Relationship: ಸಂಬಂಧದಲ್ಲಿ ಮನಸ್ತಾಪ ಮೂಡಲೇಬಾರದು ಅಂದ್ರೆ ಸಂಗಾತಿಯ ಮುಂದೆ ಈ 12 ವಿಚಾರಗಳನ್ನು ಎಂದಿಗೂ ಹೇಳ್ಬೇಡಿ
Nov 09, 2023 09:00 PM IST
ಸಂಬಂಧದಲ್ಲಿ ಮನಸ್ತಾಪ ಮೂಡಲೇಬಾರದು ಅಂದ್ರೆ ಸಂಗಾತಿಯ ಮುಂದೆ ಈ 12 ವಿಚಾರಗಳನ್ನು ಎಂದಿಗೂ ಹೇಳ್ಬೇಡಿ
- ಪ್ರೇಮ ಸಂಬಂಧದಲ್ಲಿ ಎಂದಿಗೂ ವಿರಸ ಮೂಡಲೇಬಾರದು ಎಂದರೆ ನೀವು ನಿಮ್ಮ ಸಂಗಾತಿಗೆ ಈ 12 ವಿಚಾರಗಳನ್ನು ಎಂದಿಗೂ ಹೇಳಬಾರದು ಎನ್ನುತ್ತಾರೆ ರಿಲೇಷನ್‌ಶಿಪ್ ಎಕ್ಸ್‌ಫರ್ಟ್‌ಗಳು. ಹಾಗಾದರೆ ಈ 12 ವಿಚಾರಗಳು ಯಾವುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಜೀವನದಲ್ಲಿ ಸರಸದಷ್ಟೇ ವಿರಸವೂ ಸಹಜ. ಕೆಲವೊಮ್ಮೆ ನಾವಾಡುವ ಮಾತುಗಳೇ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಕೋಪದ ಕೈಗೆ ಬುದ್ಧಿ ಕೊಟ್ಟಾಗ ಬಾಯಲ್ಲಿ ಬರುವ ಮಾತುಗಳಿಗೂ ಮಿತಿ ಇರುವುದಿಲ್ಲ. ನಿಮ್ಮ ಪ್ರೇಮ ಸಂಬಂಧದಲ್ಲಿ ಎಂದಿಗೂ ವಿರಸ ಮೂಡಲೇಬಾರದು ಎಂದರೆ ನೀವು ನಿಮ್ಮ ಸಂಗಾತಿಗೆ ಈ 12 ವಿಚಾರಗಳನ್ನು ಎಂದಿಗೂ ಹೇಳಬಾರದು ಎನ್ನುತ್ತಾರೆ ರಿಲೇಷನ್‌ಶಿಪ್ ಎಕ್ಸ್‌ಫರ್ಟ್‌ಗಳು. ಹಾಗಾದರೆ ಈ 12 ವಿಚಾರಗಳು ಯಾವುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
1. ನೀನು ನಿಜಕ್ಕೂ ನನ್ನ ಇಷ್ಟಪಟ್ಟಿದ್ದೇ ಆದ್ರೆ ಈ ಕೆಲಸ ಮಾಡು
ಇದನ್ನೇ ಎಮೋಷನಲ್ ಬ್ಲ್ಯಾಕ್‌ಮೇಲ್ ಎನ್ನುವುದು. ಈ ರೀತಿ ಬ್ಲ್ಯಾಕ್‌ಮೇಲ್ ಮಾಡುವುದು ಉದ್ದೇಶಪೂರ್ವಕವಾಗಿಲ್ಲದೇ ಇರಬಹುದು. ಆದರೆ ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಸಂಗಾತಿಯ ಒತ್ತಡ ಹೇರಲು ನೀವು ಪ್ರಯತ್ನಿಸುತ್ತೀರಿ, ಅಲ್ಲದೆ ಅವರಿಗೆ ಇಷ್ಟವಿಲ್ಲದ್ದನ್ನು ಮಾಡಲು ಹೇಳಬಹುದು. ಇದರಿಂದ ಅವರು ಆ ಕ್ಷಣಕ್ಕೆ ನೀವು ಹೇಳಿದ ಕೆಲಸ ಮಾಡಬಹುದು, ಆದರೆ ಇದರಿಂದ ಸಂಬಂಧದಲ್ಲಿ ಅಸಮತೋಲನ ಉಂಟಾಗಬಹುದು. ಕೆಲವೊಮ್ಮೆ ಕೋಪ, ಹತಾಶೆಗೂ ಕಾರಣವಾಗಬಹುದು.
