logo
ಕನ್ನಡ ಸುದ್ದಿ  /  ಜೀವನಶೈಲಿ  /  Deepawali 2023: ದೀಪಾವಳಿ ಆಚರಣೆ ಕುರಿತ ನಿಮಗೆ ತಿಳಿದಿರದ, ಅಚ್ಚರಿ ಮೂಡಿಸುವ 15 ವಿಚಾರಗಳಿವು

Deepawali 2023: ದೀಪಾವಳಿ ಆಚರಣೆ ಕುರಿತ ನಿಮಗೆ ತಿಳಿದಿರದ, ಅಚ್ಚರಿ ಮೂಡಿಸುವ 15 ವಿಚಾರಗಳಿವು

Reshma HT Kannada

Nov 10, 2023 07:15 AM IST

google News

ದೀಪಾವಳಿ ಆಚರಣೆ ಕುರಿತ ನಿಮಗೆ ತಿಳಿದಿರದ, ಅಚ್ಚರಿ ಮೂಡಿಸುವ 15 ವಿಚಾರಗಳಿವು

    • ದೀಪಾವಳಿ ಹಬ್ಬ ಎಂದರೆ ಭಾರತದಾದ್ಯಂತ ಸರ್ವಧರ್ಮದವರೂ ಆಚರಿಸುವ ಹಬ್ಬ. ಈ ಬೆಳಕಿನ ಹಬ್ಬ ಭಾರತದಲ್ಲಿ ವಿಶೇಷ. ಈ ಹಬ್ಬದ ಕುರಿತು ಹಲವು ಧಾರ್ಮಿಕ ನಂಬಿಕೆಗಳಿವೆ. ದೀಪಾವಳಿ ಕುರಿತು ನಿಮಗೆ ತಿಳಿದಿರದ, ನೀವು ಕೇಳಿದರೆ ಆಶ್ಚರ್ಯ ಪಡುವ 15 ಸಂಗತಿಗಳು ಇಲ್ಲಿವೆ. 
ದೀಪಾವಳಿ ಆಚರಣೆ ಕುರಿತ ನಿಮಗೆ ತಿಳಿದಿರದ, ಅಚ್ಚರಿ ಮೂಡಿಸುವ 15 ವಿಚಾರಗಳಿವು
ದೀಪಾವಳಿ ಆಚರಣೆ ಕುರಿತ ನಿಮಗೆ ತಿಳಿದಿರದ, ಅಚ್ಚರಿ ಮೂಡಿಸುವ 15 ವಿಚಾರಗಳಿವು

ದೀಪಗಳ ಹಬ್ಬ ದೀಪಾವಳಿ ಭಾರತ ಮಾತ್ರವಲ್ಲದೇ, ಪ್ರಪಂಚದಾದ್ಯಂತ ಇರುವ ಭಾರತೀಯರು ಸಂಭ್ರಮದಿಂದ ಆಚರಿಸುವ ಹಬ್ಬ. ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ದೀಪಾವಳಿಗೆ ಮಹತ್ವದ ಸ್ಥಾನವಿದೆ. ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾಗಿರದ ಈ ಹಬ್ಬ ವಿವಿಧ ಸಂಪ್ರದಾಯ, ಆಚರಣೆಯೊಂದಿಗೆ ಹಲವಾರು ಕಥೆಗಳನ್ನು ಹೊಂದಿದೆ. ಇನ್ನೇನು ದೀಪಾವಳಿ ಬಂದೇ ಬಿಟ್ಟಿದೆ. ಈ ಸಮಯದಲ್ಲಿ ದೀಪಾವಳಿ ಕುರಿತು ನಿಮಗೆ ತಿಳಿದಿರದ ಕೆಲವು ಆಶ್ಚರ್ಯಕರ ಸಂಗತಿಗಳನ್ನು ನಾವು ತಿಳಿಸುತ್ತೇವೆ.

