Spiritual News: ಮಂತ್ರ ಪಠಣೆಯಿಂದ ದೇವರ ಅನುಗ್ರಹ ದೊರೆಯುವುದು ಮಾತ್ರವಲ್ಲ ಆರೋಗ್ಯಕ್ಕೂ ಇದೆ ನಾನಾ ಲಾಭಗಳು
Dec 15, 2023 10:44 AM IST
ಮಂತ್ರ ಪಠಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯದಲ್ಲಿ ವೃದ್ಧಿ
Spiritual News: ಪ್ರತಿದಿನ ಮಂತ್ರ ಪಠಿಸುವುದರಿಂದ ದೇವರ ಅನುಗ್ರಹ ಮಾತ್ರವಲ್ಲದೆ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆಯೂ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಮಂತ್ರ ಉಚ್ಛಾರಣೆ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಏಕಾಗ್ರತೆ ಹೆಚ್ಚುತ್ತದೆ.
Spiritual News: ಪ್ರತಿ ದಿನ ದೇವರ ಪೂಜೆ ಮಾಡುವಾಗ ನಾವೆಲ್ಲರೂ ಮಂತ್ರ ಹೇಳುತ್ತೇವೆ. ಮಂತ್ರ ಪಠಣೆಯು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಆಚರಣೆ ಆಗಿದೆ. ಆದರೆ ದೇವರನ್ನು ಮೆಚ್ಚಿಸಲು ಮಾತ್ರ ಮಂತ್ರ ಉಚ್ಛರಿಸುತ್ತೇವೆ ಎಂದು ನೀವು ತಿಳಿದುಕೊಂಡಿದ್ದರೆ ಅದು ತಪ್ಪು. ಮಂತ್ರ ಪಠಣೆಯು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಮಂತ್ರವನ್ನು ಮಕ್ಕಳು, ಹಿರಿಯರು ಎನ್ನದೆ ಯಾರು ಬೇಕಾದರೂ ಪಠಿಸಬಹುದು. ಪ್ರತಿದಿನ ಮಂತ್ರ ಪಠಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ಒತ್ತಡ ಕಡಿಮೆಯಾಗುತ್ತದೆ
ಮಂತ್ರಗಳನ್ನು ಪಠಿಸುವುದರಿಂದ, ವಿಶೇಷವಾಗಿ ಲಯಬದ್ಧ ಪುನರಾವರ್ತನೆಯನ್ನು ಒಳಗೊಂಡಂತೆ ಮಂತ್ರ ಉಚ್ಛಾರ ಮಾಡುವುದರಿಂದ ದೇಹಕ್ಕೆ ರಿಲಾಕ್ಸ್ ಎನಿಸುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ, ನರಮಂಡಲವನ್ನು ಶಮನಗೊಳಿಸುತ್ತದೆ ಮತ್ತು ಆಂತರಿಕ ನೆಮ್ಮದಿಯನ್ನು ಉತ್ತೇಜಿಸುತ್ತದೆ. ಎಲ್ಲಾ ರೀತಿಯ ಒತ್ತಡ ಕಡಿಮೆಯಾಗುತ್ತದೆ.
ಏಕಾಗ್ರತೆಯನ್ನು ಸುಧಾರಿಸುತ್ತದೆ
ಮಂತ್ರ ಪಠಣ ಮಾಡುವುದರಿಂದ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಪ್ರತಿದಿನ ತಪ್ಪದೆ ಪಠಿಸುವುವದರಿಂದ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ, ಮಿದುಳು ಚುರುಕಾಗುತ್ತದೆ.
ಸಕಾರಾತ್ಮಕ ಯೋಚನೆಗಳನ್ನು ಮೂಡಿಸುತ್ತದೆ
ಮಂತ್ರಗಳು ಮನೆ ಮನಸ್ಸಿನಲ್ಲಿ ಪಾಸಿಟಿವ್ ವೈಬ್ಸ್ ಸೃಷ್ಟಿಸುತ್ತದೆ. ಇದನ್ನು ಪಠಿಸುವವರಲ್ಲಿ ನಕಾರಾತ್ಮಕ ಅಂಶಗಳು ತೊಲಗಿ ಆಶಾವಾದ, ಸಕಾರಾತ್ಮಕ ದೃಷ್ಟಿಕೋನ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಮೂಡಿಸುತ್ತದೆ.
ಆಧ್ಯಾತ್ಮಿಕ ಸಂಪರ್ಕ
ಮಂತ್ರಗಳ ಮೂಲಕ ನಾವು ಉಚ್ಛರಿಸುವ ಪವಿತ್ರ ಶಬ್ದಗಳು ಅಥವಾ ಕಂಪನಗಳು ಜನರನ್ನು ಉನ್ನತ ಆಧ್ಯಾತ್ಮಿಕ ಕ್ಷೇತ್ರಗಳೊಂದಿಗೆ ಸಂವಹನ ನಡೆಸಲು ಸಹಾಯ ಮಾಡುತ್ತದೆ. ಮಂತ್ರ ಪಠಣವು ದೈವಿಕ ಶಕ್ತಿಗಳನ್ನು ಆಹ್ವಾನಿಸುವ ಮಾರ್ಗವಾಗಿದೆ. ಇದರಿಂದ ಆಧ್ಯಾತ್ಮಿಕ ಅಭ್ಯಾಸ ವೃದ್ಧಿಯಾಗುತ್ತದೆ.
ಸೌಂಡ್ ವೈಬ್ರೇಶನ್ ಥೆರಪಿ
ಮಂತ್ರ ಪಠಿಸುವುದರಿಂದ ಉಂಟಾಗುವ ಕಂಪನದಿಂದಾಗಿ ದೇಹ ಮತ್ತು ಮನಸ್ಸಿಗೆ ಪ್ರಯೋಜನ ನೀಡುತ್ತದೆ. ಇದು ವಿವಿಧ ಶಕ್ತಿ ಕೇಂದ್ರಗಳು ಅಥವಾ ಚಕ್ರಗಳೊಂದಿಗೆ ಅನುರಣಿಸುವ ಮೂಲಕ ಸಾಮಾನ್ಯ ಶಕ್ತಿಯ ಸಮತೋಲನ ಮತ್ತು ಯೋಗಕ್ಷೇಮವನ್ನು ಬೆಂಬಲಿಸುತ್ತದೆ.
ಮನಸ್ಸು ದೇಹದ ಸಾಮರಸ್ಯ
ಮಂತ್ರ ಪಠಿಸುವಾಗ ಉಸಿರಾಟ ಹಾಗೂ ಧ್ವನಿಯು ಒಟ್ಟಿಗೆ ಕೂಡುವುದರಿಂದ ಇದು ಮನಸ್ಸು ಹಾಗೂ ದೇಹಸ ಸಾಮರಸ್ಯವನ್ನು ಉತ್ತೇಜಿಸುತ್ತದೆ.
ಉಸಿರಾಟ ನಿಯಂತ್ರಣ
ಇದಿಷ್ಟೇ ಅಲ್ಲದೆ, ಮಂತ್ರಗಳ್ನು ಪಠಿಸುವುದರಿಂದ ಉಸಿರಾಟವನ್ನು ನಿಯಂತ್ರಿಸಬಹುದು. ಇದರಿಂದ ಉಸಿರಾಟಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಒಟ್ಟಾರೆ ಮಂತ್ರ ಪಠಿಸುವುದರಿಂದ ಮಾನಸಿಕ ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.