logo
ಕನ್ನಡ ಸುದ್ದಿ  /  ಜೀವನಶೈಲಿ  /  Saturday Motivation: ಪ್ರೀತಿ ಪರಿಸ್ಥಿತಿಗೆ ತಕ್ಕಂತೆ ಬದಲಾಗಬಾರದು, ಬಂಧ ಸದಾ ಸ್ಥಿರವಾಗಿರಬೇಕು

Saturday Motivation: ಪ್ರೀತಿ ಪರಿಸ್ಥಿತಿಗೆ ತಕ್ಕಂತೆ ಬದಲಾಗಬಾರದು, ಬಂಧ ಸದಾ ಸ್ಥಿರವಾಗಿರಬೇಕು

Raghavendra M Y HT Kannada

Feb 10, 2024 07:47 AM IST

google News

ಪ್ರೀತಿ ಪರಿಸ್ಥಿತಿಗೆ ತಕ್ಕಂತೆ ಬದಲಾಗಬಾರದು. ಯಾವಾಗೂ ಸ್ಥಿರವಾಗಿ ಇರಬೇಕು ಎಂಬುದರ ಬಗ್ಗೆ ತಿಳಿಯಿರಿ.

  • Saturday Motivation: ಅನೇಕ ಜನರು ತಾವು ಪ್ರೀತಿಯಲ್ಲಿ ಇರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ಸಂದರ್ಭಗಳು ಬದಲಾದಂತೆ ಅವರ ಪ್ರೀತಿಯೂ ಬದಲಾಗುತ್ತದೆ. ಅದು ನಿಜವಾದ ಪ್ರೀತಿಯೇ ಅಲ್ಲ.

ಪ್ರೀತಿ ಪರಿಸ್ಥಿತಿಗೆ ತಕ್ಕಂತೆ ಬದಲಾಗಬಾರದು. ಯಾವಾಗೂ ಸ್ಥಿರವಾಗಿ ಇರಬೇಕು ಎಂಬುದರ ಬಗ್ಗೆ ತಿಳಿಯಿರಿ.
ಪ್ರೀತಿ ಪರಿಸ್ಥಿತಿಗೆ ತಕ್ಕಂತೆ ಬದಲಾಗಬಾರದು. ಯಾವಾಗೂ ಸ್ಥಿರವಾಗಿ ಇರಬೇಕು ಎಂಬುದರ ಬಗ್ಗೆ ತಿಳಿಯಿರಿ.

Saturday Motivation in Kannada: ನಿಜವಾದ ಪ್ರೀತಿ ಏನು ಅಂತ ಎಂದಾದರೂ ಯೋಜಿಸಿದ್ದೀರಾ? ನಿಜವಾದ ಪ್ರೀತಿ ಸಂದರ್ಭಗಳಿಗೆ ತಕ್ಕಂತೆ ಬದಲಾಗುವುದಿಲ್ಲ. ಇದು ಸಮಸ್ಯೆಗಳು ಮತ್ತು ಸಂತೋಷದ ಸಮಯ ಎರಡೂ ಪರಿಸ್ಥಿತಿಗಳಲ್ಲಿ ಸಹಾಯ ಮಾಡುತ್ತದೆ. ಯಾವಾಗ ಇನ್ನೊಬ್ಬರಿಗೆ ತೊಂದರೆ ಆಗುತ್ತೋ ಆ ಸಮಯದಲ್ಲಿ ಪ್ರೀತಿ ಕಡಿಮೆಯಾಗಿದೆ ಎಂದರೆ ನಿಮ್ಮ ಪ್ರೀತಿ ಪ್ರಮಾಣಿಕವಾಗಿಲ್ಲ ಎಂದರ್ಥ.

ಪ್ರೀತಿ ಒಂದು ಪವಿತ್ರ ಭಾವನಾತ್ಮಕ ಭಾವನೆ. ಇದು ಯಾವುದೇ ಪ್ರತಿಫಲವನ್ನು ನಿರೀಕ್ಷಿಸುವುದಿಲ್ಲ. ಇಷ್ಟಪಟ್ಟವರ ಮನಸನ್ನು ಮಾತ್ರ ಕೋರುತ್ತದೆ. ಅವರಿಂದ ನಿಸ್ವಾರ್ಥ ಪ್ರೀತಿಯನ್ನು ಮಾತ್ರ ನಿರೀಕ್ಷಿಸುತ್ತದೆ.