ದೀಪಾವಳಿ ಕುರಿತು 15 ಆಸಕ್ತಿಕರ ಸಂಗತಿಗಳಿವು 

ಧಾರ್ಮಿಕ ಗಡಿಗಳನ್ನು ಮೀರಿದ ಹಬ್ಬ

ದೀಪಾವಳಿಯನ್ನು ಪ್ರಧಾನವಾಗಿ ಹಿಂದೂಗಳ ಹಬ್ಬ ಎಂದು ಪರಿಗಣಿಸಲಾಗಿದ್ದರೂ ಇದನ್ನು ಜೈನ ಧರ್ಮದವರು, ಸಿಖ್ಖರು ಸೇರಿದಂತೆ ಹಲವು ಜಾತಿ, ಧರ್ಮದವರು ಆಚರಿಸುತ್ತಾರೆ.

ಒಂದು ಹಬ್ಬ ಹಲವು ಕಥೆಗಳು

ಸರ್ವಧರ್ಮದವರೂ ಆಚರಿಸುವ ದೀಪಾವಳಿ ಹಬ್ಬದ ಹಿಂದೆ ಹಲವು ಕಥೆಗಳಿವೆ.  ಇಲ್ಲಿ ಆಚರಣೆ, ಪೂಜೆ ಒಂದೇ ರೀತಿ ಇದ್ದರೂ ಧಾರ್ಮಿಕ ಕಥೆಗಳು ಮಾತ್ರ ಒಂದೊಂದು ಧರ್ಮದಲ್ಲಿ ಒಂದೊಂದು ರೀತಿ ಇದೆ. 

ಲಕ್ಷ್ಮೀದೇವಿ ಭೂಮಿಯಲ್ಲಿ ಸಂಚರಿಸುವ ದಿನ

ದೀಪಾವಳಿಯ ದಿನ ಹೊಸ ಬಟ್ಟೆ, ಎಲ್ಲೆಲ್ಲೂ ಬೆಳಗುವ ದೀಪಗಳ ಸಾಲು, ಸಂಭ್ರಮ ಹೆಚ್ಚಲು ಪ್ರಮುಖ ಕಾರಣ ಈ ದಿನದಂದು ಸಮೃದ್ಧಿಯ ದೇವತೆಯಾದ ಲಕ್ಷ್ಮೀಯು ಭೂಮಿಯಲ್ಲಿ ಸಂಚರಿಸುವ ದಿನ ಮತ್ತು ಜನರಿಗೆ ಸಂಪತ್ತನ್ನು ಅನುಗ್ರಹಿಸುವ ದಿನ ಎಂದು ವ್ಯಾಪಕವಾಗಿ ನಂಬಲಾಗಿದೆ.

ಮಹಾವೀರರ ನಿರ್ವಾಣ

ಭಾರತದಲ್ಲಿ ಆರನೇ ಅತಿದೊಡ್ಡ ಧರ್ಮ ಎನ್ನಿಸಿಕೊಂಡ ಜೈನ ಧರ್ಮವು ದೀಪಾವಳಿಯನ್ನು 24 ತೀರ್ಥಂಕರರಲ್ಲಿ ಕೊನೆಯವರಾಗಿರುವ ಮಹಾವೀರರು ನಿರ್ವಾಣ ಪಡೆದ ದಿನ ಎಂದು ಆಚರಿಸುತ್ತದೆ. 

ಗ್ವಾಲಿಯರ್‌ನಿಂದ ಗುರು ಹರಗೋಬಿಂದ್‌ ಜಿ ಪಾಲಾಯನ

ದೀಪಾವಳಿಯನ್ನು ಸುತ್ತುವರೆದಿರುವ ಹೆಚ್ಚಿನ ಸಂಪ್ರದಾಯಗಳು ಸಾವಿರಾರು ವರ್ಷಗಳ ಹಿಂದಿನದ್ದಾಗಿದ್ದರೂ ಕೂಡ ಇದಕ್ಕೆ ಸಂಬಂಧಿಸಿದ ಇತ್ತೀಚಿನ ಸಂಪ್ರದಾಯವೊಂದು ಸಿಖ್‌ ಧರ್ಮದಲ್ಲಿದೆ. ಗ್ವಾಲಿಯರ್‌ನಲ್ಲಿ ಮೊಘಲ್‌ ದೊರೆ ಜಹಾಂಗೀರ್‌ನ ಸೆರೆಯಿಂದ ಹಲವಾರು ಹಿಂದೂ ರಾಜರೊಂದಿಗೆ ತಮ್ಮ ಸಿಖ್‌ ಗುರು ಹರಗೋಬಿಂದ್‌ ಜಿ ಅವರನ್ನೂ ಬಿಡುಗಡೆ ಮಾಡಿದ ಹಿನ್ನೆಲೆಯ ನೆನಪಿನಲ್ಲಿ ಸಿಖ್‌ರು ದೀಪಾವಳಿ ಆಚರಿಸುತ್ತಾರೆ.

