆ ಸಿಹಿಪ್ರಿಯರಿಗೆ ಬಹಳ ಅಚ್ಚುಮೆಚ್ಚು. ಆದರೆ ರಸಗುಲ್ಲಾದಿಂದ ಚಾಟ್ ಮಾಡಿದರೆ ರುಚಿ ಹೇಗಿರುತ್ತದೆ...? ಒಮ್ಮೆ ನೋಡೋಣ

ಬೇಕಾಗುವ ಸಾಮಗ್ರಿಗಳು

ರಸಗುಲ್ಲಾ - 1

ಮೊಸರು - 50 ಗ್ರಾಂ

ಸಕ್ಕರೆ - 20 ಗ್ರಾಂ

ಚಾಟ್ ಮಸಾಲ - 1 ಟೀ ಸ್ಪೂನ್

ಅಚ್ಚ ಖಾರದ ಪುಡಿ - 1/2 ಟೀ ಸ್ಪೂನ್

ಜೀರ್ಗೆ ಪುಡಿ​ - 1/2 ಟೀ ಸ್ಪೂನ್

ನೈಲಾನ್ ಸೇವ್ - 2 ಟೇಬಲ್ ಸ್ಪೂನ್

ದಾಳಿಂಬೆ - 1 ಟೇಬಲ್ ಸ್ಪೂನ್

ಪುದೀನಾ ಚಟ್ನಿ - 1 ಟೇಬಲ್ ಸ್ಪೂನ್

ಹುಣಿಸೆ ಚಟ್ನಿ - 2 ಟೇಬಲ್ ಸ್ಪೂನ್

ಕತ್ತರಿಸಿದ ಕೊತ್ತಂಬರಿ ಸೊಪ್ಪು - ಅಲಂಕರಿಸಲು

ತಯಾರಿಸುವ ವಿಧಾನ

ರಸಗುಲ್ಲಾವನ್ನು ಸ್ಕ್ವೀಜ್ ಮಾಡಿ ಅದರಲ್ಲಿರುವ ಪಾಕವನ್ನು ತೆಗೆಯಿರಿ

ಒಂದು ಬೌಲ್​​​​​ನಲ್ಲಿ ಮೊಸರು, ಸಕ್ಕರೆ, ಚಾಟ್ ಮಸಾಲ, ಜೀರ್ಗೆ ಪುಡಿ, ರೆಡ್ ಚಿಲ್ಲಿ ಪೌಡರ್ ಸೇರಿಸಿ ಮಿಕ್ಸ್ ಮಾಡಿ

ಮತ್ತೊಂದು ಬೌಲ್​​​​ನಲ್ಲಿ ರಸಗುಲ್ಲಾ ಇರಿಸಿ, ಅದರ ಮೇಲೆ ಮೊಸರು ಹರಡಿ, ನಂತರ ಪುದೀನಾ ಚಟ್ನಿ, ಹುಣಿಸೆ ಚಟ್ನಿ ಹರಡಿ

ಕೊನೆಗೆ ಸೇವ್, ದಾಳಿಂಬೆ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸರ್ವ್ ಮಾಡಿ

ಇಡ್ಲಿ ಪಿಜಾ

ಬೆಳಗಿನ ತಿಂಡಿಗೆ ಇಡ್ಲಿ ಮಾಡಿದರೆ ಅದು ಸಂಪೂರ್ಣ ಖಾಲಿಯಾಗುವುದಿಲ್ಲ. ಮಧ್ಯಾಹ್ನದ ವೇಳೆಗೆ ಯಾರಿಗೂ ಉಳಿದಿರುವ ಇಡ್ಲಿ ತಿನ್ನಲು ಮನಸ್ಸಾಗುವುದಿಲ್ಲ. ಆದರೆ ಅದೇ ಇಡ್ಲಿಯಿಂದ ಪಿಜಾ ಮಾಡಿದ್ರೆ ಹೇಗೆ..? ಬಾಯಲ್ಲಿ ನೀರೂರಿಸುವ ಇಡ್ಲಿ ಪಿಜಾ ರೆಸಿಪಿ ನಿಮಗಾಗಿ.

