World Smile Day 2022: ವಿಶ್ವ ನಗು ದಿನದಂದು ನೀವು ಓದಲೇಬೇಕಾದ ಹತ್ತು ಜೋಕ್ಸ್‌ಗಳು
Oct 07, 2022 01:48 PM IST
World Smile Day 2022: ವಿಶ್ವ ನಗು ದಿನದಂದು ನೀವು ಓದಲೇಬೇಕಾದ ಹತ್ತು ಜೋಕ್ಸ್‌ಗಳು
- Kannada Jokes: ನಕ್ಕಾಗ ಮನಸ್ಸು ಉಲ್ಲಾಸಗೊಂಡು ನೋವು, ದುಃಖ ಮರೆಯುತ್ತದೆ. ನಗದೆ ಇರುವವರ ಜೀವನದಲ್ಲಿ ಒತ್ತಡ ಹೆಚ್ಚಿರುತ್ತದೆ ಎಂದು ಅಧ್ಯಯನಗಳೇ ಹೇಳಿವೆ ಅಂತೆ. ಇವತ್ತು ವಿಶ್ವ ನಗು ದಿನ ಆಗಿರುವ ಕಾರಣ ಒಂದಿಷ್ಟು ಜೋಕ್ಸ್‌ಗಳನ್ನು ನೆನಪಿಸಿಕೊಳ್ಳೋಣ.
Kannada Jokes: ಇಂದು ವಿಶ್ವ ನಗು ದಿನ. ನಗಬೇಕಾದರೆ ಏನಾದರೂ ಜೋಕ್ಸ್ ಹೇಳಲೇಬೇಕು. ಹಳೆ ಜೋಕ್ಸ್ ಅಥವಾ ಹೊಸ ಜೋಕ್ಸ್ ಕೇಳಿದಾಗ ನಗು ಬರಲೇಬೇಕು. ಕೆಲವು ಜೋಕ್ಸ್ ಎಷ್ಟು ಬಾರಿ ಕೇಳಿದರೂ ನಗು ಬಂದೇ ಬರುತ್ತದೆ. ನಗುವು ಆರೋಗ್ಯಕ್ಕೆ ಒಳ್ಳೆಯದು. ನೀವು ನಕ್ಕರೆ ನಿಮ್ಮ ಸುತ್ತಮುತ್ತಲಿನವರ ಮುಖದಲ್ಲಿಯೂ ನಗು ಮೂಡುತ್ತದೆ. ಒಂದು ಆರೋಗ್ಯಕರ ಸಮಾಜಕ್ಕೆ ನಗು ಅತ್ಯಂತ ಅವಶ್ಯಕ. ಸುಮ್ಮನೆ ನಕ್ಕರೆ ಹುಚ್ಚ ಅನ್ನಬಹುದು ಎಂದುಕೊಳ್ಳಬೇಡಿ. ನಿಮಗೆ ಖುಷಿಯಾದರೆ ನಕ್ಕುಬಿಡಿ.
ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಎಂದಿದ್ದಾರೆ ಮಂಕುತಿಮ್ಮ
ನಕ್ಕಾಗ ಮನಸ್ಸು ಉಲ್ಲಾಸಗೊಂಡು ನೋವು, ದುಃಖ ಮರೆಯುತ್ತದೆ. ನಗದೆ ಇರುವವರ ಜೀವನದಲ್ಲಿ ಒತ್ತಡ ಹೆಚ್ಚಿರುತ್ತದೆ ಎಂದು ಅಧ್ಯಯನಗಳೇ ಹೇಳಿವೆ ಅಂತೆ. ಇವತ್ತು ವಿಶ್ವ ನಗು ದಿನ ಆಗಿರುವ ಕಾರಣ ಒಂದಿಷ್ಟು ಜೋಕ್ಸ್‌ಗಳನ್ನು ನೆನಪಿಸಿಕೊಳ್ಳೋಣ.
೧. ಕಪ್ಪೆ ಮತ್ತು ಹಾವು
ಕಪ್ಪೆ: ನೀನು ಮೋಸಗಾರ
ಹಾವು: ಸುಳ್ಳು ಹೇಳಬೇಡ
ಕಪ್ಪೆ: ನೀನೇ ಮೋಸಗಾರ ಎಂದು ಹೇಳಿ ಬಾವಿಗೆ ಹಾರಿತು..
ಹಾವು: ದೇವರೇ., ಇಷ್ಟಕ್ಕೆಲ್ಲ ಯಾರದರೂ ಆತ್ಮಹತ್ಯೆ ಮಾಡ್ಕೊತಾರಾ?
೨. ಚಕ್ಕುಲಿ
ಗುರು: ಭೂಮಿ ಯಾವ ಆಕಾರದಲ್ಲಿದೆ?
ಶಿಷ್ಯ: ಚಕ್ಕುಲಿಯಾಕಾರದಲ್ಲಿದೆ ಸಾರ್...
ಗುರು: ಇನ್ನೊಮ್ಮೆ ಒತ್ತಿ ಹೇಳು?
ಶಿಷ್ಯ: ಒತ್ತಿದರೆ ಚಕ್ಕುಲಿ ಹುಡಿಯಾಗಬಹುದು..