ಐದು ದಿನಗಳ ಸಂಭ್ರಮ

ದಕ್ಷಿಣ ಭಾರತದಲ್ಲಿ ದೀಪಾವಳಿ ಎರಡು, ಮೂರು ದಿನಗಳ ಆಚರಣೆಯಾದರೆ ಉತ್ತರ ಹಾಗೂ ವಾಯುವ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಇದನ್ನು ಐದು ದಿನಗಳ ಹಬ್ಬವಾಗಿ ಆಚರಿಸಲಾಗುತ್ತದೆ.

ರಾಮ ಆಯೋಧ್ಯೆಗೆ ಮರಳಿದ ದಿನ

ದೀಪಾವಳಿ ಆಚರಣೆಯ ಹಿಂದಿನ ಅತ್ಯಂತ ಜನಪ್ರಿಯ ನಂಬಿಕೆ ಎಂದರೆ ಹಿಂದೂ ದೇವರಾದ ಶ್ರೀ ರಾಮನು ರಾಕ್ಷಸ ರಾಜ ರಾವಣನನ್ನು ಸೋಲಿಸಿ ಅಯೋಧ್ಯೆಗೆ ಮರಳಿದ ದಿನವಿದು. ಪುರಾಣಗಳ ಪ್ರಕಾರ ಶ್ರೀರಾಮನು ತಮ್ಮ ರಾಜ್ಯಕ್ಕೆ ಮರಳಿದ ಖುಷಿಯಲ್ಲಿ ದೇಶದಾದ್ಯಂತ ದೀಪಗಳನ್ನು ಬೆಳಗಿಸಲಾಯಿತು. ಅಂದಿನಿಂದ ದೀಪಾವಳಿ ಆಚರಣೆ ರೂಢಿಯಲ್ಲಿದೆ. 

ಅರ್ಧಮ ವಿರುದ್ಧ ಧರ್ಮದ ಜಯ

ಭಾರತದ ದಕ್ಷಿಣ ಭಾಗಗಳಲ್ಲಿ ದೀಪಾವಳಿಯನ್ನು ನರಕಚತುರ್ದಶಿ ಎಂದು ಆಚರಿಸುತ್ತಾರೆ. ನರಕ ಚತುರ್ದಶಿ ಎಂದರೆ ಶ್ರೀಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಕೊಂದ ದಿನವೆಂದು ನರಕಚತುರ್ದಶಿ ಆಚರಿಸಲಾಗುತ್ತದೆ. ದಂತಕಥೆಗಳ ಪ್ರಕಾರ ನರಕಾಸುರನು ತನ್ನ ಕೊನೆಯ ಕ್ಷಣಗಳಲ್ಲಿ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಭೂತಾಯಿಯಲ್ಲಿ ತನ್ನ ಮರಣದ ದಿನದ ಹಿನ್ನೆಲೆ ಇಡೀ ಭೂಮಿಯಲ್ಲಿ ಪ್ರತಿವರ್ಷ ದೀಪ ಹಾಗೂ ಬಣ್ಣಗಳ ಮೂಲಕ ಸಂಭ್ರಮ ಹರಡಿರಬೇಕು, ಹಾಗೇ ಮಾಡು ಎಂದುಬೇಡಿಕೊಳ್ಳುತ್ತಾನೆ. ಅದಕ್ಕೆ ಭೂತಾಯಿ ಅಸ್ತು ಎನ್ನುತ್ತಾಳೆ. ಈ ಹಿನ್ನೆಲೆಯಲ್ಲಿ ದೀಪಾವಳಿ ಆಚರಿಸಲಾಗುತ್ತದೆ ಎನ್ನುವುದು ಇನ್ನೊಂದು ನಂಬಿಕೆ 

