logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಹಜ ಆರೋಗ್ಯವರ್ಧಕ ಕಚ್ಚಾ ಅರಶಿನ ಆಹಾರದಲ್ಲಿದ್ದರೆ 5 ಪ್ರಯೋಜನ, ಪ್ರಕೃತಿ ಮಾತೆಯ ಕೊಡುಗೆ ಈ ಸೂಪರ್ ಫುಡ್‌

ಸಹಜ ಆರೋಗ್ಯವರ್ಧಕ ಕಚ್ಚಾ ಅರಶಿನ ಆಹಾರದಲ್ಲಿದ್ದರೆ 5 ಪ್ರಯೋಜನ, ಪ್ರಕೃತಿ ಮಾತೆಯ ಕೊಡುಗೆ ಈ ಸೂಪರ್ ಫುಡ್‌

Umesh Kumar S HT Kannada

Jun 29, 2024 08:00 AM IST

google News

ಸಹಜ ಆರೋಗ್ಯವರ್ಧಕ ಹಸಿಅರಶಿನ ಆಹಾರದಲ್ಲಿದ್ದರೆ 5 ಪ್ರಯೋಜನ, ಪ್ರಕೃತಿ ಮಾತೆಯ ಕೊಡುಗೆ ಈ ಸೂಪರ್ ಫುಡ್‌

  • ಕಚ್ಚಾ ಅರಶಿನದ ಆರೋಗ್ಯ ಪ್ರಯೋಜನಗಳು (Health Benefits of Raw Turmeric): ಅರಶಿನ ಬಳಸದೇ ಇರುವ ಮನೆಯೇ ಇರಲಾರದು. ಅಡುಗೆ ಮನೆ ಅಂದ್ರೆ ಅಲ್ಲಿ ಅರಸಿನ ಇರಲೇಬೇಕು. ಪ್ರಕೃತಿ ಮಾತೆಯ ಕೊಡುಗೆ ಈ ಸೂಪರ್ ಫುಡ್‌. ಸಹಜ ಆರೋಗ್ಯವರ್ಧಕ ಕಚ್ಚಾ ಅರಶಿನ ಆಹಾರದಲ್ಲಿದ್ದರೆ 5 ಪ್ರಯೋಜನಗಳಿವೆ. (ಬರಹ- ಪ್ರಿಯಾಂಕಾ, ಬೆಂಗಳೂರು)

ಸಹಜ ಆರೋಗ್ಯವರ್ಧಕ ಹಸಿಅರಶಿನ ಆಹಾರದಲ್ಲಿದ್ದರೆ 5 ಪ್ರಯೋಜನ, ಪ್ರಕೃತಿ ಮಾತೆಯ ಕೊಡುಗೆ ಈ ಸೂಪರ್ ಫುಡ್‌
ಸಹಜ ಆರೋಗ್ಯವರ್ಧಕ ಹಸಿಅರಶಿನ ಆಹಾರದಲ್ಲಿದ್ದರೆ 5 ಪ್ರಯೋಜನ, ಪ್ರಕೃತಿ ಮಾತೆಯ ಕೊಡುಗೆ ಈ ಸೂಪರ್ ಫುಡ್‌

ಕಚ್ಚಾ ಅರಶಿನದ ಆರೋಗ್ಯ ಪ್ರಯೋಜನಗಳು (Health Benefits of Raw Turmeric): ಭಾರತೀಯರು ಮತ್ತು ಅರಶಿನಕ್ಕೆ ಎಲ್ಲಿಲ್ಲದ ನಂಟು. ಹಳದಿ ಬಣ್ಣದ ಈ ಅರಶಿನವನ್ನು ರುಚಿಕರವಾದ ಭಕ್ಷ್ಯಕ್ಕೆ ಸೇರಿಸಲಾಗುತ್ತದೆ. ಕೇವಲ ಖಾದ್ಯಗಳಿಗಷ್ಟೇ ಅಲ್ಲ, ಅರಿಶಿನವು ಪ್ರತಿ ಭಾರತೀಯ ಮನೆಯ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಆಯುರ್ವೇದದ ಅಚ್ಚುಮೆಚ್ಚಿನ ಈ ಅರಶಿನವು ಉತ್ಕರ್ಷಣ ನಿರೋಧಕ, ವೈರಾಣು ನಿರೋಧಕ, ಬ್ಯಾಕ್ಟೀರಿಯಾ ನಿರೋಧಕ, ಫಂಗಸ್ ನಿರೋಧಕ, ಕಾರ್ಸಿನೋಜೆನಿಕ್ ತಡೆಯಬಲ್ಲ ಮತ್ತು ಉರಿಯೂತದ ಗುಣಲಕ್ಷಣಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ.

ಮೊದಲೇ ತಿಳಿಸಿದಂತೆ ಅರಿಶಿನವು ಸಾಮಾನ್ಯವಾಗಿ ಅಡುಗೆ ಮನೆಗಳಲ್ಲಿ ಕಂಡುಬರುವ ಹಳದಿ ಮಸಾಲೆ. ಇದು ಕೇವಲ ಸುವಾಸನೆ ವರ್ಧಕವಲ್ಲ, ಅರಿಶಿನದಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಕಚ್ಚಾ ಅರಿಶಿನವು ಅದರ ವಿಭಿನ್ನ ಬಣ್ಣ ಮತ್ತು ಸುವಾಸನೆಗೆ ಹೆಸರುವಾಸಿಯಾಗಿದೆ. ನಮ್ಮಲ್ಲಿ ಬಹುತೇಕ ಮಂದಿ ಅದರ ಪುಡಿ ರೂಪದ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಇದನ್ನು ದೈನಂದಿನ ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರ ಕಚ್ಚಾ ರೂಪವು (ಹಸಿ ಅರಶಿನ) ಹಲವಾರು ಪ್ರಯೋಜನಗಳಿಂದ ಕೂಡಿದೆ ಎಂದು ಹಲವರು ತಿಳಿದಿಲ್ಲ.

