logo
ಕನ್ನಡ ಸುದ್ದಿ  /  ಜೀವನಶೈಲಿ  /  Love Quotes: ಪತಿ ಬಗ್ಗೆಯೂ ಆಗಾಗ ಒಳ್ಳೇ ಮಾತು ಆಡಿ, ಏನು ಹೇಳಬೇಕು ಅಂತ ಹೊಳೀದಿದ್ರೆ ಇಲ್ಲಿವೆ ನೋಡಿ ಐಡಿಯಾಗಳು

Love Quotes: ಪತಿ ಬಗ್ಗೆಯೂ ಆಗಾಗ ಒಳ್ಳೇ ಮಾತು ಆಡಿ, ಏನು ಹೇಳಬೇಕು ಅಂತ ಹೊಳೀದಿದ್ರೆ ಇಲ್ಲಿವೆ ನೋಡಿ ಐಡಿಯಾಗಳು

HT Kannada Desk HT Kannada

Feb 15, 2024 09:00 PM IST

google News

ಪತಿ ಬಗ್ಗೆಯೂ ಆಗಾಗ ಒಳ್ಳೇ ಮಾತು ಆಡಿ

    • Love Quotes: ಸಂಗಾತಿಯನ್ನು ಆಗಾಗ ಹೊಗಳುತ್ತಿದ್ದರೆ ದಾಂಪತ್ಯ ಜೀವನ ಇನ್ನಷ್ಟು ಆಹ್ಲಾದಕರವಾಗಿ ಇರುತ್ತದೆ. ಪತಿಯನ್ನು ಹೊಗಳಬೇಕು ಎನಿಸುತ್ತದೆ. ಆದರೆ ಹೇಗೆ ಹೊಗಳಬೇಕು ಎಂದು ತಿಳಿಯುತ್ತಿಲ್ಲ ಎನ್ನುತ್ತಿದ್ದೀರಾ? ಹಾಗಾದರೆ ಇಲ್ಲಿವೆ ನೋಡಿ ಪತಿಯ ಕುರಿತಾದ ಪ್ರೀತಿಯ ಸಂದೇಶಗಳು.
ಪತಿ ಬಗ್ಗೆಯೂ ಆಗಾಗ ಒಳ್ಳೇ ಮಾತು ಆಡಿ
ಪತಿ ಬಗ್ಗೆಯೂ ಆಗಾಗ ಒಳ್ಳೇ ಮಾತು ಆಡಿ

ನಾವು ನಮ್ಮ ಸಂಗಾತಿಯನ್ನು ಎಷ್ಟೇ ಪ್ರೀತಿಸುತ್ತಿದ್ದರೂ ಸಹ ಅವರಿಗೆ ಮೆಚ್ಚುಗೆ ಮಾತುಗಳನ್ನು ನೀಡಲು ಅಥವಾ ಅವರಿಗೆ ವಿಶೇಷ ಎಂದೆನಿಸುವಂಥ ಭಾವನೆಗ ಮೂಡಿಸುವಲ್ಲಿ ವಿಫಲರಾಗಿ ಬಿಡುತ್ತೇವೆ. ಆದರೆ, ನೀವು ಜೀವನದಲ್ಲಿ ಇಂಥಾ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ನಿಮ್ಮ ದಾಂಪತ್ಯ ಜೀವನವನ್ನು ಇನ್ನಷ್ಟು ಸುಖಕರವಾಗಿ ಇರಿಸಬಹುದು. ಹೀಗಾಗಿ ನಿಮ್ಮ ಸಂಗಾತಿಗೆ ನೀವು ಪ್ರೀತಿಯನ್ನು ಧಾರೆಯೆರುವಂಥ ಸಂದೇಶಗಳನ್ನು ಕಳುಹಿಸುವ ಮೂಲಕ ನಿಮ್ಮ ಪತಿಯನ್ನು ನೀವು ಇನ್ನಷ್ಟು ಖುಷಿಪಡಿಸಬಹುದು.

ಪತಿಯನ್ನು ಹೊಗಳುವಂತಹ ಪ್ರೀತಿಯ ಸಂದೇಶಗಳು ಇಲ್ಲಿವೆ ನೋಡಿ

  • ನಾನು ಎಷ್ಟು ಬಾರಿ ನಿಮಗೆ ಐ ಲವ್​ ಯೂ ಎಂದು ಹೇಳಿದರೂ, ನನ್ನ ಪ್ರೀತಿ ಅದಕ್ಕಿಂತಲೂ ಒಂದು ತೂಕ ಜಾಸ್ತಿಯೇ ಇರುತ್ತದೆ.
  • ನೀವು ಕೇವಲ ನಿಮ್ಮ ಪ್ರೀತಿಯನ್ನು ಬಾಯಿಯಲ್ಲಿ ಹೇಳುವುದಿಲ್ಲ, ಅದನ್ನು ಸಾಬೀತುಪಡಿಸುತ್ತೀರಿ. ಇದಕ್ಕಾಗಿ ನಿಮಗೆ ಧನ್ಯವಾದ.

