logo
ಕನ್ನಡ ಸುದ್ದಿ  /  ಜೀವನಶೈಲಿ  /  Spicy Tomato Omelette: ದಿನವಿಡೀ ಹೊಟ್ಟೆ ತುಂಬಿದಂತೆ ಇರಬೇಕಾ? ಪ್ರೋಟಿನ್‌ ಭರಿತ ಸ್ಪೈಸಿ ಟೊಮೆಟೊ ಆಮ್ಲೆಟ್‌ ಸೇವಿಸಿ, ರೆಸಿಪಿ ಇಲ್ಲಿದೆ

Spicy Tomato Omelette: ದಿನವಿಡೀ ಹೊಟ್ಟೆ ತುಂಬಿದಂತೆ ಇರಬೇಕಾ? ಪ್ರೋಟಿನ್‌ ಭರಿತ ಸ್ಪೈಸಿ ಟೊಮೆಟೊ ಆಮ್ಲೆಟ್‌ ಸೇವಿಸಿ, ರೆಸಿಪಿ ಇಲ್ಲಿದೆ

Rakshitha Sowmya HT Kannada

Mar 14, 2024 08:16 AM IST

google News

ಸ್ಪೈಸಿ ಟೊಮೆಟೊ ಆಮ್ಲೆಟ್‌ ರೆಸಿಪಿ

  • Spicy Tomato Omelette:  ಬೆಳಗಿನ ಉಪಹಾರ ಎಲ್ಲರಿಗೂ ಬಹಳ ಮುಖ್ಯ. ಅದರಲ್ಲೂ ಅದು ಪ್ರೋಟೀನ್‌ಯುಕ್ತ ಆಹಾರವಾಗಿದ್ದರೆ ದಿನವಿಡೀ ನಾವು ಖುಷಿಯಿಂದ ಇರಬಹುದು. ನೀವು ಇಂದಿನ ತಿಂಡಿಗೆ ಏನು ತಯಾರಿಸಬೇಕು ಎಂದು ಯೋಚನೆ ಮಾಡುತ್ತಿದ್ದರೆ ಸ್ಪೈಸಿ ಟೊಮೆಟೊ ಆಮ್ಲೆಟ್‌ ತಯಾರಿಸಿ, ರೆಸಿಪಿ ಇಲ್ಲಿದೆ. 

ಸ್ಪೈಸಿ ಟೊಮೆಟೊ ಆಮ್ಲೆಟ್‌ ರೆಸಿಪಿ
ಸ್ಪೈಸಿ ಟೊಮೆಟೊ ಆಮ್ಲೆಟ್‌ ರೆಸಿಪಿ

ಮಸಾಲೆ ಟೊಮೆಟೊ ಆಮ್ಲೆಟ್: ಬೆಳಗಿನ ಗಡಿಬಿಡಿಯಲ್ಲಿ ತಿಂಡಿ ಮಾಡುವುದು ಎಲ್ಲರಿಗೂ ದೊಡ್ಡ ಟಾಸ್ಕ್‌. ಸುಲಭವಾಗಿ, ರುಚಿಯಾಗಿ ತಯಾರಾಗುವಂಥ ತಿಂಡಿ ಆದ್ರೆ ಸರಿ, ತಿಂಡಿ ತಯಾರಿಸಲು ಗಂಟೆಗಟ್ಟಲೆ ಹಿಡಿದರೆ ಮೂಡ್‌ ಆಫ್‌ ಆದಂತೆ. ಸಾಮಾನ್ಯವಾಗಿ ಬೆಳಗಿನ ಉಪಹಾರಕ್ಕೆ ಪ್ರೋಟಿನ್‌ಭರಿತ ಆಹಾರ ಸೇವಿಸಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ.

ಪ್ರೋಟೀನ್‌ ಎಂದ ಕೂಡಲೇ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಮೊಟ್ಟೆ. ಇದನ್ನು ನೀವು ಬೇಯಿಸಿ, ಬುರ್ಜಿ ಮಾಡಿಕೊಂಡು ಅಥವಾ ಆಮ್ಲೆಟ್‌ ಮಾಡಿಕೊಂಡು ಕೂಡಾ ತಿನ್ನಬಹುದು. ಪ್ರೊಟೀನ್‌ಯುಕ್ತ ಆಹಾರ ಸೇವಿಸುವುದರಿಂದ ಬೇಗ ಹಸಿವಾಗುವುದಿಲ್ಲ. ಸೇವಿಸುವವರು ದಿನವಿಡೀ ಉಲ್ಲಾಸದಿಂದ ಇರಬಹುದು. ಮಕ್ಕಳು ಮನೆ ಮಂದಿಗೆಲ್ಲಾ ಇಷ್ಟವಾಗುವ ಸ್ಪೈಸಿ ಟೊಮೆಟೊ ಆಮ್ಲೆಟ್‌ ತಯಾರಿಸಿ, ರೆಸಿಪಿ ಇಲ್ಲಿದೆ.

