logo
ಕನ್ನಡ ಸುದ್ದಿ  /  ಜೀವನಶೈಲಿ  /  Butter Curd Rice Recipe: ಬಟರ್‌ ಕರ್ಡ್‌ ರೈಸ್‌ ಟೇಸ್ಟ್‌ ಮಾಡಿದ್ದೀರಾ..ಉಪ್ಪಿನಕಾಯೊಂದಿಗೆ ತಿನ್ನುತಿದ್ರೆ ಆಹಾ ಏನು ರುಚಿ..!

Butter Curd rice recipe: ಬಟರ್‌ ಕರ್ಡ್‌ ರೈಸ್‌ ಟೇಸ್ಟ್‌ ಮಾಡಿದ್ದೀರಾ..ಉಪ್ಪಿನಕಾಯೊಂದಿಗೆ ತಿನ್ನುತಿದ್ರೆ ಆಹಾ ಏನು ರುಚಿ..!

HT Kannada Desk HT Kannada

Oct 26, 2022 10:11 PM IST

google News

ಬಟರ್‌ ಕರ್ಡ್‌ ರೈಸ್‌ ರೆಸಿಪಿ

    • ಹುಳಿಯನ್ನದ ಜೊತೆ ಮೊಸರನ್ನ, ಚಿತ್ರಾನ್ನದ ಜೊತೆ ಮೊಸರನ್ನ ಹಾಗೇ ಬಿಸಿ ಬೇಳೆ ಬಾತ್‌ ಜೊತೆಗೂ ಮೊಸರನ್ನ ತಯಾರಿಸಲಾಗುತ್ತದೆ. ರುಚಿಯಾದ ಮೊಸರನ್ನ ತಯಾರಿಸಿ ಅದನ್ನು ಉಪ್ಪಿನಕಾಯಿಯೊಂದಿಗೆ ತಿನ್ನುತ್ತಿದ್ದರೆ, ಆ ರುಚಿಯನ್ನು ವರ್ಣಿಸಲು ಅಸಾಧ್ಯ.
ಬಟರ್‌ ಕರ್ಡ್‌ ರೈಸ್‌ ರೆಸಿಪಿ
ಬಟರ್‌ ಕರ್ಡ್‌ ರೈಸ್‌ ರೆಸಿಪಿ (PC: Unsplash)

ಏನೇ ಊಟ ಮಾಡಿದರೂ ಕೊನೆಯಲ್ಲಿ ಒಂದಿಷ್ಟು ಮೊಸರನ್ನು ತಿನ್ನದಿದ್ದರೆ ಸಮಾಧಾನ ಎನಿಸುವುದಿಲ್ಲ. ಕೆಲವರಿಗೆ ಬೇಸಿಗೆ ಮಾತ್ರವಲ್ಲ ಮಳೆ, ಚಳಿಗಾಲ ಯಾವುದೇ ಇರಲಿ ಊಟಕ್ಕೆ ಮೊಸರನ್ನು ಇರಲೇಬೇಕು. ಮೊಸರು ಸಿಹಿ ಇದ್ದರೆ ಊಟದ ರುಚಿ ಮತ್ತಷ್ಟು ಹೆಚ್ಚುತ್ತದೆ.

ಹಾಗೇ ಕೆಲವೊಂದು ಫಂಕ್ಷನ್‌ಗಳಲ್ಲಿ ಒಗ್ಗರಣೆ ಮೊಸರನ್ನವನ್ನು ತಯಾರಿಸಲಾಗುತ್ತದೆ, ಹುಳಿಯನ್ನದ ಜೊತೆ ಮೊಸರನ್ನ, ಚಿತ್ರಾನ್ನದ ಜೊತೆ ಮೊಸರನ್ನ ಹಾಗೇ ಬಿಸಿ ಬೇಳೆ ಬಾತ್‌ ಜೊತೆಗೂ ಮೊಸರನ್ನ ತಯಾರಿಸಲಾಗುತ್ತದೆ. ರುಚಿಯಾದ ಮೊಸರನ್ನ ತಯಾರಿಸಿ ಅದನ್ನು ಉಪ್ಪಿನಕಾಯಿಯೊಂದಿಗೆ ತಿನ್ನುತ್ತಿದ್ದರೆ, ಆ ರುಚಿಯನ್ನು ವರ್ಣಿಸಲು ಅಸಾಧ್ಯ. ಸಾಮಾನ್ಯವಾಗಿ ಎಲ್ಲರೂ ಮೊಸರನ್ನು ತಿಂದಿರುತ್ತೇವೆ, ಆದರೆ ಬೆಣ್ಣೆ ಮೊಸರನ್ನು ಟೇಸ್ಟ್‌ ಮಾಡಿದ್ದೀರಾ..? ಇಲ್ಲಿದೆ ನೋಡಿ ಬಟರ್‌ ಕರ್ಡ್‌ ರೈಸ್‌ ರೆಸಿಪಿ

