Chanakya Niti: ಇತರರನ್ನು ಆಕರ್ಷಿಸುವುದು ಹೇಗೆ? ಚಾಣಕ್ಯ ನೀತಿಯಲ್ಲಿದೆ ಸಲಹೆ
Jan 04, 2024 09:32 PM IST
ಚಾಣಕ್ಯ ನೀತಿ
- Chanakya Niti in Kannada: ಚಾಣಕ್ಯ ನೀತಿ ಪ್ರಕಾರ ಕೆಲವು ಜನರನ್ನು ನಮ್ಮ ದಾರಿಗೆ ತರಲು, ಆವರನ್ನು ನಮ್ಮತ್ತ ಆಕರ್ಷಿಸಲು ನಾವು ಕೆಲವು ಕೆಲಸಗಳನ್ನು ಮಾಡಬೇಕು. ಆದರೆ ಅದರ ಹಿಂದಿನ ಉದ್ದೇಶ ಕೆಟ್ಟದ್ದಾಗಿರಬಾರದು. ಇತರರನ್ನು ಆಕರ್ಷಿಸಲು ಚಾಣಕ್ಯ ನೀಡಿದ ಸಲಹೆಗಳು ಇಲ್ಲಿವೆ.
ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ರೀತಿಯಲ್ಲಿ ಭಿನ್ನ. ಪ್ರತಿಯೊಬ್ಬ ವ್ಯಕ್ತಿಯು ವಿಶಿಷ್ಟವಾದದನ್ನು ಎನಾದರೂ ಹೊಂದಿರುತ್ತಾರೆ. ಪ್ರತಿಯೊಬ್ಬರ ವ್ಯಕ್ತಿತ್ವವೂ ಬೇರೆ ಬೇರೆಯಾಗಿರುತ್ತದೆ. ಸಿದ್ಧಾಂತಗಳು ಬೇರೆ ಬೇರೆಯಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರನ್ನೂ ನಾವು ಬೇಗನೇ ಆಕರ್ಷಿಸಲು ಆಗುವುದಿಲ್ಲ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಇತರರನ್ನು ಸಾಧ್ಯವಾದಷ್ಟು ಮೆಚ್ಚಿಸಲು ಏನು ಮಾಡಬೇಕೆಂದು ಹೇಳಿದ್ದಾನೆ. ವಿವಿಧ ರೀತಿಯ ಜನರನ್ನು ಆಕರ್ಷಿಸುವುದು ಹೇಗೆ ಎಂದು ನೋಡೋಣ.
ಚಾಣಕ್ಯ ನೀತಿ ಪ್ರಕಾರ ಇತರರನ್ನು ಮೆಚ್ಚಿಸಲು ನೀವು ಮೊದಲು ಅವರ ದೌರ್ಬಲ್ಯಗಳನ್ನು ತಿಳಿದುಕೊಳ್ಳಬೇಕು. ಆಚಾರ್ಯ ಚಾಣಕ್ಯರ ಪ್ರಕಾರ ನಮ್ಮ ಸುತ್ತಲೂ ಅನೇಕ ಜನರು ಇದ್ದಾರೆ. ಕೆಲವರು ದುರಾಸೆಯುಳ್ಳವರು, ಕೆಲವರು ಧೈರ್ಯವಂತರು, ಕೆಲವರು ಬುದ್ಧಿವಂತರು, ಕೆಲವರು ಮೂರ್ಖರು. ದುರಾಸೆಯುಳ್ಳ ಜನರನ್ನು ಆಕರ್ಷಿಸುವುದು ಸುಲಭದ ಕೆಲಸ. ಏಕೆಂದರೆ ಅವರ ಏಕೈಕ ಗುರಿ ಹಣ. ದುರಾಸೆಯ ಜನರನ್ನು ನಿಮ್ಮ ದಾರಿಗೆ ತರುವ ಏಕೈಕ ಮಾರ್ಗವೆಂದರೆ ಅವರಿಗೆ ಅಗತ್ಯಕ್ಕಿಂತ ಹೆಚ್ಚು ನೀಡುವುದು. ಆದರೆ ಯಾರೊಬ್ಬರ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದೂ ಚಾಣಕ್ಯನ ನೀತಿ ಹೇಳುತ್ತದೆ.