ಸ್ಪೈಸಿ ಟೊಮೆಟೊ ಆಮ್ಲೆಟ್‌ ತಯಾರಿಸಲು ಬೇಕಾದ ಪದಾರ್ಥಗಳು

  • ಮೊಟ್ಟೆ - 2
  • ಟೊಮೆಟೊ - 1
  • ಈರುಳ್ಳಿ - 1
  • ಮೆಣಸಿನಕಾಯಿ - 1
  • ಧನಿಯಾ ಪುಡಿ - 1 ಚಮಚ
  • ಅರಿಶಿನ - ಚಿಟಿಕೆ
  • ಕರಿ ಮೆಣಸಿನ ಪುಡಿ - ಚಿಟಿಕೆ
  • ಗರಂ ಮಸಾಲಾ - ಚಿಟಿಕೆ
  • ಎಣ್ಣೆ - ಸಾಕಷ್ಟು
  • ಉಪ್ಪು - ರುಚಿಗೆ

ಇದನ್ನೂ ಓದಿ: ಕೊತ್ತಂಬರಿ ಚಟ್ನಿ, ಮಸಾಲಾ ಚಟ್ನಿ; ದೋಸೆ, ಇಡ್ಲಿಗೆ ಸರಿ ಹೊಂದುವ ದೀಢೀರ್‌ ಚಟ್ನಿ ರೆಸಿಪಿಗಳು

ಸ್ಪೈಸಿ ಟೊಮೆಟೊ ಆಮ್ಲೆಟ್‌ ತಯಾರಿಸುವ ವಿಧಾನ

  • ಒಂದು ಬೌಲ್‌ನಲ್ಲಿ ಮೊಟ್ಟೆಗಳನ್ನು ಒಡೆದು ಅವುಗಳನ್ನು ಬೀಟ್‌ ಮಾಡಿ
  • ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯನ್ನು ಸಣ್ಣದಾಗಿ ಕತ್ತರಿಸಿ ಮೊಟ್ಟೆಗಳಿಗೆ ಸೇರಿಸಿ
  • ಮಿಶ್ರಣಕ್ಕೆ ಸ್ವಲ್ಪ ಉಪ್ಪು ಸೇರಿಸಿ ಮಿಕ್ಸ್‌ ಮಾಡಿ ಅರಿಶಿನ, ಗರಂ ಮಸಾಲೆ, ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ
  • ಈಗ ಒಲೆಯ ಮೇಲೆ ಪ್ಯಾನ್‌ ಇಟ್ಟು ಸ್ವಲ್ಪ ಎಣ್ಣೆ ಹಚ್ಚಿ ಮಿಶ್ರಣವನ್ನು ಆಮ್ಲೆಟ್‌ನಂತೆ ಹರಡಿ
  • ಎರಡೂ ಬದಿಗಳಲ್ಲಿ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿದರೆ ಸ್ಪೈಸಿ ಟೊಮೆಟೊ ಆಮ್ಲೆಟ್‌ ರೆಡಿ
  • ಒಬ್ಬರು ಎರಡು ಮೊಟ್ಟೆ ತಿಂದರೆ ಸಾಕು ಬೇಗ ಹೊಟ್ಟೆ ಹಸಿವಾಗುವುದಿಲ್ಲ, ದಿನವಿಡೀ ಹೊಟ್ಟೆ ತುಂಬಿದಂತೆ ಇರುತ್ತದೆ
  • ಸ್ಪೈಸಿ ಟೊಮೆಟೊ ಆಮ್ಲೆಟ್‌ ಮಕ್ಕಳಿಗೂ ಉತ್ತಮ ಬ್ರೇಕ್‌ಫಾಸ್ಟ್‌ ಆಗಿದೆ

ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಈ ರೀತಿಯ ಮೊಟ್ಟೆ ರೆಸಿಪಿಗಳನ್ನು ತಿನ್ನುವ ಮೂಲಕ ಇತರ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಬಹುದು.

ಟೊಮೆಟೊ, ಈರುಳ್ಳಿ, ಮೊಟ್ಟೆ ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಟೊಮೆಟೊ ತಿನ್ನುವುದರಿಂದ ದೇಹಕ್ಕೆ ಲೈಕೋಪೀನ್ ದೊರೆಯುತ್ತದೆ. ಇದು ಕ್ಯಾನ್ಸರ್ ತಡೆಯುತ್ತದೆ. ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ವಿಶೇಷವಾಗಿ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಬೆಳಗಿನ ಉಪಾಹಾರದಲ್ಲಿ ಮೊಟ್ಟೆಯೊಂದಿಗೆ ಮಾಡಿದ ಆಹಾರ ಸೇವಿಸುವುದು ಬಹಳ ಆರೋಗ್ಯಕರ. ಮಕ್ಕಳ ಲಂಚ್‌ ಬಾಕ್ಸ್‌ಗೆ ಕೂಡಾ ಇದನ್ನು ಸೇರಿಸಬಹುದು.

ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿ ಊಟ ಬಿಟ್ಟು 7 ಗಂಟೆಗೆ ಈ ಆಮ್ಲೆಟ್ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ತೂಕ ಇಳಿಸುವುದು ಸುಲಭ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