ಹೀಗೆ ಹೇಳಿ: ನನ್ನ ಮೇಲೆ ಪ್ರೀತಿ ಇದ್ದರೆ ಮಾಡಿ ಎನ್ನುವ ಬದಲು, ನೀವು ಯಾವ ಕಾರಣಕ್ಕೆ ಈ ಕೆಲಸ ಮಾಡಲು ಇಷ್ಟವುದಿಲ್ಲ, ಈ ಕೆಲಸ ಮಾಡಲು ಬಯಸದೇ ಇರುವುದಕ್ಕೆ ಕಾರಣವೇನು ಎಂದು ಕೇಳಿ.
2. ನಿಮ್ಮಿಂದಲೇ ನನ್ನ ಜೀವನ ಪೂರ್ಣ ಆಯ್ತು
ಈ ರೀತಿ ಹೇಳುವುದು ನಿಮ್ಮನ್ನು ನೀವು ಅವಹೇಳನ ಮಾಡಿಕೊಂಡಂತೆ. ಇದು ನಿಮ್ಮಲ್ಲಿನ ಆತ್ಮವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ. ಇದರ ಅರ್ಥ ನೀವು ನಿಮ್ಮ ಸಂಗಾತಿಯನ್ನು ಭೇಟಿ ಮಾಡುವ ಮೊದಲು ಪರಿಪೂರ್ಣವಾಗಿರಿಲ್ಲವೇ ಎಂಬುದನ್ನು ಪ್ರಶ್ನಿಸುವಂತಾಗಬಹುದು. ಈ ರೀತಿ ಹೇಳುವುದರಿಂದ ಅವರಿಗೆ ಅಹಂ ಹುಟ್ಟಬಹುದು, ನನ್ನಿಂದಲೇ ಇವರ ಜೀವನ ನಡೆಯುವುದು ಎಂಬ ಮನೋಭಾವ ಬಂದು ಬಿಟ್ಟರೆ ಖಂಡಿತ ಸಂಬಂಧ ಕೆಡುತ್ತದೆ. ಸಂಬಂಧದಲ್ಲಿ ಇಬ್ಬರೂ ಸಮನಾಗಿರಬೇಕು.
3. ಆಗ ನಾವು ಹೇಗೆ ಇದ್ವಿ, ಈಗೆಲ್ಲಾ ಬದಲಾಗಿದೆ
ಹಲವರ ಜೀವನದಲ್ಲಿ ಈ ಮಾತು ಬಂದೇ ಬರುತ್ತದೆ. ಹಿಂದೆ ಇದ್ದ ಕ್ಷಣಗಳನ್ನು ನೆನಪಿಸಿಕೊಂಡು ಕೊರಗುವುದು ಸಹಜ. ಅಲ್ಲದೇ ಪ್ರೀತಿಸಿದ ಅಥವಾ ಮದುವೆಯಾದ ಆರಂಭದ ದಿನಗಳಲ್ಲಿ ಎಷ್ಟು ಪ್ರೀತಿ ಇತ್ತು, ಈಗ ಹಾಗಿಲ್ಲ ಅಂತೆಲ್ಲಾ ಮಾತು ಬರುವುದು ಸಾಮಾನ್ಯ. ಆದರೆ ಈ ಮಾತು ಬರಬಾರದು ಎನ್ನುತ್ತಾರೆ ರಿಲೇಷನ್‌ಶಿಪ್ ತಜ್ಞರು. ಹಿಂದೆ ಇರುವಂತೆ ಈಗಲೂ ಇರಬೇಕು ಎಂದು ಬಯಸುವುದು ತಪ್ಪು, ಹಿಂದಿನ ಘಟನೆಗಳನ್ನು ಮರುಸೃಷ್ಟಿಸಲು ಸಾಧ್ಯವಿಲ್ಲ. ಈ ರೀತಿಯ ಮಾತು ಪದೇ ಪದೇ ಸಂಗಾತಿಗಳ ನಡುವೆ ನುಸುಳಿದರೆ ಸಂಬಂಧ ಕೆಡುವುದು ಖಂಡಿತ.
