Gojjavalakki Recipe: ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಗೊಜ್ಜವಲಕ್ಕಿ ಟೇಸ್ಟ್ ಮಾಡಿದ್ದೀರಾ..ಮನೆಯಲ್ಲಿ ನೀವೂ ತಯಾರಿಸಿ
Oct 27, 2022 07:05 PM IST
ಗೊಜ್ಜವಲಕ್ಕಿ ರೆಸಿಪಿ
- ಗೊಜ್ಜವಲಕ್ಕಿ ತಯಾರಿಸುವಾಗ ಸರಿಯಾದ ಅಳತೆಯಲ್ಲಿ ಸಾಮಗ್ರಿಯನ್ನು ಬಳಸಿದರೆ ನೀವು ಕುಕಿಂಗ್ ಎಕ್ಸ್‌ಪರ್ಟ್ ಎನಿಸಿಕೊಳ್ಳಬಹುದು. ಆದರೆ ಕೆಲವರು ಸರಿಯಾದ ಅಳತೆಯಲ್ಲಿ ಸಾಮಗ್ರಿಗಳನ್ನು ಬಳಸದೆ, ಅಡುಗೆ ಹಾಳುಮಾಡಿರುವ ಉದಾಹರಣೆ ಉಂಟು.
ಅವಲಕ್ಕಿ ಎಂದರೆ ತಕ್ಷಣ ನೆನಪಾಗುವುದು ಅವಲಕ್ಕಿ ಚಿತ್ರಾನ್ನ ಹಾಗೂ ಸಿಹಿ ಅವಲಕ್ಕಿ, ಆದರೆ ಇದಕ್ಕಿಂತಲೂ ರುಚಿಯಾದ ಗೊಜ್ಜವಲಕ್ಕಿಯನ್ನು ನಾವು ಹೆಚ್ಚಿಗೆ ತಯಾರಿಸುವುದೇ ಇಲ್ಲ. ಸಾಮಾನ್ಯವಾಗಿ ಕೆಲವೊಂದು ದೇವಸ್ಥಾನಗಳಲ್ಲಿ ಗೊಜ್ಜವಲಕ್ಕಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ.
ಗೊಜ್ಜವಲಕ್ಕಿ ತಯಾರಿಸುವಾಗ ಸರಿಯಾದ ಅಳತೆಯಲ್ಲಿ ಸಾಮಗ್ರಿಯನ್ನು ಬಳಸಿದರೆ ನೀವು ಕುಕಿಂಗ್ ಎಕ್ಸ್‌ಪರ್ಟ್ ಎನಿಸಿಕೊಳ್ಳಬಹುದು. ಆದರೆ ಕೆಲವರು ಸರಿಯಾದ ಅಳತೆಯಲ್ಲಿ ಸಾಮಗ್ರಿಗಳನ್ನು ಬಳಸದೆ, ಅಡುಗೆ ಹಾಳುಮಾಡಿರುವ ಉದಾಹರಣೆ ಉಂಟು. ನಿಮಗಾಗಿ ಗೊಜ್ಜವಲಕ್ಕಿ ತಯಾರಿಸುವ ಸರಿಯಾದ ವಿಧಾನವನ್ನು ಇಲ್ಲಿ ಹೇಳಿಕೊಡುತ್ತಿದ್ದೇವೆ. ಗೊಜ್ಜವಲಕ್ಕಿ ಅಥವಾ ಹುಳಿ ಅವಲಕ್ಕಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೀಗಿದೆ.