ಬೇಕಾಗುವ ಸಾಮಗ್ರಿಗಳು

ಇಡ್ಲಿ - 4

ಟೊಮ್ಯಾಟೋ - 10

ಈರುಳ್ಳಿ - 4

ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ - 1 ಟೀ ಸ್ಪೂನ್

ಬೆಲ್ ಪೆಪ್ಪರ್ - 1

ಕತ್ತರಿಸಿದ ತುಳಸಿ - 1 ಟೇಬಲ್ ಸ್ಪೂನ್

ಕಾರ್ನ್ - 50 ಗ್ರಾಂ

ಮೊಜರೊಲಾ ಚೀಸ್ - 100 ಗ್ರಾಂ

ಆಲಿವ್ ಆಯಿಲ್ - 2 ಟೇಬಲ್ ಸ್ಪೂನ್

ತಯಾರಿಸುವ ವಿಧಾನ

ಇಡ್ಲಿಯ ಉಬ್ಬಿದ ಭಾಗವನ್ನು ತೆಗೆದು ನೀಟಾಗಿ ರೌಂಡ್ ಶೇಪ್ ಬರುವಂತೆ ಕತ್ತರಿಸಿಕೊಳ್ಳಿ

ಟೊಮ್ಯಾಟೋವನ್ನು ಸ್ವಲ್ಪಹೊತ್ತು ಬಿಸಿ ನೀರಿನಲ್ಲಿ ಬೇಯಿಸಿಕೊಂಡು ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿ

ಪ್ಯಾನಿನಲ್ಲಿ ಆಲಿವ್ ಆಯಿಲ್ ಬಿಸಿ ಮಾಡಿ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೋ, ಸೇರಿಸಿ ಒಂದೆರಡು ನಿಮಿಷ ಹುರಿಯಿರಿ

ಇದಕ್ಕೆ ಸ್ವಲ್ಪ ಪ್ರಮಾಣದಲ್ಲಿ ನೀರು ಸೇರಿಸಿ ಸ್ವಲ್ಪ ಹೊತ್ತು ಕುಕ್ ಮಾಡಿ ನಂತರ ತುಳಸಿ, ಉಪ್ಪು ಹಾಗೂ ಮೆಣಸು ಸೇರಿಸಿ

ಬೆಲ್ ಪೆಪ್ಪರ್, ಈರುಳ್ಳಿ ಕತ್ತರಿಸಿ ಸ್ವಲ್ಪ ಎಣ್ಣೆಯಲ್ಲಿ ಒಂದೆರಡು ನಿಮಿಷ ಹುರಿಯಿರಿ

ಇಡ್ಲಿ ಮೇಲೆ ಟೊಮ್ಯಾಟೋ ಸಾಸ್ ಹರಡಿ, ನಂತರ ತರಕಾರಿ ಹರಡಿ ಮೇಲೆ ಮೊಜರೊಲಾ ಚೀಸ್ ಸೇರಿಸಿ

180 ಡಿಗ್ರಿ ಸೆಲ್ಸಿಯಸ್​​​​ನಲ್ಲಿ ಇಡ್ಲಿಯನ್ನು 5 ನಿಮಿಷ ಬೇಕ್ ಮಾಡಿದರೆ ಇಡ್ಲಿ ಪಿಜಾ ರೆಡಿ

ಸರ್ವ್ ಮಾಡುವ ಮುನ್ನ ಮೇಲೆ ಸ್ವಲ್ಪ ಆಲಿವ್ ಆಯಿಲ್ ಹಾಗೂ ಫ್ರೈ ಮಾಡಿದ ತುಳಸಿ ಎಲೆಗಳಿಂದ ಗಾರ್ನಿಶ್ ಮಾಡಿ

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