Chanakya Niti: ಮನೆಯ ಯಜಮಾನನಿಗೆ ಈ ಗುಣಗಳು ಇದ್ದರೆ ಕುಟುಂಬ ನೆಮ್ಮದಿಯಿಂದ ಇರತ್ತೆ ಅಂತಾರೆ ಆಚಾರ್ಯ ಚಾಣಕ್ಯ
Jan 07, 2024 02:35 PM IST
ಚಾಣಕ್ಯ ನೀತಿ
- Chanakya Niti in Kannada: ಭಾರತದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು ಚಾಣಕ್ಯ. ಅವರು ಕೌಟುಂಬಿಕ ಮೌಲ್ಯಗಳ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಚಾಣಕ್ಯ ನೀತಿ ಪ್ರಕಾರ ಮನೆಯ ಯಜಮಾನನಿಗೆ ಈ ಗುಣಗಳು ಇರಬೇಕಂತೆ..
ಕುಟುಂಬ ಚೆನ್ನಾಗಿರಬೇಕಾದರೆ ಮನೆಯ ಯಜಮಾನ ಸರಿಯಾಗಿರಬೇಕು ಎಂಬುದು ಚಾಣಕ್ಯನ ನಂಬಿಕೆ. ಕುಟುಂಬದ ಮುಖ್ಯಸ್ಥರು ತೆಗೆದುಕೊಳ್ಳುವ ನಿರ್ಧಾರಗಳು ಕುಟುಂಬದ ಭವಿಷ್ಯವನ್ನು ನಿರ್ಧರಿಸುತ್ತವೆ. ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ, ನೀವು ಯಾವಾಗಲೂ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿಯಿಂದ ಸಂಬಂಧದ ಮೌಲ್ಯಗಳವರೆಗೆ ಎಲ್ಲವೂ ಯಜಮಾನನ ಮೇಲೆ ಅವಲಂಬಿತವಾಗಿರುತ್ತದೆ.
ಭಾರತದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು ಚಾಣಕ್ಯ. ಅವರು ಕೌಟುಂಬಿಕ ಮೌಲ್ಯಗಳ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಚಾಣಕ್ಯ ತನ್ನ ತತ್ವಗಳ ಮೂಲಕ ಜನರನ್ನು ವಿಜಯದ ಹಾದಿಯಲ್ಲಿ ಮುನ್ನಡೆಸಿದ್ದಾರೆ. ಚಾಣಕ್ಯರ ನೀತಿಗಳು ಪ್ರಸ್ತುತ ಕಾಲದಲ್ಲೂ ಬಹಳ ಉಪಯುಕ್ತವಾಗಿವೆ. ಚಾಣಕ್ಯರ ಪ್ರಕಾರ, ಕುಟುಂಬದ ಸಮೃದ್ಧಿಯು ಮನೆಯ ಮುಖ್ಯಸ್ಥನ ಮೇಲೆ ಅವಲಂಬಿತವಾಗಿರುತ್ತದೆ. ಮನೆಯ ಮಾಲೀಕರು ಬುದ್ಧಿವಂತರು ಮತ್ತು ಎಲ್ಲಾ ಸಂದರ್ಭಗಳನ್ನು ನಿಭಾಯಿಸಬಲ್ಲವರು ಆಗಿರಬೇಕು. ಅದಕ್ಕಾಗಿಯೇ ಕುಟುಂಬದ ಮುಖ್ಯಸ್ಥರು ಕೆಲವು ಗುಣಗಳನ್ನು ಹೊಂದಿರಬೇಕು ಎಂದು ಅವರು ಹೇಳುತ್ತಾರೆ.
