logo
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಬದುಕಿನಲ್ಲಿ ಎಂಥದ್ದೇ ಪರಿಸ್ಥಿತಿ ಬರಲಿ ಈ ಮೂರು ಅಂಶಗಳನ್ನು ಮರೆಯದಿರಿ; ಚಾಣಕ್ಯ ಹೇಳಿದ ಆ ಮೂರು ಅಂಶಗಳು ಯಾವುದು ನೋಡಿ

Chanakya Niti: ಬದುಕಿನಲ್ಲಿ ಎಂಥದ್ದೇ ಪರಿಸ್ಥಿತಿ ಬರಲಿ ಈ ಮೂರು ಅಂಶಗಳನ್ನು ಮರೆಯದಿರಿ; ಚಾಣಕ್ಯ ಹೇಳಿದ ಆ ಮೂರು ಅಂಶಗಳು ಯಾವುದು ನೋಡಿ

Reshma HT Kannada

Jul 17, 2023 01:42 PM IST

google News

ಕಷ್ಟದ ಪರಿಸ್ಥಿತಿಗೆ ಚಾಣಕ್ಯರ ಪಾಠ ಇಲ್ಲಿದೆ

    • Acharya Chanakya: ಆಚಾರ್ಯ ಚಾಣಕ್ಯರು ನೀತಿಶಾಸ್ತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರವನ್ನೂ ಉಲ್ಲೇಖಿಸಿದ್ದಾರೆ. ಕಷ್ಟ ಬಂದಾಗ ಮನುಷ್ಯ ಕೆಲವೊಮ್ಮೆ ಕುಗುತ್ತಾನೆ, ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳತ್ತಾನೆ. ಆದರೆ ಕಷ್ಟದ ಸಂದರ್ಭದಲ್ಲಿ ಈ ಮೂರು ಅಂಶಗಳನ್ನು ಗಮನಿಸಬೇಕು ಎಂದು ಚಾಣಕ್ಯ ಸಲಹೆ ನೀಡುತ್ತಾರೆ.
ಕಷ್ಟದ ಪರಿಸ್ಥಿತಿಗೆ ಚಾಣಕ್ಯರ ಪಾಠ ಇಲ್ಲಿದೆ
ಕಷ್ಟದ ಪರಿಸ್ಥಿತಿಗೆ ಚಾಣಕ್ಯರ ಪಾಠ ಇಲ್ಲಿದೆ

ಆಚಾರ್ಯ ಚಾಣಕ್ಯರ ಬಳಿ ಎಲ್ಲಾ ರೀತಿಯ ಸಮಸ್ಯೆಗಳಿಗೂ ಪರಿಹಾರವಿತ್ತು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷವನ್ನು ಬಯಸುವುದು ಸಹಜ. ಆದರೆ ಜೀವನದಲ್ಲಿ ಹಲವು ಏರಿಳಿತಗಳು ಎದುರಾಗುತ್ತವೆ. ಇದು ಕಾಲನ ನಿಯಮವೂ ಹೌದು. ಈ ಬಗ್ಗೆ ಚಾಣಕ್ಯರು ಹೇಳುವುದು ಹೀಗೆ ʼಜೀವನದಲ್ಲಿ ಆಗಾಗ ಏರಿಳಿತಗಳು ಬರುವುದು ಸಹಜ. ಆದರೆ ತಾಳ್ಮೆ ಕಳೆದುಕೊಳ್ಳಬಾರದುʼ ಎಂದಿರುವ ಅವರು ಬಿಕ್ಕಟ್ಟಿನ ಸಮಯದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನೂ ಹೇಳಿದ್ದಾರೆ.

ನಿಮ್ಮ ಕೆಟ್ಟ ಸಮಯಗಳಿಗೆ ಹೆದರಬೇಡಿ, ಧೈರ್ಯದಿಂದ ಎದುರಿಸಿ. ಕೆಟ್ಟ ಸಮಯ ಎದುರಾಗಲೂ ನಗುತ್ತಾ ಅದನ್ನು ಎದುರಿಸಬೇಕು ಮತ್ತು ಆಗ ಅದು ನಿಮ್ಮನ್ನು ಎಂದಿಗೂ ಪ್ರಾಬಲ್ಯಗೊಳಿಸುವುದಿಲ್ಲ. ಕೆಟ್ಟ ಕಾಲ ಅಥವಾ ಸಂದಿಗ್ಧ ಪರಿಸ್ಥಿತಿಯಲ್ಲಿ ಈ 3 ವಿಷಯಗಳನ್ನು ನೆನಪಿಸಿಕೊಳ್ಳಿ ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಾದರೆ ಆ ಮೂರು ವಿಷಯಗಳು ಯಾವುವು ನೋಡಿ.

