logo
ಕನ್ನಡ ಸುದ್ದಿ  /  ಜೀವನಶೈಲಿ  /  ಟಾಟಾ ಪಂಚ್‌​ಗೆ ಪಂಚ್ ಕೊಟ್ಟ ಹ್ಯುಂಡೈ: ಬಿಡುಗಡೆ ಆಯಿತು ಎಕ್ಸ್‌ಟರ್ ಸಿಎನ್‌ಜಿ ಮಾಡೆಲ್, ಮೈಲೇಜ್, ಬೆಲೆ ಎಷ್ಟು ನೋಡಿ

ಟಾಟಾ ಪಂಚ್‌​ಗೆ ಪಂಚ್ ಕೊಟ್ಟ ಹ್ಯುಂಡೈ: ಬಿಡುಗಡೆ ಆಯಿತು ಎಕ್ಸ್‌ಟರ್ ಸಿಎನ್‌ಜಿ ಮಾಡೆಲ್, ಮೈಲೇಜ್, ಬೆಲೆ ಎಷ್ಟು ನೋಡಿ

Jayaraj HT Kannada

Jul 18, 2024 08:55 AM IST

google News

ಟಾಟಾ ಪಂಚ್‌​ಗೆ ಪಂಚ್ ಕೊಟ್ಟ ಹ್ಯುಂಡೈ: ಬಿಡುಗಡೆ ಆಯಿತು ಎಕ್ಸ್‌ಟರ್ ಸಿಎನ್‌ಜಿ ಮಾಡೆಲ್

    • ಹ್ಯುಂಡೈ ಎಕ್ಸ್‌ಟರ್​ನ CNG ಮಾದರಿಯು ಮೂರು ರೂಪಾಂತರಗಳಲ್ಲಿ ಭಾರತದಲ್ಲಿ ಅನಾವರಣಗೊಂಡಿದೆ. ಇದರ ಬೆಲೆಯು 8.50 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಟಾ ಪಂಚ್ ಸಿಎನ್‌ಜಿ ಬೆಲೆ ಕೂಡ ಇದೇ ಸಾಲಿನಲ್ಲಿದ್ದು ಇದಕ್ಕೆ ಕಠಿಣ ಪೈಪೋಟಿ ನೀಡಲಿದೆ.
ಟಾಟಾ ಪಂಚ್‌​ಗೆ ಪಂಚ್ ಕೊಟ್ಟ ಹ್ಯುಂಡೈ: ಬಿಡುಗಡೆ ಆಯಿತು ಎಕ್ಸ್‌ಟರ್ ಸಿಎನ್‌ಜಿ ಮಾಡೆಲ್
ಟಾಟಾ ಪಂಚ್‌​ಗೆ ಪಂಚ್ ಕೊಟ್ಟ ಹ್ಯುಂಡೈ: ಬಿಡುಗಡೆ ಆಯಿತು ಎಕ್ಸ್‌ಟರ್ ಸಿಎನ್‌ಜಿ ಮಾಡೆಲ್

ಕಳೆದ ವರ್ಷ ಮಾರುಕಟ್ಟೆಗೆ ಲಗ್ಗೆಯಿಟ್ಟು ಧೂಳೆಬ್ಬಿಸಿದ್ದ ಹ್ಯುಂಡೈ ಕಂಪನಿಯ ಎಕ್ಸ್‌ಟರ್ ಕಾರು ಇದೀಗ ಸಿಎನ್‌ಜಿ ಮಾದರಿಯನ್ನು ದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರು ಡ್ಯುಯಲ್ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಬಂದಿದ್ದು, ಇದಕ್ಕೆ ಕಂಪನಿಯು 'ಹೈ-ಸಿಎನ್‌ಜಿ ಡ್ಯುವೋ' ಎಂದು ಹೆಸರಿಸಿದೆ. ಎಕ್ಸ್‌ಟರ್​ನ CNG ಮಾದರಿಯು ಮೂರು ರೂಪಾಂತರಗಳಲ್ಲಿ ಬರುತ್ತದೆ - S, SX ಮತ್ತು ನೈಟ್ SX. ಟಾಟಾದ ಸಿಎನ್‌ಜಿ ಕಾರುಗಳಂತೆ, ಎಕ್ಸ್‌ಟರ್‌ನಲ್ಲಿ ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಇದರಿಂದಾಗಿ ಬೂಟ್ ಸ್ಪೇಸ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಉಳಿಸಲಾಗಿದೆ. ಈ ಮೂಲಕ ಟಾಟಾ ಪಂಚ್‌​ಗೆ ಟಕ್ಕರ್ ಕೊಡಲು ತಯಾರಾಗಿದೆ.