ಪಟಾಕಿ ಹೊಡೆಯುವ ಕಾಲ

ದೀಪಾವಳಿಯ ಇನ್ನೊಂದು ಪ್ರಮುಖ ಆಚರಣೆ ಎಂದರೆ ಪಟಾಕಿ ಸಿಡಿಸುವುದು. ಇದು ಇತ್ತೀಚೆಗೆ ದೀಪಾವಳಿಯ ಭಾಗವಾಗಿದೆ. 1900ರ ದಶಕದವರೆಗೆ ಪಟಾಕಿಗಳು ಮತ್ತು ಪೈರೋಟೆಕ್ನಿಕ್‌ಗಳು ತುಂಬಾ ದುಬಾರಿಯಾಗಿದ್ದವು ಮತ್ತು ರಾಜಮನೆತನದವರು ಮಾತ್ರ ಇದನ್ನು ಬಳಸುತ್ತಿದ್ದರು.

ಶಿವಕಾಶಿ, ಭಾರತದ ಪಟಾಕಿ ಪಟ್ಟಣ

ಭಾರತ ಸ್ವಾತಂತ್ರ್ಯ ಗಳಿಸಿದ್ದು ಹಾಗೂ ಆಮದು ನಿರ್ಬಂಧದ ನಂತರ ತಮಿಳುನಾಡಿನ ದಕ್ಷಿಣದಲ್ಲಿರುವ ಶಿವಕಾಶಿ ಪಟ್ಟಣವು ಇಡೀ ಭಾರತಕ್ಕೆ ಪಟಾಕಿ ಹಾಗೂ ಬೆಂಕಿಕಡ್ಡಿ ತಯಾರಿಸುವ ಪಟ್ಟಣವಾಗಿ ಬೆಳೆದಿದೆ. ದೇಶದಲ್ಲಿ ಶೇ 90ರಷ್ಟು ಪಟಾಕಿ ಮಾರಾಟವಾಗುವುದು ಈ ದೇಶದಲ್ಲೇ ಎನ್ನುವುದು ವಿಶೇಷ.

ಪಟಾಕಿಗಳ ಮಾನವ ವೆಚ್ಚ

ಶಿವಕಾಶಿ ಪಟ್ಟಣವು ಭಾರತದ ಪಟಾಕಿ-ಹಬ್ ಎಂದು ಜನಪ್ರಿಯವಾಗಿದ್ದರೂ, ಈ ನಗರವು ಒಂದು ಕುಖ್ಯಾತಿಯನ್ನೂ ಗಳಿಸಿದೆ. ಅದೇನೆಂದರೆ ಇಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಪಟಾಕಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಈ ಪಟ್ಟಣದ ಹೆಚ್ಚಿನ ಸಣ್ಣ ಉದ್ಯಮಗಳು ಪಟಾಕಿ ತಯಾರಿಕೆಗೆ ಸಂಬಂಧಿಸಿದ ಅಪಾಯಕಾರಿ ರಾಸಾಯನಿಕಗಳನ್ನು ನಿರ್ವಹಿಸಲು ಮಕ್ಕಳನ್ನು ನೇಮಿಸಿಕೊಳ್ಳುತ್ತಿವೆ. ಇದು ವಿಷಾದನೀಯ ಸಂಗತಿ. 

