ಕಾರ್ತಿಕ ಮಾಸದ ಸ್ನಾನ, ದೀಪೋತ್ಸವದ ಹಿಂದಿನ ವೈಜ್ಞಾನಿಕ ಕಾರಣಗಳೇನು? ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳ್ತಾರೆ ಕೇಳಿ
Nov 24, 2023 12:48 PM IST
ಕಾರ್ತಿಕ ಮಾಸದ ದೀಪಾರಾಧನೆ, ಸ್ನಾನದ ಹಿಂದಿದೆ ವೈಜ್ಞಾನಿಕ ಕಾರಣಗಳು
Kartika Masam: ಕಾರ್ತಿಕ ಮಾಸದಲ್ಲಿ ದಿನವೂ ತಣ್ಣೀರಿನಿಂದ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ, ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳುವುದು ಸರಿಯಲ್ಲ. ಈ ಚಳಿ ಮತ್ತು ಬರಲಿರುವ ಹೆಚ್ಚಿನ ಚಳಿಯನ್ನು ತಡೆದುಕೊಳ್ಳಲು ದೇಹ ಒಗ್ಗಿಸಿಕೊಳ್ಳಲಿ ಎಂಬ ಕಾರಣಕ್ಕೆ ಹಿರಿಯರು ಈ ಸ್ನಾನದ ನಿಯಮವನ್ನು ಸ್ಥಾಪಿಸಿದ್ದಾರೆ.
Kartika Masam: ಕಾರ್ತಿಕ ಮಾಸದಲ್ಲಿ ಪ್ರತಿ ದಿನವೂ ಮನೆ, ದೇವಸ್ಥಾನದಲ್ಲಿ ಬೆಳಗ್ಗೆ, ಸಂಜೆ ಹಾಗೂ ಪ್ರದೋಷ ಕಾಲದಲ್ಲಿ ಎಳ್ಳೆಣ್ಣೆ ಅಥವಾ ತುಪ್ಪದ ದೀಪಗಳನ್ನು ಬೆಳಗಿಸಲಾಗುತ್ತಿದೆ. ಪ್ರತಿದಿನ ಸಾಧ್ಯವಾಗದಿದ್ದರೆ ಕಾರ್ತಿಕ ಸೋಮವಾರ, ಕಾರ್ತಿಕ ಏಕಾದಶಿ, ದ್ವಾದಶಿ, ಹುಣ್ಣಿಮೆಯ ತಿಥಿಗಳಂದು ದೀಪ ಬೆಳಗಿಸುವುದರಿಂದ ಸನಾತನ ಧರ್ಮವನ್ನು ಆಚರಿಸುವವರಿಗೆ ಕಾರ್ತಿಕ ಮಾಸ ದೀಪದ ಪುಣ್ಯ ಫಲ ಸಿಗುತ್ತದೆ ಎಂದು ಖ್ಯಾತ ಆಧ್ಯಾತ್ಮಿಕ, ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಹತ್ತಿ ದೀಪ ಬೆಳಗುವುದೇಕೆ?
ಹತ್ತಿಯಿಂದ ಮಾಡಿದ ತೆಳುವಾದ ದಾರದಿಂದ ಮಾಡಿದ ವಸ್ತುವನ್ನು ದತ್ತಿ ಎನ್ನುತ್ತಾರೆ. ಸಂಸ್ಕೃತದಲ್ಲಿ ಇದನ್ನು ವರ್ತಿ ಎನ್ನುತ್ತಾರೆ. ಇದನ್ನು ಲಕ್ಷವರ್ತಿ ವ್ರತಂ ಎಂದು ಕರೆಯಾಗುತ್ತದೆ. ಹತ್ತು ಜನ ಸ್ತ್ರೀಯರು ಒಟ್ಟಾಗಿ ವಿಷ್ಣು ಸಹಸ್ರನಾಮ ಅಥವಾ ಲಲಿತಾ ಸಹಸ್ರನಾಮವನ್ನು ಪಠಿಸುತ್ತಾ ಈ ರೀತಿ ವತ್ತುಗಳನ್ನು ತಯಾರಿಸುವುದು ಸಂಪ್ರದಾಯ. ಹತ್ತಿಯಿಂದ ಮಾಡಿದ ಬತ್ತಿಯು ಎಣ್ಣೆಯನ್ನು ಹೀರಿಕೊಂಡು ಬಿಡುವ ಹೊಗೆಯು ಕ್ರಿಮಿ ಕೀಟಗಳನ್ನು ನಾಶ ಮಾಡುತ್ತದೆ. ಆದ್ದರಿಂದಲೇ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಬಹಳ ಪ್ರಾಮುಖ್ಯತೆ ಪಡೆದಿದೆ.