ಹುಂಡೈ ಎಕ್ಸ್‌ಟರ್ ಸಿಎನ್‌ಜಿ ಬೆಲೆ

ಹ್ಯುಂಡೈ ಎಕ್ಸ್‌ಟರ್‌ ಸಿಎನ್‌ಜಿ ಬೆಲೆಯು 8.50 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 9.38 ಲಕ್ಷದವರೆಗೆ ಇರುತ್ತದೆ. ಇದು ಎಕ್ಸ್ ಶೋರೂಂ ಬೆಲೆ ಆಗಿದೆ. ಟಾಟಾ ಪಂಚ್ ಸಿಎನ್‌ಜಿ ಬೆಲೆ ಕೂಡ ಇದೇ ಸಾಲಿನಲ್ಲಿದ್ದು ಕಠಿಣ ಪೈಪೋಟಿ ನೀಡಲಿದೆ.

ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿ ಎಸ್ ರೂಪಾಂತರದ ಬೆಲೆ 8.50 ಲಕ್ಷ ರೂಪಾಯಿ, ಎಸ್‌ಎಕ್ಸ್ ರೂಪಾಂತರದ ಬೆಲೆ 9.23 ಲಕ್ಷ ರೂಪಾಯಿ ಮತ್ತು ಸಿಎನ್‌ಜಿ ನೈಟ್ ಎಸ್‌ಎಕ್ಸ್ ರೂಪಾಂತರದ ಬೆಲೆ 9.38 ಲಕ್ಷ ರೂಪಾಯಿ. ಇದು ಎಕ್ಸ್ ಶೋ ರೂಂ ಬೆಲೆ ಆಗಿದೆ.

ಹುಂಡೈ ಎಕ್ಸ್‌ಟರ್ ಸಿಎನ್‌ಜಿ ಎಂಜಿನ್ ಮತ್ತು ಮೈಲೇಜ್

ಎಕ್ಸೆಟರ್‌ನ ಹೊಸ ಸಿಎನ್‌ಜಿ ಮಾದರಿಯು ಎರಡು ಸಣ್ಣ ಸಿಎನ್‌ಜಿ ಸಿಲಿಂಡರ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ 30 ಲೀಟರ್ ಸಿಎನ್‌ಜಿ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ, ಎಂಜಿನ್ ನಿಯಂತ್ರಣ ಘಟಕವನ್ನು (ECU) ಒದಗಿಸಲಾಗಿದೆ. ಇದರ ಮೂಲಕ ಪೆಟ್ರೋಲ್ ಮತ್ತು ಸಿಎನ್‌​ಜಿ ಆಯ್ಕೆಗಳನ್ನು ಸುಲಭವಾಗಿ ಬದಲಾಯಿಸಬಹುದು.

ಎಕ್ಸ್‌ಟರ್ ಸಿಎನ್‌ಜಿ 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು ಇದು ಸಿಎನ್‌ಜಿ ಕಿಟ್‌ನೊಂದಿಗೆ ಬರುತ್ತದೆ. ಈ ಸೆಟಪ್ 69bhp ಮತ್ತು 95.2Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದೆ. ಕಂಪನಿ ಹೇಳಿರುವ ಪ್ರಕಾರ ಎಕ್ಸ್‌ಟರ್ ಸಿಎನ್‌ಜಿ ಮೈಲೇಜ್ 27.1km/kg ಆಗಿದೆ.

ಟಾಟಾ ಪಂಚ್ vs ಹ್ಯುಂಡೈ ಎಕ್ಸ್ಟರ್; 5 ವೈಶಿಷ್ಟ್ಯಗಳು

ಹುಂಡೈ ಎಕ್ಸ್‌ಟರ್ ಸಿಎನ್‌ಜಿ ವೈಶಿಷ್ಟ್ಯಗಳು

ಎಕ್ಸ್‌ಟರ್ ಸಿಎನ್‌ಜಿಯ ಎಸ್‌ಎಕ್ಸ್ ರೂಪಾಂತರವು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಧ್ವನಿ ಗುರುತಿಸುವಿಕೆ, ಆ್ಯಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಹಿಂಬದಿಯ ಪವರ್ ವಿಂಡೋಗಳು, ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ವಿಂಗ್ ಮಿರರ್‌ಗಳು, ರಿಯರ್ ಪಾರ್ಸೆಲ್ ಟ್ರೇ, 4 ಸ್ಪೀಕರ್‌ಗಳು, ನೈಟ್ ಐಆರ್‌ವಿಎಂ, ಸನ್‌ರೂಫ್, ರಿಯರ್ ಡಿಫಾಗರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಟೈರ್ ನಿಟರಿಂಗ್, 15-ಇಂಚಿನ ಡ್ಯುಯಲ್-ಟೋನ್ ಅಲಾಯ್ ಟೈಯರ್ ಮತ್ತು ಶಾರ್ಕ್ ಫಿನ್ ಆಂಟೆನಾ ಮುಂತಾದ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಎಕ್ಸೆಟರ್ ಸಿಎನ್‌ಜಿ ನಂತರ, ಹ್ಯುಂಡೈ ಕಂಪನಿಯು ಹೊಸ ಹೈ-ಸಿಎನ್‌ಜಿ ಡ್ಯುಯೊ ತಂತ್ರಜ್ಞಾನವನ್ನು ಗ್ರ್ಯಾಂಡ್ ಐಟೆನ್ ನಿಯೋಸ್ ಮತ್ತು ಔರಾದೊಂದಿಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