ಬಟರ್‌ ಕರ್ಡ್‌ ರೈಸ್‌ಗೆ ಬೇಕಾಗುವ ಸಾಮಗ್ರಿಗಳು

ಅಕ್ಕಿ - 1 ಕಪ್‌

ಮೊಸರು - 2 ಕಪ್‌

ಹಾಲು - 3/4 ಕಪ್

ಬೆಣ್ಣೆ - 1 ಟೇಬಲ್‌ ಸ್ಪೂನ್‌

ಗೋಡಂಬಿ - 15

ದಾಳಿಂಬೆ - 1/2 ಕಪ್‌

ಸಾಸಿವೆ - 1 ಟೀ ಸ್ಪೂನ್‌

ಕಡ್ಲೆ ಬೇಳೆ - 1 ಟೀ ಸ್ಪೂನ್‌

ಕರಿಬೇವು - 1 ಎಸಳು

ಜೀರ್ಗೆ - 1/2 ಟೀ ಸ್ಪೂನ್‌

ಹಿಂಗು - 1/4 ಟೀ ಸ್ಪೂನ್‌

ಹಸಿಮೆಣಸಿನಕಾಯಿ - 3

ಕೊತ್ತಂಬರಿ ಸೊಪ್ಪು - 1/2 ಕಟ್ಟು

ಎಣ್ಣೆ - ಒಗ್ಗರಣೆಗೆ

ಉಪ್ಪು- ರುಚಿಗೆ ತಕ್ಕಷ್ಟು

ಬಟರ್‌ ಕರ್ಡ್‌ ರೈಸ್‌ ತಯಾರಿಸುವ ವಿಧಾನ

ಅಕ್ಕಿಯನ್ನು ತೊಳೆದು ಅನ್ನ ಮಾಡಿಕೊಳ್ಳಿ, ಅನ್ನ ಬಹಳ ಉದುರಾಗಿರಬಾರದು, ಬಹಳ ಸ್ಟಿಕಿ ಕೂಡಾ ಆಗಿರಬಾರದು

ಒಂದು ತಟ್ಟೆಯಲ್ಲಿ ಅನ್ನವನ್ನು ಹರಡಿ ಒಂದೆರಡು ನಿಮಿಷ ಬಿಟ್ಟು ಬೆಣ್ಣೆ ಸೇರಿಸಿ ಮಿಕ್ಸ್‌ ಮಾಡಿ, ತಣ್ಣಗಾಗಲು ಬಿಡಿ

ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಕಡ್ಲೆಬೇಳೆ, ಹಿಂಗು, ಗೋಡಂಬಿ, ಜೀರ್ಗೆ, ಸೇರಿಸಿ ಫ್ರೈ ಮಾಡಿ

ನಂತರ ಕರಿಬೇವು, ಸೀಳಿಕೊಂಡ ಹಸಿಮೆಣಸಿನಕಾಯಿ ಸೇರಿಸಿ ಕೆಲವು ಸೆಕೆಂಡ್‌ಗಳ ಕಾಲ ಹುರಿದು ಸ್ಟೋವ್‌ ಆಫ್‌ ಮಾಡಿ

ಒಗ್ಗರಣೆ ತಣ್ಣಗಾಗುವರೆಗೂ ಬಿಟ್ಟು ನಂತರ ಅದರೊಂದಿಗೆ ವಿಸ್ಕ್‌ ಮಾಡಿದ ಮೊಸರು, ಹಾಲು ಸೇರಿಸಿ

ನಂತರ ಮೊಸರಿನ ಮಿಶ್ರಣವನ್ನು ಅನ್ನದೊಂದಿಗೆ ಸೇರಿಸಿ, ಜೊತೆಗೆ ಉಪ್ಪು ಸೇರಿಸಿ ಮಿಕ್ಸ್‌ ಮಾಡಿ

ಕೊನೆಯಲ್ಲಿ ದಾಳಿಂಬೆ ಬೀಜಗಳು ಹಾಗೂ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೊಮ್ಮೆ ಮಿಕ್ಸ್‌ ಮಾಡಿ

ಗಮನಿಸಿ: ಮೊಸರನ್ನಕ್ಕೆ ಈರುಳ್ಳಿ ಸೇರಿಸಬೇಡಿ, ಹಾಗೇ ಸೇರಿಸಿದರೆ ನೀವು ಬಹಳ ಸಮಯ ಮೊಸರನ್ನು ಇಡಲಾಗುವುದಿಲ್ಲ. ವಾಸನೆ ಬರುತ್ತದೆ, ಹಾಗೇ ನೀರು ಬಿಟ್ಟುಕೊಳ್ಳುತ್ತದೆ.

ಹಸಿಮೆಣಸಿನಕಾಯಿ ಬದಲಿಗೆ ಒಣಮೆಣಸಿನಕಾಯಿ ಕೂಡಾ ಬಳಸಬಹುದು.

ಬಿಸಿ ಅನ್ನಕ್ಕಾಗಲೀ, ಬಿಸಿ ಒಗ್ಗರಣೆಗಾಗಲೀ ಮೊಸರು ಸೇರಿಸಬೇಡಿ, ಹಾಗೆ ಮಾಡಿದರೆ ಮೊಸರು ಒಡೆಯುತ್ತದೆ. ಆದ್ದರಿಂದ ಅನ್ನ ಹಾಗೂ ಒಗ್ಗರಣೆ ಆರಿದ ನಂತರವಷ್ಟೇ ಮೊಸರು ಸೇರಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