logo
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಸ್ವಾರ್ಥ ತುಂಬಿದ ನಿಮ್ಮ ಸಂಗಾತಿಯ ಮನಸ್ಸು ಬದಲಿಸಲು ಇಲ್ಲಿದೆ 6 ಟಿಪ್ಸ್‌, ಈ ಸಲಹೆ ಪಾಲಿಸಿ ಸಂಬಂಧ ಸರಿಪಡಿಸಿಕೊಳ್ಳಿ

Relationship: ಸ್ವಾರ್ಥ ತುಂಬಿದ ನಿಮ್ಮ ಸಂಗಾತಿಯ ಮನಸ್ಸು ಬದಲಿಸಲು ಇಲ್ಲಿದೆ 6 ಟಿಪ್ಸ್‌, ಈ ಸಲಹೆ ಪಾಲಿಸಿ ಸಂಬಂಧ ಸರಿಪಡಿಸಿಕೊಳ್ಳಿ

Reshma HT Kannada

Nov 07, 2023 08:00 AM IST

google News

ಸ್ವಾರ್ಥ ತುಂಬಿದ ನಿಮ್ಮ ಸಂಗಾತಿಯ ಮನಸ್ಸು ಬದಲಿಸಲು ಇಲ್ಲಿದೆ 6 ಟಿಪ್ಸ್‌

    • Relationship Tips: ಮನುಷ್ಯ ಎಂದ ಮೇಲೆ ಸ್ವಾರ್ಥ ಬುದ್ಧಿ ಇರುವುದು ಸಹಜ. ಹಾಗಂತ ಸ್ವಾರ್ಥ ಅತಿಯಾದ್ರೂ ಒಳ್ಳೆಯದಲ್ಲ. ನಿಮ್ಮ ಪ್ರೇಮಿ ಅಥವಾ ಸಂಗಾತಿ ಸ್ವಾರ್ಥ ಹೊಂದಿದ್ದರೆ ಅವರ ಜೊತೆ ಹೇಗೆ ವ್ಯವಹರಿಸೋದು ಎಂದು ಚಿಂತೆ ನಿಮ್ಮನ್ನು ಕಾಡ್ತಾ ಇದ್ರೆ, ನಿಮ್ಮ ಚಿಂತೆಗೆ ಇಲ್ಲಿದೆ ಪರಿಹಾರ.
ಸ್ವಾರ್ಥ ತುಂಬಿದ ನಿಮ್ಮ ಸಂಗಾತಿಯ ಮನಸ್ಸು ಬದಲಿಸಲು ಇಲ್ಲಿದೆ 6 ಟಿಪ್ಸ್‌
ಸ್ವಾರ್ಥ ತುಂಬಿದ ನಿಮ್ಮ ಸಂಗಾತಿಯ ಮನಸ್ಸು ಬದಲಿಸಲು ಇಲ್ಲಿದೆ 6 ಟಿಪ್ಸ್‌

ಈ ಜಗತ್ತಿನ ತುಂಬಾ ಸ್ವಾರ್ಥಿಗಳೇ ತುಂಬಿದ್ದಾರೆ ಎಂದು ತೀರ ಮನಸ್ಸಿಗೆ ಬೇಸರವಾದಾಗ ಅನ್ನಿಸುವುದು ಸಹಜ. ಕೆಲವೊಮ್ಮೆ ತಮ್ಮ ಆಪ್ತರು ಸ್ವಾರ್ಥಿಗಳು ಎನ್ನಿಸಿ ಬಿಡುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ನಾವು ಇಷ್ಟಪಟ್ಟ ಪ್ರೇಮಿ ಅಥವಾ ಸಂಗಾತಿಯೇ ಸ್ವಾರ್ಥಿಗಳಾಗಿರಬಹುದು. ಸ್ವಾರ್ಥಿಗಳಿಗೆ ತಮ್ಮ ಚಿಂತೆ ಬಿಟ್ಟು ಪರರ ಚಿಂತೆ ಇರುವುದಿಲ್ಲ. ಅವರು ತಮ್ಮ ಅಗತ್ಯವನ್ನಷ್ಟೇ ಪರಿಗಣಿಸುವುದು. ಇತರರ ಬಗ್ಗೆ ಅವರು ಯೋಚಿಸುವುದೂ ಇಲ್ಲ. ಯಾವುದೇ ಕೆಲಸವನ್ನಾಗಲಿ ತನಗೆ ಅದರಿಂದ ಏನು ಪ್ರಯೋಜನ ಸಿಗಲಿದೆ ಎಂಬುದನ್ನಷ್ಟೇ ಯೋಚಿಸುತ್ತಾರೆ. ಈ ರೀತಿ ಸ್ವಾರ್ಥ ಮನೋಭಾವದ ಸಂಗಾತಿಯೊಂದಿಗೆ ವ್ಯವಹರಿಸುವುದು ನಿಜಕ್ಕೂ ಕಷ್ಟ. ಹಾಗಂತ ಅವರನ್ನು ದೂರ ಮಾಡಿಕೊಳ್ಳಲು ಆಗುವುದಿಲ್ಲ. ಅಂತಹವರೊಂದಿಗೆ ವ್ಯವಹರಿಸಲು ಹಾಗೂ ಸುಖ ದಾಂಪತ್ಯವನ್ನು ಕಾಪಾಡಿಕೊಳ್ಳಲು ಕೆಲವು ಮಾರ್ಗಗಳನ್ನು ಅನುಸರಿಸುವುದು ಸೂಕ್ತ. ಹಾಗಾದ್ರೆ ಈ ಮಾರ್ಗಗಳು ಯಾವುವು ನೋಡಿ