ಮೂರ್ಖನನ್ನು ಮೆಚ್ಚಿಸಲು ನೀವು ಮಾಡಬೇಕಾಗಿರುವುದು ಅವರನ್ನು ಮೇಲಕ್ಕೇರಿಸುವುದು. ಅವರು ಹೇಳುವುದನ್ನು ನೀವು ಒಪ್ಪಿಕೊಳ್ಳಬೇಕು. ಆಗ ತಾವು ಯಾವಾಗಲೂ ಸರಿ ಎಂದು ಭಾವಿಸುವ ಜನರು ಸುಲಭವಾಗಿ ನಿಮ್ಮ ದಾರಿಯಲ್ಲಿ ಬರುತ್ತಾರೆ. ಹೊಗಳಿಕೆಯ ಮೂಲಕ ಕೂಡ ಅವರನ್ನು ಆಕರ್ಷಿಸಬಹುದು.
ಬುದ್ಧಿವಂತರನ್ನು ಮೆಚ್ಚಿಸುವುದು ಮೂರ್ಖರನ್ನು ಮೆಚ್ಚಿಸುವಷ್ಟು ಸುಲಭದ ಕೆಲಸವಲ್ಲ. ನೀವು ಬುದ್ಧಿವಂತ ಜನರನ್ನು ಆಕರ್ಷಿಸಲು ಬಯಸಿದರೆ, ನೀವು ಅವರೊಂದಿಗೆ ಸತ್ಯವನ್ನು ಮಾತ್ರ ಮಾತನಾಡಬೇಕು. ಸತ್ಯಕ್ಕಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ.
ಮನುಷ್ಯನು ತನ್ನ ಹುಟ್ಟಿನಿಂದಲ್ಲ ಆದರೆ ಅವನ ಕಾರ್ಯಗಳಿಂದ ಗುರುತಿಸಲ್ಪಡುತ್ತಾನೆ. ಶಿಕ್ಷಣವು ಒಬ್ಬನ ಉತ್ತಮ ಸ್ನೇಹಿತ. ಸೌಂದರ್ಯ, ಸಂಪತ್ತು ಮುಂತಾದ ಎಲ್ಲ ಅರ್ಹತೆಗಳನ್ನು ಹಿಂದಕ್ಕೆ ತಳ್ಳುವ ಶಕ್ತಿ ಶಿಕ್ಷಣಕ್ಕಿದೆ. ತುಂಬಾ ಪ್ರಾಮಾಣಿಕ ಯಾವಾಗಲೂ ಅಪಾಯಕಾರಿ. ಚಾಣಕ್ಯನ ಪ್ರಕಾರ ಎಂದಿಗೂ ಪ್ರಾಮಾಣಿಕವಾಗಿರಬಾರದು.
ಭಯವು ನಿಮಗೆ ಹತ್ತಿರವಾದಾಗ,ನೀವು ಏನನ್ನಾದರೂ ಮಾಡಲು ಪ್ರಾರಂಭಿಸಿದಾಗ ವೈಫಲ್ಯದ ಭಯಪಡಬೇಡಿ. ಏಕೆಂದರೆ ನಿರ್ಭೀತಿಯಿಂದ ಕೆಲಸ ಮಾಡುವವರು ನಿಜವಾಗಿಯೂ ಸಂತೋಷವಾಗಿರುತ್ತಾರೆ. ತೃಪ್ತಿಯಂತಹ ಆನಂದವನ್ನು ಯಾವುದೂ ನೀಡುವುದಿಲ್ಲ, ದುರಾಸೆಗಿಂತ ಮಾರಕವಾದ ರೋಗವಿಲ್ಲ. ಸಹಾನುಭೂತಿಗಿಂತ ಉತ್ತಮವಾದ ಗುಣವಿಲ್ಲ.