logo
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ಸೂಚಿಸುವ 8 ಲಕ್ಷಣಗಳಿವು; ನಿಮ್ಮಾಕೆ ದೂರ ಸರಿಯುವ ಮುನ್ನ ಹತ್ತಿರವಾಗಿ

Relationship: ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ಸೂಚಿಸುವ 8 ಲಕ್ಷಣಗಳಿವು; ನಿಮ್ಮಾಕೆ ದೂರ ಸರಿಯುವ ಮುನ್ನ ಹತ್ತಿರವಾಗಿ

Praveen Chandra B HT Kannada

Jun 10, 2024 06:00 AM IST

google News

Relationship: ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ಸೂಚಿಸುವ 8 ಲಕ್ಷಣಗಳಿವು

    • Clear Signs She's Losing Interest: ಪ್ರೀತಿ ಎರಡೂ ಕಡೆಯಿಂದ ಇದ್ದರೆ ಮಾತ್ರ ಚಂದ ಎನಿಸಿಕೊಳ್ಳುತ್ತದೆ. ನಿಮ್ಮಾಕೆ ಇತ್ತೀಚಿನ ದಿನಗಳಲ್ಲಿ ಈ ರೀತಿಯಲ್ಲಿ ಬದಲಾಗಿದ್ದರೆ ನೀವು ಈ ಸಂಬಂಧದ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು.
Relationship: ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ಸೂಚಿಸುವ 8 ಲಕ್ಷಣಗಳಿವು
Relationship: ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ಸೂಚಿಸುವ 8 ಲಕ್ಷಣಗಳಿವು

ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಗಾದೆ ಮಾತೇ ಇದೆ. ಹೆಣ್ಣು ಮಕ್ಕಳು ಪ್ರೀತಿಯನ್ನು ತುಂಬಾ ಇಷ್ಟಪಡುತ್ತಾರೆ. ಆ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾರೆ ಕೂಡ. ಆದರೆ ಯಾವಾಗ ಅವರು ಆ ಪ್ರೀತಿಯಿಂದ ಹೊರಬರಬೇಕು ಎಂದು ಒಂದು ದೃಢ ನಿರ್ಧಾರಕ್ಕೆ ಬರುತ್ತಾರೋ ಅಲ್ಲಿಂದ ಅವರನ್ನು ಬದಲಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಇಂತಹ ಸೂಚನೆಗಳು ಕಂಡುಬಂದಾಗಲೇ ಎಚ್ಚೆತ್ತು ಹತ್ತಿರವಾಗಲು ಯತ್ನಿಸಿ. ಮಹಿಳೆಯರಲ್ಲಿ ಕಾಣಿಸುವ ಈ ಲಕ್ಷಣಗಳು ಅವರು ನಿಮ್ಮಿಂದ ದೂರವಾಗಲು ನಿರ್ಧರಿಸಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅವುಗಳ ಕುರಿತ ವಿವರ ಇಲ್ಲಿದೆ ನೋಡಿ :

ಪ್ರೇಮ ಸಂಬಂಧದಿಂದ ಹೊರಬರಲು ಮಹಿಳೆ ನಿರ್ಧರಿಸಿದ್ದಾಳೆ ಎಂಬುದರ ಸಂಕೇತವಿದು

1. ಭವಿಷ್ಯದ ಬಗ್ಗೆ ಮಾತನಾಡಲು ನಿರಾಸಕ್ತಿ

ಪ್ರೀತಿ ಎಂದಮೇಲೆ ಭವಿಷ್ಯದ ಬಗೆಗಿನ ಕನಸು ಸಾಕಷ್ಟಿರುತ್ತದೆ. ಸಂಗಾತಿಗಳಿಬ್ಬರು ಇದರ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ, ಕನಸು ಕಾಣುತ್ತಾರೆ. ಆದರೆ ನಿಮ್ಮಾಕೆ ನಿಮ್ಮೊಂದಿಗೆ ಭವಿಷ್ಯವನ್ನು ಕಳೆಯುವ ಬಗ್ಗೆ ಮಾತನಾಡಲು ಆಸಕ್ತಿ ತೋರುತ್ತಿಲ್ಲವೆಂದರೆ ಆಕೆಗೆ ನಿಮ್ಮ ಮೇಲಿನ ಪ್ರೀತಿ ಇಂಗಿ ಹೋಗಿದೆ ಎಂದೇ ಅರ್ಥ.

2. ಅಂತರ ಕಾಯ್ದುಕೊಳ್ಳುವುದು

ಮೊದ ಮೊದಲು ನಿಮ್ಮೊಂದಿಗೆ ಸಮಯ ಕಳೆಯಲು ಹಾತೊರೆಯುತ್ತಿದ್ದಾಕೆ ಈಗ ನಿಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿರಬಹುದು. ಈ ಬದಲಾವಣೆ ಕೂಡ ಆಕೆಗೆ ಈ ಸಂಬಂಧದ ಮೇಲೆ ಆಸಕ್ತಿಯಿಲ್ಲ ಎಂಬುದರ ಸಂಕೇತವಾಗಿದೆ.

