logo
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಶ್ರೀಮಂತಿಕೆ ಪಡೆಯಲು ಚಾಣಕ್ಯ ಸೂಚಿಸಿದ ಮಾರ್ಗಗಳು ಹೀಗಿವೆ; ಈ ಮಾರ್ಗದಲ್ಲಿ ಸಾಗಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಿ

Chanakya Niti: ಶ್ರೀಮಂತಿಕೆ ಪಡೆಯಲು ಚಾಣಕ್ಯ ಸೂಚಿಸಿದ ಮಾರ್ಗಗಳು ಹೀಗಿವೆ; ಈ ಮಾರ್ಗದಲ್ಲಿ ಸಾಗಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಿ

Reshma HT Kannada

Jul 09, 2023 12:00 PM IST

google News

ಶ್ರೀಮಂತಿಕೆ ಚಾಣಾಕ್ಯ ಸೂಚಿಸಿದ ಮಾರ್ಗಗಳು ಹೀಗಿವೆ

    • Never Do This Things With Money: ಆಚಾರ್ಯ ಚಾಣಕ್ಯರು ನೀತಿಶಾಸ್ತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರವನ್ನೂ ಉಲ್ಲೇಖಿಸಿದ್ದಾರೆ. ಹಣಕಾಸು ಹಾಗೂ ಶ್ರೀಮಂತಿಕೆಗೆ ಸಂಬಂಧಿಸಿ ಅವರು ಹೇಳಿದ ಕೆಲವು ನೀತಿಗಳು ಹೀಗಿವೆ. 
ಶ್ರೀಮಂತಿಕೆ ಚಾಣಾಕ್ಯ ಸೂಚಿಸಿದ ಮಾರ್ಗಗಳು ಹೀಗಿವೆ
ಶ್ರೀಮಂತಿಕೆ ಚಾಣಾಕ್ಯ ಸೂಚಿಸಿದ ಮಾರ್ಗಗಳು ಹೀಗಿವೆ

ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ರಾಜಕಾರಿಣಿ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರ ಚಾಣಕ್ಯ ನೀತಿಯಲ್ಲಿ ಹಣಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ಹೇಳಿದ್ದಾರೆ.

ಚಾಣಕ್ಯ ನೀತಿಯಲ್ಲಿ ಹೇಳಿರುವ ಈ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ ಮಾತ್ರವಲ್ಲ, ಶ್ರೀಮಂತಿಕೆಯನ್ನು ಪಡೆಯಲು ಸಾಧ್ಯ. ಅಂತಹವರನ್ನು ತಾಯಿ ಲಕ್ಷ್ಮಿ ಎಂದಿಗೂ ಬಿಡುವುದಿಲ್ಲ. ಮಾತೆ ಲಕ್ಷ್ಮಿಯ ಅನುಗ್ರಹದಿಂದ, ಅಂತಹ ಜನರು ಯಾವಾಗಲೂ ಶ್ರೀಮಂತರಾಗಿ ಉಳಿಯುತ್ತಾರೆ. ಅದೇ ಸಮಯದಲ್ಲಿ ನಾವು ಮಾಡುವ ಕೆಲವು ತಪ್ಪುಗಳಿಂದ ಲಕ್ಷ್ಮಿಯು ಅಸಮಾಧಾನಗೊಳ್ಳುತ್ತಾಳೆ ಮತ್ತು ಅಂತಹ ಜನರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಾರೆ.

ಈ ವಿಷಯಗಳನ್ನು ನೆನಪಿಡಿ

> ಲಕ್ಷ್ಮಿದೇವಿಯು ಕೊಳಕು ಅಶುಚಿಯಾದ ಸ್ಥಳಗಳನ್ನು ಇಷ್ಟಪಡುವುದಿಲ್ಲ. ಯಾರು ಯಾವಾಗಲೂ ಶುಚಿಯಾಗಿರುತ್ತಾರೆ, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುತ್ತಾರೆ, ಅವರು ಯಾವಾಗಲೂ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಅವರನ್ನು ಎಂದಿಗೂ ಹಣದ ಕೊರತೆ ಕಾಡುವುದಿಲ್ಲ.