ಸೌಂದರ್ಯವನ್ನ ನೋಡಿ ಹುಟ್ಟುವ ಪ್ರೀತಿ ನಿಜವಾದ ಪ್ರೀತಿಯಲ್ಲ

ನೀವು ಇತರರಿಂದ ಹಣ ಅಥವಾ ಇತರೆ ಸುಖವನ್ನುು ಮಾತ್ರ ಬಯಸಿದರೆ, ನಿಮ್ಮ ಪ್ರೀತಿಯಲ್ಲಿ ನೀವು ಪ್ರಾಮಾಣಿಕವಾಗಿಲ್ಲ ಎಂದರ್ಥ. ಅದು ಸನ್ನಿವೇಶಗಳಿಂದ ಹುಟ್ಟಿದೆಯೇ ಹೊರತು ಸ್ಥಿರವಾಗಿರುವುದಿಲ್ಲ. ಜಗತ್ತಿನಲ್ಲಿ ಪ್ರೀತಿಸುವ ಅನೇಕ ಜನರಿದ್ದಾರೆ. ಆದರೆ ಅವರ ಪ್ರೀತಿಯಲ್ಲಿ ಸತ್ಯ ತಿಳಿದವರ ಸಂಖ್ಯೆ ತೀರಾ ಕಡಿಮೆ. ಸೌಂದರ್ಯವನ್ನು ನೋಡಿ ಎಷ್ಟೋ ಜನ ಇಷ್ಟಪಡುತ್ತಾರೆ, ಪ್ರೀತಿಸುತ್ತಾರೆ. ಆದರೆ ಆ ಸೌಂದರ್ಯ ಕಡಿಮೆಯಾಗುತ್ತಿದ್ದಂತೆ ಪ್ರೀತಿಯೂ ಕಡಿಮೆಯಾಗುತ್ತದೆ. ಇಷ್ಟಪಟ್ಟವರು ಸುಂದರವಾಗಿರಲಿ, ಇಲ್ಲದಿರಲಿ, ಹಣವಿರಲಿ, ಇಲ್ಲದಿರಲಿ, ಕೆಲಸವಿರಲಿ ಇಲ್ಲದಿರಲಿ, ಅವರ ಮೇಲಿರುವ ಪ್ರೀತಿ ಎಂದೂ ಕಡಿಮೆಯಾಗುವುದಿಲ್ಲ. ಅದೇ ನಿಜವಾದ ಪ್ರೀತಿ.

ಪ್ರೀತಿಸಲು ಶುದ್ಧ ಹೃದಯ ಬೇಕು. ದೋಷರಹಿತ ವ್ಯಕ್ತಿತ್ವ ಬೇಕು. ನೀವು ಅಂತಹ ವ್ಯಕ್ತಿಯಾಗಿದ್ದರೆ ನಿಜವಾದ ಪ್ರೀತಿಯ ಅರ್ಥ ನಿಮಗೆ ತಿಳಿಯುತ್ತದೆ. ಪ್ರೀತಿ ಶತ್ರುಗಳನ್ನು ಸ್ನೇಹಿತರನ್ನಾಗಿ ಮಾಡುತ್ತದೆ. ಪ್ರೀತಿ ಹುಟ್ಟುವುದು ಹೃದಯದಲ್ಲಿ. ಹೃದಯ ಯಾವಾಗೂ ಶುದ್ಧವಾಗಿ ಇರುತ್ತೆ. ಮೊದಲು ಪರಿಚಯವಾಗುತ್ತದೆ, ಆನಂತರ ಅವರು ಇಷ್ಟವಾಗುತ್ತಾರೆ, ಅವರ ಮೇಲಿನ ಗೌರವ ಹೆಚ್ಚಾಗುತ್ತದೆ. ನಂತರ ಪ್ರೀತಿ ಹುಟ್ಟುತ್ತದೆ ಇದೆಲ್ಲಕ್ಕೂ ಕೆಲವು ತಿಂಗಳುಗಳೇ ಬೇಕಾಗುತ್ತದೆ. ಹೀಗೆ ಬೆಳೆಯುವ ಪ್ರೀತಿ ವರ್ಷಗಳು ಕಳೆದರೂ ಮಾಸುವುದಿಲ್ಲ.