ಆಚಾರ್ಯ ಚಾಣಕ್ಯರ ಪ್ರಕಾರ ಮನೆ ಮಾಲೀಕರು ಹಣ ಉಳಿಸುವ ಗುಣ ಹೊಂದಿರಬೇಕು. ಆಗ ಕುಟುಂಬಕ್ಕೆ ಹಣದ ಕೊರತೆ ಇರುವುದಿಲ್ಲ. ಭವಿಷ್ಯದಲ್ಲಿ ಕಷ್ಟಗಳು ಎದುರಾದಾಗ ಯಾರೂ ಸಹಾಯ ಕೇಳದಂತೆ ಹಣವನ್ನು ಹೊಂದಿಸುವುದು ಕುಟುಂಬದ ಮುಖ್ಯಸ್ಥರ ಜವಾಬ್ದಾರಿಯಾಗಿದೆ. ಅದಕ್ಕಾಗಿಯೇ ಮನೆಯ ದೊಡ್ಡ ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ನಿಮಗೆ ಯಾವುದೇ ರೀತಿಯ ಅಗತ್ಯವಿದ್ದರೂ, ಅದಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಎಂದು ಲೆಕ್ಕ ಹಾಕಬೇಕು. ಮನ ಬಂದಂತೆ ಹಣ ದುಂದು ವೆಚ್ಚ ಮಾಡಬಾರದು.
ಮನೆಯ ಆದಾಯಕ್ಕೆ ಅನುಗುಣವಾಗಿ ಮನೆಯನ್ನು ನಿರ್ವಹಿಸುವುದು ಮನೆಯ ಮುಖ್ಯಸ್ಥನ ಜವಾಬ್ದಾರಿಯಾಗಿದೆ. ಅನಗತ್ಯ ವೆಚ್ಚಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ನೀವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಬೇಕಾಗಬಹುದು. ವೆಚ್ಚವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ಅವಿಭಕ್ತ ಕುಟುಂಬದಲ್ಲಿ ವಾಸಿಸುವವರು ಈ ವಿಷಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ.
ಮನೆಯಲ್ಲಿ ಶಿಸ್ತುಬದ್ಧ, ಶಾಂತಿಯುವ, ಖುಷಿತ ವಾತಾವರಣವನ್ನು ಕಾಪಾಡಿಕೊಳ್ಳಲು ಯಜಮಾನನು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮನೆಯ ಮುಖ್ಯಸ್ಥರೇ ನಿರ್ಧಾರ ಕೈಗೊಂಡು ಅದನ್ನು ಪಾಲಿಸದಿದ್ದರೆ ಕುಟುಂಬದ ಉಳಿದ ಸದಸ್ಯರು ತಲೆಕೆಡಿಸಿಕೊಳ್ಳುವುದಿಲ್ಲ.
ಚಾಣಕ್ಯನ ಪ್ರಕಾರ, ಮನೆಯವರು ಯಾವುದೇ ನಿರ್ಧಾರವನ್ನು ಕುಟುಂಬದ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಬೇಕು. ಯಾರಿಗೂ ತೊಂದರೆಯಾಗದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ಕುಟುಂಬ ಸದಸ್ಯರೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ಕುಟುಂಬದಲ್ಲಿ ಬಿರುಕು ಮೂಡುವ ಸಾಧ್ಯತೆಯಿದೆ.
ಪುರಾವೆಗಳಿಲ್ಲದೆ ಮನೆಯ ಮಾಲೀಕರು ಯಾವುದನ್ನೂ ನಂಬಬಾರದು. ಯಾವುದೇ ಸುದ್ದಿಯನ್ನು ನಂಬುವ ಮೊದಲು ಪ್ರಾಮಾಣಿಸಿ ನೋಡಬೇಕು. ಮನೆಯಲ್ಲಿ ಯಾವುದಾದರೂ ಕಾರಣಕ್ಕೆ ಜಗಳವಾದರೆ, ಎಲ್ಲಾ ದೃಷ್ಟಿಕೋನಗಳಿಂದಲೂ ನೋಡಿ ಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಪರಸ್ಪರ ವಿರುದ್ಧವಾಗಿ ನಿಲುವು ತಳೆದು ಮಾತನಾಡಿದರೆ ಕುಟುಂಬ ಸದಸ್ಯರ ನಡುವೆ ಮನಸ್ತಾಪ ಹೆಚ್ಚಾಗುವ ಸಾಧ್ಯತೆ ಇದೆ. ಗದರಿಸುವುದೇ ನಿಮ್ಮ ಕೆಲಸವಲ್ಲ, ಅವರನ್ನು ತಿದ್ದುವ ಗುಣ ನಿಮ್ಮದಾಗಿರಬೇಕು.
ವಿಭಾಗ