Personality Test: ಈ ಚಿತ್ರದಲ್ಲಿ ನಿಮಗೇನು ಕಾಣುತ್ತಿದೆ? ತುಟಿ ಅಥವಾ ಮೋಡ? ನಿಮ್ಮ ಉತ್ತರದಲ್ಲೇ ಅಡಗಿದೆ ವ್ಯಕ್ತಿತ್ವ
Sep 06, 2024 01:44 PM IST
ಆಪ್ಟಿಕಲ್ ಇಮೇಜ್
- Personality test: ಆಪ್ಟಿಕಲ್ ಚಿತ್ರಗಳು ದೃಶ್ಯ ಗ್ರಹಿಕೆಯ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ. ಬಣ್ಣ, ಆಕಾರ ಮತ್ತು ಗಾತ್ರ ಇವುಗಳೆಲ್ಲವೂ ನಮಗೆ ಗೊಂದಲ ಉಂಟು ಮಾಡುತ್ತದೆ. ಆ ರೀತಿಯ ಹಲವಾರು ಚಿತ್ರಗಳು ನಮಗೆ ದೊರೆಯುತ್ತದೆ.
ಆಪ್ಟಿಕಲ್ ಇಲ್ಯೂಷನ್ ವ್ಯಕ್ತಿತ್ವ ಪರೀಕ್ಷೆಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಇವು ವಿಶೇಷ ಚಿತ್ರಗಳಾಗಿರುತ್ತವೆ. ಇದರಲ್ಲಿ ಚಿತ್ರದ ವಿವಿಧ ಅಂಶಗಳನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ನೀವು ಮೊದಲು ಗಮನಿಸುವುದು ನಿಮ್ಮ ವ್ಯಕ್ತಿತ್ವದ ಭಾಗವನ್ನು ಪ್ರತಿಬಿಂಬಿಸುತ್ತದೆ. ಮಿಯಾ ಯಿಲಿನ್ ಸಾಮಾಜಿಕ ಜಾಲತಾಣದಲ್ಲಿ ಮೊದಲಿಗೆ ಈ ಚಿತ್ರವು ತುಂಬಾ ವೈರಲ್ ಆಗಿದ್ದು ಇದು ಯಾವ ರೀತಿ ಕಾಣುತ್ತದೆ ಎಂದು ಹಲವಾರು ಜನರು ಕಮೆಂಟ್ ಮೂಲಕ ತಿಳಿಸಿದ್ದಾರೆ. ಆ ಮೂಲಕ ತಮ್ಮ ವ್ಯಕ್ತಿತ್ವ ಹೇಗಿರಬಹುದು ಎಂದು ಅಂದಾಜಿಸಿಕೊಂಡಿದ್ದಾರೆ.
ಆ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನಾವು ಇಲ್ಲಿ ಹಂಚಿಕೊಳ್ಳುತ್ತೇವೆ. ಕೆಲವರಿಗೆ ಚಿತ್ರವು ಸೂರ್ಯಾಸ್ತದ್ದು ಎಂದೆನಿಸಿದರೆ ಇನ್ನು ಕೆಲವು ವ್ಯಕ್ತಿಗಳು ಅದರಲ್ಲಿನ ಕೆಂಪು ತುಟಿಗಳು ಅಥವಾ ಮೋಡಗಳನ್ನು ಮೊದಲು ಗಮನಿಸಬಹುದು. ಇನ್ನು ನೀವು ಮೊದಲು ಗುರುತಿಸುವದನ್ನು ಅವಲಂಬಿಸಿ ಚಿತ್ರವು ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಂದರೆ ನೀವು ಆಶಾವಾಧಿಯೋ ಅಥವಾ ದಯೆ ಇರುವವರೋ ಅಥವಾ ಕಠೋರವಾದ ಮನೋಭಾವನೆ ಹೊಂದಿದ್ದೀರೋ? ಎಂಬುದನ್ನು ಈ ಮೂಲಕ ಅರ್ಥ ಮಾಡಿಕೊಳ್ಳಬಹುದು.
ತುಟಿ ಕಾಣಿಸಿತೇ?
ಈ ಪರೀಕ್ಷೆಯನ್ನು ತೆಗೆದುಕೊಳ್ಳಲು,ಚಿತ್ರವನ್ನು ಹತ್ತಿರದಿಂದ ನೋಡಿ ಮತ್ತು ಅದರಲ್ಲಿ ನೀವು ಮೊದಲ ನೋಟದಲ್ಲಿ ಏನು ಕಂಡಿದ್ದೀರಿ ಎಂಬುದನ್ನು ಮನಸಿನಲ್ಲಿ ನಿಖರವಾಗಿ ಇಟ್ಟುಕೊಳ್ಳಿ. ನೀವು ಮೊದಲು ಚಿತ್ರದಲ್ಲಿ ಕೆಂಪು ತುಟಿಗಳನ್ನು ಗುರುತಿಸಿದರೆ, ಇದರರ್ಥ ನೀವು ಸ್ವಭಾವತಃ ಸಂತೋಷದಾಯಕ ಮತ್ತು ಇತರರ ಒಳ್ಳೆಯತನವನ್ನು ನಂಬುತ್ತೀರಿ. ಜೀವನದಲ್ಲಿ ಸವಾಲುಗಳ ಹೊರತಾಗಿಯೂ ನೀವು ಜೀವನದಲ್ಲಿ ಆಶಾವಾದಿಯಾಗಿದ್ದೀರಿ. ನೀವು ಹೃದಯದಿಂದ ಕರುಣಾಮಯಿ. ಅಗತ್ಯವಿರುವ ಇತರರಿಗೆ ಸಹಾಯ ಮಾಡುತ್ತೀರಿ ಎಂದು ಅರ್ಥ.