ಉಪವಾಸ
ಕಾರ್ತಿಕ ಮಾಸದಲ್ಲಿ ಉಪವಾಸ ಮಾಡುವ ಮೂಲಕವೂ ಕೆಲವರು ದೇವರ ಪೂಜೆ ಮಾಡುತ್ತಾರೆ. ಕೆಲವರು ನೀರು ಕುಡಿಯದೆ ಕೂಡಾ ಉಪವಾಸ ಮಾಡುತ್ತಾರೆ. ಹೀಗೆ ಮಾಡಿದರೆ ಬಹಳ ಪುಣ್ಯ ಲಭಿಸುತ್ತದೆ ಎಂದೂ ಜನರು ಹೇಳುತ್ತಾರೆ. ಆದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ನಾವು ಪ್ರಜ್ಞಾಹೀನ ಸ್ಥಿತಿಗೆ ಹೋಗುತ್ತೇವೆ. ಆದರೆ ಜ್ಯೇಷ್ಠ ಮಾಸದಲ್ಲಿ ಬರುವ ಏಕಾದಶಿಯನ್ನು ನಿರ್ಜಲ ಏಕಾದಶಿಯಂದು ಎಷ್ಟು ಸಮಯದವರೆಗೂ ನೀರು ಕುಡಿಯದೆ ಇರಲು ಸಾಧ್ಯವೋ ಅಲ್ಲಿವರೆಗೂ ಇದ್ದು ನಂತರ ನೀರು ಕುಡಿಯಬಹುದು. ಆದರೆ ನಿಮ್ಮ ದೇಹ ಸಹಕರಿಸದ ಸಮಯದಲ್ಲಿ ತಪ್ಪದೆ ನೀರು ಕುಡಿಯಬೇಕು. ಹಾಗೇ ಕಾರ್ತಿಕ ಮಾಸದಲ್ಲಿ ಮಾಡುವ ಉಪವಾಸ ಕೂಡಾ ಬಹಳ ಪ್ರಾಮುಖ್ಯತೆ ಪಡೆದಿದೆ. ಆದರೆ ನೀರು ಕುಡಿಯದೆ ಉಪವಾಸ ಮಾಡುವುದು ಅಜ್ಞಾನ ಎಂದು ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳುತ್ತಾರೆ. ಉಪವಾಸ ಮಾಡುವಾಗ ಪ್ರತಿ 3 ಗಂಟೆಗೊಮ್ಮೆ ಸ್ವಲ್ಪ ಪ್ರಮಾಣದ ನಿಂಬೆ ರಸವನ್ನು ಜೇನುತುಪ್ಪದೊಂದಿಗೆ ನೀರಿನಲ್ಲಿ ಬೆರೆಸಿ ಸೇವಿಸಿ ದೈವಿಕ ಧ್ಯಾನ ಮಾಡಿದರೆ ಉಪವಾಸ ಪೂರ್ಣವಾಗುತ್ತದೆ. ಇದರಿಂದ ದೇಹಕ್ಕೆ ಶಕ್ತಿಯೂ ದೊರೆಯುತ್ತದೆ.
ಜಾಗರಣೆ
ಕಾರ್ತಿಕ ಸೋಮವಾರ, ಶಿವರಾತ್ರಿ ಹಾಗೂ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಕೆಲವರು ಜಾಗರಣೆ ಆಚರಿಸುತ್ತಾರೆ. ಆದರೆ ಜಾಗರಣೆ ಎಂದರೆ ವ್ಯವಹಾರ ಜ್ಞಾನ ಎಂದರ್ಥ. ಜಾಗರಣೆ ಎಂದರೆ ತನ್ನನ್ನು ತಾನು ಅರಿತುಕೊಳ್ಳುವುದು. ನೀವು ಹುಟ್ಟಿ ಎಷ್ಟು ವರ್ಷಗಳಾಯ್ತು? ಇಲ್ಲಿವರೆಗೂ ಎಷ್ಟು ಅಭಿವೃದ್ಧಿ ಹೊಂದಿದ್ದೇವೆ? ಎಷ್ಟು ನಷ್ಟವಾಗಿದೆ? ಯಾವ ಕಾರಣಗಳಿಂದ ನಾನು ಸಮಸ್ಯೆ ಅನುಭವಿಸುತ್ತಿದ್ದೇನೆ? ಎಂಬುದನ್ನು ನಿಮ್ಮನ್ನು ನೀವೇ ಅವಗಾಹನೆ ಮಾಡಿಕೊಳ್ಳುವುದನ್ನೇ ಜಾಗರಣೆ/ಜಾಗ್ರತೆ ಎನ್ನುತ್ತಾರೆ.