೩. ಗಿರಾಕಿ ಮತ್ತು ವ್ಯಾಪಾರಿ
ಗಿರಾಕಿ: ಒಂದು ಕೆ.ಜಿ ಚಿಪ್‌ಗೆ ಎಷ್ಟು ರೂಪಾಯಿ
ವ್ಯಾಪಾರಿ: 80 ರೂಪಾಯಿ
ಗಿರಾಕಿ: ಲೂಸ್ ತಗೊಂಡರೆ.
ವ್ಯಾಪಾರಿ: ಯಾರ್ ತಗೊಂಡ್ರು ಅಷ್ಟೆ.
೪. ಅಪ್ಪ ಮತ್ತು ಮಗ
ಮಗು: ಅಪ್ಪ ಇಲ್ಲಿ ಬಾ
ಅಮ್ಮ: ಈ ತರ ಮರ್ಯಾದೆ ಕೊಡದೆ ಅಪ್ಪನನ್ನು ಕರಕೆಯಬಾರದು ಮಗನೇ, ಅಪ್ಪನನ್ನು ಮರ್ಯಾದೆಯಿಂದ ಕರೀಬೇಕು.
ಮಗು : ಅಪ್ಪ ಮರ್ಯಾದೆ ಇಂದ ಇಲ್ಲಿ ಬಾ
೫. ಚಾಲಕನ ವೇತನ
ಬಾಸ್: ನನಗೆ ಒಬ್ಬ ಡ್ರೈವರ್ ಬೇಕು ಸ್ಟಾರ್ಟಿಂಗ್ ಎರಡು ಸಾವಿರ ರೂ. ಕೊಡ್ತೀನಿ
ಗುಂಡ: ಏನ್ ಗ್ರೇಟ್ ಸರ್ ನೀವು ಕಾರ್ ಸ್ಟಾರ್ಟಿಂಗ್ ಮಾಡಲು ಎರಡು ಸಾವಿರ ಕೊಟ್ರೆ, ದಿನ ಪೂರ್ತಿ ಕಾರು ಓಡಿಸಲು ಎಷ್ಟು ಕೊಡುವಿರಿ?
೬. ಗಂಡಂದಿರು
ಪಕ್ಕದ ಮನೆ ವ್ಯಕ್ತಿ: ಏನಮ್ಮಾ ನಿನ್ನ ಗಂಡ ಚೆನ್ನಾಗಿದ್ದಾನಾ ?
ಆಕೆ : ಏನ್ ಸ್ವಾಮಿ, ನನ್ನ ಗಂಡನನ್ನು ಏಕವಚನದಲ್ಲಿ ಹೇಳ್ತಾ ಇದ್ದೀರಾ?
ಪಕ್ಕದ ಮನೆ ವ್ಯಕ್ತಿ: (ಯೋಚಿಸಿ) ಕ್ಷಮಿಸು ತಾಯಿ ಗೊತ್ತಾಗಲಿಲ್ಲ, ನಿನ್ನ ಗಂಡಂದಿರೆಲ್ಲಾ ಚೆನ್ನಾಗಿದ್ದಾರಾ?
೭. ಮಕ್ಕಳು
ಭೀಮ: ನಿಂಗೆ ಎಷ್ಟು ಮಕ್ಕಳು
ಸೋಮ: ಹನ್ನೆರಡು, ಹೆಂಡ್ತಿ ಗರ್ಭಿಣಿ
ಭೀಮ: ಅಷ್ಟೊಂದು ಮಕ್ಕಳಾ?
ಸೋಮ: ಹೆಂಡ್ತಿನ ಖಾಲಿ ಹೊಟ್ಟೆಲಿ ಇರಲು ಬಿಡೋಲ್ಲ ಎಂದು ಮಾವನಿಗೆ ಮಾತುಕೊಟ್ಟಿದ್ದೇನೆ..
೮. ಗಂಡ ಹೆಂಡತಿ ಜಗಳ
ಹೆಂಡತಿ: ನಿಮ್ಮನ್ನು ಮದುವೆಯಾಗೋ ಬದಲು ನಾನು ಒಬ್ಬ ರಾಕ್ಷಸನ ಮದುವೆ ಆಗಬೇಕಿತ್ತು.
ಗಂಡ: ಹಾಗೆಲ್ಲ ರಕ್ತ ಸಂಬಂಧದಲ್ಲಿ ಮದುವೆ ಆಗಬಾರದು ಕಣೇ.
೯. ಕುದುರೆ ಮತ್ತು ಆನೆ
ಅಧ್ಯಾಪಕ: ಕುದುರೆ ಹಾಗೂ ಆನೆಗಳ ವ್ಯತ್ಯಾಸವೇನು?
ಪುಟ್ಟು- ಕುದುರೆಗಳಿಗೆ ಹಿಂದುಗಡೆ ಮಾತ್ರ ಬಾಲವಿರುತ್ತೆ, ಆದರೆ ಆನೆಗಳಿಗೆ ಎರಡು ಕಡೆ ಬಾಲವಿರುತ್ತೆ...
೧೦. ಮಾತೃಭಾಷೆ
ಗುಂಡ: ಅಪ್ಪಾ, ಅಪ್ಪಾ.. ಈ ಅರ್ಜಿಯಲ್ಲಿ 'ಮದರ್ ಟಂಗ್' ಇರುವಲ್ಲಿ ಏನೆಂದು ಬರೆಯಲಿ?
ಅಪ್ಪ: ತುಂಬ ಉದ್ದದ ನಾಲಗೆ ಎಂದು ಬರೆ