ಫೆ 16ಕ್ಕೆ ರಥ ಸಪ್ತಮಿ ವಿಶೇಷ; ಒಂದೇ ದಿನ 7 ವಾಹನಗಳ ಮೇಲೆ ತಿರುಪತಿ ತಿಮ್ಮಪ್ಪನ ಸಂಚಾರ, ಭಕ್ತರಿಗೆ ದರ್ಶನ ಭಾಗ್ಯ
Jan 31, 2024 04:34 PM IST
ತಿರುಪತಿ ತಿರುಮಲ ದೇವಸ್ಥಾನ
ತಿರುಮಲದಲ್ಲಿ ಫೆಬ್ರವರಿ 16 ರಂದು ರಥ ಸಪ್ತಮಿ ಆಚರಿಸಲಾಗುತ್ತದೆ ಎಂದು ಟಿಟಿಡಿ ಘೋಷಿಸಿದೆ. ಅಂದು ವೆಂಕಟೇಶ್ವರನನ್ನು 7 ವಾಹನಗಳ ಮೇಲೆ ಕೂರಿಸಿ ದೇವಸ್ಥಾನದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಫೆಬ್ರವರಿ 16 ರ ರಥ ಸಪ್ತಮಿ ದಿನದಂದು ತಿರುಮಲದಲ್ಲಿ ರಥಸಪ್ತಮಿ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಸ್ವಾಮಿಯು 7 ವಾಹನಗಳ ಮೇಲೆ ಕುಳಿತು ದೇವಸ್ಥಾನದ ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ನೀಡುತ್ತಾನೆ ಎಂದು ತಿರುಮಲ ತಿರುಪತಿ ದೇವಸ್ಥಾನ-ಟಿಟಿಡಿ ಮಾಹಿತಿ ನೀಡಿದೆ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು ರಥ ಸಪ್ತಮಿ ಅಥವಾ ಮಾಘ ಸಪ್ತಮಿ ಎಂದು ಕರೆಯಲಾಗುತ್ತದೆ. ವೇದಗಳ ಪ್ರಕಾರ, ಸೂರ್ಯದೇವನು ಈ ಶುಭ ದಿನದಂದು ಜನಿಸಿ ಇಡೀ ಜಗತ್ತಿಗೆ ಜ್ಞಾನವನ್ನು ನೀಡಿದನು ಎಂಬ ನಂಬಿಕೆ ಇದೆ.
ರಥ ಸಪ್ತಮಿ ದಿನದ ಪ್ರಯುಕ್ತ ತಿರುಮಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗಾಗಿ ಟಿಟಿಡಿ ಹೆಚ್ಚಿನ ವ್ಯವಸ್ಥೆಗಳನ್ನು ಮಾಡುತ್ತಿದೆ. ರಥ ಸಪ್ತಮಿಯನ್ನು ಮಿನಿ ಬ್ರಹ್ಮೋತ್ಸವ ಅಥಲೂ ಕರೆಯುತ್ತಾರೆ.
ಫೆಬ್ರವರಿ 16 ರಂದು ಸ್ವಾಮಿ ಸಂಚರಿಸಲಿರುವ 7 ವಾಹನ ಮತ್ತು ಕಾರ್ಯಕ್ರಮಗಳ ವಿವರ
- ಬೆಳಿಗ್ಗೆ 5.30 ರಿಂದ 8 ರವರೆಗೆ (ಸೂರ್ಯೋದಯ ಬೆಳಿಗ್ಗೆ 6.40 ಕ್ಕೆ):- ಸೂರ್ಯ ಪ್ರಭಾ ವಾಹನ
- ಬೆಳಿಗ್ಗೆ 9 ರಿಂದ 10 ರವರೆಗೆ: ಚಿನ್ನಶೇಷ ವಾಹನ
- ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ: ಗರುಡ ವಾಹನ
- ಮಧ್ಯಾಹ್ನ 1 ರಿಂದ 2 ರವರೆಗೆ: ಹನುಮಾನ್ ವಾಹನ
- ಮಧ್ಯಾಹ್ನ 2 ರಿಂದ 3 ರವರೆಗೆ: ಚಕ್ರ ಸ್ನಾನ
- ಸಂಜೆ 4 ರಿಂದ 5 ರವರೆಗೆ: ಕಲ್ಪ ವೃಕ್ಷ ವಾಹನ
- ಸಂಜೆ 6 ರಿಂದ 7 ರವರೆಗೆ: ಸರ್ವಭೂಪಾಲ ವಾಹನಂ
- ರಾತ್ರಿ 8 ರಿಂದ 9 ರವರೆಗೆ: ಚಂದ್ರಪ್ರಭ ವಾಹನ
- ಸಂಚಿತ ಸೇವೆಗಳ ಮುಕ್ತಾಯ
ರಥಸಪ್ತಮಣಿ ಹಬ್ಬದ ಪ್ರಯುಕ್ತ ಫೆ.16ರಂದು ದೇವಸ್ಥಾನದಲ್ಲಿ ನಡೆಯಲಿರುವ ಕಲ್ಯಾಣೋತ್ಸವ, ಊಂಜಲ್ ಸೇವೆ, ಅರ್ಜಿತ ಬ್ರಹ್ಮೋತ್ಸವ ಹಾಗೂ ಸಹಸ್ರ ದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ. ಆದರೆ ಸುಪ್ರಭಾತ, ತೋಮಾಲ ಮತ್ತು ಅರ್ಚನವನ್ನು ಏಕಾಂತದಲ್ಲಿ ನಡೆಸಲಾಗುತ್ತದೆ.