4. ಸ್ನೇಹಿತರ ಜೊತೆ ಸುತ್ತಾಡಿದ್ರೆ ನೀನು ತಪ್ಪು ತಿಳಿತೀಯಾ
ಗಂಡು ಅಥವಾ ಹೆಣ್ಣು ಒಮ್ಮೆ ಕಮಿಟ್ ಆದ್ರೂ ಅಂದ್ರೆ ಅವರು ತಮ್ಮೆಲ್ಲಾ ಸಂಬಂಧಗಳನ್ನು ಬಿಟ್ಟ ಬಿಡಬೇಕು ಎಂದರ್ಥವಲ್ಲ. ಸ್ನೇಹಿತರ ಜೊತೆ ಮುಂಚಿನಂತೆ ತಿರುಗಾಡಿದರೆ ಅದರಲ್ಲಿ ತಪ್ಪಿಲ್ಲ. ಸ್ನೇಹಿತರನ್ನು ಭೇಟಿ ಮಾಡುವುದು ತಪ್ಪಲ್ಲ, ನೀವೇ ನಿಮ್ಮ ಸಂಗಾತಿಯ ಬಳಿ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ ಅವರ ಮನಸ್ಸಿನಲ್ಲಿ ಅನುಮಾನ ಹುಟ್ಟುವಂತೆ ಮಾಡಬಾರದು. ನೀವು ಪ್ರೇಮಿಗಿಂತ ಹೆಚ್ಚು ಸ್ನೇಹಿತ ಜೊತೆಗೆ ಇರುತ್ತೀರಿ ಎಂದರೆ ನಿಮ್ಮ ಸ್ವಭಾವ ಕೊಂಚ ಬದಲಿಸಿಕೊಳ್ಳಿ. ಹಾಗಂತ ನೀವು ಸಂಪೂರ್ಣ ಬದಲಾಗಬೇಕಿಲ್ಲ. ಈ ವಿಚಾರದಲ್ಲಿ ಮುಕ್ತ ಸಂಭಾಷಣೆ ಬಹಳ ಮುಖ್ಯ.
5. ನೀನು ತುಂಬಾ ಬೋರಿಂಗ್
ನೀನು ತುಂಬಾ ಬೋರಿಂಗ್ ಎನ್ನುವುದು ನಿಮಗೆ ಕೇವಲ ಒಂದು ಮಾತಷ್ಟೇ ಆಗಿರಬಹುದು. ಆದರೆ ಅದನ್ನು ಕೇಳಿಸಿಕೊಂಡ ಸಂಗಾತಿಗೆ ಎದೆಗೆ ಚಾಕು ಚುಚ್ಚಿದಷ್ಟ ಬೇಸರವಾಗುವುದು ಖಂಡಿತ. ನೀವು ತಮಾಷೆಯಾಗಿ ಹೇಳಿದ್ದರೂ ಕೂಡ ಅವರು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬಹುದು. ಸಂಬಂಧದಲ್ಲಿ ಇಂತಹ ನಕಾರಾತ್ಮಕ ಟೀಕೆಗಳು ಆತ್ಮವಿಶ್ವಾಸ ಕುಗ್ಗುವಂತೆ ಮಾಡುವುದು ಸುಳ್ಳಲ್ಲ.
6. ನೀನು ನನ್ನ ಮಾತನ್ನೇ ಕೇಳುವುದಿಲ್ಲ
ಕೆಲವೊಮ್ಮೆ ಸಂಗಾತಿಯ ನಿಮ್ಮ ಹೇಳಿದಂತೆ ಕೇಳುವುದಿಲ್ಲ ಎಂದು ನಿಮಗೆ ಅನ್ನಿಸಬಹುದು. ಅದಕ್ಕಾಗಿ ನೀವು ಸಿಟ್ಟಾಗಬಹುದು, ಅಲ್ಲದೇ ನೀನು ನಾನು ಹೇಳಿದಂತೆ ಕೇಳುತ್ತಿಲ್ಲ ಎಂದು ದೂರಬಹುದು. ಆದರೆ ಈ ಮಾತು ಸಂಗಾತಿಗೆ ನೀವು ಅವರ ಮೇಲೆ ಅಧಿಕಾರ ಚಲಾಯಿಸುತ್ತಿದ್ದೀರಿ ಎನ್ನಿಸಬಹುದು, ನೀವು ಹೇಳಿದಂತೆ ಕೇಳಿಕೊಂಡು ಇರುವುದು ಅವರಲ್ಲಿ ಕೀಳರಿಮೆಗೂ ಕಾರಣವಾಗಬಹುದು.
