Ayurveda: ಪ್ರಕೃತಿ ನೀಡಿರುವ ಈ 5 ಆಯುರ್ವೇದ ಮನೆಮದ್ದುಗಳನ್ನು ಬಳಸಿದರೆ ಎಲ್ಲಾ ಚರ್ಮದ ಸಮಸ್ಯೆಗೂ ಮುಕ್ತಿ
Nov 15, 2023 04:54 PM IST
ಚರ್ಮದ ಕಾಳಜಿಗೆ ಆಯುರ್ವೇದ
Ayurveda: ತುಪ್ಪ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮದ ಸಮಸ್ಯೆಗೂ ಪರಿಣಾಮಕಾರಿಯಾಗಿದೆ. ಇದರಲ್ಲಿ ಒಮೆಗಾ ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣಾ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಸ್ವತಂತ್ರ್ಯ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಮತ್ತ ಚರ್ಮವನ್ನು ಪೋಷಿಸುತ್ತದೆ. ಚರ್ಮ ಶುಷ್ಕವಾಗುವುದನ್ನು ತಡೆಯುತ್ತದೆ.
Ayurveda: ಪುರಾತನ ಕಾಲದಲ್ಲಿ ಈಗಿನಂತೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳಿರಲಿಲ್ಲ. ಆಗೆಲ್ಲಾ ಆಯುರ್ವೇದವೇ ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು. ಕಾಲ ಬದಲಾದರೂ ಆಯುರ್ವೇದ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಎಲ್ಲಾ ಚರ್ಮದ ಪ್ರಕಾರಗಳಿಗೆ ಎಲ್ಲಾ, ವಯಸ್ಸಿನವರೆಗೆ ಆಯುರ್ವೇದ ಹೊಂದುತ್ತದೆ. ಆದ್ದರಿಂದ ಇದು ಪ್ರತಿದಿನ ಬಳಕೆಯಾಗುತ್ತಿದೆ.
ನಮ್ಮ ಅಡುಗೆ ಮನೆ, ಮನೆಯ ಸುತ್ತಮುತ್ತ ದೊರೆಯುವ ಕೆಲವೊಂದು ಗಿಡಮೂಲಿಕೆಗಳು ನಮ್ಮ ಸೌಂದರ್ಯವನ್ನು ಹೆಚ್ಚುಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವೊಂದನ್ನು ನೀವೇ ತಯಾರಿಸಕೊಳ್ಳಬಹುದು. ಇನ್ನೂ ಕೆಲವೊಂದನ್ನು ಅಂಗಡಿಯಿಂದ ಖರೀದಿಸಿ ತರಬೇಕಾಗುತ್ತದೆ. ಈ 5 ಆಯುರ್ವೇದ ಪದಾರ್ಥಗಳನ್ನು ನೀವು ಬಳಸಿದರೆ ನಿಮ್ಮ ಬಹುತೇಕ ಚರ್ಮದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.
ಕುಂಕುಮಾದಿ ತೈಲ
ಕುಂಕುಮಾದಿ ತೈಲವು ಗಿಡಮೂಲಿಕೆಗಳು ಹಾಗೂ ಎಣ್ಣೆಯ ಮಿಶ್ರಣವಾಗಿದೆ. ಇದರಲ್ಲಿ ಶುದ್ಧ ಕೇಸರಿಯನ್ನು ಬಳಸಲಾಗಿದ್ದು ಇದು ಚರ್ಮವು ಮೃದುವಾಗಿಡಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ಒಣ ಹಾಗೂ ಒರಟು ಚರ್ಮವನ್ನು ಸಮತೋಲದಲ್ಲಿಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಮೊಡವೆಗಳು, ಬ್ಲಾಕ್ ಹೆಡ್, ಓಪನ್ ಪೋರ್ಸ್ ಹಾಗೂ ಇನ್ನೂ ಅನೇಕ ಚರ್ಮಸಂಬಂಧಿ ಸಮಸ್ಯೆಗಳಿಗೆ ಇದು ನೈಸರ್ಗಿಕ ಮನೆ ಮದ್ದಾಗಿ ಕಾರ್ಯ ನಿರ್ವಹಿಸುತ್ತದೆ.
