logo
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಜೀವನದಲ್ಲಿ ಈ ಮೂರು ಗುಟ್ಟುಗಳನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬೇಡಿ; ಬದುಕಿನ ಯಶಸ್ಸಿಗೆ ಚಾಣಕ್ಯನ ಪಾಠ ಇಲ್ಲಿದೆ

Chanakya Niti: ಜೀವನದಲ್ಲಿ ಈ ಮೂರು ಗುಟ್ಟುಗಳನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬೇಡಿ; ಬದುಕಿನ ಯಶಸ್ಸಿಗೆ ಚಾಣಕ್ಯನ ಪಾಠ ಇಲ್ಲಿದೆ

Reshma HT Kannada

Jul 02, 2023 01:23 PM IST

google News

ಚಾಣಾಕ್ಯ

    • Secrets You Should Never Share With Anyone:  ಚಾಣಕ್ಯರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕೆಲವು ವಿಚಾರಗಳು ಹಾಗೂ ರಸಹ್ಯಗಳು ಇರುತ್ತವೆ. ಅದನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಅವರು ಹೇಳುತ್ತಾರೆ. ಆ ವಿಷಯಗಳನ್ನು ಹಂಚಿಕೊಳ್ಳುವುದರಿಂದ ವೈಯಕ್ತಿಕ ಜೀವನಕ್ಕೆ ಅಪಾಯ ಎನ್ನುವುದು ಚಾಣಾಕ್ಯ ಮಾತು, ಹಾಗಾದರೆ ಅಂತಹ ವಿಚಾರಗಳು ಯಾವುದು. 
ಚಾಣಾಕ್ಯ
ಚಾಣಾಕ್ಯ

ಮೌರ್ಯ ಸಂಸ್ಥಾನ ಸಮಯದಲ್ಲಿದ್ದ ಚಾಣಕ್ಯ ಪ್ರಸಿದ್ಧ ತತ್ವಜ್ಞಾನಿ. ತನ್ನ ಬುದ್ಧಿವಂತಿಕ ಮತ್ತು ಭೋಧನೆಗಳಿಂದ ಅವರು ಖ್ಯಾತಿಗಳಿಸಿದ್ದರು. ನಾವು ಬಾಲ್ಯದಿಂದಲೂ ಚಾಣಕ್ಯರ ಕಥೆಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಇವರನ್ನು ಭಾರತದಲ್ಲಿ ಅಗ್ರಗಣ್ಯ ರಾಜಕೀಯ ತಂತ್ರಜ್ಞ ಎಂದೂ ಗೌರವಿಸುತ್ತಾರೆ. ಅವರ ಸಲಹೆಯನ್ನು ಅನುಸರಿಸಿದವರು ಹಿಂತಿರುಗಿ ನೋಡಿದವರಿಲ್ಲ, ಅಲ್ಲದೆ ಇವರ ತತ್ವಗಳನ್ನು ಅನುಸರಿಸಿ ಯಶಸ್ಸು ಕಂಡವರು ಹಲವರು. ಇವರ ತತ್ವಗಳಿಗೆ ಇಂದಿಗೂ ಅಪಾರ ಮಹತ್ವವಿದೆ. ಅವರ ಪ್ರಕಾರ ವ್ಯಕ್ತಿಯೊಬ್ಬನ ಜೀವನದಲ್ಲಿ ಕೆಲವು ವಿಷಯಗಳು ಹಾಗೂ ರಹಸ್ಯಗಳಿರುತ್ತವೆ. ಆದರೆ ಯಾವುದೇ ಕಾರಣಕ್ಕೂ ಅದನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಹಂಚಿಕೊಂಡರೆ ವೈಯಕ್ತಿಕ ಹಾನಿ ಉಂಟಾಗಬಹುದು.

ಸಾಂಸಾರಿಕ ಜೀವನದ ವೈಯಕ್ತಿಕ ವಿಚಾರಗಳು

ವೈವಾಹಿಕ ಜೀವನವು ಸಂಗಾತಿಗಳ ನಡುವಿನ ತೀರಾ ವೈಯಕ್ತಿಕ ವಿಚಾರ. ಇದು ವಿವರಿಸಲಾಗದ ಪ್ರೀತಿಯಿಂದ ಹಿಡಿದು ಭಿನ್ನಾಭಿಪ್ರಾಯಗಳವರೆಗೆ ಹಲವು ಅಂಶಗಳನ್ನು ಒಳಗೊಂಡಿರುತ್ತದೆ. ಪತಿ ಪತ್ನಿಯರ ನಡುವಿನ ಆತ್ಮೀಯ ಚರ್ಚೆಗಳು ವಿಷಯಗಳನ್ನು ಮೂರನೇ ವ್ಯಕ್ತಿಯೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು. ಈ ಸಂಭಾಷಣೆಗಳು ಅಥವಾ ವಿಚಾರಗಳು ತೀರಾ ಖಾಸಗಿಯಾಗಿವೆ ಮತ್ತು ಅವುಗಳನ್ನು ಇತರರ ಎದುರು ಬಹಿರಂಗ ಪಡಿಸುವುದರಿಂದ ನಿಮ್ಮ ವೈಯಕ್ತಿಕ ಬದುಕಿಗೆ ಹಾನಿ ಉಂಟಾಗಬಹುದು, ಕೆಲವೊಮ್ಮೆ ನೀವು ನೀಡಿದ ಖಾಸಗಿ ಮಾಹಿತಿಯನ್ನು ಜನ ದುರ್ಬಳಕೆ ಮಾಡಿಕೊಳ್ಳಬಹುದು.

