logo
ಕನ್ನಡ ಸುದ್ದಿ  /  ಜೀವನಶೈಲಿ  /  Tea And Health: ನೀವು ಚಹಾ ಪ್ರಿಯರೇ, ಚಹಾ ಕುಡಿಯುವ ಮುನ್ನ ಇದನ್ನೊಮ್ಮೆ ಓದಿ

Tea and health: ನೀವು ಚಹಾ ಪ್ರಿಯರೇ, ಚಹಾ ಕುಡಿಯುವ ಮುನ್ನ ಇದನ್ನೊಮ್ಮೆ ಓದಿ

HT Kannada Desk HT Kannada

Mar 31, 2023 07:05 PM IST

google News

ಚಹಾ

    • ನಾಲಿಗೆಗೆ ಸ್ವಾದ ನೀಡಿ, ದೇಹವನ್ನು ಬೆಚ್ಚಗಾಗಿಸಿ, ಮನಸ್ಸಿಗೆ ಆಹ್ಲಾದ ಭಾವ ನೀಡುವ ಟೀ ಅಥವಾ ಚಹಾ ಕುಡಿಯುವುದು ದೇಹಕ್ಕೆ ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು. ನಾವು ಚಹಾ ಕುಡಿಯುವ ವಿಧಾನದಲ್ಲಿ ಒಳ್ಳೆಯದ್ದು, ಕೆಟ್ಟದ್ದು ಎಂಬ ಅಂಶ ಅಡಗಿದೆ. 
ಚಹಾ
ಚಹಾ

ಕೆಲವರು ತಮ್ಮ ಜೀವವನ್ನು ಬೇಕಾದರೂ ಬಿಡಬಹುದು, ಆದರೆ ಚಹಾವನ್ನು ಮಾತ್ರ ಬಿಡುವುದಿಲ್ಲ. ಬೆಳಗಿನ ಹೊತ್ತು ಸ್ನಾನ ಮಾಡುವುದನ್ನು ತಪ್ಪಿಸಿದರೂ ಚಹಾ ಕುಡಿಯುವುದನ್ನು ತಪ್ಪಿಸದವರೂ ಇದ್ದಾರೆ. ಇನ್ನೂ ಕೆಲವರಿಗೆ ಬೆಳಗಿನ ಹೊತ್ತು ಒಂದು ಕಪ್‌ ಚಹಾ ಹೀರದಿದ್ದರೆ ಹುಚ್ಚು ಹಿಡಿಯೋದು ಪಕ್ಕಾ. ಈ ರೀತಿ ನಮ್ಮ ನಡುವೆ ಹಲವು ಟೀ ಲವರ್ಸ್‌ಗಳಿದ್ದಾರೆ.

ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಚಹಾ ಕುಡಿಯದಿದ್ದರೆ ಅವರ ದಿನ ಆರಂಭವಾಗುವುದೇ ಇಲ್ಲ. ನಾಲಿಗೆಗೆ ಸ್ವಾದ ನೀಡಿ, ದೇಹವನ್ನು ಬೆಚ್ಚಗಾಗಿಸಿ, ಮನಸ್ಸಿಗೆ ಆಹ್ಲಾದ ಭಾವ ನೀಡುವ ಟೀ ಅಥವಾ ಚಹಾ ಕುಡಿಯುವುದು ದೇಹಕ್ಕೆ ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು. ಚಹಾ ಕುಡಿಯಲು ಕೆಲವೊಂದು ವಿಧಾನಗಳಿವೆ. ಆ ವಿಧಾನಗಳನ್ನು ಅನುಸರಿಸುವ ಮೂಲಕ ಚಹಾವನ್ನು ಆರೋಗ್ಯಕರವಾಗಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಹಾಗಾದರೆ ಚಹಾವನ್ನು ಹೇಗೆ ಕುಡಿಯಬಹುದು, ಹೇಗೆ ಕುಡಿಯಬಾರದು? ಈ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ.

ಚಹಾವನ್ನು ಹೀಗೆ ಕುಡಿದರೆ ಉತ್ತಮ

ಟೀ ಕುಡಿಯುವುದು ಒಳ್ಳೆಯದು ಎಂಬುದಕ್ಕೆ ಇಲ್ಲಿದೆ ಕೆಲವು ಅಂಶ.

ಆಹಾರ ಸೇವಿಸಿದ 2 ಗಂಟೆಯ ನಂತರ

ತಜ್ಞರ ಪ್ರಕಾರ ಬೆಳಗಿನ ಉಪಾಹಾರ ಅಥವಾ ಊಟವಾದ 2 ಗಂಟೆಯ ನಂತರ ಚಹಾ ಕುಡಿಯುವುದು ಉತ್ತಮ. ಬೆಳಿಗ್ಗೆ ಮತ್ತು ಸಂಜೆ ವೇಳೆ ಟೀ ಕುಡಿಯುವುದರಿಂದ ಸಮಸ್ಯೆಯಿಲ್ಲ. ಆದರೆ ಯಾವುದೇ ಕಾರಣಕ್ಕೂ ಉಪಾಹಾರ ಅಥವಾ ಊಟದ ಜೊತೆಗೆ ಟೀ ಕುಡಿಯುವ ಅಭ್ಯಾಸ ಒಳ್ಳೆಯದಲ್ಲ.

ರಾತ್ರಿ 8.30ಕ್ಕೆ ಟೀ ಕುಡಿಯಿರಿ

ತಜ್ಞರು ಹೇಳುವಂತೆ ನೀವು ರಾತ್ರಿಯಲ್ಲಿ ಚಹಾ ಕುಡಿಯಲು ಇಷ್ಟಪಡುತ್ತಿರಾದರೆ, ರಾತ್ರಿ 8.30ರ ಹೊತ್ತಿಗೆ ಚಹಾ ಕುಡಿಯುವುದು ಉತ್ತಮ. ಏಕೆಂದರೆ ಆ ಹೊತ್ತಿಗೆ ದೇಹದಲ್ಲಿ ಜೀರ್ಣಕ್ರಿಯೆಯ ಪ್ರಬಲವಾಗಿರುತ್ತದೆ. ಅಲ್ಲದೆ ಕೆಫಿನ್‌ ಅಂಶವೂ ಚಯಾಪಚಯ ಕ್ರಿಯೆಯ ಸುಧಾರಣೆಗೆ ಸಹಾಯ ಮಾಡುತ್ತದೆ.

ಗುಣಮಟ್ಟ ಚೆನ್ನಾಗಿರಲಿ

ಮಾರುಕಟ್ಟೆಯಲ್ಲಿ ಹಲವು ಬಗೆಯ ಟೀ ಪುಡಿಗಳು ಸಿಗುತ್ತವೆ. ಆದರೆ ಕಳಪೆ ಗುಣಮಟ್ಟದ ದೂಳಿನಂಶ ಇರುವ ಟೀ ಪುಡಿ ಖರೀದಿ ಮಾಡಬೇಡಿ. ಗುಣಮಟ್ಟದ ಚಹಾದಿಂದ ಆರೋಗ್ಯದ ಗುಣಮಟ್ಟವೂ ಸುಧಾರಿಸುತ್ತದೆ.

ಈ ರೀತಿ ಚಹಾ ಕುಡಿಯುವ ಅಭ್ಯಾಸ ಬೇಡ

ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು

ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸವನ್ನು ಎಂದಿಗೂ ರೂಢಿಸಿಕೊಳ್ಳಬೇಡಿ. ಚಹಾದಲ್ಲಿ ಟ್ಯಾನಿನ್‌ ಅಂಶವಿದ್ದು, ಅದು ಆಸಿಡಿಟಿಗೆ ಕಾರಣವಾಗಬಹುದು. ಆಹಾರ ಸೇವಿಸಿದ ನಂತರ ಟೀ ಕುಡಿಯುವುದು ಉತ್ತಮ.

ಮಲಗುವ ಮೊದಲು ಟೀ ಬೇಡ

ಚಹಾದಲ್ಲಿರುವ ಕೆಫಿನ್‌ ಅಂಶ ನಿದ್ದೆಗೆ ಅಡ್ಡಿಯುಂಟು ಮಾಡುತ್ತದೆ. ಆ ಕಾರಣಕ್ಕೆ ರಾತ್ರಿ ಮಲಗುವ ಮೊದಲು ಟೀ ಕುಡಿಯವ ಅಭ್ಯಾಸವನ್ನು ತಪ್ಪಿಸಿ. ಜೊತೆಗೆ ಚಹಾವನ್ನು ಅತಿಯಾಗಿ ಬಿಸಿ ಮಾಡುವುದು, ಕುದಿಸುವುದು ಸರಿಯಲ್ಲ. ಅತಿಯಾಗಿ ಕುದಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಅಂಶಗಳು ಹೊರಟು ಹೋಗಬಹುದು.

ಅತಿಯಾಗಿ ಸಕ್ಕರೆ, ಹಾಲು ಸೇರಿಸಬೇಡಿ

ಹೆಚ್ಚು ಸಕ್ಕರೆ ಹಾಗೂ ಹಾಲು ಸೇರಿಸದೆ ಚಹಾದ ರುಚಿಯನ್ನು ಉಳಿಸಿಕೊಳ್ಳಿ. ಹಾಲು ಸೇರಿಸದೇ ಚಹಾ ಕುಡಿಯಲು ಸಾಧ್ಯವಿಲ್ಲ ಎಂದಾದರೆ ಕೊನೆಯಲ್ಲಿ ಬಿಸಿ ಮಾಡಿದ ಹಾಲು ಸೇರಿಸಿ, ಸ್ವಲ್ಪ ಕುದಿಸಿ ಸ್ಟೌ ಆರಿಸಿ.

ಬಹಳ ಹೊತ್ತು ಕುದಿಸಬೇಡಿ

ಚಹಾ ಪುಡಿ ಅಥವಾ ಎಲೆ ಹಾಕಿದ ನೀರನ್ನು ಬಹಳ ಹೊತ್ತು ಕುದಿಸಬೇಡಿ. ಚಹಾ ಮಾಡಿಕೊಳ್ಳಲು ಟೀ ಬ್ಯಾಗ್‌ ಬಳಸುವ ಬದಲು ಟೀ ಪುಡಿ ಬಳಸುವುದು ಉತ್ತಮ. ಟೀ ಪುಡಿ ಅಥವಾ ಎಲೆ ಚಹಾಕ್ಕೆ ಪರಿಮಳ ಸಿಗುವಂತೆ ಮಾಡುತ್ತವೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