ಗೊಜ್ಜವಲಕ್ಕಿ ತಯಾರಿಸಲು ಬೇಕಾದ ಸಾಮಗ್ರಿಗಳು
ಗಟ್ಟಿ ಅವಲಕ್ಕಿ - 2 ಕಪ್
ಹುಣಿಸೆಹಣ್ಣು - ನಿಂಬೆ ಗಾತ್ರದ್ದು
ಕೊಬ್ಬರಿ ತುರಿ - 3/4 ಕಪ್
ಬೆಲ್ಲ - 1 ಇಂಚು
ಎಣ್ಣೆ - 1/2 ಕಪ್
ಸಾಸಿವೆ - 1/2 ಟೀ ಸ್ಪೂನ್
ಜೀರ್ಗೆ ಪುಡಿ - 1/2 ಟೀ ಸ್ಪೂನ್
ಉದ್ದಿನ ಬೇಳೆ - 1 ಟೀ ಸ್ಪೂನ್
ಕಡ್ಲೆ ಬೇಳೆ - 1 ಟೀ ಸ್ಪೂನ್
ಕಡ್ಲೆಕಾಯಿ ಬೀಜ - 2 ಟೇಬಲ್ ಸ್ಪೂನ್
ಒಣಮೆಣಸಿನಕಾಯಿ - 5
ಕರಿಬೇವು - 2 ಎಸಳು
ಹಿಂಗು - 1/4 ಟೀ ಚಮಚ
ರೆಡ್ ಚಿಲ್ಲಿ ಪೌಡರ್ - 1 ಟೀ ಸ್ಪೂನ್
ರಸಂ ಪುಡಿ - 1 ಟೀ ಸ್ಪೂನ್
ಅರಿಶಿನ - 1/2 ಟೀ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಗೊಜ್ಜವಲಕ್ಕಿ ತಯಾರಿಸುವ ವಿಧಾನ
ಅವಲಕ್ಕಿಯನ್ನು ಒಮ್ಮೆ ಜರಡಿ ಮಾಡಿ ಮಿಕ್ಸಿಯಲ್ಲಿ ಸೇರಿಸಿ ಪಲ್ಸ್ ಮಾಡಿಕೊಳ್ಳಿ ( ಪುಡಿ ಮಾಡಬೇಡಿ)
ಪಲ್ಸ್ ಮಾಡಿದ ಅವಲಕ್ಕಿಯನ್ನು ಒಂದು ಬಾರಿ ತೊಳೆದು ನೀರು ಶೋಧಿಸಿ, ಜರಡಿ ಮೇಲೆ ಮುಚ್ಚಳ ಮುಚ್ಚಿ ಅರ್ಧ ಗಂಟೆ ಬಿಡಿ.
ಹುಣಿಸೆ ಹಣ್ಣಿಗೆ ಒಂದು ಕಪ್ ನೀರು ಸೇರಿಸಿ 15 ನಿಮಿಷಗಳ ಕಾಲ ನೆನೆಯಲು ಬಿಡಿ, ನಂತರ ಹುಣಿಸೆಹಣ್ಣನ್ನು ಕಿವುಚಿ ನೀರು ಶೋಧಿಸಿಕೊಳ್ಳಿ
ಒಂದು ಬಾಣಲೆಯಲ್ಲಿ ಒಂದು ಸ್ಪೂನ್ ಎಣ್ಣೆ ಬಿಸಿ ಮಾಡಿಕೊಂಡು ಅರಿಶಿನ ಸೇರಿಸಿ ನಂತರ ಹುಣಿಸೆ ನೀರು ಸೇರಿಸಿ
ಇದರೊಂದಿಗೆ ಜೀರ್ಗೆ ಪುಡಿ, ಉಪ್ಪು ಸೇರಿಸಿ 3-4 ನಿಮಿಷ ಕುದಿಸಿ, ನಂತರ ಬೆಲ್ಲ ಸೇರಿಸಿ
ನಂತರ ರಸಂ ಪುಡಿ, ರೆಡ್ ಚಿಲ್ಲಿ ಪೌಡರ್ ಸೇರಿಸಿ ಮಿಕ್ಸ್ ಮಾಡಿ ಮತ್ತೆ 3 ನಿಮಿಷ ಕುಕ್ ಮಾಡಿ
ಮಿಶ್ರಣ ಗಟ್ಟಿಯಾಗಿ ಎಣ್ಣೆ ಬಿಟ್ಟ ನಂತರ ಸ್ಟೋವ್ ಆಫ್ ಮಾಡಿ ಅವಲಕ್ಕಿ ಸೇರಿಸಿ ಮಿಕ್ಸ್ ಮಾಡಿ
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಉದ್ದಿನ ಬೇಳೆ, ಕಡ್ಲೆಬೇಳೆ, ಜೀರ್ಗೆ, ಹಿಂಗು, ಕಡ್ಲೆಕಾಯಿ ಬೀಜ, ಒಣಮೆಣಸಿನಕಾಯಿ, ಕರಿಬೇವು ಸೇರಿಸಿ ಒಗ್ಗರಣೆ ಹಾಕಿ.
ಈ ಒಗ್ಗರಣೆಯನ್ನು ಅವಲಕ್ಕಿ ಮಿಶ್ರಣಕ್ಕೆ ಸೇರಿಸಿ, ಜೊತೆಗೆ ಕೊಬ್ಬರಿ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿದರೆ ರುಚಿಯಾದ ಗೊಜ್ಜವಲಕ್ಕಿ ರೆಡಿ.
ಮತ್ತಷ್ಟು ರೆಸಿಪಿ: ಮಾಡೋಕೆ ಕಷ್ಟ ಆದ್ರೂ ತಿನ್ನೋಕೆ ಎಲ್ರಿಗೂ ಇಷ್ಟ...ಸುತರ್ ಫೇಣಿ ರೆಸಿಪಿ
ವಿಭಾಗ