ರಹಸ್ಯ ದಾನ

ಒಬ್ಬ ವ್ಯಕ್ತಿ ಗುರುವಿನಿಂದ ಪಡೆದ ವಿಶೇಷ ಮಂತ್ರ ಅಥವಾ ಜ್ಞಾನವನ್ನು ಎಂದಿಗೂ ರಹಸ್ಯವಾಗಿಡಬೇಕು ಎಂದು ಚಾಣಾಕ್ಯ ಸಲಹೆ ನೀಡುತ್ತಾರೆ. ಇದನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಯಾಕೆಂದರೆ ಇದು ಸವಾಲಿನ ಸಹಾಯದಲ್ಲಿ ನಮಗೆ ಸಹಾಯ ಮಾಡುತ್ತದೆ. ಇದರೊಂದಿಗೆ ದಾನ ಮಾಡುವುದು ಕೂಡ ಪುಣ್ಯದ ಕೆಲಸ. ನೀವು ರಹಸ್ಯವಾಗಿ ದಾನ ಮಾಡಿದ್ದರೆ ಆ ವಿಚಾರವನ್ನು ಎಂದಿಗೂ ಬಹಿರಂಗ ಪಡಿಸಬೇಡಿ. ಇದರಿಂದ ದಾನದ ಪುಣ್ಯ ನಿಮಗೆ ದಕ್ಕದೇ ಹೋಗಬಹುದು.

ವಯಸ್ಸು

ಚಾಣಕ್ಯನ ಪ್ರಕಾರ ನೀವು ಯಾರೊಂದಿಗೂ ನಿಮ್ಮ ನಿಜವಾದ ವಯಸ್ಸನ್ನು ಬಹಿರಂಗ ಪಡಿಸಬಾರದು. ಹೀಗೆ ಮಾಡುವುದರಿಂದ ಇತರರು ಅವರ ವಯಸ್ಸಿನೊಂದಿಗೆ ನಿಮ್ಮ ವಯಸ್ಸನ್ನು ಹೋಲಿಕೆ ಮಾಡಬಹುದು. ನಿಮ್ಮ ತಾರುಣ್ಯ ಮತ್ತು ಆರೋಗ್ಯದ ಬಗ್ಗೆ ಇಲ್ಲದ ಗ್ರಹಿಕೆಗಳನ್ನು ಮಾಡಬಹುದು. ಇದರಿಂದ ಕಾಪಾಡಿಕೊಳ್ಳಲು ನಿಜವಾದ ವಯಸ್ಸನ್ನು ಹೇಳದೇ ಇರುವುದು ಉತ್ತಮ ಎನ್ನುವುದು ಚಾಣಾಕ್ಯರ ಅಭಿಪ್ರಾಯ.

ಚಾಣಕ್ಯರ ಬೋಧನೆಗಳು ತಲೆಮಾರುಗಳಿಂದ ಜನರೊಂದಿಗೆ ಅನುಕರಣೆಯಾಗುತ್ತಲೇ ಇವೆ. ವಿವೇಚನೆ ಮತ್ತು ಗೌಪ್ಯತೆಯ ಮೂಲಕ ಒಬ್ಬರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಅವರ ತತ್ವಗಳು ಪ್ರತಿಬಿಂಬಿಸುತ್ತವೆ.

ಇದನ್ನೂ ಓದಿ

Relationship: ಹೆಂಡತಿಯ ಮುಂದೆ ಈ ಗುಟ್ಟುಗಳನ್ನು ಎಂದಿಗೂ ಬಿಟ್ಟು ಕೊಡಬೇಡಿ; ಸುಖ ಸಂಸಾರಕ್ಕೆ ಚಾಣಕ್ಯ ಹೇಳಿದ ಕೆಲವು ನೀತಿಗಳು ಹೀಗಿವೆ

Chanakya Niti About Relationship: ಆಚಾರ್ಯ ಚಾಣಕ್ಯ ಅವರ ಪ್ರಕಾರ ಗಂಡ-ಹೆಂಡತಿ ಸಂಬಂಧದಲ್ಲಿ ಅನ್ಯೋನ್ಯತೆ, ಶಾಂತಿ, ಒಲವು ಹೆಚ್ಚಲು ಗಂಡನು ಈ ಕೆಲವು ಗುಟ್ಟುಗಳನ್ನು ತನ್ನ ಹೆಂಡತಿ ಎದುರು ಎಂದಿಗೂ ಬಿಚ್ಚಿಡಬಾರದು. ಹಾಗಾದರೆ ಎಂತಹ ಗುಟ್ಟು ಬಿಚ್ಚಿಡಬಾರದು ಎಂಬ ಕುತೂಹಲ ಕಾಡುತ್ತಿದೆಯಾ? ಇಲ್ಲಿದೆ ನೋಡಿ ಉತ್ತರ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