> ಚಾಣಕ್ಯ ನೀತಿಯ ಪ್ರಕಾರ, ನೀವು ಶ್ರೀಮಂತರಾಗಲು ಬಯಸಿದರೆ ಮೊದಲು ಹಣ ಖರ್ಚು ಮಾಡುವುದರ ಮೇಲೆ ನಿಯಂತ್ರಣ ಹೇರಬೇಕು. ದುಂದುವೆಚ್ಚವು ಶ್ರೀಮಂತನನ್ನು ಆಪತ್ತಿ ಸಿಲುಕುವಂತೆ ಮಾಡಬಹುದು. ಹಾಗಾಗಿ ಆರ್ಥಿಕ ಪರಿಸ್ಥಿತಿ ಎಷ್ಟೇ ಚೆನ್ನಾಗಿರಲಿ ದುಂದು ವೆಚ್ಚ ಮಾಡುವುದನ್ನು ತಪ್ಪಿಸಬೇಕು. ಜೀವನದಲ್ಲಿ ಹಣ ಉಳಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಆದಾಯದ ಒಂದು ಭಾಗವನ್ನು ಚಾರಿಟಿ ಕೆಲಸಗಳಿಗೆ ವಿನಿಯೋಗಿಸಬೇಕು. ಬಡವರಿಗೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರಿಗೆ ತಾಯಿ ಲಕ್ಷ್ಮಿ ಯಾವಾಗಲೂ ದಯೆ ತೋರುತ್ತಾಳೆ.

>ನಿಮಗೆ ಶ್ರೀಮಂತರಾಗುವ ಬಯಕೆ ಇದ್ದರೆ, ಸಜ್ಜನರ ಸಹವಾಸ ಮತ್ತು ನಮ್ರತೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಅತ್ಯಂತ ಶ್ರೀಮಂತ ವ್ಯಕ್ತಿ ಕೂಡ ಕೆಟ್ಟ ಸಹವಾಸದಿಂದ ಬಡವನಾಗುತ್ತಾನೆ. ಮತ್ತೊಂದೆಡೆ, ಒಳ್ಳೆಯ ಜನರ ಸಹವಾಸವು ವ್ಯಕ್ತಿಯನ್ನು ಸಕಾರಾತ್ಮಕ ಮತ್ತು ಪ್ರಬುದ್ಧನನ್ನಾಗಿ ಮಾಡುತ್ತದೆ, ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ. ಸಿಹಿಯಾಗಿ ಮಾತನಾಡುವುದು ವ್ಯಕ್ತಿಯ ಹಲವು ಕಾರ್ಯಗಳನ್ನು ಸುಲಭಗೊಳಿಸುತ್ತದೆ, ಅನೇಕ ತೊಂದರೆಗಳಿಂದ ರಕ್ಷಿಸುತ್ತದೆ. ಗೌರವವನ್ನು ಸಿಗುವಂತೆ ಮಾಡುತ್ತದೆ. ಅಂತಹ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾನೆ. ಅಲ್ಲದೆ ಯಶಸ್ವಿ, ಸಂತೋಷ ಮತ್ತು ಆರಾಮದಾಯಕ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ:

Chanakya Niti: ಜೀವನದಲ್ಲಿ ಈ ಮೂರು ಗುಟ್ಟುಗಳನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬೇಡಿ; ಬದುಕಿನ ಯಶಸ್ಸಿಗೆ ಚಾಣಕ್ಯನ ಪಾಠ ಇಲ್ಲಿದೆ

Secrets You Should Never Share With Anyone: ಚಾಣಕ್ಯರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕೆಲವು ವಿಚಾರಗಳು ಹಾಗೂ ರಸಹ್ಯಗಳು ಇರುತ್ತವೆ. ಅದನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಅವರು ಹೇಳುತ್ತಾರೆ. ಆ ವಿಷಯಗಳನ್ನು ಹಂಚಿಕೊಳ್ಳುವುದರಿಂದ ವೈಯಕ್ತಿಕ ಜೀವನಕ್ಕೆ ಅಪಾಯ ಎನ್ನುವುದು ಚಾಣಾಕ್ಯ ಮಾತು, ಹಾಗಾದರೆ ಅಂತಹ ವಿಚಾರಗಳು ಯಾವುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