ಹಸಿ ಅರಿಶಿನದ ನೈಸರ್ಗಿಕ ಶಕ್ತಿಯನ್ನು ಅಳವಡಿಸಿಕೊಂಡರೆ ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು. ಕಚ್ಚಾ ಅರಿಶಿನವನ್ನು ಸ್ಮೂಥಿ, ಚಹಾ ಅಥವಾ ಸಲಾಡ್‌ಗಳ ಜೊತೆ ಸೇರಿಸಿ ಸವಿಯಬಹುದು.

ಹಸಿ ಅರಿಶಿನವನ್ನು ಸೇವಿಸುವುದರಿಂದ ಸಿಗುತ್ತೆ ಈ 5 ಆರೋಗ್ಯ ಪ್ರಯೋಜನ

1) ಉರಿಯೂತವನ್ನು ಎದುರಿಸಲು ಸಹಕಾರಿ

ಅರಿಶಿನದಲ್ಲಿನ ಕರ್ಕ್ಯುಮಿನ್ ಅಸಾಧಾರಣ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ನಿಮ್ಮ ಆಹಾರದಲ್ಲಿ ಹಸಿ ಅರಿಶಿನವನ್ನು ಸೇರಿಸುವುದರಿಂದ ದೀರ್ಘಕಾಲದ ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳ ಮೂಲವಾಗಿದೆ.

2) ಪ್ರತಿರಕ್ಷಣಾ ವ್ಯವಸ್ಥೆಯ ಉತ್ತೇಜಕ

ಹಸಿ ಅರಿಶಿನ ಸಂಯುಕ್ತಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಸೋಂಕುಗಳು ಮತ್ತು ಅನಾರೋಗ್ಯವನ್ನು ನಿವಾರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರ ನಿಯಮಿತ ಸೇವನೆಯು ನಿಮ್ಮ ದೇಹದ ನೈಸರ್ಗಿಕ ರಕ್ಷಣೆಯನ್ನು ಬಲಪಡಿಸುತ್ತದೆ.

3) ಜೀರ್ಣ ಕ್ರಿಯೆಗೆ ಸಹಕಾರಿ

ಹಸಿ ಅರಿಶಿನವು ಜೀರ್ಣಕಾರಿ ಕಿಣ್ವಗಳು ಮತ್ತು ಪಿತ್ತರಸದ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯನ್ನು ದೂರ ಮಾಡುತ್ತದೆ. ಒಟ್ಟಾರೆ ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ.

4) ಉತ್ಕರ್ಷಣ ನಿರೋಧಕ ರಕ್ಷಾಕವಚ

ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಹಸಿ ಅರಿಶಿನವು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡದಿಂದ ನಿಮ್ಮ ಕೋಶಗಳನ್ನು ರಕ್ಷಿಸುತ್ತದೆ. ಈ ರಕ್ಷಣೆಯು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಮೊಗದಲ್ಲಿ ಸದಾ ಯೌವನ ಕಾಣಿಸುವಂತೆ ಮಾಡುತ್ತದೆ.

5) ನೋವು ನಿವಾರಕ

ಕಚ್ಚಾ ಅರಶಿನದಲ್ಲಿರುವ ಉರಿಯೂತದ ಶಕ್ತಿಯಿಂದಾಗಿ ವಿವಿಧ ರೀತಿಯ ನೋವಿನಿಂದ ಪರಿಹಾರವನ್ನು ನೀಡುತ್ತದೆ. ವಿಶೇಷವಾಗಿ ಸಂಧಿವಾತದಂತಹ ಪರಿಸ್ಥಿತಿಗಳಿಗೆ ಸಂಬಂಧಿಸಿದ ಜಂಟಿ ಅಸ್ವಸ್ಥತೆಯನ್ನು ನಿವಾರಿಸಲು ಇದು ಸಹಕಾರಿ.

ಸಾಮಾನ್ಯವಾಗಿ ಅಡುಗೆಯಲ್ಲಿ ಅರಶಿನ ಪುಡಿಯನ್ನು ಬಳಸುವುದೇ ಹೆಚ್ಚು. ಆದರೆ, ಹಸಿ ಅರಶಿನವನ್ನು ಬಳಸುವವರು ತೀರಾ ವಿರಳ. ನಿಮ್ಮ ದೈನಂದಿನ ಆಹಾರದಲ್ಲಿ ಈ ಕಚ್ಚಾ ಅರಶಿನವನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಕೂಡ ಸಹಕಾರಿಯಾಗಿದೆ.

(ಬರಹ- ಪ್ರಿಯಾಂಕಾ, ಬೆಂಗಳೂರು)

ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್‌ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ಲೈಫ್‌ಸ್ಟೈಲ್ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