7. ನೀನು ತುಂಬಾ ಸ್ವಾರ್ಥಿ
ತಮಾಷೆಯಾಗಿ ಕೂಡ ಪದೇ ಪದೇ ನೀನು ಸ್ವಾರ್ಥಿ ಎನ್ನುತ್ತಿದ್ದರೆ ಮನಸ್ಸಿಗೆ ಸಾಕಷ್ಟು ಘಾಸಿಯಾಗುತ್ತದೆ. ನೀವು ಮಾತಿನ ಭರದಲ್ಲಿ ಹೇಳಿದ್ದರೂ ಕೂಡ ಇದು ನಿಮ್ಮ ಸಂಗಾತಿಯ ಮನಸ್ಸಿಗೆ ಸಾಕಷ್ಟು ಬೇಸರ ಮೂಡಿಸಬಹುದು. ಈ ರೀತಿ ಎಂದಿಗೂ ಹೇಳದಿರಿ.
8. ನೀನು ತುಂಬಾ ಬದಲಾಗಿದೀಯಾ
ಈ ರೀತಿ ಹೇಳುವುದರಿಂದ ನಿಮ್ಮ ಸಂಗಾತಿ ನಿಮ್ಮಿಷ್ಟದಂತೆ ಇರುತ್ತಾರೆ, ಇದರಿಂದ ಸಂಬಂಧ ಬದಲಾಗುತ್ತದೆ ಎಂದುಕೊಂಡರೆ ಖಂಡಿತ ಅದು ನಿಮ್ಮ ತಪ್ಪು. ಬದಲಾವಣೆ ಜಗದ ನಿಯಮ, ಎಲ್ಲರೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಾರೆ, ನೀವು ಬದಲಾಗಿರುತ್ತೀರಿ, ಆದರೆ ನೀವು ಸಂಗಾತಿಯಲ್ಲಾದ ಬದಲಾವಣೆಯನ್ನಷ್ಟೇ ಗುರುತಿಸಿ ಹೇಳುತ್ತಿರುವುದು ಸರಿಯಲ್ಲ.
9. ನಂಗೆ ನೀನು ಯಾವತ್ತು ಬೇಕು ಅನ್ನಿಸೊಲ್ಲ
ನಾನು ಮನುಷ್ಯರು, ಹಾಗಿದ್ದ ಮೇಲೆ ಭಾವನೆಗಳು ಬದಲಾಗುವುದು ಸಹಜ. ಆದರೆ ನಾವು ಪ್ರೀತಿಸುವ ವ್ಯಕ್ತಿಯ ಮುಂದೆ ಪದೇ ಪದೇ ನಂಗೆ ನೀನು ಬೇಡ, ನಂಗೆ ನಿನ್ನ ಜೊತೆ ಬದುಕೋದು ಇಷ್ಟ ಇಲ್ಲ, ನಂಗೆ ಇನ್ ಮುಂದೆ ನಿನ್ ಅಗತ್ಯ ಇಲ್ಲ ಈ ರೀತಿ ಹೇಳುತ್ತಿರುವುದರಿಂದ ಸಂಗಾತಿ ನಮ್ಮ ಮೇಲೆ ಅಸಹನೆ ಮೂಡಬಹುದು. ಕೆಲವೊಮ್ಮೆ ಅವರಲ್ಲಿ ಆತ್ಮವಿಶ್ವಾಸವೂ ಕುಗ್ಗಬಹುದು.
10. ಅವರಿಗಿಂತ ನನ್ನ ಹೆಚ್ಚು ಪ್ರೀತಿಸ್ತೀಯಾ? ಉತ್ತರ ಕೊಡು
ಇದು ನಿಜಕ್ಕೂ ಅಸಂಬದ್ಧ ಪ್ರಶ್ನೆ. ಈ ರೀತಿಯ ಪ್ರಶ್ನೆ ಕೇಳುವುದು ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಇಲ್ಲ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಪ್ರೀತಿಯನ್ನು ನೀವೇ ಯಾರೊಂದಿಗೋ ಹೋಲಿಸಿಕೊಂಡು ಮಾತನಾಡುವುದು ಸರಿಯಲ್ಲ, ಇದರಿಂದ ನಿಮ್ಮ ಸಂಗಾತಿ ಮನಸ್ಸಿಗೂ ಬೇಸರವಾಗುತ್ತದೆ. ಅವರಲ್ಲಿ ತಮ್ಮ ಪ್ರೀತಿಯ ಬಗ್ಗೆ ಅನುಮಾನ ಕಾಡಬಹುದು.