ಧನ್‌ತೇರಸ್‌, ಭಾರತದ ಸುವರ್ಣ ದಿನ

ಭಾರತವು ಚಿನ್ನ ಪ್ರಿಯರ ದೇಶ. ದೀಪಾವಳಿ ಹಬ್ಬದ ಸಮಯದಲ್ಲಿ ಅಂದರೆ ದೀಪಾವಳಿಗೂ ಎರಡು ದಿನಗಳ ಮೊದಲು ಧನ್‌ತೇರಸ್‌ ಅಥವಾ ಧನತ್ರಯೋದಶಿ ಇರುತ್ತದೆ. ಈ ದಿನದಂದು ಹಲವರು ಚಿನ್ನ ಖರೀದಿ ಮಾಡುತ್ತಾರೆ. ಇಂದು ಚಿನ್ನ ಖರೀದಿ ಮಾಡಿದರೆ ಸಮೃದ್ಧಿ ಹೆಚ್ಚುತ್ತದೆ ಎಂಬುದು ನಂಬಿಕೆ.  ಈ ದಿನ ಮನೆಯ ಅಂಗಳವನ್ನು ದೊಡ್ಡ ದೊಡ್ಡ ಬಣ್ಣದ ರಂಗೋಲಿಗಳಿಂದ ಸಿಂಗರಿಸುವ ಸಂಪ್ರದಾಯವೂ ಇದೆ. 

ಮೋಜಿನ ಹಬ್ಬ

ದೀಪಾವಳಿಯು ಧರ್ಮನಿಷ್ಠೆ ಮತ್ತು ಪರಿಶುದ್ಧತೆಯನ್ನು ಸೂಚಿಸುವ ಹಬ್ಬವಾಗಿದ್ದರೂ, ಈ ಹಬ್ಬದಂದು ಕುಟುಂಬದವರೆಲ್ಲರೂ ಸೇರಿ ಸಂಭ್ರಮಿಸುವ ರೂಢಿ ಇದೆ. ಈ ದಿನ ಮಾತ್ರ, ಕುಟುಂಬದ ಹಿರಿಯರು ಮತ್ತು ಯುವಕರು ಎಲ್ಲರೂ ಒಟ್ಟಾಗಿ ಈ ಮೋಜಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ.

ನಿಜವಾದ ಜಾಗತಿಕ ಹಬ್ಬ

ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿಯೂ ಸಾಕಷ್ಟು ಭಾರತೀಯ ವಲಸಿಗರೊಂದಿಗೆ, ಶ್ರೀಲಂಕಾ, ಪಾಕಿಸ್ತಾನ, ಇಂಡೋನೇಷ್ಯಾ, ಫಿಜಿ, ಥೈಲ್ಯಾಂಡ್, ಮಾರಿಷಸ್, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಹಲವಾರು ದೇಶಗಳಲ್ಲಿ ದೀಪಾವಳಿಯನ್ನು ಹೆಚ್ಚು ಉತ್ಸಾಹದಿಂದ ಆಚರಿಸಲಾಗುತ್ತದೆ.

ಗಡಿಗಳಲ್ಲೂ ದ್ವೇಷ ಮರೆಸುವ ಹಬ್ಬ

ಭಾರತ ಮತ್ತು ಪಾಕಿಸ್ತಾನದ ನಡುವೆ ಭಿನ್ನಾಭಿಪ್ರಾಯ ಸಾಮಾನ್ಯ, ಕಳೆದ 70 ವರ್ಷಗಳಲ್ಲಿ  ನಮ್ಮೆರಡು ದಿನಗಳ ನಡುವೆ ಮೂರು ಬಾರಿ ಯುದ್ಧ ನಡೆದಿದೆ. ಇದರ ಪರಿಣಾಮವಾಗಿ ಎರಡೂ ದೇಶಗಳ ನಡುವಿನ ಗಡಿ ಯಾವಾಗಲೂ ಉದ್ವಿಗ್ನವಾಗಿರುತ್ತದೆ. ಆದಾಗ್ಯೂ, ಎರಡೂ ಕಡೆಯ ಸೈನಿಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ದೀಪಾವಳಿ ಸಮಯದಲ್ಲಿ ಭೇಟಿಯಾಗುತ್ತಾರೆ ಮತ್ತು ಸ್ವಾಗತಿಸುತ್ತಾರೆ. ಪ್ರತಿ ವರ್ಷವೂ ತಮ್ಮ ಸಹವರ್ತಿಗಳಿಗೆ ಗಡಿಯುದ್ದಕ್ಕೂ ಸಿಹಿತಿಂಡಿಗಳನ್ನು ಹಂಚುವ ಕೆಲವೇ ಸಂದರ್ಭಗಳಲ್ಲಿ ದೀಪಾವಳಿಯೂ ಒಂದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