ಹಿರಿಯರು, ನೀವು ಎಚ್ಚರವಾಗಿರಿ ಯಾವಾಗಲೂ ಸಮಯದ ಮಹತ್ವವನ್ನು ಅರಿತುಕೊಳ್ಳಿ ಎಂದು ಬದುಕುವ ಮಾರ್ಗವನ್ನು ಅನುಸರಿಸಲು ಹೇಳುತ್ತಿದ್ದರು ಆದರೆ ಒಂದು ದಿನ ಎಚ್ಚರವಾಗಿರಿ ನಂತರ ಮಲಗಿ ಎಂದು ಎಂದಿಗೂ ಹೇಳಿಲ್ಲ. ನಾವು ಅವರ ಮಾತನ್ನೂ ಅರ್ಥಮಾಡಿಕೊಳ್ಳದೆ ಜಾಗರಣೆ ಪದದ ಅರ್ಥವನ್ನು ಬದಲಾಯಿಸಿದ್ದೇವೆ ಎನ್ನುತ್ತಾರೆ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ.
ಕಾರ್ತಿಕ ಸ್ನಾನ
ಕಾರ್ತಿಕ ಮಾಸದಲ್ಲಿ ದಿನವೂ ತಣ್ಣೀರಿನಿಂದ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ, ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳುವುದು ಸರಿಯಲ್ಲ. ಈ ಚಳಿ ಮತ್ತು ಬರಲಿರುವ ಹೆಚ್ಚಿನ ಚಳಿಯನ್ನು ತಡೆದುಕೊಳ್ಳಲು ದೇಹ ಒಗ್ಗಿಸಿಕೊಳ್ಳಲಿ ಎಂಬ ಕಾರಣಕ್ಕೆ ಹಿರಿಯರು ಈ ಸ್ನಾನದ ನಿಯಮವನ್ನು ಸ್ಥಾಪಿಸಿದ್ದಾರೆ. ವೃದ್ಧರು ಹಾಗೂ ಮಕ್ಕಳು ತಣ್ಣೀರಿನ ಸ್ನಾನ ಮಾಡಿದರೆ ಅವರು ಖಂಡಿತ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದ್ದರಿಂದ ಮನುಷ್ಯನ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡೇ ವೇದಗಳಲ್ಲಿ ಕೆಲವೊಂದು ವಿಚಾರಗಳನ್ನು ತಿಳಿಸಲಾಗಿದೆ. ಅಪೋಹಿಷ್ಠಮಯೋಭುವಃ ಎಂಬ ಕೆಲವು ಮಂತ್ರಗಳಿವೆ. ಅವುಗಳನ್ನು ಓದುವಾಗ ಮಾಡುವ ಸ್ನಾನವನ್ನು ಮಂತ್ರಸ್ನಾನ ಎನ್ನುತ್ತಾರೆ. ಹಾಗೇ ವೈಯಾಸ್ನಾನ, ಆಗ್ನೇಯ ಸ್ನಾನ, ಕಪಿಲಾ ಸ್ನಾನ, ವರುಣ ಸ್ನಾನ ಎಂದು ಅನೇಕ ವಿಧಗಳಿವೆ. ನಿಮಗೆ ಅನುಕೂಲಕರವಾದ ರೀತಿ ನೀವು ಸ್ನಾನ ಮಾಡಬಹುದು.
ಆಕಾಶದೀಪ ದರ್ಶನ
ಚಿಲಕಮರ್ಥಿ ಪ್ರಭಾಕರ ಚಕ್ರವರ್ತಿ ಶರ್ಮಾ ಮಾತನಾಡಿ, ಈ ಕಾರ್ತಿಕ ಮಾಸದಲ್ಲಿ ಎಲ್ಲಾ ಪಿತೃದೇವತೆಗಳು ಅದೃಶ್ಯ ರೂಪದಲ್ಲಿ ಬಂದು ವಂಶಸ್ಥರಿಗೆ ಆಶೀರ್ವಾದ ಮಾಡುವುದರಿಂದ ದೇವಸ್ಥಾನದಲ್ಲಿರುವ ಧ್ವಜಸ್ತಂಭದ ಮೇಲಿರುವ ಆಕಾಶದೀಪಕ್ಕೆ ನಮನ ಸಲ್ಲಿಸಿದರೆ ಆಕಾಶದೀಪ ದರ್ಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ.