logo
ಕನ್ನಡ ಸುದ್ದಿ  /  ಜೀವನಶೈಲಿ  /  Bread Jamoon: ಮಕ್ಕಳಿಗಾಗಿ ತಂದ ಬ್ರೆಡ್‌ ಹೆಚ್ಚು ಉಳಿದಿದ್ಯಾ, ಬಿಸಾಡೋದು ಬೇಡ ಅದರಿಂದ್ಲೇ ಮೃದುವಾದ ರುಚಿಯಾದ ಜಾಮೂನ್‌ ತಯಾರಿಸಿ; ರೆಸಿಪಿ ‍

Bread Jamoon: ಮಕ್ಕಳಿಗಾಗಿ ತಂದ ಬ್ರೆಡ್‌ ಹೆಚ್ಚು ಉಳಿದಿದ್ಯಾ, ಬಿಸಾಡೋದು ಬೇಡ ಅದರಿಂದ್ಲೇ ಮೃದುವಾದ ರುಚಿಯಾದ ಜಾಮೂನ್‌ ತಯಾರಿಸಿ; ರೆಸಿಪಿ ‍

Rakshitha Sowmya HT Kannada

Aug 14, 2023 08:00 AM IST

google News

‍ಬ್ರೆಡ್‌ ಜಾಮೂನ್‌ ರೆಸಿಪಿ

  • ಏನಾದರೂ ಶುಭ ಸುದ್ದಿ ಕೇಳಿದರೆ, ಮನೆಗೆ ಯಾರಾದರೂ ಅತಿಥಿಗಳು ಅಥವಾ ಆಪ್ತರು ಬಂದರೆ, ಪಾರ್ಟಿ ಇದ್ದರೆ ತಕ್ಷಣ ನಾವು ರೆಡಿ ಮಾಡಬಹುದಾದ ಸಿಹಿ ಎಂದರೆ ಅದು ಗುಲಾಬ್‌ ಜಾಮೂನ್‌. ಆದರೆ ನಾವು ಯಾವಾಗಲೂ ಮನೆಯಲ್ಲಿ ಜಾಮೂನ್‌ ಮಿಕ್ಸ್‌ ಇಟ್ಟುಕೊಂಡಿರುವುದಿಲ್ಲ. ಅದರ ಬದಲಿಗೆ ಬೇರೆ ಸಾಮಗ್ರಿಗಳಿಂದ ಕೂಡಾ ನಾವು ಜಾಮೂನ್‌ ತಯಾರಿಸಬಹುದು.

‍ಬ್ರೆಡ್‌ ಜಾಮೂನ್‌ ರೆಸಿಪಿ
‍ಬ್ರೆಡ್‌ ಜಾಮೂನ್‌ ರೆಸಿಪಿ (PC: Unsplash, খেতে বড্ডো ভালোবাসি Facebook)

ಹಾಲಿನ ಪುಡಿಯಿಂದ ಜಾಮೂನ್‌ ತಯಾರಿಸಬಹುದು. ನೀವು ಮಕ್ಕಳಿಗೆ ಸ್ಯಾಂಡ್‌ವಿಚ್‌ ತಯಾರಿಸಲು ತಂದ ಬ್ರೆಡ್‌ನಿಂದ ಕೂಡಾ ಅಷ್ಟೇ ರುಚಿಯಾದ ಜಾಮೂನ್‌ ತಯಾರಿಸಬಹುದು. ಒಂದು ವೇಳೆ ಮನೆಯಲ್ಲಿ ಹೆಚ್ಚಿಗೆ ಬ್ರೆಡ್‌ ಇದ್ದಲ್ಲಿ ಮುಂದಿನ ಬಾರಿ ಅದರಿಂದಲೇ ಜಾಮೂನ್‌ ತಯಾರಿಸಿ. ಬ್ರೆಡ್‌ ಜಾಮೂನ್‌ ರೆಸಿಪಿ ಇಲ್ಲಿದೆ.