3.ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಮುತುವರ್ಜಿ ವಹಿಸುವುದಿಲ್ಲ

ಮೊದಲೆಲ್ಲ ನಿಮ್ಮನ್ನು ನೋಡಲು, ನಿಮ್ಮೊಂದಿಗೆ ಹಾತೊರೆಯುತ್ತಿದ್ದ ಆಕೆ ಈಗ ಅವುಗಳ ಬಗ್ಗೆ ಮುತುವರ್ಜಿ ವಹಿಸುವುದಿಲ್ಲ. ನಿಮ್ಮೊಂದಿಗೆ ಸಂಪರ್ಕ ಹೊಂದಬೇಕು ಎನ್ನುವ ಸಣ್ಣ ಆಸಕ್ತಿ ಕೂಡ ಅವಳಲ್ಲಿ ಮರೆಯಾಗಿದ್ದರೆ ನೀವು ಈ ಸಂಬಂಧದ ಬಗ್ಗೆ ಖಂಡಿತ ಯೋಚಿಸಬೇಕು.

4.ಖಾಸಗಿ ಕ್ಷಣಗಳನ್ನು ಕಳೆಯುವುದಿಲ್ಲ

ನಿಮ್ಮೊಂದಿಗೆ ಖಾಸಗಿ ಕ್ಷಣಗಳನ್ನು ಕಳೆಯುವಾಗ ಇರಿಸುಮುರುಸಿನ ಭಾವನೆ ವ್ಯಕ್ತಪಡಿಸಿದರೆ ಅಥವಾ ಆಕೆ ಅದರಿಂದ ಹಿಂದೆ ಸರಿಯಲು ಯತ್ನಿಸಿದರೆ ಆಕೆಗೆ ನಿಮ್ಮ ಸಾಂಗತ್ಯದ ಅವಶ್ಯಕತೆ ಇಲ್ಲ ಎಂದು ಅರ್ಥ.

5. ತನ್ನ ಆಪ್ತರಿಗೆ ನಿಮ್ಮನ್ನು ಪರಿಚಯಿಸಲು ಮುಂದಾಗದೇ ಇರುವುದು

ತನ್ನ ಆತ್ಮೀಯ ಸ್ನೇಹಿತರಿಗೆ, ಸಂಬಂಧಿಗಳಿಗೆ ನಿಮ್ಮನ್ನು ಪರಿಚಯಿಸಲು ಆಕೆ ಮನಸ್ಸು ಮಾಡುತ್ತಿಲ್ಲವೆಂದರೆ ಆಕೆ ನಿಮ್ಮನ್ನು ತನ್ನ ಆತ್ಮೀಯ ಬಳಗದ ಸಾಲಿನಿಂದ ಕಿತ್ತೆಸಿದಿದ್ದಾಳೆ ಎಂದು ಅರ್ಥ.

6. ಡೇಟಿಂಗ್ ಆ್ಯಪ್‌ಗಳ ಬಳಕೆ

ಈಗೆಲ್ಲ ಡೇಟಿಂಗ್ ಮಾಡಲು ಕೂಡ ಅಪ್ಲಿಕೇಶನ್‌ಗಳಿವೆ. ತಮ್ಮ ಸಂಬಂಧದ ಬಗ್ಗೆ ಗಂಭೀರವಾಗಿ ಇರುವವರು ಇಂಥಾ ಆ್ಯಪ್‌ಗಳ ಬಳಕೆ ಮಾಡುವುದಿಲ್ಲ. ಆದರೆ ನಿಮ್ಮಾಕೆ ಇವುಗಳಲ್ಲಿ ಸಕ್ರಿಯವಾಗಿದ್ದಾಳೆ ಎಂದರೆ ಸಮ್‌ಥಿಂಗ್‌ ರಾಗ್‌ ಎಂದುಕೊಳ್ಳಬಹುದು.

7. ನಿಮ್ಮ ಬಗ್ಗೆ ಆಕೆಗಿರುವ ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸುವುದು

ನನಗೆ ಈ ಸಂಬಂಧದಲ್ಲಿ ಆಸಕ್ತಿಯಿಲ್ಲ, ನಾನು ಈ ಸಂಬಂಧದ ಬಗ್ಗೆ ಗಂಭೀರ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆಕೆಯೇ ನಿಮ್ಮ ಬಳಿ ನೇರವಾಗಿ ಹೇಳಬಹುದು. ಇಂಥಾ ಸಂದರ್ಭಗಳಲ್ಲಿ ನೀವು ಆಕೆಯ ನಿರ್ಧಾರಗಳನ್ನು ಗೌರವಿಸಿ ದೂರ ಸರಿಯುವುದು ನಿಮ್ಮ ವ್ಯಕ್ತಿತ್ವಕ್ಕೆ ಒಳ್ಳೆಯದು.

8. ತನಗೆ ತಾನು ಪ್ರಾಮುಖ್ಯತೆ ಕೊಡುವುದು

ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕನಿಷ್ಟ ನಿಮ್ಮ ಅಭಿಪ್ರಾಯಗಳನ್ನು ಕೆಳದೇ ತನ್ನಷ್ಟಕ್ಕೆ ತಾನು ನಿರ್ಧಾರಗಳನ್ನು ತೆಗೆದುಕೊಂಡು ಅವುಗಳ ಬಗ್ಗ ಚರ್ಚಿಸಲು ಆಕೆ ಇಚ್ಛಿಸದಿದ್ದರೆ ನಿಮ್ಮ ಸಾಂಗತ್ಯ ಆಕೆಗೆ ಬೇಡ ಎಂದೇ ಅರ್ಥ ಮಾಡಿಕೊಳ್ಳುವುದು ಒಳಿತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