ಆಳವಾದ ಪ್ರೀತಿ ಬೇಷರತ್ತಾಗಿರುತ್ತದೆ. ಇತರರು ಒಬ್ಬರ ಆಸೆಗಳನ್ನು ಮತ್ತು ಮಹತ್ವಾಕಾಂಕ್ಷೆಗಳನ್ನು ಗೌರವಿಸಬೇಕು. ನಾವು ನಮ್ಮ ಆಲೋಚನೆಗಳು, ಮಹತ್ವಾಕಾಂಕ್ಷೆಗಲು, ಆಸೆಗಳಿಗಿಂತ ಪ್ರೀತಿಪಾತ್ರರ ಆಶಯಗಳಿಗೆ ಹೆಚ್ಚಿನ ಮೌಲ್ಯವನ್ನು ನೀಡಬೇಕು. ಆಗ ಮಾತ್ರ ಸಂಬಂಧಗಳು ದೀರ್ಘಕಾಲದವರೆಗೆ ಉಳಿಯುತ್ತವೆ.

ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದರೆ, ಎರಡೇ ದಿನದಲ್ಲಿ ಪ್ರಪೋಸ್ ಮಾಡಿ ಮೂರನೇ ದಿನಕ್ಕೆ ಮದುವೆಯಾದರೆ ಆ ಸಂಬಂಧಗಳು ಹೆಚ್ಚು ಕಾಲ ಉಳಿಯವ ಸಾಧ್ಯತೆ ತೀರಾ ಕಡಿಮೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆಗ ಮಾತ್ರ ಗಟ್ಟಿ ಪ್ರೀತಿ ನಿಲ್ಲುತ್ತದೆ.

ಪ್ರೀತಿಯಲ್ಲಿ ಸೋಲು ಜೀವನದ ಅಂತ್ಯವಲ್ಲ, ನಿಜವಾದ ಆರಂಭ

ಪ್ರೀತಿ ವಿಫಲವಾದರೆ, ಅನೇಕ ಜನರು ಹುಚ್ಚರಾಗುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಅಂತಕ್ಕೂ ಕೆಲವರು ಹೋಗಿದ್ದಾರೆ. ಕೆಲವರು ಪ್ರೀತಿಯಲ್ಲಿ ಸೋಲಿಗೆ ಕಾರಣರಾದವರನ್ನು ಕ್ರೂರವಾಗಿ ಕೊಲ್ಲುತ್ತಿದ್ದಾರೆ. ಪ್ರೀತಿಯಲ್ಲಿ ಸೋತರೆ ಜೀವನದಲ್ಲಿ ಸೋತಂತೆ ಅಲ್ಲ. ಪ್ರೀತಿಯಲ್ಲಿ ಸೋತರೆ ಜೀವನದಲ್ಲಿ ಒಂದು ತಿರುವಿನಲ್ಲಿ ಮಾತ್ರ ಹಿಂದೆ ಹೆಜ್ಜೆ ಇಟ್ಟಿರುತ್ತೀರಿ, ಜೀವನದಲ್ಲಿ ಇಂತಹ ಅನೇಕ ತಿರುವುಗಳಿವೆ. ಪ್ರತಿ ತಿರುವು ನಿಮ್ಮ ಗೆಲುವಿಗಾಗಿ ಕಾಯುತ್ತಿದೆ. ಆದರೆ ಪ್ರೀತಿಯ ಟರ್ನಿಂಗ್ ಪಾಯಿಂಟ್‌ನಲ್ಲಿ ನೀವು ಗೆದ್ದರೆ ಇತರ ಎಲ್ಲಾ ವಿಜಯಗಳು ನಿಮ್ಮದೇ ಆಗುತ್ತದೆ.(This copy first appeared in Hindustan Times Kannada website. To read more like this please logon to kannada.hindustantime.com).

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