ವಿದೇಶಕ್ಕೆ ಪ್ರವಾಸ ಹೋಗ್ತಾ ಇದ್ದೀರಾ; ಹೊರ ದೇಶದಲ್ಲಿ ಯುಪಿಐ ಪೇಮೆಂಟ್ ಆಕ್ಟಿವೇಶನ್ ಮಾಡಿಕೊಳ್ಳುವ ವಿಧಾನ ತಿಳಿಯಿರಿ
Feb 26, 2024 02:10 PM IST
ವಿದೇಶಕ್ಕೆ ಪ್ರವಾಸ ಹೋಗುವ ಪ್ಲಾನ್ ಮಾಡಿದ್ದರೆ ಹೊರ ದೇಶದಲ್ಲಿ ಯುಪಿಐ ಆಕ್ಟಿವೇಶನ್ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನ ತಿಳಿಯಿರಿ.
- International UPI Activation: ವಿದೇಶ ಪ್ರವಾಸಕ್ಕೆ ಹೋದಾಗ ಅಂತಾರಾಷ್ಟ್ರೀಯ ಯುಪಿಐ ಆ್ಯಕ್ಟಿವೇಶನ್ ಮಾಡಿಕೊಳ್ಳುವುದು ಹೇಗೆ? ಗೂಗಲ್ ಪೇ, ಪೋನ್ ಪೇನಲ್ಲಿರುವ ಈ ವಿಧಾನಗಳನ್ನು ತಿಳಿಯಿರಿ.
ಬೆಂಗಳೂರು: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ವಿದೇಶ ಪ್ರವಾಸ ಮಾಡಿಬೇಕೆಂಬ ಕನಸು ಇರುತ್ತದೆ. ಹೊರ ದೇಶಕ್ಕೆ ಹೋಗುವ ಅವಕಾಶ ಸಿಕ್ಕಾಗ ಸಾಕಷ್ಟು ಪ್ರಶ್ನೆಗಳು ತಲೆಯೊಳಕ್ಕೆ ಸೇರಿಕೊಳ್ಳುತ್ತವೆ. ವಿದೇಶಕ್ಕೆ ಹೋದಾಗ ಅಲ್ಲಿ ವ್ಯವಹಾರ ಹೇಗೆ ಮಾಡಬೇಕು?, ಭಾರತೀಯ ರೂಪಾಯಿಯಿಂದ ಆ ದೇಶ ಕರೆನ್ಸಿಗೆ ಹೇಗೆ ಬದಲಾಯಿಸಿಕೊಳ್ಳುವುದು? ಒಂದು ವೇಳೆ ಡಿಜಿಟಲ್ ಪೇಮೆಂಟ್ ಇದ್ದರೆ ಹೇಗೆ ಮಾಡುವುದು ಹೀಗೆ ಹತ್ತಾರು ಪ್ರಶ್ನೆಗಳು ಕಾಡುತ್ತವೆ.
ವಿದೇಶ ಪ್ರವಾಸಕ್ಕೆ ಹೋದಾಗ ಅಲ್ಲಿ ಯುಪಿಐ ಪೇಮೆಂಟ್ ಆಕ್ಟಿವೇಶನ್ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನ ತಿಳಿಯೋಣ. ಏಕೀಕೃತ ಪಾವತಿ ವ್ಯವಸ್ಥೆ-ಯುಪಿಐ ಸೇವೆಗಳನ್ನು ಭಾರತದಲ್ಲಿ ಮಾತ್ರವಲ್ಲದೆ ಈಗ ವಿದೇಶಗಳಲ್ಲಿ ಪಡೆಯಬಹುದು. ಶ್ರೀಲಂಕಾ, ಮಾರಿಷಸ್, ಓಮನ್, ನೇಪಾಳ, ಭೂತಾನ್, ಫ್ರಾನ್ಸ್ ಹಾಗೂ ಯುಎಐ ದೇಶಗಳಲ್ಲಿ ಯುಪಿಐ ಬಳಕೆಗೆ ಅಲ್ಲಿನ ಸರ್ಕಾರಗಳು ಅವಕಾಶ ಕಲ್ಪಿಸಿವೆ.
ಇದನ್ನೂ ಓದಿ: ಬದಲಾದ ಯುಪಿಐ ಪಾವತಿಯ 5 ನಿಯಮಗಳು; ಇಲ್ಲಿದೆ ಮಾಹಿತಿ
ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ 10 ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಕ್ಯೂಆರ್ ಆಧಾರಿತ ಯುಪಿಐ ಪಾವತಿಗಳನ್ನು ಸಕ್ರಿಯಗೊಳಿಸಲು ಇತರೆ ದೇಶಗಳೊಂದಿಗೆ ಸಹಿ ಹಾಕಿದೆ. ಮಲೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ವಿಯೆಟ್ನಾಂ, ಸಿಂಗಾಪುರ್, ಕಾಂಬೋಡಿಯಾ, ದಕ್ಷಿಣ ಕೊರಿಯಾ, ಜಪಾನ್, ತೈವಾನ್ ಹಾಗೂ ಹಾಂಕ್ ಕಾಂಗ್ ಈ ಪಟ್ಟಿಯಲ್ಲಿವೆ. ಅಷ್ಟೇ ಅಲ್ಲ ಯುಕೆ, ಆಸ್ಟ್ರೇಲಿಯಾ, ಯುರೋಪ್ ರಾಷ್ಟ್ರಗಳು ಹಾಗೂ ಯುಎಸ್‌ನಲ್ಲೂ ಯುಪಿಐ ಸೇವೆಯನ್ನು ಪರಿಚಯಿಸಲು ಭಾರತದ ಪ್ರಯತ್ನಗಳು ಮುಂದುವರಿದಿವೆ.