11. ನನ್ನಿಂದ ದೂರಾಗಬೇಡ, ನೀನದ್ದರಷ್ಟೇ ನನ್ನ ಬದುಕು
ಇದು ಬದುಕಿನಲ್ಲಿ ನೀವು ಅಸುರಕ್ಷತೆ ಭಾವನೆಯಿಂದ ನರಳುತ್ತಿದ್ದೀರಿ ಎಂಬುದನ್ನು ಸೂಚಿಸುತ್ತದೆ. ನಿಮಗೆ ನಿಮ್ಮ ಸಂಗಾತಿ ಬಿಟ್ಟು ಹೋಗಬಹುದೆನ್ನುವ ಭಯ ಇರಬಹುದು. ಈ ಭಯವು ನಿಮ್ಮ ಸಂಗಾತಿಯನ್ನೂ ಕಟ್ಟಿ ಹಾಕಬಹುದು. ಇದರಿಂದ ಸಂಬಂಧದಲ್ಲಿ ಮನಸ್ತಾವ ಮೂಡಬಹುದು.
12. ಅವನು/ ಅವಳು ಹೀಗೆ ಮಾಡ್ತಾ ಇರ್ಲಿಲ್ಲಾ
ಹಳೆ ಪ್ರೇಮಿಯನ್ನು ನೆನೆದು ಅವನು ಹೀಗಿರಲಿಲ್ಲ, ಅವಳು ಹೀಗೆ ಮಾಡ್ತಾ ಇರ್ಲಿಲ್ಲಾ, ಅವಳಾದ್ರೆ ನಿನ್ ಥರ ನಡ್ಕೋತಾ ಇರ್ಲಿಲ್ಲಾ, ಅವನು ನಿನ್ ಥರ ಕಂಜೂಸ್ ಅಲ್ಲ ಹೀಗೆ ಹಳೆ ಪ್ರೇಮಿಯೊಂದಿಗೆ ನಿಮ್ಮ ಸಂಗಾತಿಯನ್ನು ಹೋಲಿಕೆ ಮಾಡುವುದು ಸಂಬಂಧದಲ್ಲಿ ನೀವು ಮಾಡುವ ಬಹುದೊಡ್ಡ ತಪ್ಪು. ಇದರಿಂದ ನಿಮ್ಮ ಸಂಬಂಧದಲ್ಲಿ ಶಾಶ್ವತ ಬಿರುಕು ಮೂಡುವ ಸಾಧ್ಯತೆಯೂ ಇದೆ. ಅಲ್ಲದೆ ಇದು ಇಬ್ಬರು ಮನಸ್ಥಿತಿಯನ್ನೂ ಕೆಡಿಸಬಹುದು. ಹಾಗಾಗಿ ಈ ಮಾತು ಬರಲೇಬಾರದು.
ರಿಲೇಷನ್ಶಿಪ್ಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳು ಇಲ್ಲಿವೆ
Relationship: ಸ್ವಾರ್ಥ ತುಂಬಿದ ನಿಮ್ಮ ಸಂಗಾತಿಯ ಮನಸ್ಸು ಬದಲಿಸಲು ಇಲ್ಲಿದೆ 6 ಟಿಪ್ಸ್, ಈ ಸಲಹೆ ಪಾಲಿಸಿ ಸಂಬಂಧ ಸರಿಪಡಿಸಿಕೊಳ್ಳಿ
Relationship: ರಿಲೇಷನ್‌ಶಿಪ್ ಬೋರ್ ಆದ್ರೆ ಬ್ರೇಕ್ಅಪ್ ಬೇಡ ಬ್ರೇಕ್ ತಗೊಳ್ಳಿ; ಆದ್ರೆ ಈ ರೂಲ್ಸ್ ಫಾಲೋ ಮಾಡೋದು ಮಾತ್ರ ಮರಿಬೇಡಿ
Relationship: ಕುಳ್ಳಗಿನ ಹುಡುಗೀರು ಅಂದ್ರೆ ಹುಡುಗರಿಗೆ ತುಂಬಾ ಇಷ್ಟವಂತೆ, ಅದಕ್ಕೂ ಒಂದಿಷ್ಟು ಕಾರಣಗಳಿವೆ
ವಿಭಾಗ