ಇದನ್ನೂ ಓದಿ | Galentines Day: ಏನಿದು ಗ್ಯಾಲೆಂಟೈನ್ಸ್‌ ಡೇ, ಈ ದಿನವನ್ನು ಯಾವಾಗ, ಯಾಕೆ ಆಚರಿಸುತ್ತಾರೆ, ಇದು ಸಿಂಗಲ್ಸ್‌ ಡೇನಾ? ಇಲ್ಲಿದೆ ಉತ್ತರ

  • ನಾನು ಯಾವಾಗೆಲ್ಲ ಮನಃಶಾಂತಿಯನ್ನು ಹುಡುಕಬೇಕು ಎಂದುಕೊಂಡಾಗಲೆಲ್ಲಾ ನನಗೆ ನೆನಪಾಗುವುದು ಕೇವಲ ನೀವು ಮಾತ್ರ.
  • ನೀವು ಬಂದ ಮೇಲೆ ನನ್ನ ಜೀವನದಲ್ಲಿ ಪ್ರೀತಿ ಎಂಬ ಪದಕ್ಕೆ ಹೊಸ ಅರ್ಥ ಬಂದಿದೆ. ನಿಮ್ಮನ್ನು ನಾನು ತುಂಬಾ ಪ್ರೀತಿಸುತ್ತೇನೆ.
  • ಇವತ್ತು ನಾನು ಏನೋ ಹಾಗೆಯೇ ಇದ್ದೇನೆ ಎಂದರೆ ಅದಕ್ಕೆ ನೀವು ಕಾರಣ. ನಮ್ಮ ನಡುವೆ ಸಾಕಷ್ಟು ವಾದಗಳು ನಡೆಯಬಹುದು, ಆದರೆ ನಮ್ಮ ನಡುವಿನ ಪ್ರೀತಿಗೆ ಎಂದಿಗೂ ಬರವಿಲ್ಲ.
  • ನೀವು ಯಾರ ಜೊತೆ ಬದುಕಲು ಸಾಧ್ಯವೋ ಅವರೊಂದಿಗೆ ಬಾಳುವುದು ದಾಂಪತ್ಯವಲ್ಲ. ಯಾರಿಲ್ಲದೆ ನಿಮಗೆ ಬದುಕಲು ಸಾಧ್ಯವೇ ಇಲ್ಲವೋ ಅವರೊಂದಿಗೆ ಬಾಳುವುದು ನಿಜವಾದ ದಾಂಪತ್ಯ .

ಇದನ್ನೂ ಓದಿ: Valentines Day: ಫೆ 14ರಂದೇ ಪ್ರೇಮಿಗಳ ದಿನವನ್ನು ಆಚರಿಸುವುದರ ಹಿಂದಿದೆ ಮಹತ್ವದ ಕಾರಣ; ಈ ದಿನದ ಇತಿಹಾಸ ತಿಳಿಯಿರಿ

  • ನನಗೆ ದೇವರು ಕೊಟ್ಟ ಅತ್ಯುತ್ತಮ ಉಡುಗೊರೆ ಎಂದರೆ ಅದು ನೀವು..!
  • ನನ್ನ ಪತಿ ಎಲ್ಲಿರುತ್ತಾರೋ ಅಲ್ಲಿ ನನ್ನ ಹೃದಯವಿರುತ್ತದೆ.
  • ನನ್ನ ಪತಿಯೇ ನನ್ನ ಪ್ರೀತಿಯ ಜೀವನದ ಮೊದಲ ಅಧ್ಯಾಯ.
  • ನನ್ನ ಹೃದಯ ಎಂದಿಗೂ ಎಂದೆಂದಿಗೂ ಅದು ನಿಮ್ಮದೇ..!
  • ನೀವು ನನ್ನ ಧೈರ್ಯ, ನೀವು ನನ್ನ ಗೆಳೆಯ, ನನ್ನ ಆತ್ಮಕ್ಕೆ ಸಂಗಾತಿ ನೀವು, ಪ್ರತಿಬಾರಿಯೂ ನಾನು ನಿನ್ನ ಪ್ರೀತಿಯಲ್ಲಿ ಪದೇ ಪದೇ ಬೀಳಲು ಇಚ್ಛಿಸುತ್ತೇನೆ..!
  • ನಿಮ್ಮ ತೋಳುಗಳು ನನ್ನ ಜೀವನದ ಅತೀ ಇಷ್ಟದ ಸ್ಥಳ.
  • ಪತಿ - ಪತ್ನಿಯ ಸಂಬಂಧವೆನ್ನುವುದು ಟಾಮ್​ & ಜೆರ್ರಿ ಇದ್ದಂತೆ. ಎಷ್ಟೇ ಜಗಳವಾಡಿದರೂ ಸಹ ಒಬ್ಬರನ್ನು ಬಿಟ್ಟು ಒಬ್ಬರಿಗೆ ಇರಲು ಸಾಧ್ಯವಿಲ್ಲ .
  • ನಮ್ಮ ದಾಂಪತ್ಯ ಜೀವನ 50/50 ಕ್ರಿಕೆಟ್​ ಪಂದ್ಯದಂತೆ. ನಾನು ಅಡುಗೆ ಮಾಡುತ್ತೇನೆ, ಅವರು ತಿನ್ನುತ್ತಾರೆ. ನಾನು ಬಟ್ಟೆ ತೊಳೆದರೆ ಅವರು ಧರಿಸುತ್ತಾರೆ. ಹಾಗೆಯೇ ನಾನು ಶಾಪಿಂಗ್​ ಮಾಡಿದರೆ ಅವರು ಬಿಲ್​ ಪಾವತಿ ಮಾಡುತ್ತಾರೆ.

ಇದನ್ನೂ ಓದಿ | ವ್ಯಾಲೆಂಟೈನ್ಸ್ ಡೇಗೆ ವೈಜ್ಞಾನಿಕ ತಿರುವು ನೀಡಿದ ಗೂಗಲ್ ಡೂಡಲ್; ಲವ್ ಕೆಮಿಸ್ಟ್ರಿ ಆಟಕ್ಕೆ ಪ್ರೇಮಿಗಳಿಗೆ ವೇದಿಕೆ

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