ಯಾವುದೇ ಹೊರದೇಶಕ್ಕೆ ಹೋದಾಗ ನೀವು ಭಾರತೀಯ ರೂಪಾಯಿಯನ್ನು ಅಲ್ಲಿನ ಸ್ಥಳೀಯ ಕರೆನ್ಸಿಗೆ ಪರಿವರ್ತಿಸಿಕೊಳ್ಳಬೇಕು. ಜೊತೆಗೆ ಡಿಜಿಟಲ್ ಪಾವತಿಯಾದ ಯುಪಿಐ ಮೂಲಕ ಪಾವತಿಗಳನ್ನು ಮಾಡಲು ನಿಮ್ಮ ಫೋನ್ ಅಪ್ಲಿಕೇಶನ್ ಬಳಸಬಹುದಾಗಿದೆ.
ಫೋನ್‌ಪೇನಲ್ಲಿ ಅಂತಾರಾಷ್ಟ್ರೀಯ ಯುಪಿಐ ಪಾವತಿಗಳನ್ನು ಸಕ್ರಿಯ ಗೊಳಿಸುವ ವಿಧಾನ
- ಯುಪಿಐ ಅಪ್ಲಿಕೇಶನ್ ಓಪನ್ ಮಾಡಿ. ನಿಮ್ಮ ಪ್ರೊಫೈಲ್ ಫೋಟೊ ಮೇಲೆ ಕ್ಲಿಕ್ ಮಾಡಿ
- ಪಾವತಿ ಸೆಟ್ಟಿಂಗ್‌ಗಳ ವಿಭಾಗದ ಅಡಿಯಲ್ಲಿ ಯುಪಿಐ ಇಂಟರ್‌ನ್ಯಾಷನಲ್ ಆಯ್ಕೆ ಮಾಡಿ
- ಅಂತಾರಾಷ್ಟ್ರೀಯ ಯುಪಿಐ ಪಾವತಿಗಾಗಿ ನೀವು ಬಳಸುವ ಬ್ಯಾಂಕ್ ಖಾತೆಯ ಪಕ್ಕದಲ್ಲಿರುವ ಆ್ಯಕ್ಟೀವ್ ಬಟನ್ ಕ್ಲಿಕ್ ಮಾಡಿ
- ಆ್ಯಕ್ಟೀವ್ ಖಚಿತ ಪಡಿಸಲು ನಿಮ್ಮ ಯುಪಿಐ ಪಿನ್ ನಮೂದಿಸಿ
ವಿದೇಶ ಪ್ರವಾಸದ ಸಂದರ್ಭದಲ್ಲಿ ಎಚ್ಚರಿಕೆಯಿಂದ ನಗದು ಅಥವಾ ಡಿಜಿಟಲ್ ವಹಿವಾಟುಗಳನ್ನು ನಡೆಸಬೇಕಾಗುತ್ತದೆ. ಇಲ್ಲದಿದ್ದರೆ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಪ್ರವಾಸಕ್ಕೆ ಹೋಗುವ ಮುನ್ನ ನಿಮ್ಮ ಬಳಿ ಅಗತ್ಯಕ್ಕೆ ತಕ್ಕಂತೆ ಹಣ ಇದೆಯೇ ಎಂಬುದನ್ನು ಪರಿಶೀಲಿಸಿಕೊಂಡ ನಂತರವೇ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಿ.
ಗೂಗಲ್ ಪೇ ನಲ್ಲಿ ಅಂತಾರಾಷ್ಟ್ರೀಯ ಯುಪಿಎ ಪಾವತಿ ಸಕ್ರಿಯಗೊಳಿಸುವ ವಿಧಾನ
- ಗೂಗಲ್ ಪೇನ ಆ್ಯಪ್ ಓಪನ್ ಮಾಡಿ. ಕ್ಯೂಆರ್ ಕೋಡ್ ಸ್ಕ್ಯಾನ್ ಟ್ಯಾಪ್ ಮಾಡಿ
- ಅಂತಾರಾಷ್ಟ್ರೀಯ ಬ್ಯುಸಿನೆಸ್ ಕ್ಯೂಆರ್‌ಕೋಡ್ ಅನ್ನು ಸ್ಕ್ಯಾನ್ ಮಾಡಿ
- ಪಾವತಿಸಬೇಕಾದ ವಿದೇಶಿ ಕರೆನ್ಸಿಯಲ್ಲಿ ಮೊತ್ತವನ್ನು ನಮೂದಿಸಿ
- ಅಂತಾರಾಷ್ಟ್ರೀಯ ವ್ಯಾಪಾರಿಗೆ ಪಾವತಿಸಲು ನೀವು ಬಳಸುವ ಬ್ಯಾಂಕ್ ಖಾತೆ ಆಯ್ಕೆಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com )