ಮುಕ್ತ ಸಂವಹನ

ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಮತ್ತು ಶಾಂತ ರೀತಿಯಲ್ಲಿ ಸಂಭಾಷಣೆ ನಡೆಸಿ. ಅವರನ್ನು ದೂಷಿಸದೇ, ಅವರ ಮೇಲೆ ಆರೋಪ ಮಾಡದೆ ನಿಮ್ಮ ಭಾವನೆಗಳು ಹಾಗೂ ಕಾಳಜಿಯನ್ನು ವ್ಯಕ್ತಪಡಿಸಿ. ಅವರ ನಡವಳಿಕೆಯು ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಸಲು ನಿಮ್ಮನ್ನು ನೀವು ಉದಾಹರಣೆಯಾಗಿ ನೀಡಿ.

ಆತ್ಮಾವಲೋಕನ

ನಿಮ್ಮ ಸಂಗಾತಿಯ ಜೊತೆ ಮಾತನಾಡುವ ಮೊದಲು ನಿಮ್ಮ ನಡವಳಿಕೆ ಮತ್ತು ನಿರೀಕ್ಷೆಗಳ ಮೇಲೆ ಗಮನ ಹರಿಸಿ, ಅದಕ್ಕಾಗಿ ಸಮಯ ತೆಗೆದುಕೊಳ್ಳಿ. ಕೆಲವೊಂದು ವಿಚಾರದಲ್ಲಿ ನೀವು ರಾಜಿ ಮಾಡಿಕೊಳ್ಳಬಹುದಾದ ಕ್ಷೇತ್ರಗಳು ಇರಬಹುದು. ಒಟ್ಟಾರೆ ಅವರ ಬಳಿ ಮಾತನಾಡುವ ಮುನ್ನ ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಅವರ ಮನಸ್ಸಿಗೆ ನಾಟುವಂತೆ ತಿಳಿ ಹೇಳಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಿ.

ನಿರ್ಬಂಧ ರಚಿಸಿಕೊಳ್ಳಿ

ಮೊದಲು ನೀವು ನಿಮ್ಮ ಸುತ್ತಲೂ ಒಂದು ನಿರ್ದಿಷ್ಟ ಗಡಿ ಹೊಂದಿಸಿಕೊಳ್ಳಿ. ನಂತರ ಅದರ ಬಗ್ಗೆ ನಿಮ್ಮ ಸಂಗಾತಿಗೆ ತಿಳಿಸಿ. ನಿಮ್ಮಿಬ್ಬರ ಸಂಬಂಧದಲ್ಲಿ ನೀವು ನಿಮ್ಮ ಸಂಗಾತಿಯಿಂದ ಏನನ್ನು ನಿರೀಕ್ಷೆ ಮಾಡುತ್ತಿದ್ದೀರಿ ಎಂಬುದನ್ನು ಅವರಿಗೆ ತಿಳಿಸಿ, ಜೊತೆಗೆ ಯಾವ ವಿಷಯದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ ಎಂಬುದನ್ನು ಹೇಳಿ. ಆದರೆ ನೀವು ರಚಿಸಿಕೊಂಡ ಗಡಿಗಳು ಜವಾಬ್ದಾರಿಯುತವಾಗಿರಬೇಕು. ಈ ರೀತಿ ಗಡಿಗಳು ಸಂಗಾತಿಗಳಿಬ್ಬರಿಗೂ ತಮ್ಮ ತಮ್ಮ ಜವಾಬ್ದಾರಿ ಹಾಗೂ ಸಂಬಂಧದಲ್ಲಿ ತಮ್ಮ ಪಾತ್ರವನ್ನು ಅರ್ಥ ಮಾಡಿಸುತ್ತದೆ. ಇದು ಸ್ವಾರ್ಥ ನಡವಳಿಕೆಯನ್ನು ತಡೆಯಬಹುದು.