ಬ್ರೆಡ್‌ ಜಾಮೂನ್‌ ರೆಸಿಪಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

  1. ಬ್ರೆಡ್‌ - 6
  2. ಸಕ್ಕರೆ - 1 ಕಪ್‌
  3. ಹಾಲಿನ ಪುಡಿ - 2 ಟೇಬಲ್‌ ಸ್ಪೂನ್‌
  4. ಹಾಲು - 5 ಟೇಬಲ್‌ ಸ್ಪೂನ್
  5. ಏಲಕ್ಕಿ - 4
  6. ಬೇಕಿಂಗ್‌ ಸೋಡಾ (ಆಯ್ಕೆ) - 1 ಪಿಂಚ್

ಬ್ರೆಡ್‌ ಜಾಮೂನ್‌ ತಯಾರಿಸುವ ವಿಧಾನ

  • ದಪ್ಪ ತಳದ ಪಾತ್ರೆಗೆ ಸಕ್ಕರೆ, 1 ಕಪ್‌ ನೀರು , ಏಲಕ್ಕಿ ಸೇರಿಸಿ ಕುದಿಯಲು ಬಿಡಿ.
  • ಪಾಕ ಕುದಿಯಲು ಆರಂಭವಾದಾಗಿನಿಂದ 5 ನಿಮಿಷ‌ ಬಿಟ್ಟು ಸ್ಟೋವ್‌ ಆಫ್‌ ಮಾಡಿ.
  • ಬ್ರೆಡ್‌ ಅಂಚುಗಳನ್ನು ಕತ್ತರಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ.
  • ಮಿಕ್ಸಿ ಜಾರ್‌ನಲ್ಲಿ ಬ್ರೆಡ್‌ ತುಂಡುಗಳನ್ನು ಸೇರಿಸಿ ಪುಡಿ ಮಾಡಿಕೊಳ್ಳಿ.
  • ಬ್ರೆಡ್‌ ಪುಡಿಯನ್ನು ಒಂದು ಪಾತ್ರೆಗೆ ಸೇರಿಸಿ ಅದರೊಂದಿಗೆ ಹಾಲಿನ ಪುಡಿ, ಬೇಕಿಂಗ್‌ ಸೋಡಾ ಸೇರಿಸಿ ಸೇರಿಸಿ.
  • ಎಲ್ಲವನ್ನೂ ಮಿಕ್ಸ್‌ ಮಾಡಿ, ಸ್ವಲ್ಪ ಸ್ವಲ್ಪವೇ ಹಾಲನ್ನು ಸೇರಿಸಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
  • ಈ ಹಿಟ್ಟಿನಿಂದ ದೊಡ್ಡ ಗೋಲಿ ಗಾತ್ರದ ಉಂಡೆಗಳನ್ನು ಮಾಡಿ.
  • ತುಪ್ಪ ಅಥವಾ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕಂದು ಬಣ್ಣ ಬರುವರೆಗೂ ಕರಿಯಿರಿ.
  • ಕರಿದ ಉಂಡೆಗಳನ್ನು ಸಕ್ಕರೆ ಪಾಕದೊಳಗೆ ಹಾಕಿ ಮುಚ್ಚಳ ಮುಚ್ಚಿ 1-2 ಗಂಟೆ ಬಿಡಿ.
  • ಮೃದುವಾದ, ಬಾಯಲ್ಲಿ ಇಟ್ಟರೆ ಕರಗುವ ಬ್ರೆಡ್‌ ಜಾಮೂನ್‌ ತಿನ್ನಲು ರೆಡಿ.

ಇದನ್ನು ತಿಂದವರು, ಬ್ರೆಡ್‌ನಿಂದ ತಯಾರಿಸಿರುವುದು ಎಂದು ಹೇಳಲು ಸಾಧ್ಯವೇ ಇಲ್ಲ, ಒಮ್ಮೆ ಟ್ರೈ ಮಾಡಿ, ಈ ಸೀಕ್ರೇಟನ್ನು ನಿಮ್ಮ ಆತ್ಮೀಯರಿಗೂ ಹೇಳಿಕೊಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