ತುಳಸಿ
ತುಳಸಿಯಲ್ಲಿ ಆಂಟಿಫಂಗಲ್, ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ತುಳಸಿ ಕೂಡಾ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುವ ಗುಣವನ್ನೊಂದಿದೆ. ತುಳಸಿಯು ರಕ್ತ ಮತ್ತು ಚರ್ಮದಿಂದ ವಿಷ ಹಾಗೂ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವ ಮೂಲಕ ರಕ್ತವನ್ನು ಶುದ್ಧೀಕರಿಸುತ್ತದೆ. ಅಲ್ಲದೆ ಚರ್ಮದಿಂದ ಹೆಚ್ಚವರಿ ಎಣ್ಣೆ ಹಾಗೂ ತೇವಾಂಶವನ್ನು ಹೀರಿಕೊಳ್ಳುತ್ತದೆ.
ಅಲೊವೆರಾ
ಅಲೊವೆರಾ ಕೂಡಾ ಚರ್ಮಕ್ಕೆ ಬಹಳ ಉಪಯುಕ್ತವಾಗಿದೆ. ಇದು ಸಾಮಾನ್ಯ ಮತ್ತು ಪರಿಣಾಮಕಾರಿ ಮನೆ ಮದ್ದಾಗಿದೆ. ಲೋಳೆಸರದಲ್ಲಿ ಕೂಲಿಂಗ್ ಮತ್ತು ಉರಿಯೂತದ ಲಕ್ಷಣಗಳಿವೆ. ಇದು ಚರ್ಮದ ಒಣ ತುರಿಕೆಯನ್ನು ನಿವಾರಿಸುತ್ತದೆ. ಶುಷ್ಕ ಹಾಗೂ ಉರಿಯೂತದ ಲಕ್ಷಣಗಳನ್ನು ಕೂಡಾ ಶಮನ ಮಾಡುತ್ತದೆ.
ತುಪ್ಪ
ತುಪ್ಪ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮದ ಸಮಸ್ಯೆಗೂ ಪರಿಣಾಮಕಾರಿಯಾಗಿದೆ. ಇದರಲ್ಲಿ ಒಮೆಗಾ ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣಾ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಸ್ವತಂತ್ರ್ಯ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಮತ್ತ ಚರ್ಮವನ್ನು ಪೋಷಿಸುತ್ತದೆ. ಚರ್ಮ ಶುಷ್ಕವಾಗುವುದನ್ನು ತಡೆಯುತ್ತದೆ. ಬೆಣ್ಣೆ ಹಾಗೂ ಎಣ್ಣೆಯಂತ ಉತ್ಪನ್ನಗಳು ಚರ್ಮದ ಆಳವಾದ ಪದರಗಳನ್ನು ತಲುಪಿ ಪೋಷಣೆ ಮಾಡುತ್ತವೆ.
ಕೇಸರಿ
ಕೇಸರಿಯಲ್ಲಿ ಉರಿಯೂತ ಮತ್ತು ಹೈಪರ್‌ಪಿಗ್ಮೆಂಟೇಷನ್ ವಿರುದ್ಧ ಕೆಲಸ ಮಾಡುವ ಸಕ್ರಿಯ ಗುಣವನ್ನೊಂದಿದೆ. ಕೇಸರಿ ನೈಸರ್ಗಿಕ ಸಂಯುಕ್ತವಾಗಿದ್ದು ಇದು ಚರ್ಮದ ಸಮಸ್ಯೆಯನ್ನು ಗುಣಪಡಿಸುವ ತ್ವರಿತ ಸಮಸ್ಯೆಯಾಗಿದೆ.