ತಜ್ಞರ ಸಲಹೆ ಪಡೆಯಿರಿ

ನಿಮ್ಮ ಸಂಗಾತಿಯ ಸ್ವಾರ್ಥದ ಕಾರಣದಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಗಮನಾರ್ಹ ಸಮಸ್ಯೆಗಳಾಗುತ್ತಿದ್ದರೆ ಇದರ ಪರಿಹಾರಕ್ಕೆ ಆಪ್ತಸಮಾಲೋಚಕರನ್ನು ಭೇಟಿ ಮಾಡುವುದು ಉತ್ತಮ. ಅವರಲ್ಲಿ ಮುಕ್ತವಾಗಿ ಚರ್ಚಿಸುವುದರಿಂದ ನಿಮ್ಮ ಸಮಸ್ಯೆಗೆ ಅವರು ಸೂಕ್ತ ಪರಿಹಾರ ನೀಡಬಹುದು.

ಸಹಾನುಭೂತಿಯನ್ನು ಗಳಿಸಿ 

ನಿಮ್ಮ ಸಂಗಾತಿಯ ಸಂಗಾತಿಯ ಸ್ವಾರ್ಥ ಮನೋಭಾವದಿಂದ ನಿಮ್ಮ ಹಾಗೂ ನಿಮ್ಮ ಸಂಬಂಧದಲ್ಲಿ ಯಾವ ರೀತಿ ಸಮಸ್ಯೆಗಳು ಉಂಟಾಗುತ್ತಿವೆ ಎಂಬುದನ್ನು ಅವರಿಗೆ ಅರ್ಥ ಮಾಡಿಸಿ, ಅವರಲ್ಲಿ ಸಹಾನುಭೂತಿ ಬೆಳೆಯುವಂತೆ ಮಾಡಿ. ನೀವು ಅನುಭವಿಸುತ್ತಿರುವ ತೊಂದರೆಗಳು ಅವರಿಗೆ ಅರ್ಥವಾಗಲು ನಿಮ್ಮ ದೃಷ್ಟಿಕೋನದಲ್ಲಿ ಯೋಚಿಸುವಂತೆ ಮಾಡಿ. ಆ ಮೂಲಕ ಭಾವನೆಗಳು ಅವರಿಗೆ ಅರ್ಥವಾಗುವಂತೆ ಮಾಡಿ.

ಸ್ವಯಂ ಕಾಳಜಿ ವಹಿಸಿ

ನಿಮ್ಮ ಬಗ್ಗೆ ನೀವು ಕಾಳಜಿ ವಹಿಸುವುದು ಬಹಳ ಮುಖ್ಯ. ನಿಮ್ಮ ಸ್ವಾರ್ಥ ಸಂಗಾತಿಯೊಂದಿಗೆ ವ್ಯವಹರಿಸುವ ಮುನ್ನ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಿ. ನಿಮ್ಮ ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮ ನೋಡಿಕೊಳ್ಳಿ. ಇದರಿಂದ ನಿಮ್ಮ ಆಸಕ್ತಿ ಯಾವುದು ಅದರ ಮೇಲೆ ಹೆಚ್ಚು ಗಮನ ಹರಿಯುತ್ತದೆ. ಆಗಲೂ ನಿಮ್ಮ ಮನಸ್ಥಿತಿ ಸರಿ ಹೋಗದಿದ್ದರೆ ಒಮ್ಮೆ ನೀವೊಬ್ಬರೇ ಆಪ್ತಸಮಾಲೋಚನೆ ಪಡೆಯಿರಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