ವಿಶೇಷ ದಿನಗಳು
ಫೆಬ್ರವರಿ ತಿಂಗಳಲ್ಲಿ ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ನಡೆಯಲಿರುವ ವಿಶೇಷ ದಿನಗಳನ್ನು ಟಿಟಿಡಿ ಬಹಿರಂಗಪಡಿಸಿದೆ. ವಿವರಗಳು ಈ ಕೆಳಗಿನಂತಿವೆ…
- ಫೆಬ್ರವರಿ 9: ಶ್ರೀ ಪುರಂದರದಾಸರ ಆರಾಧನೋತ್ಸವ
- ಫೆಬ್ರವರಿ 10: ತಿರುಕಚಿನಂಬಿ ಉತ್ಸವಾರಂಭ
- ಫೆಬ್ರವರಿ 14: ವಸಂತ ಪಂಚಮಿ
- ಫೆಬ್ರವರಿ 16: ರಥ ಸಪ್ತಮಿ
- ಫೆಬ್ರವರಿ 19: ತಿರುಕಚಿನಂಬಿ ಸತ್ತುಮೊರ
- ಫೆಬ್ರವರಿ 20: ಭೀಷ್ಮ ಏಕಾದಶಿ
- ಫೆಬ್ರವರಿ 21: ಶ್ರೀಕುಲಶೇಖರಾಳ್ವಾರ್ ವರ್ಷ ತಿರುನಕ್ಷತ್ರ
- ಫೆಬ್ರವರಿ 24: ಕುಮಾರಧಾರ ತೀರ್ಥಮುಕ್ಕೋಟಿ, ಮಾಘ ಪೌರ್ಣಮಿ ಗರುಡಸೇವೆ
ತಿರುಪತಿ ಶ್ರೀ ಕೋದಂಡ ರಾಮ ದೇವಸ್ಥಾನದಲ್ಲಿ ಫೆಬ್ರವರಿ ತಿಂಗಳಲ್ಲಿ ಹಲವು ವಿಶೇಷ ಉತ್ಸವಗಳು ನಡೆಯಲಿವೆ. ಫೆಬ್ರವರಿ 3, 10, 17 ಮತ್ತು 24 ರಂದು ಶನಿವಾರದಂದು ಬೆಳಿಗ್ಗೆ 6 ಗಂಟೆಗೆ ಅಭಿಷೇಕವನ್ನು ನೆರವೇರಿಸಲಾಗುತ್ತದೆ. ಸಂಜೆ 5.30ಕ್ಕೆ ಊಂಜಾಲಸೇವೆ, ತಿರುವೀಧಿ ಉತ್ಸವ ಹಾಗೂ ಆಸ್ಥಾನ ನಡೆಯಲಿದೆ. ಫೆ.9ರ ಅಮವಾಸ್ಯೆಯಂದು ಬೆಳಗ್ಗೆ 8 ಗಂಟೆಗೆ ಸಹಸ್ರ ಕಲಶಾಭಿಷೇಕ ನೆರವೇರುತ್ತದೆ. ಸಂಜೆ 7ಕ್ಕೆ ಹನುಮಾನ್ ವಾಹನಸೇವೆ ನಡೆಯಲಿದೆ.
ಫೆಬ್ರವರಿ 21 ರಂದು ಪುನರ್ವಸು ನಕ್ಷತ್ರದ ನಿಮಿತ್ತ ಬೆಳಿಗ್ಗೆ 11 ಗಂಟೆಗೆ ಶ್ರೀ ಸೀತಾರಾಮರ ಕಲ್ಯಾಣ ನಡೆಯಲಿದೆ. ಸಂಜೆ 5.30ಕ್ಕೆ ಸ್ವಾಮಿ ಮತ್ತು ಅಮ್ಮನವರನ್ನು ತಿರುಚಿಪೈ ದೇವಸ್ಥಾನದ ನಾಲ್ಕು ಮದ ಬೀದಿಗಳಲ್ಲಿ ಶ್ರೀರಾಮಚಂದ್ರ ಪುಷ್ಕರಿಣಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಸಂಜೆ 5.30ಕ್ಕೆ ಊಂಜಾಲಸೇವೆ ಹಾಗೂ ಆಸ್ಥಾನ ನಡೆಯಲಿದೆ. ಫೆ.25ರಂದು ಹುಣ್ಣಿಮೆಯಂದು ಕುಪುಚಂದ್ರ ಪೇಟೆ ಉತ್ಸವ ನಡೆಯಲಿದೆ. (This copy first appeared in Hindustan Times Kannada website. To read more like this please logon to kannada.hindustantime.com).