ನೀವು ಹೆಚ್ಚು ಸಂವೇದನಾಶೀಲರಾಗಿರುತ್ತೀರಿ ಎಂದರ್ಥ, ವಿಶೇಷವಾಗಿ ನಿಮ್ಮ ಪ್ರೀತಿಪಾತ್ರರ ಜೊತೆಗೆ ನೀವು ಜಗಳ ಮಾಡುತ್ತಿದ್ದರೂ ನಿಮ್ಮ ಮನಸ್ಸು ಮಾತ್ರ ಅವರನ್ನು ಪ್ರೀತಿಸುತ್ತಲೇ ಇರುತ್ತದೆ.
ಮೋಡ ಕಾಣಿಸಿತಾ?
2. ನೀವು ಮೊದಲು ಆಕಾಶದಲ್ಲಿ ಮೋಡಗಳನ್ನು ನೋಡಿದ್ದರೆ, ಇದರರ್ಥ ನೀವು ಎಲ್ಲರನ್ನೂ ಸುಲಭವಾಗಿ ನಂಬುವುದಿಲ್ಲ. ಯಾರು ಯಾವ ರೀತಿ ಎಂದು ಒಂದೆರಡು ಬಾರಿ ಪರಿಶೀಲನೆ ಮಾಡಿ ಆ ನಂತರದಲ್ಲಿ ಅವರನ್ನು ನೀವು ನಂಬುತ್ತೀರಿ. ಆದರೆ ನೀವು ನಂಬಿದವರು ಅಥವಾ ನಿಮ್ಮನ್ನು ನಂಬಿದವರಿಗೆ ಮಾತ್ರ ನೀವು ತುಂಬಾ ಉದಾರತೆಯನ್ನು ತೋರುತ್ತೀರಿ. ನಿಮ್ಮಲ್ಲಿ ಸಾಕಷ್ಟು ಕೌಶಲ್ಯ ಇದೆ ಎಂದು ಅರ್ಥ. ಯಾರಾದರೂ ನಿಮ್ಮನ್ನು ಮಾತನಾಡಿಸಲು ಪ್ರಯತ್ನಿಸಿದರೆ ನೀವು ಅವರೊಂದಿಗೆ ಸ್ನೇಹಿತರಂತೆ ಇದ್ದರೂ ಕೆಲವು ಅನುಮಾನಗಳನ್ನು ಹೊಂದಿರುತ್ತೀರಿ ಎಂದು ಅರ್ಥ. ಬೇರೆಯವರ ಗುರಿ ಮತ್ತು ಉದ್ದೇಶವನ್ನು ತಿಳಿದುಕೊಳ್ಳದ ಹೊರತಾಗಿ ನೀವು ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ.
ಇದನ್ನು ಆಪ್ಟಿಕಲ್ ಇಲ್ಯೂಶನ್ ಎಂದು ಕರೆಯಲಾಗುತ್ತದೆ. ಚಿತ್ರದ ಗ್ರಹಿಕೆಯು ವಾಸ್ತವದಿಂದ ಭಿನ್ನವಾಗಿರುತ್ತದೆ. ವ್ಯತ್ಯಾಸವು ಸಂಭವಿಸುತ್ತದೆ ಏಕೆಂದರೆ ನಮ್ಮ ಮಿದುಳುಗಳು ದೃಷ್ಟಿಗೋಚರ ಮಾಹಿತಿಯನ್ನು ತಪ್ಪುದಾರಿಗೆಳೆಯುವ ಅಥವಾ ಅಪೂರ್ಣವಾದ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತವೆ. ಈ ರೀತಿ ಅಪೂರ್ಣವಾಗಿ ಅರ್ಥವಾದಾಗ ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಆಪ್ಟಿಕಲ್ ಚಿತ್ರಗಳು ದೃಶ್ಯ ಗ್ರಹಿಕೆಯ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ. ಬಣ್ಣ, ಆಕಾರ ಮತ್ತು ಗಾತ್ರ ಇವುಗಳೆಲ್ಲವೂ ನಮಗೆ ಗೊಂದಲ ಉಂಟು ಮಾಡುತ್ತದೆ. ಆ ರೀತಿಯ ಹಲವಾರು ಚಿತ್ರಗಳು ನಮಗೆ ದೊರೆಯುತ್ತದೆ.
ಈ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್ ನಲ್ಲಿ ನಿಮ್ಮ ಜೀವನದಲ್ಲಿ ಅನಗತ್ಯವಾದ ಒತ್ತಡವನ್ನು ದೂರವಿಡುತ್ತದೆ.
ವಿಭಾಗ