ಸಕಾರಾತ್ಮಕ ಭಾವ, ತಿಳುವಳಿಕೆ ಮತ್ತು ತಾಳ್ಮೆ

ಪ್ರತಿಕೂಲ ಸಂದರ್ಭಗಳಲ್ಲಿ ಈ ವಿಷಯಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಬಿಕ್ಕಟ್ಟು ಬಂದಾಗ ಮನಸ್ಸು ಮೆದುಳನ್ನು ಆಳಲು ಬಿಡಬೇಡಿ. ನಿಮ್ಮ ವಿಚಲಿತ ಮನಸ್ಸು ಎಂದಿಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಆಳಲು ಬಿಡಬೇಡಿ. ಹಲವರು ನಿಮ್ಮನ್ನು ಅವಮಾನಿಸಬಹುದು, ನಿಂದಿಸಬಹುದು, ನಿಮ್ಮೊಂದಿಗೇ ಇರುವವರು ನಿಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಹುಟ್ಟುಹಾಕಲು ಪ್ರಯತ್ನಿಸಬಹುದು. ಅಂತಹವರಿಂದ ಅಂತರವನ್ನು ಕಾಯ್ದುಕೊಳ್ಳಿ ಮತ್ತು ಸಜ್ಜನರ ಸಹವಾಸದಲ್ಲಿರಿ. ಸರಿಯಾದ ಸಲಹೆ, ಜ್ಞಾನ, ಅನುಭವ ಮತ್ತು ಧೈರ್ಯ ಯಾವಾಗಲೂ ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮ ಶಕ್ತಿಯಾಗುತ್ತದೆ.

ಒಗ್ಗಟ್ಟು ಧೈರ್ಯ ನೀಡುತ್ತದೆ

ಯಾವುದೇ ಬಿಕ್ಕಟ್ಟನ್ನು ಜಯಿಸಲು ಧೈರ್ಯ ಮತ್ತು ಏಕತೆ ಬಹಳ ಮುಖ್ಯ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಬಿಕ್ಕಟ್ಟಿನ ಸಮಯದಲ್ಲಿ ನೀವು ಅಹಂಕಾರವನ್ನು ದೂರ ಮಾಡಬೇಕು. ಒಗ್ಗಟ್ಟಾಗಿ ಪರಿಸ್ಥಿತಿಯನ್ನು ಎದುರಿಸಬೇಕು. ಕುಟುಂಬ ಅಥವಾ ಸಮಾಜದ ವಿಷಯಕ್ಕೆ ಬಂದಾಗ, ಪರಸ್ಪರರ ಒಡನಾಟದ ಪ್ರಜ್ಞೆಯನ್ನು ಹೊಂದಿರುವುದು ಮುಖ್ಯವಾಗಿದೆ. ಸಂದಿಗ್ಧ ಪರಿಸ್ಥಿತಿಯಲ್ಲೂ ಅಹಂಕಾರದಲ್ಲಿ ವರ್ತಿಸುವುದು ನಿಮ್ಮ ಸೋಲಿಗೆ ಕಾರಣವಾಗಬಹುದು.

ಎಚ್ಚರದಿಂದಿರುವುದು

ಬಿಕ್ಕಟ್ಟಿನ ಸಮಯದಲ್ಲಿ ಜಾಗರೂಕರಾಗಿರುವುದು ಬಹಳ ಮುಖ್ಯ, ಏಕೆಂದರೆ ಬಿಕ್ಕಟ್ಟಿನ ಸಮಯದಲ್ಲಿ ಮನುಷ್ಯನಿಗೆ ಸೀಮಿತ ಅವಕಾಶಗಳಿವೆ ಮತ್ತು ಸವಾಲುಗಳು ದೊಡ್ಡದಾಗಿರುತ್ತವೆ. ಆದ್ದರಿಂದ ಒಂದು ಸಣ್ಣ ತಪ್ಪು ದೊಡ್ಡ ಹಾನಿ ಉಂಟುಮಾಡಬಹುದು. ಹಾಗಾಗಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇರಿಸುವುದು ಮುಖ್ಯವಾಗುತ್ತದೆ. ಅಲ್ಲದೆ ಅಂತಹ ಸಂದರ್ಭಗಳಲ್ಲಿ ಯಾವುದೇ ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳದಿರಿ ಎಂದು ಚಾಣಾಕ್ಯ ಸಲಹೆ ನೀಡುತ್ತಾರೆ.

ಇದನ್ನೂ ಓದಿ

Chanakya Niti: ಶ್ರೀಮಂತಿಕೆ ಪಡೆಯಲು ಚಾಣಕ್ಯ ಸೂಚಿಸಿದ ಮಾರ್ಗಗಳು ಹೀಗಿವೆ; ಈ ಮಾರ್ಗದಲ್ಲಿ ಸಾಗಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಿ

Never Do This Things With Money: ಆಚಾರ್ಯ ಚಾಣಕ್ಯರು ನೀತಿಶಾಸ್ತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರವನ್ನೂ ಉಲ್ಲೇಖಿಸಿದ್ದಾರೆ. ಹಣಕಾಸು ಹಾಗೂ ಶ್ರೀಮಂತಿಕೆಗೆ ಸಂಬಂಧಿಸಿ ಅವರು ಹೇಳಿದ ಕೆಲವು ನೀತಿಗಳು ಹೀಗಿವೆ.

ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ರಾಜಕಾರಿಣಿ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರ ಚಾಣಕ್ಯ ನೀತಿಯಲ್ಲಿ ಹಣಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ಹೇಳಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